ಭಕ್ತಿ ಮತ್ತು ಏಕಾಗ್ರತೆ ಒಂದು ವಿಚಿತ್ರ ಕಥೆ
ಒಬ್ಬ ಶಿವಭಕ್ತನಿಗೆ ದಾರಿಯಲ್ಲಿ ಬರುವಾಗ ಹರಿಹರನ ವಿಗ್ರಹ ಸಿಕ್ಕಿತು. ಆ ವಿಗ್ರಹದಲ್ಲಿ ಅರ್ಧ ಭಾಗದಲ್ಲಿ ವಿಷ್ಣು, ಇನ್ನರ್ಧ ಭಾಗದಲ್ಲಿ ಶಿವನ ಕೆತ್ತನೆ ಇತ್ತು
ವಿಗ್ರಹವನ್ನು ಮನೆಗೆ ತಂದು ಅರ್ಧಭಾಗದಲ್ಲಿದ್ದ ಶಿವನನ್ನು ಮಾತ್ರ ಪೂಜಿಸಲು ಪ್ರಾರಂಭಿಸಿದ. ಅಭಿಷೇಕ, ನೈವೇದ್ಯ ಮಾಡುವಾಗಲೆಲ್ಲ ವಿಷ್ಣುವಿಗೆ ಅರ್ಪಣೆಯಾಗಬಾರದೆಂದು ಎಚ್ಚರ ವಹಿಸುತ್ತಿದ್ದ.
ಗಂಧದ ಕಡ್ಡಿ ಹಚ್ಚುವಾಗ ಇದರ ಪರಿಮಳ ವಿಷ್ಣುವಿಗೆ ಹೋಗಬಾರದೆಂದು ವಿಷ್ಣುವಿನ ಮೂಗಿನ ಹೊಳ್ಳೆಭಾಗಕ್ಕೆ ಹತ್ತಿ ತುರುಕಿದ
ಆದರೆ ಒಮ್ಮೆ ಮಹಾವಿಷ್ಣು ಭಕ್ತನಿಗೆ ದರ್ಶನ ಕೊಟ್ಟ. ಶಿವಭಕ್ತನಿಗೆ ಅಚ್ಚರಿ,”ನಾನು ನಿನ್ನ ಪೂಜೆಯೇ ಮಾಡಲಿಲ್ಲ, ನೀನೇಕೆ ಬಂದೆ” ಎಂದ .
“ಭಕ್ತಾ, ಶಿವನಿಗೆ ಅರ್ಪಣೆ ಮಾಡುವಾಗಲೆಲ್ಲಾ ನನಗೆ ದೊರಕಬಾರದು ಎಂದು ಚಿಂತಿಸಿದೆಯಲ್ಲಾ? ಈ ವಿಗ್ರಹದೊಳಗೆ ನಾನು
ಖಂಡಿತಾ ಇದ್ದೇನೆ ಎಂದು ನಂಬಿ ಮೂಗಿಗೆ ಹತ್ತಿ ತುರುಕಿದೆಯಲ್ಲಾ! ನಿನ್ನ ಗಮನ ನನ್ನ ಮೇಲೆಯೇ ಹೆಚ್ಚಾಗಿತ್ತು, ಈ ಭಕ್ತಿಗೆ ಮೆಚ್ಚಿದ್ದೇನೆ” ಎಂದು ಅಸಂಖ್ಯ ವರ ಕೊಟ್ಟ!!.
ದ್ವಾಪರಾಯುಗದಲ್ಲಿ ಹಲವಾರು ರಕ್ಕಸರು ಕೃಷ್ಣನ ಕೈಯಿಂದಲೇ ವಧೆಯಾದರೂ ಅತ್ಯುನ್ನತ ಆಧ್ಯಾತ್ಮಿಕ ಧಾಮವನ್ನು ಅವರವರ ಅರ್ಹತೆಗೆ ಅನುಸಾರವಾಗಿ ತಲುಪಿದರು ಕಾರಣ ಇಷ್ಟೇ ಅವರು ದ್ವೇಷದಿಂದಲಾದರೂ ಕೃಷ್ಣನ ಕುರಿತೇ ಯೋಚಿಸುತ್ತಿದ್ದರು..!
ಇನ್ನು ತನ್ನನ್ನುಪ್ರೀತಿಯಿಂದ ಆರಾಧಿಸುವವರಿಗೆ ಶ್ರೀ ಹರಿ ಅನುಗ್ರಹಿಸುವ ಫಲಗಳನ್ನು ಊಹಿಸಲೂ ಸಾಧ್ಯವಿಲ್ಲ…!!!
ಶ್ರೀ ಹರಿಹರಾರ್ಪಣಮಸ್ತು
🙏🙏🙏🙏🙏🙏