ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಹುಡುಗ ಮತ್ತು ಹುಡುಗಿಯರಲ್ಲಿ ಬೇಧ ಭಾವ ಏಕೆ ? – ಒಂದು ಅದ್ಭುತ ಕಥೆ !

*ಮಹಾನಗರ ಒಂದರಲ್ಲಿ,ಸಂತರೊಬ್ಬರ ಪ್ರವಚನದ ಹತ್ತನೇ ದಿನವದು.*

*ಜೀವನದ ಸಮಸ್ಯೆಗಳಿಗೆ ಶಾಸ್ತ್ರೀಯ ಪರಿಹಾರ ಸೂಚಿಸುತ್ತಾ,ಅಂತಹ ಸರಳ ಸೂತ್ರಗಳ ಕಾರಣದಿಂದ ಜೀವನವನ್ನು ಸಂತೋಷದಿಂದ ಕಳೆಯಲು,ಹರಿನಾಮ ಸ್ಮರಣೆಯೊಂದಿಗೆ,ಬದುಕಿನ ಸುಖದ,ಇಂತಹ ಅನೇಕ ಸೂತ್ರಗಳನ್ನೂ ನೀಡುವುದು ಅವರ ಪ್ರವಚನ ಸಾರ.*

*ಹಾಗಾಗಿ ಅವರ ಪ್ರವಚನಗಳಲ್ಲಿ,ನಿತ್ಯವೂ ಉತ್ಸುಕತೆಯಿಂದ ಭಾಗವಹಿಸಲೆಂದು ಬರುವವರ ಸಂಖ್ಯೆಯೇ ಹತ್ತಾರು ಸಾವಿರಕ್ಕೂ ಮೀರಿರುತ್ತಿತ್ತು.*

*ಅಂತಹ,ಅಂದಿನ,ಆ ಹತ್ತನೆಯ ದಿನದ ಸಭೆಯಲ್ಲಿ,ಸಾವಿರ ಸಾವಿರದಲ್ಲಿ ಬಂದಿದ್ದ ಜನರೆಲ್ಲರೂ,ಸಂತರು,ನೀಡುತ್ತಿದ್ದ ರೋಚಕ, ಉದಾಹರಣೆಗಳಿಂದ,ಕೌತುಕದಿಂದ ಮುಂದೇನು ಎಂಬ ನಿರೀಕ್ಷೆಯಲ್ಲಿದ್ದಾಗ,ಬಾಲಕಿಯೊಬ್ಬಳು ಎದ್ದು ನಿಂತು ಪ್ರಶ್ನೆಯೊಂದನ್ನು ಸಂತರಿಗೆ ಕೇಳಿಯೇ ಬಿಟ್ಟಳು,ನಾನೊಂದು ಪ್ರಶ್ನೆ ಕೇಳಬಹುದಾ ಎಂದು.*

*ಹದಿನಾರರ ಬಾಲೆಯ ಮುಖದಲ್ಲಿದ್ದ ಆಕ್ರೋಶಕ್ಕೆ,ಆಕೆಯ ಮಾತಿನ ಧಾಟಿಗೆ,ನೆರೆದ ಜನರೊಡನೆ, ಸಂತರೂ ಸ್ತಂಭೀಭೂತರಾಗಿಯೇ ಬಿಟ್ಟರು.*

*ಸುಧಾರಿಸಿಕೊಂಡವರು ಮೊದಲಿಗೆ ಸಂತರು.*

*ಸಮಾಧಾನದಿಂದ ಹೇಳಿದರು :- ಹಾ!ಮಗೂ,ಹಾ ಹಾ! ನೀನು ಪ್ರಶ್ನೆ ಕೇಳು ಮಗೂ,ಮನಸ್ಸು ಮೊದಲು ಶಾಂತವಾಗಲೀ ಎಂದರು.*

*ಬಲು ಧೀರ್ಘ ನಿಟ್ಟುಸಿರೊಂದು ಬಾಲೆಯಿಂದ ಹೊರಬಿತ್ತು.*

  ಝೆನ್ ಪದದ ಅರ್ಥ - ಒಂದು ಝೆನ್ ಕಥೆ

*ಮತ್ತೆ ಮೂಡಿತು ಮಾತಿನ ಬಾಣದಲುಗಿನಂತಿರುವ ಪ್ರಶ್ನೆ,ವಿವರಣೆ ಸಹಿತವಾಗಿ.*

*ಸ್ವಾಮೀ,ಸಂತ ಮಹಾಶಯರೇ, ಪ್ರಶ್ನೆ ನಮ್ಮ ಸಮಾಜದ ಕುರಿತಾಗಿದೆ.*

*ಈ ನಮ್ಮ ಸಮಾಜವು,ಹುಡುಗರಿಗೆ ಎಲ್ಲ ರೀತಿಯ ಸ್ವಾತಂತ್ರ್ಯ ಕೊಡುತ್ತದೆ.*

*ಅವರೇನೆ ಮಾಡಲಿ,ಎಲ್ಲೇ ಹೋಗಲಿ,ತಡರಾತ್ರಿ ಮನೆಗೆ ಬಂದರೂ,ಅವರ ಕುರಿತು ಯಾರಿಗೂ ಆಕ್ಷೇಪಣೆ ಇರದು.*

*ಇದಕ್ಕೆ ವಿಪರೀತವಾಗಿ,ಈ ಸಮಾಜವೇ,ಹುಡುಗಿಯರಿಗೆ,ಯಾವಾಗಲೂ ಬುದ್ಧಿಹೇಳುತ್ತದೆ.*

*ನೀನು ಇದನ್ನು ಮಾಡಬೇಡ.ನೀನು ಅಲ್ಲಿಗೆ ಹೋಗಬೇಡ,ಹುಡುಗರೊಂದಿಗೆ ಮಾತನಾಡಕೂಡದು. ಕತ್ತಲಾಗುವ ಮುನ್ನವೇ ಮನೆ ಸೇರು….ಇತ್ಯಾದಿ, ಇತ್ಯಾದಿಗಳ ಸಂಕೋಲೆಯನ್ನೇ ನಮಗೆ ಕಟ್ಟಿರುವರಲ್ಲಾ,ಏಕೆ ಹೀಗೆ?*

*ಸಂತರು ಶಾಂತ ಧ್ವನಿಯಲ್ಲಿ ತಿಳಿ ಹೇಳಿದರು:*

*ಮಗಳೇ,ನೀನು ಎಂದಾದರೂ,ಕಬ್ಬಿಣದ ಅಂಗಡಿಯಲ್ಲಿ,ಹೊರಬಿದ್ದಿರುವ ಕಬ್ಬಿಣದ ರಾಡುಗಳನ್ನು ಲೋಹದ ಸರಳುಗಳನ್ನು ನೋಡಿದ್ದೀಯಾ?*

*ಅಂಗಡಿಯ ಮಾಲಿಕನು,ರಾತ್ರೆ ಅಂಗಡಿಯ ಬಾಗಿಲು ಮುಚ್ಚಿ,ಮನೆಗೆ ಹೋಗುವಾಗಲೂ,ಅವುಗಳ ಕುರಿತು ಯೋಚಿಸುವುದಿಲ್ಲ.*

*ಚಳಿ,ಮಳೆ,ಗಾಳಿ,ಬಿಸಿಲಿಗೂ ಅವುಗಳನ್ನು ಅಲ್ಲಿಂದ ಕದಲಿಸಬೇಕೆಂಬ,ತುಕ್ಕು ಹಿಡಿಯುತ್ತಿದ್ದರೂ ಅವುಗಳಿಗೊಂದು ನೆರಳು ಕೊಡಬೇಕೆಂಬ ಯೋಚನೆಯೂ ಆ ಮಾಲೀಕನಿಗೆ ಬರಲಾರದು ತಾನೇ?*

  ಪುರೋಹಿತ ಎಂದು ಯಾರನ್ನು ಕರೆಯುತ್ತಾರೆ?

*ಇಂತಾದರೂ,ಅವುಗಳ ಬೆಲೆಯಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ,ಅವುಗಳು ಹಾಳಾಗುವುದೂ ಇಲ್ಲ.*

*ನಮ್ಮ ಸಮಾಜದಲ್ಲಿ ಹುಡುಗರ ಕುರಿತು ಇದೇ ರೀತಿಯ ಭಾವನೆ ಇದೆ.*

*ಈಗ,ಒಂದು ಆಭರಣದ ಅಂಗಡಿಗೆ ನೀನು ಹೋಗಿ ನೋಡಿದರೆ,ಅತ್ಯಮೂಲ್ಯವಾದ ವಜ್ರದಂತಹ ವಸ್ತುವನ್ನು,ತಿಜೋರಿಯ ಒಳಗೆ,ಇನ್ನೊಂದು ತಿಜೋರಿಯಲ್ಲಿರುವ,ಅತ್ಯಂತ ಭದ್ರವಾದ ಪೆಟ್ಟಿಗೆಯೊಂದರಲ್ಲಿ,ರೇಷ್ಮೆ ವಸ್ತ್ರದೊಳಗಿಟ್ಟು ಅದನ್ನು ಗ್ರಾಹಕರಿಗೆ,ತೋರಿಸುವಾಗಲೂ ಪಕ್ಜದಲ್ಲೊಬ್ಬ ಕೋವಿ ಹಿಡಿದು ನಿಂತಿರುವ ಮನುಷ್ಯನಿಗೆ ಸಂಬಳ ಕೊಟ್ಟು ಸಾಕುವನು ತಾನೇ?*

*ಏಕೆ ಹೀಗೆಂದು,ಆ ರತ್ನದ ವ್ಯಾಪಾರಿ ಬಲ್ಲ.*

*ಆ ವಜ್ರದಲ್ಲಿ,ಒಂದಿನಿತೂ ಊನು ಬಂದರೂ,ಮತ್ತದು ಕೇವಲ ಕಲ್ಲು ಮಾತ್ರ,ಇದ್ದಿಲಿನಷ್ಟೂ ಬೆಲೆಯಿಲ್ಲದ ವಸ್ತುವಾಗಿಬಿಡುವುದು ಅದು ಎಂದು.*

*ನಮ್ಮ ಸಮಾಜದಲ್ಲಿ ಹುಡುಗಿಯರು ರತ್ನಪ್ರಾಯರು ಎಂದೇ ಈ ರೀತಿಯ ಸಂಪ್ರದಾಯ ಇದೇ ತಾಯೀ.*

*ಹೆಣ್ಣು,ತಾನು ಹೆತ್ತವರ ಮನೆಯ ನಂದಾದೀಪದಂತೆ,ಬೆಳೆದಿಗಳ ಬಾಲೆ ಆಕೆ. ವಜ್ರದಂತೆ,ಸೂರ್ಯಪ್ರಕಾಶವನ್ನೂ ಸುತ್ತಮುತ್ತಾ ಬೀರುತ್ತಾ ಮನೆಗೆ ಮರ್ಯಾದೆ ತಂದು ಕೊಡುವವಳು.*

*ಆದರೆ,ಅಕಳಂಕವಾದ ಅವಳ ಶೀಲಕ್ಕೆ,ಒಮ್ಮೆ ಏನಾದರೂ ಧಕ್ಕೆ ಬಂದಿತೆಂದರೆ,ಮನೆಯ ಮಾಣಿಕ್ಯವು ಕುಂದಾಯಿತೆಂದರೆ,ಆ ಕುಟುಂಬವು ಇದ್ದೂ ಸತ್ತಂತೆಯೇ ತಾಯೀ.*

  ಅಪರಾ / ಅಚಲ ಏಕಾದಶಿ ಮಹತ್ವ

*ಇದೇ,ಹುಡುಗರ ಮತ್ತು ಹುಡುಗಿಯರ ಕುರಿತು ನಮ್ಮ ಭಾವನೆ ಕಣಮ್ಮಾ.*

*ಇದೇ ಹುಡುಗ ಹುಡುಗಿಯರ ನಡುವೆ ಇರುವ ಅಂತರವೂ ಕೂಡ.*

*ಶೀಲ ಇಬ್ಬರಲ್ಲೂ ಇರಲೇ ಬೇಕಾದ ಗುಣ. ಹುಡುಗಿಯರಲ್ಲಿ ಅದು ಹೋಯಿತೆಂದರೆ ಕುಟುಂಬಕ್ಕೆ ಒಂದು ಶೂಲವೇ ಆಗುವುದಮ್ಮಾ.*

*ಸಂಪೂರ್ಣ ಸಭೆಯು ಮೌನ ತಾಳಿತ್ತು. ಆ ಹುಡುಗಿಯೂ ಸೇರಿದಂತೆ,ಅಲ್ಲಿದ್ದವರೆಲ್ಲರ ಕಣ್ಣುಗಳೂ ಒದ್ದೆ ಒದ್ದೆ.*

*ನಮ್ಮ ನಮ್ಮ ಕುಟುಂಬಗಳಲ್ಲಿರುವ ಹುಡುಗ ಹುಡುಗಿಯರೆಂದರೆ – ಕಬ್ಬಿಣದ ಸಲಾಕೆ ಮತ್ತು ವಜ್ರದ ಹರಳು ಇದ್ದ ಹಾಗೆ. ಅಂತರ ಅಪರಿಮಿತ.*🙏🏼🙏🏼🙏🏼

Leave a Reply

Your email address will not be published. Required fields are marked *

Translate »