ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಧನುರ್ಮಾಸದ ಕಥೆ ಹಾಗೂ ಮಾಹಿತಿ

ಧನುರ್ಮಾಸದ ಕಥೆ ಹಾಗೂ ಮಾಹಿತಿ:-

ಶ್ರೀ ಕೃಷ್ಣನೇ ಹೇಳಿದಂತೆ ಮಾಸಗಳಲ್ಲಿ ಅತ್ಯಂತ ಶ್ರೇಷ್ಠವಾದ ಮಾಸ ಧನುರ್ಮಾಸ. ಸಾಮಗಳಲ್ಲಿ ಬೃಹತ್ ಸಾಮ, ಛಂದಸ್ಸುಗಳಲ್ಲಿ ಗಾಯಿತ್ರಿ, ಋತು ಗಳಲ್ಲಿ ವಸಂತ ಋತು ನಾನಾಗಿರುವೆ ಎಂದು ಶ್ರೀ ಕೃಷ್ಣ ಹೇಳಿದ್ದಾನೆ. ಈ ವರ್ಷ ಡಿಸೆಂಬರ್ 16 ರಿಂದ ಧನುರ್ಮಾಸ ಆರಂಭವಾಗಿದೆ, ಜನವರಿ 14 ಮಕರ ಸಂಕ್ರಾಂತಿಯ ದಿನ ಮುಗಿಯುತ್ತದೆ. ‘ಧನುರ್’ ಅಂದರೆ ಬಾಣ, ಈ ಮಾರ್ಗಶಿರ ಮಾಸದಲ್ಲಿ ಸೂರ್ಯ ಒಂದು ರಾಶಿಯಿಂದ ರಾಶಿಗೆ ಸಂಚರಿಸಲು ತೆಗೆದುಕೊಳ್ಳುವ ಸಮಯ ಒಂದು ತಿಂಗಳು. ಸೂರ್ಯನು ಸಂಚರಿಸುತ್ತಾ ಧನುರಾಶಿಯಿಂದ, ಮಕರ ರಾಶಿಗೆ ಪ್ರವೇಶಿಸುವ ಒಂದು ತಿಂಗಳ ಕಾಲವೇ ಧನುರ್ಮಾಸ. ಮಾರ್ಗಶಿರ ಒಂದು ತಿಂಗಳು ಸೂರ್ಯ ಧನು ರಾಶಿಯಲ್ಲಿ ಇರುತ್ತಾನೆ. ಆದ್ದರಿಂದ ಧನುರ್ಮಾಸ ಎಂದು ಕರೆಯುತ್ತಾರೆ.

ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಚಳಿಯ ಪ್ರಭಾವ
ತೀವ್ರವಾಗಿರುತ್ತದೆ ಜನರು ಚಳಿ ಹೆಚ್ಚಾಗಿ ಬಿಲ್ಲಿನಂತೆ ಮಲಗಿ ರುತ್ತಾರೆ. ಈ ಮಾಸ ಧನುರ್ಮಾಸ. ವರ್ಷ ಆರು ತಿಂಗಳು ದಕ್ಷಿಣಾಯನ ಪುಣ್ಯಕಾಲ, ಈ ಕಾಲ ದೇವತೆಗಳಿಗೆ ರಾತ್ರಿ
ಮಲಗಿರುತ್ತಾರೆ. ಆರು ತಿಂಗಳು ಉತ್ತರಾಯಣ ಪುಣ್ಯ ಕಾಲ ದೇವತೆಗಳ ಒಂದು ಹಗಲು. ಸೂರ್ಯ ರಾಶಿಯಿಂದ ರಾಶಿಗೆ ಸಂಚರಿಸುತ್ತಾ ಒಂದೊಂದು ಮಾಸದಲ್ಲಿ ಒಂದು ತಿಂಗಳು ಇರುತ್ತಾನೆ.‌ ಆಯನ ಅಂದರೆ ‘ಪಥ’ ಕೃಷ್ಣಗೆ ಪ್ರಿಯವಾದ ಧನುರ್ಮಾಸ ದಲ್ಲಿ ಸೂರ್ಯ ಇರುತ್ತಾನೆ. ಈ ಧನುರ್ಮಾಸ ಒಂದು ತಿಂಗಳು ಸೂರ್ಯ ದೇವ ಶ್ರೀಹರಿಯನ್ನು ಪೂಜಿ
ಸುತ್ತಾನೆ.
ಧನುರ್ಮಾಸದ ಕುರಿತು ಪುರಾಣ ಕಥೆಗಳಿವೆ.

ಕಥೆ:- ಸೃಷ್ಟಿಕರ್ತನಾದ ಬ್ರಹ್ಮ ತನ್ನ ವಾಹನವಾದ ದೊಡ್ಡ ಹಂಸ ಪಕ್ಷಿಯ ಮೇಲೆ ಕುಳಿತು ಸಂಚಾರ ಮಾಡುತ್ತಿರುವಾಗ, ಒಂದು ಕಡೆ ಸೂರ್ಯನು ಬೇಕೆಂದೇ ಒಮ್ಮೆಲೇ ವಿಪರೀತ ಶಾಖವನ್ನು ಬ್ರಹ್ಮನ ಮೇಲೆ ಬಿಡುತ್ತಾನೆ. ಇದರಿಂದ ಶಾಖ ತಡೆಯಲು ಸಾಧ್ಯವಾಗಲಿಲ್ಲ. ಬ್ರಹ್ಮನಿಗೆ ಕೋಪ ಬಂದು, ಸೂರ್ಯನ ತೇಜಸ್ಸು ಕ್ಷೀಣಿಸಲಿ ಎಂದು ಶಾಪ ಕೊಟ್ಟನು. ಆಗ ಸೂರ್ಯನ ಶಾಖ ಸ್ಥಗಿತವಾಯಿತು. ಇದು ಕೆಲವು ಸಮಯಗಳಲ್ಲೇ ಬ್ರಹ್ಮಾಂಡದ ಮೇಲೆ ಪ್ರಭಾವ ಬೀರುತ್ತದೆ. ಮಾನವರು, ಋಷಿಮುನಿಗಳು,ಪಶು ಪಕ್ಷಿ ಪ್ರಾಣಿಗಳು , ಸೂರ್ಯನ ತೇಜಸ್ಸು ಇಲ್ಲದೆ ಒದ್ದಾಡುತ್ತಿದ್ದರು ಎಲ್ಲೆಡೆ ಹಾಹಾಕಾರ ಎದ್ದಿತು.ಋಷಿಮುನಿಗಳು ಸೇರಿ ಬ್ರಹ್ಮನನ್ನು ಕುರಿತು ಘೋರವಾದ ತಪಸ್ಸನ್ನು ಮಾಡಿದರು. ತಪಸ್ಸಿಗೆ ಮೆಚ್ಚಿದ ಬ್ರಹ್ಮನು ಪ್ರತ್ಯಕ್ಷನಾಗಿ ಋಷಿಮುನಿಗಳ ಸಮಸ್ಯೆಗೆ ಪರಿಹಾರ ರೂಪ ವಾಗಿ, ಸೂರ್ಯನು ಇರುವ ಧನುರ್ಮಾಸ ದ ಒಂದು ತಿಂಗಳು ಬ್ರಾಹ್ಮಿ ಮುಹೂರ್ತದಲ್ಲಿ ವಿಷ್ಣುವನ್ನು ಆರಾಧಿಸಿದರೆ ಸೂರ್ಯನ ತೇಜಸ್ಸು ಎಂದಿನಂತೆ ಪ್ರಕಾಶಿ ಸುತ್ತದೆ ಎಂದನು. ಸೂರ್ಯನು ಧನುರ್ಮಾಸದಲ್ಲಿರುವ ಒಂದು ತಿಂಗಳು ಸೂರ್ಯೋದಯ ಆಗುವ ಮೊದಲೇ ವಿಷ್ಣುವಿನ ಆರಾಧನೆ ಮಾಡಿ ಹುಗ್ಗಿಯನ್ನು ನೈವೇದ್ಯ ಮಾಡುತ್ತಿದ್ದನು. ಇದೇ ರೀತಿ 16 ವರ್ಷಗಳ ಮಾಡಿದ ನಂತರ ಸೂರ್ಯನ ತೇಜಸ್ಸು ಬೆಳಗಿ ಲೋಕ ಕಲ್ಯಾಣ ವಾಗುತ್ತದೆ. ಸೂರ್ಯನಿಂದ ಧನುರ್ಮಾಸದ ಪೂಜೆ ಆರಂಭಗೊಂಡಿದ್ದು ಎನ್ನಲಾಗಿದೆ. ಮಹರ್ಷಿ ಗೌತಮರು, ಭೃಗು ಮಹರ್ಷಿಗಳು, ವಿಶ್ವಾಮಿತ್ರರು, ಅಗಸ್ತ್ಯರು, ಹಾಗೂ ದೇವಾನು ದೇವತೆಗಳು ಧನುರ್ಮಾಸದ ಪೂಜೆ ಹಾಗೂ ಮಹಾವಿಷ್ಣುವಿಗೆ ಪ್ರಿಯವಾದ ಹುಗ್ಗಿಯನ್ನು ಅರ್ಪಿಸಿ ಭಗವಂತನ ಕೃಪೆಗೆ ಪಾತ್ರರಾದರು.

  ತೀರ್ಥಯಾತ್ರೆಯೆಂದರೇನು? ಮತ್ತು ಅದನ್ನು ಹೇಗೆ ಮಾಡುವುದು

ಕಥೆ:- ಮತ್ತೊಂದು ಕಥೆಯ ಪ್ರಕಾರ, ಪಾಂಡವರು ಕಾಮ್ಯಕ ವನದಲ್ಲಿದ್ದಾಗ, ಒಬ್ಬರಲ್ಲ ಒಬ್ಬ ಋಷಿಗಳು ಬಂದು ಪಾಂಡವರ ಆಥಿತ್ಯ ಸ್ವೀಕರಿಸಿ ಅವರಿಗೆ ಸಮಾಧಾನ ವಾಗುವಂಥ ಕಥೆಗಳನ್ನು ಹೇಳುತ್ತಿದ್ದರು. ಹಾಗೂ ಯುಧಿಷ್ಠಿರನ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತಿದ್ದರು. ಹೀಗಿರುವಾಗ ಒಮ್ಮೆ ನಾರದರು ಬಂದರು. ಯುಧಿಷ್ಠಿರನು, ಮಹರ್ಷಿಗಳೇ, ನಾನು ರಾಜ್ಯ- ಕೋಶಾಧಿಗಳನ್ನು ಕಳೆದು ಕೊಂಡೆ, ಇದರಿಂದ ನನಗೇನು ಬೇಜಾರಿಲ್ಲ ಆದರೆ ನನ್ನ ಪತ್ನಿ ನನ್ನ ತಮ್ಮಂದಿರು ಕಷ್ಟ ಪಡುವುದನ್ನು ನಾನು ನೋಡಲಾರೆ. ಮುಂದೆ ಆಗುವ ಯುದ್ಧದಲ್ಲಿ ನಮಗೆ ಜಯ ಸಿಗಬೇಕಾದರೆ ನಾನು ಏನು ಮಾಡಬೇಕು ಎಂದು ಕೇಳಿದನು. ನಾರದರು, ದ್ರೌಪದಿಯನ್ನು ಕರೆದು, ಧನುರ್ಮಾಸದ ಒಂದು ತಿಂಗಳು ಶ್ರದ್ಧಾ ಭಕ್ತಿ ಯಿಂದ ವಿಷ್ಣುವಿನ ಪೂಜೆ ಮಾಡು ಎಂದು ಪೂಜೆಯ ಉಪದೇಶ ಮಾಡಿದರು. ಈ ರೀತಿ ಪೂಜೆ ಮಾಡುವುದರಿಂದ ಯುದ್ಧದಲ್ಲಿ ನಿಮಗೆ ಜಯ ಲಭಿಸುತ್ತದೆ ಎಂದರು. ಮುಂದೆ ಪಾಂಡವರೇ ಯುದ್ಧದಲ್ಲಿ ಜಯಗಳಿ ಸಿದರು.

  ನೆಮ್ಮದಿ ಇದೆಯೋ ಇಲ್ಲವೋ ಹೇಗೆ ತಿಳಿಯಬೇಕು?

ಈ ಧನುರ್ಮಾಸ ಅತ್ಯಂತ ಶ್ರೇಷ್ಠವಾದ ಮಾಸವಾಗಿದ್ದು ಭಗವಂತನಿಗೆ ಅರ್ಪಿತವಾದ ಮಾಸ. ಬೆಳಗಿನ ಜಾವ ನಕ್ಷತ್ರ ಇರುವಾಗಲೇ ಎದ್ದು ಶ್ರೀಹರಿಯ ಪೂಜೆ ಮಾಡಿ ಸೂರ್ಯೋ ದಯ ಆಗುವ ಮೊದಲೇ ನೈವೇದ್ಯವನ್ನು ಸಮರ್ಪಿಸಬೇಕು. ವಿಶೇಷವಾಗಿ ಹುಗ್ಗಿಯನ್ನು ಮಾಡಬೇಕು. ಇದರಲ್ಲೂ ಸಹ ಸಮ ಸಮ ಹೆಸರುಬೇಳೆ ಅಕ್ಕಿ ಹಾಕಿ ಮಾಡಿದ ಹುಗ್ಗಿ ಕೃಷ್ಣನಿಗೆ ಅತ್ಯಂತ ಪ್ರಿಯ, ಅಧಿಕ ಪುಣ್ಯ. ಒಂದು ಅಕ್ಕಿ ಅರ್ಧ ಹೆಸರು ಬೇಳೆ ಹಾಕಿದರೆ ಮಧ್ಯಮ ಪುಣ್ಯ. ಅಕ್ಕಿ ಕಾಲು ಭಾಗ ಹೆಸರು ಬೇಳೆ ಹಾಗೆ ಮಾಡಿದ ಹುಗ್ಗಿಯಿಂದ ಕನಿಷ್ಠ ಪುಣ್ಯ ಲಭಿಸುತ್ತದೆ. ಧನುರ್ಮಾಸ ಪೂರ್ತಿ ತಿಂಗಳು ಇದೇ ರೀತಿ ಮಾಡಲು ಆಗದಿದ್ದರೆ, ಒಂದು ದಿನವಾದರೂ ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡಿ ಹುಗ್ಗಿ ಅರ್ಪಿಸಿದರೆ ಒಂದು ಸಾವಿರ ವರ್ಷಗಳ ಕಾಲ ಪೂಜೆ ಮಾಡಿದ ಪುಣ್ಯ ಲಭಿಸುತ್ತದೆ. ಈ ಮಾಸದಲ್ಲಿ ವಿಷ್ಣು ಸ್ತೋತ್ರಗಳನ್ನು ಹೇಳಬೇಕು ವಿಷ್ಣು ಸಹಸ್ರನಾಮವನ್ನು ಪಠಿಸಬೇಕು. ಈ ಮಾಸದಲ್ಲೇ ವೈಕುಂಠ ಏಕಾದಶಿ ಬರುತ್ತದೆ. ಅಂದು ಸ್ವರ್ಗದ ಬಾಗಿಲು ತೆರೆಯುತ್ತದೆ. ಮಕರ ಸಂಕ್ರಾಂತಿ ಹಬ್ಬದ ದಿನ ದಂದು ಅಂಡಾಳ್ಗು ಕೃಷ್ಣನಿಗೂ ಕಲ್ಯಾಣೋತ್ಸವ ಮಾಡುತ್ತಾ ರೆ. ಈ ರೀತಿಯಾಗಿ ಹತ್ತು ಹಲವು ರೀತಿಯಲ್ಲಿ ಧನುರ್ಮಾಸ ವಿಶೇಷವಾದ ಮಾಸವಾಗಿದೆ. ಲಕ್ಷ್ಮಿಯ ದ್ವಾದಶ ನಾಮ ಸ್ತೋತ್ರ ಹೇಳಿ ಪೂಜೆ ಮಾಡಿದರೆ ವಿಷ್ಣುವಿನ ಅನುಗ್ರಹ ಜೊತೆ ಲಕ್ಷ್ಮಿಯ ಅನುಗ್ರಹ ದೊರೆಯುತ್ತದೆ.

  ಶ್ರೀ ಅನಂತೇಶ್ವರ ದೇವಸ್ಥಾನ ಹಿನ್ನಲೆ ಕಥೆ - ಉಡುಪಿ

ಶ್ರೀ ಲಕ್ಷ್ಮಿ ದ್ವಾದಶ ನಾಮ ಸ್ತೋತ್ರಂ :-

ಶ್ರೀದೇವಿ ಪ್ರಥಮಂ ನಾಮ
ದ್ವಿತೀಯಮಮೃತೋದ್ಭವಾ!
ತೃತೀಯಂ ಕಮಲಾ ಪ್ರೋಕ್ತಾ
ಚತುರ್ಥಂ ಲೋಕ ಸುಂದರೀ!!

ಪಂಚಮಂ ವಿಷ್ಣು ಪತ್ನೀ ಚ
ಷಷ್ಠಂ ಸ್ಯಾತ್ ವೈಷ್ಣವೀ ತಥಾ!
ಸಪ್ತತಂ ತು ವರಾರೋಹಾ
ಅಷ್ಟಮಂ ಹರಿವಲ್ಲಭಾ!!

ನವಮಂ ಶಾರ್ಂಗಿಣೀ ಪ್ರೋಕ್ತಾ
ದಶಮಂ ದೇವ ದೇವಿಕಾ!
ಏಕಾದಶಂ ತು ಲಕ್ಷ್ಮೀ: ಸ್ಯಾತ್
ದ್ವಾದಶಂ ಶ್ರೀ ಹರಿಪ್ರಿಯಾ!!
ದ್ವಾದಶೈತಾನಿ ನಾಮಾನಿ
ತ್ರೀ ಸಂಧ್ಯಂ ಯ: ಪಠೇನ್ನರ:
ಆರ್ಯುರಾರೋಗ್ಯಮೈಶ್ವರ್ಯಂ
ತಸ್ಯ ಪುಣ್ಯ ಫಲ ಪ್ರದಂ !!

ದ್ವಿಮಾಸಂ ಸರ್ವ ಕಾರ್ಯಾಣಿ
ಷಣ್ಮಾ ಸಾದ್ರಾಜ್ಯಮೇವ ಚ
ಸಂವತ್ಸರಂ ತು ಪೂಜಾಯಾ:
ಶ್ರೀ ಲಕ್ಷ್ಮ್ಯಾ: ಪೂಜ್ಯ ಏವ ಚ!!

ಲಕ್ಷ್ಮೀಂ ಕ್ಷೀರ ಸಮುದ್ರ ರಾಜ ತನಯಾಂ
ಶ್ರೀರಂಗಧಾಮೇಶ್ವರೀಂ
ದಾಸಿ ಭೂತ ಸಮಸ್ತ ದೇವ ವನಿತಾಂ
ಲೋಕೈಕ ದೀಪಾಂ ಕುರಾನ್!
ಶ್ರೀ ಮನ್ಮಂದ ಕಟಾಕ್ಷ ಲಬ್ಧ
ವಿಭವ ಬ್ರಹ್ಮೇಂದ್ರ ಗಂಗಾಧರಾಂ
ತ್ಮಾಂ ತ್ರೈಲೋಕ್ಯ ಕುಟುಂಬಿನೀಂ
ಸರಸಿಜಾಂ ವಂದೇ ಮುಕುಂದ ಪ್ರಿಯಾಂ !!

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

Leave a Reply

Your email address will not be published. Required fields are marked *

Translate »