ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ನವರಾತ್ರಿಯ 8ನೇ ದಿನ ಮಹಾಗೌರಿ ಪೂಜಾ ವಿಧಾನ

ನವರಾತ್ರಿ ಎಂಟನೇ ದಿನದ ಪೂಜೆಯು ಮಹಾ ಅಷ್ಟಮಿ ತಿಥಿ(ಚಂದ್ರ ಕರಗುವ ಎಂಟನೇ ದಿನ)ದಂದು ಮಹಾಗೌರಿಯನ್ನು ಆರಾಧಿಸಲಾಗುತ್ತದೆ.

ಮಹಾಗೌರಿಯು ತನ್ನ 16ನೇ ವಯಸ್ಸಿನವರಾಗಿರುವರು. ಗೌರಿ ಎಂದರೆ ಆಕೆಯು ಗಿರಿ ಅಥವಾ ಪರ್ವತದ ಮಗಳೆಂದು ಹೇಳಲಾಗುತ್ತದೆ. ಗೂಳಿ ಮೇಲೆ ಪ್ರಯಾಣಿಸುವ ಗೌರಿ ತನ್ನ ಕೈಯಲ್ಲಿ ತ್ರಿಶೂಲದೊಂದಿಗೆ ಢಮರುವನ್ನು ಹಿಡಿಕೊಂಡಿರುವರು. ಆಕೆಯು ಬಿಳಿ ಬಟ್ಟೆ ಧರಿಸಿರುವರು ಮತ್ತು ಆಕೆಯ ಮುಖವು ತಂಪಾಗಿರುವ ಚಂದ್ರನಂತೆ ಹೊಳೆಯುತ್ತಲಿರುವುದು ಮತ್ತು ಇದು ಭಕ್ತರಿಗೆ ವರವನ್ನು ನೀಡುವಂತಿದೆ. ‘ಅಷ್ಟವರ್ಷಾ ಭವೇದ್‌ ಗೌರಿ’ ಯಾಗಿರುವ ಇವಳನ್ನು ಉಪಾಸಿಸಿದಾಗ ಸಂಚಿತ ಪಾಪಗಳು ತೊಳೆದುಹೋಗುತ್ತವೆ. ಸಂತಾಪ, ದು:ಖಗಳ ನಿವಾರಣೆಯಾಗುವುದು ಖಚಿತ. ತಾಯಿ ಗೌರಿಯ ವಯಸ್ಸು ಯಾವಾಗಲೂ ಹದಿನಾರು ಆಗಿರುತ್ತದೆ. ಗೌರಿಯು ಗಿರಿಗಳ ಪುತ್ರಿ. ಅವಳು ಎತ್ತಿನ ಮೇಲೆ ಕುಳಿತಿರುತ್ತಾಳೆ. ಆಕೆಗೆ ನಾಲ್ಕು ಕೈಗಳು. ಒಂದು ಕೈಯಲ್ಲಿ ಢಮರು ಹಾಗೂ ಇನ್ನೊಂದು ಕೈಯಲ್ಲಿ ತ್ರಿಶೂಲ ಇರುತ್ತದೆ. ಶ್ವೇತ ವಸ್ತ್ರಧಾರಿಣಿಯಾಗಿರುವ ಗೌರಿ ದೇವಿಯ ಮುಖವು ಶಾಂತ ಸ್ವಭಾವವಾಗಿರುತ್ತದೆ. ಚಂದ್ರನ ತೇಜಸ್ಸು ಆಕೆಯ ಮುಖದಲ್ಲಿ ಲಾಸ್ಯವಾಡುತ್ತಿರುತ್ತದೆ. ಆಕೆ ಮತ್ತೊಂದು ಕೈಯ್ಯಲ್ಲಿ ಭಕ್ತರಿಗೆ ಆಶೀರ್ವಾದ ಮಾಡುತ್ತಿರುತ್ತಾಳೆ.

ಮಹಾಗೌರಿಯ ವಯಸ್ಸು ಕೇವಲ ಎಂಟು ಎಂದು ತಿಳಿಯಲಾಗಿದೆ. ಶ್ವೇತ ವೃಷಭ ವಾಹನೆಯಾಗಿರುವ ಇವಳ ಬಿಳುಪನ್ನು ಹುಣ್ಣಿಮೆಯ ಚಂದ್ರ, ಶಂಖ ಹಾಗೂ ಕಂದಪುಷ್ಪಗಳಿಗೆ ಹೋಲಿಸಲಾಗಿದೆ.
ಸರ್ವಾಂಗಾಭರಣಾದಿ ಶ್ವೇತವಸ್ತ್ರ ಭೂಷಿತೆಯಾಗಿರುವ ಇವಳ ಬಲಕೈಯಲ್ಲಿ ಅಭಯಮುದ್ರೆ ಮತ್ತು ತ್ರಿಶೂಲವಿದ್ದು ಎಡಕೈಗಳಲ್ಲಿ ವರದಮುದ್ರೆ ಹಾಗೂ ಡಮರು ಇವೆ.

ತಾಯಿ ಮಹಾಗೌರಿಯ ಕಥೆ

ಪಾರ್ವತಿ ದೇವಿಯು ಮನುಷ್ಯರ ಅವತಾರ ಎತ್ತಿ ಭೂಮಿಯಲ್ಲಿ ಜನಿಸಿದಳು. ಶಿವನ್ನು ಪಡೆಯುವುದು ಆ ಜನ್ಮದಲ್ಲಿ ಅವಳ ಗುರಿಯಾಗಿರುತ್ತದೆ. ಒಂದು ಸಲ ತಾಯಿ ದುರ್ಗೆಯು ಭೂಮಿ ಮೇಲೆ ಜನ್ಮವನ್ನು ಪಡೆಯುವರು ಮತ್ತು ಮರಳಿ ದೇವಲೋಕಕ್ಕೆ ಹೋಗಲು ಅವರು ಶಿವನನ್ನು ಮದುವೆಯಾಗಲು ಬಯಸುವರು. ನಾರದ ಮುನಿಗಳ ಸಲಹೆಯಂತೆ ದೇವಿಯು ಶಿವನನ್ನು ಒಲಿಸಿಕೊಳ್ಳಲು ಹಲವಾರು ತಪಸ್ಸನ್ನು ಮಾಡುವರು. ನಾರದ ಮಹರ್ಷಿಗಳ ಸಲಹೆಯ ಮೇರೆಗೆ ಸುದೀರ್ಘ ತಪಸ್ಸಿಗೆ ಕುಳಿತ ಆಕೆಯು ಅನ್ನಾಹಾರ, ನೀರು ತ್ಯಜಿಸಿದಳು.
ಆಕೆ ತಪಸ್ಸಿನಲ್ಲಿ ಸಂಪೂರ್ಣವಾಗಿ ಮಗ್ನರಾಗಿರುವ ವೇಳೆ ದೇಹದಲ್ಲಿ ಧೂಳು ಹಾಗೂ ಕೊಳೆಯು ತುಂಬಿರುವುದು. ಆಕೆ ಆಹಾರ ಹಾಗೂ ನೀರನ್ನು ಬಿಟ್ಟು ಸಂಪೂರ್ಣವಾಗಿ ತಪಸ್ಸಿನಲ್ಲಿ ತೊಡಗಿಕೊಳ್ಳುವರು.
ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗಿರುವುದು ಮತ್ತು ಆಕೆಯು ಸಾವಿರಾರು ವರ್ಷಗಳ ಹೀಗೆ ಇರುವರು. ಸುದೀರ್ಘ ಕಾಲ ಆಕೆ ತಪಸ್ಸಿಗೆ ಕುಳಿತ ಕಾರಣ ಆಕೆಯ ಮೈಗೆ ಧೂಳು ಮತ್ತಿಕೊಂಡಿತು. ಬಳ್ಳಿಗಳು ಬೆಳೆದವು. ಸೂರ್ಯನ ವಿಪರೀತ ಶಾಖದಿಂದ ಆಕೆಯ ದೇಹವು ಬೆಂದುಹೋದಂತಾಯಿತು. ಆದರೂ ಆಕೆ ಸಾವಿರ ವರ್ಷಗಳ ಕಾಲ ಶಿವನಿಗಾಗಿ ಕಾದು ಕುಳಿತಳು. ಭಗವಾನ್‌ ಶಂಕರನನ್ನು ವರಿಸಲು ಘೋರ ತಪಸ್ಸು ಮಾಡಿದಾಗ ಇವಳ ಶರೀರವೆಲ್ಲಾ ಕಪ್ಪಿಟ್ಟಿತ್ತು.
ತಪಸ್ಸಿಗೆ ಸಂತುಷ್ಟನಾದ ಶಿವನು ಇವಳು ಬಿಳುಪಿನ ಮೈಕಾಂತಿಯನ್ನು ಹೊಂದುವುದಕ್ಕಾಗಿ ಗಂಗೆಯ ಪವಿತ್ರ ಜಲವನ್ನು ಇವಳ ಶರೀರದ ಮೇಲೆ ಹರಿಸಿದ್ದರಿಂದ ಮೈಯೆಲ್ಲಾ ವಿದ್ಯುತ್ತಿನ ಕಾಂತಿಯಂತೆ ಹೊಳೆಯತೊಡಗಿತು.
ಶಿವ ದೇವರು ಆಕೆಯ ತಪಸ್ಸಿನಿಂದ ಪ್ರಭಾವಿತರಾಗಿ, ಆಕೆಯ ದೇವನ್ನು ಹೊಳೆಯುವಂತೆ ಮಾಡಲು ಗಂಗಾ ದೇವಿಯನ್ನು ಬಿಡುವರು. ಇದರಿಂದಾಗಿ ಮಹಾಗೌರಿಯ ಅವತಾರವು ತುಂಬಾ ಕಾಂತಿಯುತ, ಬಿಳಿ ಹಾಗೂ ಧಾನ್ಯಸಕ್ತದಲ್ಲಿರುವುದು. ಸ್ಪಟಿಕದ ಕಲ್ಲಿನಂತೆ ಹೊಳೆಯುತ್ತಿದ್ದ ಆಕೆಯ ಮುಖವು ಚಂದ್ರನ ಶಾಂತತೆಯನ್ನು ಹೊಂದಿತು. ಆಕೆಯು ಮಹಾಗೌರಿಯಾಗಿ ಹೊಸ ಜನ್ಮ ಎತ್ತಿದಳು. ಶಿವನು ಆಕೆಯ ಭಕ್ತಿಗೆ ಮೆಚ್ಚಿ ಆಕೆಯನ್ನು ವರಿಸಿದ.

  ಅತಿದೊಡ್ಡ ಮೂರ್ಖನ ಕಥೆ - ತೆನಾಲಿ ರಾಮ

ಇನ್ನೊಂದು ಪುರಾಣದ ಕತೆಯ ಪ್ರಕಾರ ತಾಯಿ ಗೌರಿಯು ತಪಸ್ಸು ಮಾಡುವಾಗ ಹಸಿದಿದ್ದ ಸಿಂಹವೊಂದು ಆಹಾರ ಅರಸಿ ಗೌರಿ ದೇವಿಯ ಬಳಿ ಬಂತು. ಆದರೆ, ಆಕೆ ತಪಸ್ಸು ಮಾಡುತ್ತಿರುವ ಕಾರಣ ಆ ಸಿಂಹವು ಅಲ್ಲಿಯೇ ಕಾದಿದ್ದು ಬಡಕಲಾಯಿತು.
ತಾಯಿ ಗೌರಿ ಕಣ್ಣು ಬಿಟ್ಟಾಗ ಬಡಕಲಾಗಿದ್ದ ಸಿಂಹವನ್ನು ಕಂಡು ಕರಗಿಹೋದಳು. ಅಯ್ಯೋ ನಾನು ತಪಸ್ಸು ಮಾಡುವಾಗ ಈ ಸಿಂಹ ಆಹಾರ ಇಲ್ಲದೆ ಇಲ್ಲಿಯೇ ಕುಳಿತಿದೆಯಲ್ಲಾ ಎಂದು ನೊಂದು ಸಿಂಹವನ್ನು ತಾಯಿ ಗೌರಿಯು ತನ್ನ ವಾಹವನ್ನಾಗಿ ಮಾಡಿಕೊಂಡಳು.
ಹಾಗಾಗಿಯೇ ತಾಯಿ ಗೌರಿಗೆ ಸಿಂಹ ಮತ್ತು ಎತ್ತು ಎರಡೂ ವಾಹನಗಳಾಗಿವೆ.

  ಶ್ರೀ ವ್ಯಾಸರಾಜ ತೀರ್ಥ ಪ್ರತಿಷ್ಠಾಪಿಸಿರುವ 732 ಆಂಜನೇಯ - Sree Vyasaraja Built 732 Anjaneya statues list

ಮಹಾಗೌರಿ ತಾಯಿಯ ಪೂಜೆಯ ಮಹತ್ವ ಮಹಾಗೌರಿ ದೇವಿಯು ರಾಹುವಿನ ಅಧಿಪತಿ. ಜನ್ಮ ಕುಂಡಲಿಯಲ್ಲಿ ರಾಹುವಿನಿಂದ ಆಗಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ, ತನ್ನ ಭಕ್ತರಿಗೆ ಸಮೃದ್ಧಿ ಹಾಗೂ ಆಧ್ಯಾತ್ಮಿಕ ಧಾನ್ಯ ನೀಡುವರು. ಮನಸ್ಸಿನಲ್ಲಿರುವಂತಹ ಗೊಂದಲ ನಿವಾರಣೆ ಮಾಡಿ, ಯಶಸ್ವಿ ಜೀವನ ಸಾಗಿಸಲು ನೆರವಾಗುವರು. ರಾಹುವಿನ ಪೀಡೆಯಿಂದ ಆಗುವ ಅಹಿತಕರ ಘಟನೆಗಳು, ಕಾಟಗಳನ್ನು ತಪ್ಪಿಸಿ ತನ್ನ ಭಕ್ತರನ್ನು ಆಕೆ ಆಶೀರ್ವದಿಸುತ್ತಾಳೆ. ಗೌರಿಯ ಆಶೀರ್ವಾದದಿಂದ ಸಂಪತ್ತು, ಆಯುಷ್ಯದ ಜೊತೆಗೆ ಆಧ್ಯಾತ್ಮದ ಲಾಭಗಳೂ ಮನುಷ್ಯನಿಗೆ ದೊರೆಯುತ್ತದೆ. ನಮ್ಮ ಮನಸ್ಸಿನಲ್ಲಿರುವ ಗೊಂದಲಗಳನ್ನು ತಾಯಿ ಗೌರಿ ನಿವಾರಿಸಿ ಸ್ಪಷ್ಟ ಚಿತ್ರಣ ನೀಡುತ್ತಾಳೆ. ನಮ್ಮ ಹೃದಯಲ್ಲಿ ಆತ್ಮವಿಶ್ವಾಸ ತುಂಬಿ ಯಶಸ್ಸಿನ ಕಡೆಗೆ ದಾರಿ ತೋರುತ್ತಾಳೆ.

ಮಹಾಗೌರಿ ಪೂಜೆಯ ರೀತಿ

ತಾಯಿ ಗೌರಿಯನ್ನು ಪೂಜಿಸಲು ರಾತ್ರಿ ಅರಳಿದ ಮಲ್ಲಿಗೆ(ರಾತ್ರಿ ಮಲ್ಲಿಗೆ)ಯನ್ನು ಬಳಸಲಾಗುತ್ತದೆ. ತಾಯಿಯನ್ನು ಶುದ್ಧ ಮನಸ್ಸು, ಭಕ್ತಿಯಿಂದ ಪೂಜಿಸಿ. ಗಣಪತಿ ಪ್ರಾರ್ಥನೆ ಮೂಲಕ ಪೂಜೆಯನ್ನು ಶುರುಮಾಡಿ,ಷೋಡಸೋಪಚಾರ ಮಾಡಿದ ಬಳಿಕ ಆರತಿಯೊಂದಿಗೆ ಪೂಜೆ ಕೊನೆಗೊಳಿಸಬೇಕು.

  ದೇವಾಲಯದಲ್ಲಿ ಶಿವನ / ವಿಷ್ಣುವಿನ ದರ್ಶನ ಪಡೆಯುವ ಯೋಗ್ಯ ಪದ್ಧತಿ

ತಾಯಿ ಗೌರಿ ಆರಾಧಿಸುವ ಮಂತ್ರ

ಓ ದೇವಿ ಮಹಾಗೌರಿಯೇ ನಮಃ

ಶ್ವೇತ ವೃಷೆಸಮೃದ್ಧ ಶ್ವೇವೇತಾಂಬರ್ಧಾರ ಶುಚೇಹ ಮಹಾಗೌರಿ

ಶುಭಂ ದಾದ್ಯನ್ಮಹದೇವ ಪ್ರಮೋದಃ

ಮಹಾ ಗೌರಿ ಸ್ತುತಿ

ಯಾ ದೇವಿ ಸರ್ವಭೂತೇಶು

ಮಾ ಮಹಾಗೌರಿ ರೂಪೇಣ ಸಂಸ್ಥಿತಾ

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ಮಹಾಗೌರಿ ತಾಯಿಯ ಧ್ಯಾನ

ವಂದೇ ವಂಚಿತ ಕಾಮರ್ಥೇ ಚಂದ್ರಧರಿತ್ರಶೇಖರಂ

ಸಿಮರೂಢ ಚತುರ್ಭುಜಾ ಮಹಾಗೌರಿ ಯಶಾಸ್ವಿನಿಮ್

ಪುರ್ನಂದ್ ನಿಭಾಮ್ ಗೌರಿ ಸೋಮಾಚಕ್ರಸ್ಥಿತಂ

ಅಷ್ಟಾಮ ಮಹಾಗೌರಿ ತ್ರಿನೇತಂ

ವರಭೀತಿಕಾರಾಮ್ ತ್ರಿಶುಲಾ ದಮಾರುಧರಂ

ಮಹಾಗೌರಿ ಭಜೆಮ್ ಪತಂಬರಾ ಪರಿಧನಂ

ಮೃದುಹಾಸ್ಯ ನಾನಾಲಂಕರಾ ಭೂಷಿತಂ

ಮಂಜೀರಾ, ಹರಾ, ಕೀರುರಾ, ಕಿಂಕಿನಿ,

ರತ್ನಾಕುಂಡಲ ಮಂಡಿತಮ್

ಪ್ರಫುಲ್ಲಾ ವಂದನಾ ಪಲ್ಲವಧರಂ

ಕಾಂತಾ ಕಪೋಲಮ್ ತ್ರಿಲೋಕ್ಯ ಮೋಹನಂ

ಕಾಮನಿಯಮ್ ಲಾವಣಮ್ ಮೃಣಾಳಂ

ಚಂದನ ಗಂಧಲೇಪಿತಂ


ಮಹಾಗೌರಿ ಸ್ತೋತ್ರ

ಸರ್ವಾಸಂಕಟ ಹಂತ್ರಿ ತುವಂಹಿ ಧಾನ ಐಶ್ವರ್ಯ ಪ್ರದಾಯನಮ್

ಜ್ಞಾನ ಚತುರ್ವೇದೈ ಮಹಾಗೌರಿ ಪ್ರಾಣಮಾಮಯಂ

ಸುಖ ಶಾಂತಿಧಾತ್ರಿ ಧನ ಧಾನ್ಯ ಪ್ರದಯಾನಿಮ್

ಢಮಾರುವಾದ್ಯ ಪ್ರಿಯಾ ಆದಿ ಮಹಾಗೌರಿ ಪ್ರಾಣಮಾಮಯಂ

ತ್ರಿಲೋಕ್ಯಮಂಗಲ ತ್ವಮಹಿ ತಾಪತ್ರಯ ಹರಿನಿಮ್

ವದದಾಮ್ ಚೈತನ್ಯಮಯಿ ಮಹಾಗೌರಿ ಪ್ರಾಣಮಾಮಯಂ

Leave a Reply

Your email address will not be published. Required fields are marked *

Translate »