ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಾಸಿಕ ಶಿವರಾತ್ರಿಯ ಉಪವಾಸದ ಮಹತ್ವ

ಮಾಸಿಕ ಶಿವರಾತ್ರಿ ಉಪವಾಸ ವ್ರತವನ್ನು ಆಚರಿಸಲಾಗುವುದು..!!✨✨
🌼ಮಾಸಿಕ ಶಿವರಾತ್ರಿಯ ಉಪವಾಸದ ಮಹತ್ವ🌼

ಮಾಸಿಕ ಶಿವರಾತ್ರಿಯ ಉಪವಾಸವನ್ನು ಬಹಳ ಪ್ರಭಾವಶಾಲಿ ಎಂದು ಪರಿಗಣಿಸಲಾಗಿದೆ. ಈ ದಿನದಂದು ಪೂಜೆಯನ್ನು ಮಾಡುವ ಮೂಲಕ ಎಲ್ಲಾ ಆಸೆಗಳನ್ನು ಈಡೇರಿಸಲಾಗುತ್ತದೆ. ಈ ದಿನದ ಉಪವಾಸವು ಜೀವನದ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಅವಿವಾಹಿತ ಮಹಿಳೆಯರು ಈ ವ್ರತವನ್ನು ಆಚರಿಸುವುದರಿಂದ ತಾವು ಬಯಸಿದ ವರನನ್ನು ಪಡೆದುಕೊಳ್ಳುತ್ತಾರೆ. ಮತ್ತೊಂದೆಡೆ, ವಿವಾಹಿತ ಮಹಿಳೆಯರು ಈ ದಿನ ವ್ರತವನ್ನು ಆಚರಿಸುವುದರಿಂದ ಅವರು ಶಿವನಿಂದ ಅದೃಷ್ಟದ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆ ಇದ್ದರೆ, ಆ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಶಿವಪುರಾಣದ ಪ್ರಕಾರ, ಶುದ್ಧ ಮನಸ್ಸಿನಿಂದ ಈ ವ್ರತವನ್ನು ಮಾಡುವವರ ಆಸೆಗಳೆಲ್ಲವೂ ಬಹುಬೇಗ ಈಡೇರುತ್ತದೆ.

🌺ಮುಂಜಾನೆ ಪವಿತ್ರ ಸ್ನಾನ ಮಾಡಿ;
ಮಧ್ಯರಾತ್ರಿ ಶಿವನನ್ನು ಪೂಜಿಸಬೇಕಾಗಿರುವುದರಿಂದ ಮುಂಜಾನೆ ಬೇಗನೆ ಎದ್ದು ಪವಿತ್ರ ಸ್ನಾನವನ್ನು ಮಾಡಿ. ಮುಂಜಾನೆ ಕೂಡ ಶಿವನನ್ನು ಪೂಜಿಸಬೇಕಾಗುತ್ತದೆ. ಪವಿತ್ರ ಸ್ನಾನವೆಂದರೆ ನೀವು ಪವಿತ್ರ ನದಿಗಳಲ್ಲಿ ಸ್ನಾನ ಮಾಡಬೇಕು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಮನೆಯಲ್ಲೇ ಸ್ನಾನ ಮಾಡುವ ನೀರಿಗೆ ಗಂಗಾಜಲ ಅಥವಾ ಗೋಮೂತ್ರವನ್ನು ಕೂಡ ಬೆರೆಸಿ ಸ್ನಾನ ಮಾಡಬಹುದು.

  ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಮಹಾತ್ಮೆ ಹಾಗು ಪುರಾಣ

🌺ಈ ಬಣ್ಣದ ಬಟ್ಟೆ ಧರಿಸಿ;
ಮಾಸಿಕ ಶಿವರಾತ್ರಿ ದಿನದಂದು, ಮುಂಜಾನೆ ಬೇಗ ಎದ್ದು ಸ್ನಾನ ಇತ್ಯಾದಿಗಳಂತಹ ನಿತ್ಯ ಕರ್ಮದಿಂದ ನಿವೃತ್ತಿಯನ್ನು ಪಡೆದು, ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಈ ದಿನ ತಿಳಿ ಹಳದಿ ಅಥವಾ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ಹೆಚ್ಚು ಶುಭವೆಂದು ಪರಿಗಣಿಸಲಾಗುತ್ತದೆ.

​🌺ದೇವರ ವಿಗ್ರಹ ಇಡುವ ವಿಧಾನ;
ಸ್ನಾನ ಮಾಡಿ, ಶುದ್ಧವಾದ ಬಟ್ಟೆಯನ್ನು ಧರಿಸಿದ ನಂತರ ನೀವು ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಬೇಕು ಮತ್ತು ನಂತರ ನೀವು ಕೆಂಪು ಅಥವಾ ಹಳದಿ ಬಟ್ಟೆಯನ್ನು ಮರದ ಪೀಠದ ಮೇಲೆ ಅಥವಾ ಮರದ ಹಲಗೆಯ ಮೇಲೆ ಹಾಕಿ ಅದರ ಮೇಲೆ ಭಗವಾನ್‌ ಶಿವನ ಮತ್ತು ಪಾರ್ವತಿ ದೇವಿಯ ವಿಗ್ರಹವನ್ನು ಅಥವಾ ಚಿತ್ರವನ್ನು ಇಡಬೇಕು.

  ಬೆಳಗ್ಗೆ ಮತ್ತು ಸಾಯಂಕಾಲ ಎರಡು ಸಲ ಏಕೆ ಆರತಿಯನ್ನು ಮಾಡಬೇಕು …?

​🌺ಶಿವ ಮತ್ತು ಪಾರ್ವತಿಗೆ ನೈವೇದ್ಯ;
ಮಾಸಿಕ ಶಿವರಾತ್ರಿ ದಿನದಂದು ಹಣ್ಣುಗಳನ್ನು, ಹೂಗಳನ್ನು, ನೈವೇದ್ಯವನ್ನು, ಬಿಲ್ವಪತ್ರೆಯನ್ನು, ಪಂಚಾಮೃತವನ್ನು ಸೇರಿದಂತೆ ಇತ್ಯಾದಿಗಳನ್ನು ಅರ್ಪಿಸಿ. ಈ ದಿನ ಶಿವನಿಗೆ ಜನುವನ್ನು ಅರ್ಪಿಸಿ. ಮಾತಾ ಪಾರ್ವತಿಗೆ ಮೇಕಪ್ ವಸ್ತುಗಳನ್ನು ನೀಡಿ.

​🌺ಶಿವನಿಗೆ ಇದರಿಂದ ಅಭಿಷೇಕ ಮಾಡಿ;
ಪೂಜಾ ವಿಧಿಗಳನ್ನು ಪ್ರಾರಂಭಿಸುವ ಮೊದಲು, ಶಿವನಿಗೆ ಅಭಿಷೇಕ ಮಾಡಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಸಾಧ್ಯವಾದರೆ, ಗಂಗಾಜಲದಿಂದ ಶಿವನಿಗೆ ಅಭಿಷೇಕ ಮಾಡಲು ಪ್ರಯತ್ನಿಸಿ. ಇದು ಸಾಧ್ಯವಾಗದಿದ್ದರೆ, ನೀವು ಹಾಲನ್ನು ಕೂಡ ಬಳಸಬಹುದು.

​🌺ಮಧ್ಯರಾತ್ರಿ ಶಿವನನ್ನು ಪೂಜಿಸಿ;
ಶಿವರಾತ್ರಿ ಉಪವಾಸ ಆಚರಿಸಲು ಮತ್ತು ಸಂಯಮ ಕ್ರಮಗಳನ್ನು ಕೈಗೊಳ್ಳಲು ಸೂಕ್ತ ಸಮಯ ಮಧ್ಯರಾತ್ರಿ ಎಂದು ಶಾಸ್ತ್ರಗಳು ಹೇಳುತ್ತವೆ. ಆದಾಗ್ಯೂ, ನಿಜ ಹೇಳಬೇಕೆಂದರೆ, ಅನೇಕ ಜನರಿಗೆ ಈ ಸಮಯದಲ್ಲಿ ಶಿವನನ್ನು ಪೂಜಿಸಲು ಸಾಧ್ಯವಾಗುವುದಿಲ್ಲ.

​🌺ಶಿವ ಮಂತ್ರವನ್ನು ಪಠಿಸಿ;
ಮಾಸಿಕ ಶಿವರಾತ್ರಿ ದಿನದಂದು ಶಿವ ಮತ್ತು ಪಾರ್ವತಿ ದೇವಿಯ ವಿಗ್ರಹದ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ. ಧೂಪವನ್ನು ತೋರಿಸಿ ‘ಓಂ ನಮಃ ಶಿವಾಯ’ ಎಂಬ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಹೊರತು ಪಡಿಸಿ ಶಿವ ಚಾಲೀಸಾ, ಇನ್ನಿತರ ಶಿವ ಮಂತ್ರವನ್ನು ಪಠಿಸಬೇಕು.


​🌺ಈ ದಿನ ಸಂಜೆ ಹೀಗೆ ಮಾಡಿ;
ಸಂಜೆ, ಮತ್ತೆ ಸ್ನಾನ ಮಾಡಿ ದೇವರನ್ನು ಆರಾಧಿಸಿ. ದಿನವಿಡೀ ಮತ್ತು ಸಂಜೆ ಉಪವಾಸ ಮಾಡಿ, ನೀವು ಬಯಸಿದರೆ, ಪೂಜೆಯ ನಂತರ ನೀವು ಫಲವನ್ನು ಸೇವಿಸಬಹುದು. ಪೂಜೆಯ ಮರುದಿನ, ಬ್ರಾಹ್ಮಣರಿಗೆ ಮತ್ತು ಬಡವರಿಗೆ ಕೈಲಾದಷ್ಟು ದಾನ ಮಾಡಿ. ಬ್ರಾಹ್ಮಣರಿಗೆ ಊಟವನ್ನು ನೀಡಿ. ಅದರ ನಂತರ ನೀವು ಆಹಾರವನ್ನು ತೆಗೆದುಕೊಳ್ಳುವ ಮೂಲಕ ಉಪವಾಸ ವ್ರತವನ್ನು ತ್ಯಜಿಸಿ.

Leave a Reply

Your email address will not be published. Required fields are marked *

Translate »