ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸ್ಕಂದಪುರಾಣ ಏನು ಹೇಳುತ್ತದೆ?

18 ಪುರಾಣಗಳು : ಸ್ಕಂದಪುರಾಣ ಏನು ಹೇಳುತ್ತದೆ?

ಸ್ಕಂದಪುರಾಣ
ಸ್ಕಂದಪ್ರೋಕ್ತವಾದುದು. ಶೈವತತ್ತ್ವಗಳಿದರಲ್ಲಿವೆ. ಈ ಹೆಸರಿನ ಪ್ರಾಚೀನಪುರಾಣವೀಗ ಅನುಪಲಬ್ಧ. ಸ್ಕಂದಪುರಾಣದ ಸಂಹಿತೆಗಳೆಂದೂ ಖಂಡಗಳೆಂದೂ ಹೇಳಿಕೊಳ್ಳುವ ಅನೇಕ ಕೃತಿಗಳಿದ್ದರೂ ಸ್ಕಂದಪುರಾಣವೆಂಬ ಹೆಸರುಳ್ಳ ಉಪಲಬ್ಧ ಪ್ರಾಚೀನಪ್ರತಿಯಲ್ಲಿ ಅವುಗಳಲ್ಲಾವುದೂ ಅಡಕವಾಗಿಲ್ಲ. ಇದರ ಪ್ರಾಚೀನ ಮೂಲದಲ್ಲಿ 81800 ಶ್ಲೋಕಗಳಿದ್ದುವೆಂದು ಹೇಳಿಕೆ. ಅದರ ಅಭಾವದಲ್ಲಿ ಅದಕ್ಕೀ ಉಪಲಬ್ಧ ಪ್ರತಿ ಎಲ್ಲ ಅಂಶಗಳಲ್ಲೂ ಸರಿಯಾಗಿ ಹೊಂದುತ್ತದೆಂದು ಹೇಳಲು ಸಾಧ್ಯವಿಲ್ಲ.
ಸ್ಕಂದಪುರಾಣಕ್ಕೆ ಸೇರಿದುವೆಂದು ಹೇಳಿಕೊಳ್ಳುವ ಎಲ್ಲ ಕೃತಿಗಳ ಶ್ಲೋಕಗಳನ್ನೂ ಸೇರಿಸಿದರೆ 81800ಕ್ಕೂ ಹೆಚ್ಚು ಶ್ಲೋಕಗಳಾಗುತ್ತವೆ. ಉಪಲಬ್ಧ ಪ್ರತಿಯಲ್ಲಿ ಶಿವ, ಅಂಧಕಾಸುರರ ಯುದ್ಧಗಳೂ ನರಕ, ಸಂಸಾರ, ಯೋಗಗಳ ವಿವರಗಳೂ ಬಂದಿದ್ದರೂ ಪುರಾಣ ಪಂಚಲಕ್ಷಣಗಳು ಕಂಡುಬರುವುದಿಲ್ಲ. ಇದಕ್ಕೆ ಆರು ಸಂಹಿತೆಗಳು : ಸನತ್ಕುಮಾರೀಯ, ಸೂತ, ಬ್ರಾಹ್ಮೀ, ವೈಷ್ಣವೀ, ಶಾಂಕರೀ, ಸೌರಿ ಸಂಹಿತೆಗಳೆಂದು. ಸನತ್ಕುಮಾರೀಯಸಂಹಿತೆ ಕಾಶಿಯ ಪವಿತ್ರಸ್ಥಳಗಳು ಮತ್ತು ಇತರ ಶೈವಕಥೆಗಳನ್ನು ಹೇಳುತ್ತದೆ.
ಸೂತಸಂಹಿತೆಯಲ್ಲಿ ಶಿವಪೂಜೆ, ಯೋಗ, ವರ್ಣಾಶ್ರಮಧರ್ಮ, ಮೋಕ್ಷೋಪಾಯ, ವೈದಿಕಕರ್ಮ. ಧ್ಯಾನಯಜ್ಞ, ಜ್ಞಾನಯಜ್ಞ ಮತ್ತು ಶಿವಭಕ್ತಿಗಳನ್ನು ಪ್ರತಿಪಾದಿಸಲಾಗಿದೆ. ಶೈವ, ಬ್ರಹ್ಮಗೀತೆ, ವೇದಾಂತಪರವಾದ ಸೂತಗೀತೆಗಳೂ ಇವೆ. ಸೌರಸಂಹಿತೆಯಲ್ಲಿ ಸೃಷ್ಟಿಯ ವಿವರಗಳನ್ನು ಸೂರ್ಯ ಯಾಜ್ಞವಲ್ಕ್ಯನಿಗೆ ಹೇಳಿದ ಬಗೆಯಿದೆ. ಶಾಂಕರ ಸಂಹಿತೆಯನ್ನು ಅಗಸ್ತ್ಯಸಂಹಿತೆಯೆಂದೂ ಹೇಳುತ್ತಾರೆ. ಏಕೆಂದರೆ ಅದನ್ನು ಸ್ಕಂದ ಅಗಸ್ತ್ಯನಿಗೆ ಹೇಳಿದನೆಂದು ನಂಬಿಕೆ.
ರಾಮಾವತಾರಿ ಯಾದ ವಿಷ್ಣುವಿನ ಆರಾಧನೆಯನ್ನು ಹೇಳುವ ಅಗಸ್ತ್ಯಸಂಹಿತೆ ಇದೇಯೋ ಬೇರೆಯೋ ಎಂಬುದು ಸಂಶಯಾಸ್ಪದ. ಕಾಶಿಪಟ್ಟಣದ ಮತ್ತು ಅದರ ಸುತ್ತಮುತ್ತಲಿನ ಶಿವದೇವಾಲಯಗಳ ವಿಸ್ತಾರವನ್ನು ಹೇಳುವ ಸುಪ್ರಸಿದ್ಧ ಕಾಶೀಖಂಡವಿಲ್ಲಿದೆ. ಇಲ್ಲೇ ಗಂಗಾಸಹಸ್ರನಾಮವೂ ಬಂದಿದೆ. ಕಾಶೀಖಂಡವೊಂದರ ಶ್ಲೋಕಸಂಖ್ಯೆಯೇ 15,000. ಉತ್ಕಲಖಂಡವನ್ನೂ ಸ್ಕಂದಪುರಾಣದ ಭಾಗವೆಂದು ಹೇಳುವುದುಂಟು. ಕಾಲ 7ನೆಯ ಶತಮಾನ.
ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »