ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ನವರಾತ್ರಿಯ 5ನೇ ದಿನ – ಸ್ಕಂದ ಮಾತಾ ಪೂಜಾ ವಿಧಾನ

ನವರಾತ್ರಿಯ ಐದನೇ ದಿನ ಪಂಚಮಿ ತಿಥಿಯಂದು ದುರ್ಗಾಮಾತೆಯ ಅವತಾರವಾದ ಸ್ಕಂದ ಮಾತೆಯನ್ನು ಆರಾಧಿಸಲಾಗುತ್ತದೆ. ತಾರಕಾಸುರನು ಬ್ರಹ್ಮನ ವರಬಲದಿಂದ ಕೊಬ್ಬಿರುತ್ತಾನೆ. ಶಿವ ಪಾರ್ವತಿಯರ ಕಂದನಿಂದ ಮಾತ್ರವೇ ತನಗೆ ಮರಣ ಎಂದು ವರ ಪಡೆದಿರುತ್ತಾನೆ. ಹಾಗಾಗಲು ಸಾಧ್ಯವಿಲ್ಲ ಎಂಬುದು ಅವನ ಎಣಿಕೆ. ಆದರೆ ಪಾರ್ವತಿ-ಶಿವ ಮದುವೆಯಾದ ಬಳಿಕ, ಸ್ಕಂದ ಅಥವಾ ಷಣ್ಮುಖ ಜನ್ಮ ತಾಳುತ್ತಾನೆ. ಭಗವಾನ್‌ ಸ್ಕಂದನ ಮಾತೆಯಾಗಿ ದುರ್ಗೆಯು ಅವತರಿಸಿದ್ದರಿಂದ ‘ಸ್ಕಂದಮಾತಾ‘ ಎಂದು ಪ್ರಸಿದ್ಧಳಾಗಿದ್ದಾಳೆ.

ಪಾರ್ವತಿ ಹಾಗೂ ಶಿವನ ಮದುವೆಯಾದ ಬಳಿಕ, ಸ್ಕಂದ ಅಥವಾ ಷಣ್ಮುಖನು ಜನ್ಮ ತಾಳುತ್ತಾನೆ. ಷಣ್ಮುಖನನ್ನೇ ತಮ್ಮ ದೇವಸೈನ್ಯಕ್ಕೆ ದೇವತೆಗಳು ಸೇನಾನಿಗಳಾಗಿಸಿಕೊಳ್ಳುತ್ತಾರೆ. ದೇವಿಯೂ ಸೇರಿದಂತೆ ಸರ್ವರೂ ಈತನಿಗೆ ತಮ್ಮ ಶಕ್ತಿಗಳನ್ನು ನೀಡುತ್ತಾರೆ. ಸ್ಕಂದನು ದೇವಸೇನಾ ಸಮೇತನಾಗಿ ತೆರಳಿ, ತಾರಕಾಸುರನನ್ನು ಘೋರ ಯುದ್ಧದಲ್ಲಿ ಕೊಂದು ಮರಳುತ್ತಾನೆ. ಹೀಗೆ ಜಗತ್ಕಲ್ಯಾಣಕಾರಕನಾದ ಸ್ಪಂದನನ್ನು ಹೆತ್ತು ಕೊಟ್ಟ ಈಕೆ ಸ್ಕಂದಮಾತೆ ಎನಿಸಿಕೊಳ್ಳುತ್ತಾಳೆ. ಮಗನಾದ ಸ್ಕಂದನನ್ನು ತೊಡೆಯ ಮೇಲೆ ಕುಳ್ಳರಿಸಿಕೊಂಡಿರುವ ದುರ್ಗಾದೇವಿಯ ಈ ಅವತಾರ ಅತ್ಯಂತ ಪವಿತ್ರ ಹಾಗೂ ಅದ್ಭುತ ರೂಪ ಎಂದು ಹೇಳಲಾಗುತ್ತದೆ.

ಸ್ಕಂದ ಮಾತೆಯು ಬುಧಗ್ರಹದ ಮೇಲೆ ಅಧಿಪತ್ಯವನ್ನು ಹೊಂದಿರುತ್ತಾಳೆ. ಶುದ್ಧಮನಸ್ಸಿನಿಂದ, ಭಕ್ತಿಯಿಂದ ಯಾರು ಆರಾಧನೆ ಮಾಡುತ್ತರೋ ಅವರಿಗೆ ದೇವಿಯು ಹೆಸರು, ಸಂಪತ್ತು ಹಾಗೂ ಸಮೃದ್ಧಿಯನ್ನು ನೀಡುತ್ತಾಳೆ. ಜನ್ಮ ಕುಂಡಲಿಯಲ್ಲಿ ಬುಧನು ಪ್ರತಿಕೂಲ ಸ್ಥಾನದಲ್ಲಿದ್ದರೆ ಉಂಟಾಗುವ ತೊಂದರೆಯನ್ನು ದೇವಿಯು ನಿವಾರಿಸುತ್ತಾಳೆ.

  ಗುಡ್ಡಟ್ಟು ಶ್ರೀವಿನಾಯಕ ದೇವಸ್ಥಾನ ಪುರಾಣ ಪ್ರಸಿದ್ದ ಕ್ಷೇತ್ರ

ಸ್ಕಂದ ಮಾತೆಯ ರೂಪ

ಸ್ಕಂದ ಮಾತೆಗೆ ನಾಲ್ಕು ಭುಜಗಳಿದ್ದು ಒಂದು ಕೈಯಲ್ಲಿ ಸ್ಕಂದನನ್ನು ಹಾಗೂ ಎರಡು ಕೈಯಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು, ಸದಾ ತನ್ನ ಭಕ್ತರಿಗೆ ಆಶೀರ್ವಾದ ಮಾಡುತ್ತಾಳೆ. ಇವಳ ಶರೀರದ ಬಣ್ಣವೂ ಸಂಪೂರ್ಣವಾಗಿ ಬೆಳ್ಳಗಿದ್ದು, ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ. ಈ ಕಾರಣಕ್ಕಾಗಿ ಇವಳನ್ನು ಪದ್ಮಾಸನಾ ದೇವಿ ಎಂದು ಕರೆಯುತ್ತಾರೆ. ಸಿಂಹವು ಸ್ಕಂದಮಾತೆಯ ವಾಹನವಾಗಿದೆ.

ಸ್ಕಂದ ಮಾತೆಯ ಪೂಜಾ ವಿಧಾನ

ಸ್ಕಂದ ಮಾತೆಗೆ ಕೆಂಪು ಬಣ್ಣದ ಹೂವು ವಿಶೇಷವಾಗಿ ಗುಲಾಬಿ ಹೂವು ಪ್ರಿಯವಾದುದು. ಸ್ಕಂದ ಮಾತೆ ಹಾಗೂ ಮಾತೆಯ ಪುತ್ರ ಸ್ಕಂದ ಆಶೀರ್ವಾದಕ್ಕೆ ವಿಶೇಷ ಪೂಜೆಯನ್ನು ಈ ದಿನ ಮಾಡಬೇಕು. ಷೋಡಶೋಪಚಾರ ಪೂಜೆಯ ನಂತರ ಆರತಿಯೊಂದಿಗೆ ಪೂಜೆಯನ್ನು ಮುಕ್ತಾಯಗೊಳಿಸಬೇಕು. ಜೀವನದ ಸದ್ಗತಿಗೆ ಹಾಗೂ ಆಧ್ಯಾತ್ಮಿಕ ಸಂತುಷ್ಟಿಗಾಗಿ ಈ ಅವತಾರಕ್ಕೆ ಆರಾಧನೆ ಮಾಡಲಾಗುವುದು.

ಸ್ಕಂದಮಾತೆಯ ಮಂತ್ರ

ಓಂ ದೇವಿ ಸ್ಕಂದಮಾತಾಯ ನಮಃ ಓಂ ದೇವಿ ಸ್ಕಂದಮಾತಾಯೈ ನಮಃ ಸಿಂಹಾಸಂಗತಂ ನಿತ್ಯಂ ಪದ್ಮಾಂಚಿತ ಕರದ್ವಾಯೇ ಶುಭದಾಸ್ತು ಸದಾದೇವಿ ಸ್ಕಂದಮಾತಾ ಯಶಸ್ವಿನೀ

ಸ್ತುತಿ

ಯಾ ದೇವಿ ಸರ್ವಭೂತೇಷು ಮಾ ಸ್ಕಂದಮಾತಾ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ಪ್ರಾರ್ಥನೆ
”ಸಿಂಹಸಂಗತ ನಿತ್ಯಂ ಪದ್ಮಾಂಚಿತ ಕರದ್ವಾಯೇ
ಶುಭದಾಸ್ತು ಸದಾದೇವಿ ಸ್ಕಂದಮಾತಾ ಯಶಸ್ವಿನೀ”

  ನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ

ಸ್ತುತಿ
”ಯಾ ದೇವಿ ಸರ್ವಭೂತೇಷು ಮಾ ಸ್ಕಂದಮಾತಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ”

ಧ್ಯಾನ ಮಂತ್ರ
ವಂದೇ ವಂಚಿತ ಕಾಮರ್ಥೇ ಚಂದ್ರಾರ್ಧಕೃತಶೇಖರಂ
ಸಿಂಹರುಧ ಚತುರ್ಭುಜಾ ಸ್ಕಂದಮಾತಾ ಯಶಸ್ವಿನಿಂ
ಧವಲವರ್ಣ ವಿಶುದ್ಧ ಚಕ್ರಸ್ಥಿತೋಂ ಪಂಚಮ ದುರ್ಗಾ ತ್ರಿನೇತ್ರಂ
ಅಭಯ ಪದ್ಮ ಯುಗ್ಮ ಕರಂ ದಕ್ಷಿಣ ಉರು ಪುತ್ರಧರಂ ಭಜೆಂ
ಪತಂಬರಾ ಪರಿಧನಂ ಮೃದುಹಾಸ್ಯ ನಾನಾಲಂಕಾರ ಭೂಷಿತಂ
ಮಂಜಿರಾ, ಹರಾ, ಕೀಯೂರ, ಕಿಂಕಿಣಿ, ರತ್ನಕುಂಡಲ ಧಾರಿಣೀಂ
ಪ್ರಫುಲ್ಲ ವಂದನಾ ಪಲ್ಲವಧರಂ ಕಾಂತಾ ಕಪೋಲಂ ಪಿನಾ ಪಯೋಧರಂ
ಕಾಮನಿಯಂ ಲಾವಣ್ಯಂ ಚಾರು ತ್ರೈವಲ್ಲಿ ನಿತಂಬನೀಂ

ಸ್ತೋತ್ರ
ನಮಾಮಿ ಸ್ಕಂದಮಾತಾ ಸ್ಕಂದಧಾರಿಣೀಂ
ಸಮಗ್ರತಾತ್ವಸಾಗರಂ ಪರಪರಗಹರಂ
ಶಿವಪ್ರಭಾ ಸಮುಜ್ವಲಾಂ ಸ್ಫುಚ್ಛಾಶಾಶಶೇಖರಂ
ಲಲಾಟರತ್ನಭಾಸ್ಕರಂ ಜಗತ್ಪ್ರದೀಪ್ತಿ ಭಾಸ್ಕರಂ
ಮಹೇಂದ್ರಕಶ್ಯಪಾರ್ಚಿತ ಸನಂತಕುಮಾರ ಸಮಸ್ತುತಂ
ಸುರಸುರೇಂದ್ರವಂದಿತಂ ಯಥಾರ್ಥನಿರ್ಮಲಾಧ್ಬುತಂ
ಅತರ್ಕ್ಯರೋಚಿರುವಿಜಂ ವಿಕಾರ ದೋಷವರ್ಜಿತಂ
ಮುಮುಕ್ಷುಭಿರ್ವಿಚಿಂತಿತಂ ವಿಶೇಷತತ್ವಮುಚ್ಚಿತಂ
ನಾನಾಲಂಕಾರ ಭೂಷಿತಾಂ ಮೃಗೇಂದ್ರವಾಹನಾಗೃಜಂ
ಸುಶುದ್ಧತಾತ್ವತೋಶನಂ ತ್ರಿವೇಂದಮರ ಭೂಷಣಂ
ಸುಧಾರ್ಮಿಕಾಪುಕಾರಿಣಿ ಸುರೇಂದ್ರ ವೈರಿಗ್ರತಿನಿಂ
ತಮೋಂದಕರಾಯಮಿನಿ ಶಿವಾಶುಭಾವಕಾಮಿನಿಂ
ಸಹಸ್ರಸೂರ್ಯರಂಜಿಕಂ ಧನಜ್ಜೋಗಕಾರಿಕಂ
ಸುಶುದ್ಧಾ ಕಾಲ ಕಂಡಾಲ ಶುಭ್ರಿದವೃಂದಮಾಜ್ಜುಲಂ
ಪ್ರಜಾಯಿಣೀ ಪ್ರಜಾವತೀ ನಮಾಮಿ ಮಾತರಂ ಸತೀಂ
ಸ್ವಕರ್ಮಕಾರಣೇ ಗತೀಂ ಹರಿಪ್ರಯಾಚ ಪಾರ್ವತಿಂ
ಅನಂತಶಕ್ತಿ ಕಾಂತಿದಾಂ ಯಶೋರ್ಥಭಕ್ತಿಮುಕ್ತಿದಾಂ
ಪುನಃ ಪುನಾರ್ಜಗದ್ಧಿತಂ ನಮಾಮ್ಯಂ ಸುರಾರ್ಚಿತಂ
ಜಯೇಶ್ವರಿ ತ್ರಿಲೋಚನೆ ಪ್ರಸಿದಾ ದೇವಿ ಪಾಹಿಮಾಂ

  ಮಂತ್ರ ಜಪ ಶಕ್ತಿ ತಿಳಿಯಿರಿ

ಸ್ಕಂದ ಮಾತಾ ಕವಚ

ಏಂ ಬಿಜಲಿಂಕಾ ದೇವಿ ಪದ್ಯುಗ್ಮಧರಾಪರಾ
ಹೃದಯಂ ಪಾತು ಸ ದೇವಿ ಕಾರ್ತಿಕೇಯಾಯುತ
ಶ್ರೀ ಹ್ರೀಂ ಹ್ರೀಂ ಏಂ ದೇವೀ ಪರ್ವಸ್ಯಾ ಪಾತು ಸರ್ವದಾ
ಸರ್ವಾಂಗ ಮೇ ಸದಾ ಪಾತು ಸ್ಕಂದಮಾತಾ ಪುತ್ರಪ್ರದಾ
ವನವನಾಮೃತೇಂ ಹಂ ಫತ್‌ ಬಿಜಾ ಸಮಾನ್ವಿತ
ಉತ್ತರಸ್ಯಾ ತಥಗ್ನೇ ಚಾ ವಾರುಣೇ ನೈರಿತೈವತು
ಇಂದ್ರಾಣಿ ಭೈರವೀ ಚೈವಾಸಿತಂಗಿ ಚ ಸಂಹಾರಿಣಿ
ಸರ್ವದಾ ಪಾತು ಮಂ ದೇವಿ ಚನ್ಯಾನ್ಯಸು ಹಿ ದೀಕ್ಷು ವೈ

ನವರಾತ್ರಿಯ ಐದನೇ ದಿನದಂದು ಸ್ಕಂದಮಾತೆಯ ಪೂಜೆ ಮಾಡಿದರೆ ಮನಃಶುದ್ಧಿಯಾಗುವುದು. ದೇವಿಯು ಬುದ್ಧಿಶಕ್ತಿ ಹೆಚ್ಚುವಂತೆ ಆಶೀರ್ವಾದ ಮಾಡುತ್ತಾಳೆ. ಈ ದೇವಿಯ ಆರಾಧನೆಯಿಂದ ಭಕ್ತರು ಯಶಸ್ಸು ಹಾಗೂ ಖ್ಯಾತಿಯನ್ನು ಪಡೆಯುತ್ತಾರೆ, ಅಲ್ಲದೇ ಯಶಸ್ಸಿನ ಹಾದಿಯಲ್ಲಿ ಮುಂದುವರಿಯುತ್ತಾರೆ. ದೇವಿಯ ಈ ರೂಪದ ಪೂಜೆಯಿಂದ ಸಾಧಕನಿಗೆ ಅಲೌಕಿಕ ತೇಜಸ್ಸು ಹಾಗೂ ಪ್ರಭೆಯು ಸಿಗುವುದರಿಂದ ಐಹಿಕ ಬಂಧನಗಳಿಂದ ಮುಕ್ತನಾಗುತ್ತಾನೆ.

Leave a Reply

Your email address will not be published. Required fields are marked *

Translate »