ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ವಿದವೆಯರಾದ ಸ್ತ್ರೀಯರಿಗೆ ಮನೆ / ವಸತಿ ಸರ್ಕಾರದ ಸಹಾಯ ಧನ

ರಾಷ್ಟ್ರೀಯ ಕುಟುಂಬ ಸಹಾಯ ಧನ ಯೋಜನೆ ವಿಧವಾ ಮಹಿಳೆಯರಿಗೆ ಸರ್ಕಾರದಿಂದ 20000 ರೂಪಾಯಿ ಸಹಾಯ ಧನ ಸಿಗುತ್ತದೆ.

ಅರ್ಜಿ ಹಾಕಬೇಕಾಗಿರೋದು ಅವರವರ ಊರಿನ ಗ್ರಾಮಲೆಕ್ಕಿಗರಿಗೆ(VA).

ಅರ್ಜಿಯೊಂದಿಗೆ :
•ಆಧಾರ್ ಕಾರ್ಡ್(ಗಂಡ & ಹೆಂಡತಿ ಇಬ್ಬರ ಆಧಾರ್ ಕಾರ್ಡ್)
•ರೇಷನ್ ಕಾರ್ಡ್
•ಬ್ಯಾಂಕ್ ಖಾತೆ
•ಗಂಡನ ಡೆತ್ ಸರ್ಟಿಫಿಕೇಟ್
xerox ಕಾಪಿ ಸೇರಿಸಿ ಕೊಡಬೇಕು.

🛑ಸೂಚನೆ‼️
ಮರಣ ಹೊಂದಿದ ವ್ಯಕ್ತಿ 60ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ಮರಣ ಹೊಂದಿದ 6 ತಿಂಗಳ ಒಳಗೆ ಅರ್ಜಿಹಾಕತಕ್ಕದ್ದು

ಈ ಸಂದೇಶವನ್ನು ಎಲ್ಲರಿಗೂ ಮುಟ್ಟಿಸಿ ವಿದವೆಯರಾದ ಸ್ತ್ರೀಯರಿಗೆ ಮನೆ ಕಟ್ಟಲು 2.7 ಲಕ್ಷ ಹಣ ಮತ್ತು ಸರಕಾರದಿಂದ ಜಾಗ*

*ಅರ್ಜಿ ಸಲ್ಲಿಸಲು ಕಚೇರಿಯಲ್ಲಿ ವಿಚಾರಗಳನ್ನು ತಿಳಿಯಬಹುದು.

1.ಮನೆ ನಿರ್ಮಾಣಕ್ಕೆ ಸಹಾಯಧನ:

a) ಹಳೆ ಮನೆ / ಖಾಲಿ ಜಾಗ ಇದ್ದವರಿಗೆ ನಗರ ಪ್ರದೇಶದವರಿಗೆ:
ವಾಜಪೇಯಿ ವಸತಿ ಯೋಜನೆ 2.7 ಲಕ್ಷ (1.2 state Govt + 1.5 Central Govt)ಹಂತ ಹಂತದಲ್ಲಿ ಹಣ ಬಿಡುಗಡೆ.

  ಸ್ಕಂದಪುರಾಣ ಏನು ಹೇಳುತ್ತದೆ?

b) ಹಳೆ ಮನೆ / ಖಾಲಿ ಜಾಗ ಇದ್ದ ಗ್ರಾಮೀಣ ಪ್ರದೇಶದವರಿಗೆ: (ಮಹಿಳಾ ಅರ್ಜಿದಾರರಿಗೆ)
ಬಸವ ವಸತಿ ಯೋಜನೆ 1.2 ಲಕ್ಷ + 20000 (ನರೇಗಾ ಜಾಬ್ ಕಾರ್ಡ್ ಮಾಡಿದ್ದಲ್ಲಿ ಮಾತ್ರ)
ಹಂತ ಹಂತದಲ್ಲಿ ಹಣ ಬಿಡುಗಡೆ.

ಅರ್ಜಿ ಸಲ್ಲಿಸುವುದು: ಗ್ರಾಮ ಪಂಚಾಯತ್/ ಮುನ್ಸಿಪಾಲ್ಟಿ / ನಗರ ಪಂಚಾಯತ್ / ನಗರ ಪಾಲಿಕೆ /Self in Online (ಪ್ರಧಾನ ಮಂತ್ರಿ ಆವಾಸ್ ಯೋಜನೆಯ http://pmaymis.gov.in/ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಲ್ಲಿ ಅದು ಆಯಾ ವ್ಯಾಪ್ತಿಯ ಗ್ರಾಮ ಪಂ/ ನಗರಪಾಲಿಕೆಗಳಿಗೆ ರವಾನೆಯಾಗುತ್ತದೆ)

ಬೇಕಾದ ದಾಖಲೆಗಳು

 1. ಆರ್ ಟಿ ಸಿ. Copy.
  2.ಒಪ್ಪಿಗೆ ಪತ್ರದ.
  3.ಖಾತೆ ಪತ್ರದ copy.
  4 Aadar Card copy.
  5.Ration Card.
 2. Voter Id copy.
  7.Bank PassBook Copy
  8.Income & Caste Certificate copy
  9.Passport size photo-1
  (ಅರ್ಜಿದಾರರು ಅಲ್ಲದ ಮನೆಯ ಇತರ ಸದಸ್ಯರ ಹೆಸರಿನಲ್ಲಿ ಆರ್ ಟಿ ಸಿ ಇದ್ದಲ್ಲಿ ಅವರಿಂದ ಒಪ್ಪಿಗೆ ಪತ್ರ)
  ಮುಯ್ಯಿ ನೀಡುವಾಗ ಒಂದು ರೂಪಾಯಿ ನಾಣ್ಯವನ್ನು ಇಡಲೇಬೇಕಂತೆ ..! ಯಾಕೆ

2.ಜಾಗ ಇಲ್ಲದವರು ನಿವೇಶನಕ್ಕಾಗಿ ಅರ್ಜಿ
ಈ ಕೆಳಗಿನ ದಾಖಲೆಗಳೊಂದಿಗೆ ಗ್ರಾಮ ಪಂಚಾಯತ್/ ಮುನ್ಸಿಪಾಲ್ಟಿ / ನಗರ ಪಂಚಾಯತ್ / ನಗರ ಪಾಲಿಕೆಗಳಲ್ಲಿ ಅರ್ಜಿ ಸಲ್ಲಿಸುವುದು.
1.Aadar Card copy
2.Ration Card
3.Voter Id copy
4.Bank PassBook Copy
5.Income & Caste Certificate copy

ನಿವೇಶನ (ಜಾಗ) ಮಂಜೂರಾದಲ್ಲಿ ವಾಜಪೇಯಿ ವಸತಿ ಯೋಜನೆ / ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಧನಸಹಾಯ ಕೂಡ ಪಡೆಯಬಹುದು

3.ಮನೆ ನಿರ್ಮಾಣಕ್ಕೆ ಬ್ಯಾಂಕ್ ಲೋನ್:
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬ್ಯಾಂಕುಗಳಲ್ಲಿ ಆರು ಲಕ್ಷ ಲೋನ್ ಪಡೆದಲ್ಲಿ ಬಡ್ಡಿ ಮೊತ್ತ 6 % ರಂತೆ ಸುಮಾರು ಎರಡು ಲಕ್ಷದವರೆಗೆ ಸಬ್ಸಿಡಿ ಕೇಂದ್ರ ಸರಕಾರದಿಂದ ಖಾತೆಗೆ ಬೀಳಲಿದ್ದು, ಉಳಿದ ಹಣ ಪಾವತಿಮಾಡಬೇಕು. ಯೋಜನೆಗೆ ಅರ್ಜಿಯನ್ನು ಬ್ಯಾಂಕ್ ಮೂಲಕವೇ ಸಲ್ಲಿಸುವುದು.

  ಪ್ರಜಾಕೀಯ - ನಾಳೆಯ ತುರ್ತು ಪರಿಸ್ಥಿತಿ

4. ಗ್ರಾಮೀಣ ಪ್ರದೇಶದವರಿಗೆ ನರೇಗಾ ಯೋಜನೆ ಅಡಿಯಲ್ಲಿ ಬಾವಿ ತೋಡಲು ಸುಮಾರು 1 ಲಕ್ಷದ ವರೆಗೂ & ದನದ ಕೊಟ್ಟಿಗೆ ಗೆ 16000 ವರೆಗೂ ಸಹಾಯಧನವಿದೆ.

Leave a Reply

Your email address will not be published. Required fields are marked *

Translate »