ಉಚಿತ ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ರಾಮಕೃಷ್ಣ ವಿದ್ಯಾಸಂಸ್ಥೆ ಯಲ್ಲಿ ಅರ್ಜಿ ಸಲ್ಲಿಸಿ

ಉಚಿತ ಹೈಸ್ಕೂಲ್ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ ರಾಮಕೃಷ್ಣ ಮಠದ ಅಧೀನದಲ್ಲಿ ನಡೆಯುತ್ತಿರುವ ರಾಮಕೃಷ್ಣ ಬಾಲಕಾಶ್ರಮ , ಪೊಳಲಿ , ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿರುವ ವಿದ್ಯಾಸಂಸ್ಥೆಯು ಅರ್ಜಿಗಳನ್ನು ಆಹ್ವಾನಿಸಿದ್ದು ಆಸಕ್ತರು ಈ ಕೆಳಗೆ ನೀಡಿರುವ ವಿಳಾಸ ಅಥವಾ ದೂರವಾಣಿ ಮೂಲಕ ಸಂಪರ್ಕಿಸಲು ಕೋರಲಾಗಿದೆ.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಹೈಸ್ಕೂಲ್ ಶಿಕ್ಷಣ , ಊಟ ಹಾಗು ಉಚಿತ ವಸತಿ ಒದಗಿಸುವ ವ್ಯವಸ್ಥೆ ಮಾಡಲಾಗುವುದು. ಹೈಸ್ಕೂಲ್ ವಿದ್ಯಾಭ್ಯಾಸ ದ ಜೊತೆಗೆ ಕಂಪ್ಯೂಟರ್ ತರಬೇತಿ, ಯೋಗ, ಕರಾಟೆ, ನೃತ್ಯ, ಭರತನಾಟ್ಯ, ಯಕ್ಷಗಾನ , ಸಂಗೀತ, ಭಜನೆ, ತೋಟಗಾರಿಕೆ, ಶ್ರಮಸೇವೆ ಮುಂತಾದ ಕಲೆಗಳನ್ನು ಕಲಿಯುವ ಅವಕಾಶ ಉಚಿತವಾಗಿ ಮಾಡಿಕೊಡಲಾಗುತ್ತದೆ.

  ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಮಾಹಿತಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ರಾಮಕೃಷ್ಣ ತಪೋವನ,
ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬಳಿ,
ಕರಿಯಂಗಳ ಗ್ರಾಮ,
ಪೊಳಲಿ ಅಂಚೆ,
ಬಂಟ್ವಾಳ ತಾಲೂಕು,
ದಕ್ಷಿಣ ಕನ್ನಡ 574 219

ದೂರವಾಣಿ # 9845165108 , 9481846545, 0824 2016455 , 0824 2266655

Email : ramakrishnatapovan@gmail.com

Website : www.ramakrishnatapovan.org

Leave a Reply

Your email address will not be published.

Translate »

You cannot copy content of this page