ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ನಾಳೆ ನೀವೂ ಮುದುಕರಾಗಲೇ ಬೇಕು – ಸಣ್ಣ ಕತೆ

ನಾಳೆ ನೀವೂ ಮುದುಕರಾಗಲೇ ಬೇಕು

*ಸಣ್ಣಕತೆ:
*ಅವರು ಕಳೆದ 3 ವರ್ಷಗಳಿಂದ ಆ ವೃದ್ದಾಶ್ರಮದಲ್ಲೇ ಇದ್ದರು.😔 ಮಕ್ಕಳಿಬ್ಬರು ವೈದ್ಯರಾದರೂ ಇರುವುದು ಬೇರೆದೇಶದಲ್ಲಿ, ಹೆಂಡತಿ ತೀರಿಕೊಂಡ ಬಳಿಕ… ಈ ವೃದ್ದಾ ಶ್ರಮವೇ ಅವರ ಮನೆಯಾಗಿ ಬಿಟ್ಟಿತ್ತು😔. ಮೊದ ಮೊದಲು ಒಂದೆರಡು ಸಲ ಮಗ,ಮಗಳು ಕಾಲ್ ಮಾಡುತಿದ್ದರು.. ಈಗ ಮಕ್ಕಳ ಕಾಲ್ ಬರದೇ ವರ್ಷ 2 ಆಗಿತ್ತು🥱😥. ಆಶ್ರಮದ ಪೇಮೆಂಟ್ ಪ್ರತಿ ತಿಂಗಳು ಗೂಗಲ್ ಪೇ ಆಗುತ್ತಿತ್ತು.😥.*
ಅವರಿಗೂ ನಾಲಿಗೆ ಜಡ್ಡು ಗಟ್ಟಿ ಹೋಗಿತ್ತು ಆಶ್ರಮದ ಆ ದಾಲ್ ಅನ್ನ ತಿಂದು ತಿಂದು😔. 78 ವರ್ಷದ ರಾಯರಿಗೆ ಅಂದೇಕೋ ಕೋಳಿ ಬಿರಿಯಾನಿ ತಿನ್ನಲು ಮನಸ್ಸಾ ಗಿತ್ತು.. ಮನೆಯಲಾಗಿದ್ದರೆ ಮನಸ್ಸಾದ ತಕ್ಷಣ ಕೋಳಿ ತಂದು ಹೆಂಡತಿಗೆ ಹೇಳಿ ಬಿರಿಯಾನಿ ಮಾಡಿಸಿ ತಿನ್ನುತಿದ್ದರು.. ಇಲ್ಲಿ ಯಾರಲ್ಲಿ ಹೇಳುವುದು?, 😔 ಆಸೆ ಅತಿಯಾಗಿದ್ದರಿಂದ ಓಪನ್ ಇರುವ ಗೇಟ್ ನೋಡಿ ಮೆಲ್ಲನೆ ಗೇಟ್ ನತ್ತ ಹೋದರು..🥱🥱
ಅಲ್ಲೊಬ್ಬ ಖತರ್ನಾಕ್ ವಾಚ್ಮಾನ್ ಯಾವಾಗಲೂ ಇರುತ್ತಿದ್ದ, ಯಾರನ್ನು ಕೂಡಾ ಹೊರ ಹೋಗಲು ಬಿಡುತ್ತಿರಲಿಲ್ಲ ಅವನು🥱. ಅಂದು ಅವನೂ* ಇಲ್ಲದ್ದು ನಿಜಕ್ಕೂ ರಾಯರಿಗೆ ಖುಷಿ ಏನಿಸಿತ್ತು..
ಮೆಲ್ಲಗೆ ಆಶ್ರಮದಿಂದ ಹೊರ ಬಂದರು.🥱
ಸ್ವಲ ದೂರ ಬಂದಾಗಲೇ ಸಿಕ್ಕಿತ್ತು ಹೋಟೆಲ್ ಸ್ವಾದಿಸ್ಟ್.. ತಮ್ಮ ನೆಚ್ಚಿನ ಹೋಟೆಲ್ ಗಳಲ್ಲಿ ಒಂದು. ಮತ್ತೆ ಮತ್ತೆ ಹಿಂದೆ ನೋಡಿದರು ಯಾರು ನೋಡಿರದ್ದು ಖಾತ್ರಿ ಮಾಡಿಕೊಂಡವರೇ ಹೋಟೆಲ್ ನ ಒಳಗೆ ಓಡಿದರು. ವೈಟರ್ ಬಳಿ ತಮಗಿಷ್ಟದ ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದರು.. ಗಬ ಗಬನೆ ತಿಂದರು.. ಅರ್ದ ಪ್ಲೇಟ್ ಕಾಲಿ ಆದಾಗ ಹಣದ ನೆನಪಾಗಿ ಪರ್ಸ್ ಹುಡುಕಿದರೆ ಅಲ್ಲಿದ್ದದ್ದು 100 ರೂ ಮಾತ್ರ..🥱🥱
ಮತ್ತೆ ಕೇಳಿದರು ಸಪ್ಲೈರ್ ಬಳಿ ಬಿರಿಯಾನಿಗೆ ಎಷ್ಟು? ಎಂದು, 150 ಎಂದಾಗ, ಎದೆ ದಸಕ್ ಎಂದಿತು ರಾಯರಿಗೆ 🥱🥱. ಅಷ್ಟರಲ್ಲಾಗಲೇ ಪ್ಲೇಟ್ ಕಾಲಿಯಾಗಿತ್ತು, ಮುಖದಲ್ಲಿ ಮೊದಲ ಬಾರಿ ಹೆದರಿಕೆ, ಗಾಬರಿ ಎಲ್ಲವೂ ಆಗುತಿತ್ತು, ಏನು ಮಾಡುವುದೆಂದೇ ತೋಚಿರಲಿಲ್ಲ ಅವರಿಗೆ🥱🥱. ಈಗ ಜೀವನದಲ್ಲಿ ಮೊದಲ ಬಾರಿ ಮಾನ ಹೋಗುವ ಪ್ರಸಂಗ ಎದುರಾಗಿದ್ದು ಅಂದು ಕಣ್ಣಂಚಲ್ಲಿ ನೀರು ಬಂದಿತ್ತು.😥😥
ಮಕ್ಕಳಿಗೆ ಶಪಿಸಿದರು, ಕುಲದೇವರನ್ನು ಪ್ರಾರ್ಥಿಸಿದರು, ಹೊಟ್ಟೆ ತುಂಬಿದ್ದರಿಂದ ತೇಗಿದರು. ಘರ್….ಎಂದು, ಅದು ಅವರ ನಿಯಂತ್ರಣದಲ್ಲಿಲ್ಲದೇ ಬoದಿತ್ತು😔..
ಒಂದಷ್ಟು ಹೊತ್ತಾದರೂ ಬಿಲ್ ಬರದಾಗ ವೇಟರ್ ಅನ್ನು ಕರೆದರು ನಡುಗುವ ಸ್ವರದಲ್ಲೇ ಬಿಲ್ ಕೊಡಿ ಎಂದರು, ಮುಂದಿನದಕ್ಕೆ ಸಿದ್ದರಾಗಿದ್ದರು ಅವರು ಅಲ್ಲೊಂದು ಟ್ವಿಸ್ಟ್ ಇತ್ತು..🥱🥱
ವೈಟರ್ ಬಂದವನೇ ನಿಮ್ಮ ಬಿಲ್ ಅವರು ಕೊಟ್ಟಿದ್ದಾರೆ ಎಂದು ಬಿಟ್ಟ.😃.
ರಾಯರು ಹತ್ತಿರದ ಟೇಬಲ್ ನೋಡಿದರು ಒಬ್ಬ ಬೆನ್ನು ಹಾಕಿ ಕೂತಿದ್ದ🥱. ರಾಯರಿಗೆ ಆಶ್ಚರ್ಯ ದೇವರನ್ನು ನೋಡಿರಲಿಲ್ಲ ಅವರು ಇಲ್ಲಿ ದೇವರೇ ಬಂದಿದ್ದರು.. ಇನ್ನೂ ಸಮೀಪ ಹೋದರೆ ಅಲ್ಲಿ ಮತ್ತೊಂದು ಅಘಾತ ವಿತ್ತು….🥱
ಆಶ್ರಮದ ವಾಚ್ ಮ್ಯಾನ್ ನಗುತ್ತಾ ಕೂತಿದ್ದ ಅಲ್ಲಿ🥱… “ಸರ್ ನಾನು ನೋಡಲು ಸಿಟ್ಟಿನ ಮನುಷ್ಯ ನಾಗಿದ್ದಿ ರ ಬಹುದು ಆದರೆ ನನ್ನ ಮನಸ್ಸು ನಿಮ್ಮ ಮಕ್ಕಳಷ್ಟು ಕೆಟ್ಟದಾಗಿಲ್ಲ,😥 ಬಹಳ ದಿನಗಳಿಂದ ನಿಮ್ಮನ್ನು ನೋಡುತ್ತಾ ಇದ್ದೇನೆ ನಿಮ್ಮ ಆಸೆ ಗಳೇನೆಂದು ಕೂಡಾ ಗೊತ್ತಿತ್ತು ಆದರೆ ಇಡಿ ಆಶ್ರಮಕ್ಕೆ ಬಿರಿಯಾನಿ ಊಟ ಕೊಡಿಸುವಷ್ಟು ಶ್ರೀಮಂತ ನಾನಲ್ಲ ಸರ್😥… ಅದಿಕ್ಕೆ ನಿಮ್ಮನ್ನು ಹೊರಬಿಟ್ಟು ನಿಮ್ಮ ಆಸೆ ಈಡೇರಿಸಿದೆ🙏. ನನ್ನ ತಂದೆ ಈಗಿಲ್ಲ ಸರ್ ಅವರೆಲ್ಲೇ ಇದ್ದರೂ ನಾನು ಮಾಡಿದ ಕೆಲಸ ಅವರನ್ನು ತೃಪ್ತ ಪಡಿಸಿದೆ ಎನ್ನುವ ಸಂತೋಷ ನನ್ನಲ್ಲಿದೆ.. ಓಕೆ ಸರ್ ನಡೆ ಯಿರಿ ನಾವಿನ್ನು ಆಶ್ರಮಕ್ಕೆ ಹೋಗೋಣಎಂದು.. ಹೊಟ್ಟೆ ತುಂಬಿದ ರಾಯರನ್ನು ಮರಳಿ ಆಶ್ರಮದತ್ತ ಕರೆದೋಯ್ದ..🙏🙏…
ಇಂತಹ ಅದೆಷ್ಟೋ ಅಸಹಾಯಕ ವೃದ್ಧರು ಮಕ್ಕಳಿದ್ದೂ ಕೂಡಾ ವೃದ್ದಾಶ್ರಮ ಗಳಲ್ಲಿ ಕಾಲ ಕಳೆಯುತ್ತಿ ದ್ದಾರೆ. ತಮ್ಮ ಅದೆಷ್ಟೋ ಆಸೆ ಗಳನ್ನು ತಮ್ಮಲ್ಲೇ ಹಿಡಿದಿಟ್ಟು ತಮ್ಮ ಆಯಸ್ಸಿನ ಕೊನೆಯ ದಿನಗಳನ್ನು ಬಂದಿಯಾಗಿ 4 ಗೋಡೆಯ ಮದ್ಯ ಕಳೆಯುತ್ತಿರುವ ಇಂತಹ ವೃದ್ಧರ ಆಸೆ ಗಳನ್ನು ತೀರಿಸುವುದು ಮಕ್ಕಳಾದವರ ಕರ್ತವ್ಯ… ಇಲ್ಲದಿದ್ದರೆ… ನೆನಪಿರಲಿ

ನಾಳೆ ನೀವೂ ಮುದುಕರಾಗಲೇ ಬೇಕು ….

Leave a Reply

Your email address will not be published. Required fields are marked *

Translate »