ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಚೌತಿಯ ಗಣೇಶನನ್ನ ನದಿಯಲ್ಲಿ ವಿಸರ್ಜಿಸುವ ಹಿಂದಿನ ಕುತೂಹಲಕಾರಿ ಪೌರಾಣಿಕ ಹಿನ್ನೆಲೆ

ಚೌತಿಯ ಗಣೇಶನನ್ನ…ನದಿಯಲ್ಲಿ ವಿಸರ್ಜಿಸುವ..ಹಿಂದಿನ ಕುತೂಹಲಕಾರಿ..ಪೌರಾಣಿಕ.. ಹಿನ್ನೆಲೆ👇
ಪ್ರಥಮ ಪೂಜಿತ..ಗೌರಿ ತನಯ ವಿನಾಯಕ.. ಚೌತಿಯ ಹಾಗೂ..ವಿಸರ್ಜನೆಯ ಬಗ್ಗೆ ಕೆಲವರು ಗೇಲಿಯ ಮಾತಾಡುವುದು..ಗಣೇಶ ಮೂರ್ತಿಯನ್ನ ನದಿಗಳಿಗೆ ಭಾವಿಯಲ್ಲಿ…ವಿಸರ್ಜನೆ ಮಾಡುವದರಿಂದ ಭಾರಿ ಪರಿಸರ ಹಾಳಾಗತ್ತೆ ಹಾಗೆ ಹೀಗೆ ಬರೀ ಹಿಂದೂ ಹಬ್ಬಗಳಿಗೆ ಬಾಯಿಬಡೆದು ಕೊಳ್ಳುವ ಕೆಲ ವಿಕೃತ ಮನಸ್ಥಿತಿಯವರು ಇದ್ದಾರೆ…ಅಂತವರಿಗೆ.. ಈ ಪೌರಾಣಿಕ ಹಿನ್ನೆಲೆಯ… ಜ್ಞಾನವೂ ಇರುವುದಿಲ್ಲ ಹೇಳಿದ್ದು ತಿಳಿಯುವದಿಲ್ಲ…ಅವರ ವಿಚಾರ ದೂರವಿರಲಿ…ಈಗ ಮುಖ್ಯ ವಿಷಯಕ್ಕೆ ಬರುವ👇
ಹಿಂದೆ ವ್ಯಾಸ ಮಹರ್ಷಿಗಳು…ತಮ್ಮ ಸುಧೀರ್ಘವಾದ…ಮಹಾಭಾರತವನ್ನ… ಬರೆಯುವದಕ್ಕಾಗಿ…ಗಣೇಶನನ್ನ ಪ್ರಾರ್ಥಿಸಿ ಕೈಲಾಸದಿಂದ ಭೂಲೋಕಕ್ಕೆ.. ಕರೆಸಿರುತ್ತಾರೆ…ಅಂದು “ಚೌತಿ” ಗಣೇಶ ಭೂಮಿಗೆ ಬಂದಿರುವ ಸಂಭ್ರಮದಲ್ಲಿ..ವ್ಯಾಸರು
ಗಣೇಶನಿಗಾಗಿ ಒಂದು ಸುಂದರ ಮಂಟಪವನ್ನ ನಿರ್ಮಾಣ ಮಾಡಿರುತ್ತಾರೆ..ಕೆಳಗಡೆ ಮೆತ್ತಗೆ ಇರುವ ಗರಿಕೆಯಿಂದ ಅಲಂಕಾರ ಮಾಡಿ… ಅದರಮೇಲೊಂದು ಸುಂದರ ಪೀಠ..ಅದರ ಮೇಲೆ ಒಂದು ಸುಂದರ ಚಿತ್ತಾರದ ರಂಗೋಲಿ ಹಾಕಿ.. ಮೇಲೆ.. ಮಂಗಳದ್ರೌವ್ಯವಾದ..ಅರಿಶಿಣ ಕುಂಕುಮ ಇಟ್ಟು.. ಮಂಟಪಕ್ಕೆ…ಬಾಳೆ ಕಂಭ..ಮಾವಿನ ತೋರಣ ಕಟ್ಟಿ…ಗಣೇಶನಿಗಾಗಿ ಕಾದು…ಬಂದ ನಂತರ.. ಒಂದು ಆರತಿ ಮಾಡಿ…ಮಂಟಪದಲ್ಲಿ ಕೂರಿಸಿ…ಅಭಿಷೇಕ.. ನಾನಾ ವಿಧ ಹೂಗಳಿಂದ ಅಲಂಕಾರ…ಗಣೇಶನಿಗೆ ಪ್ರಿಯವಾದ…ಕಡುಬು..ಮೊಧಕ…ಪಾಯಸ..ನಾನಾ ವಿಧ ಭಕ್ಷ ಭೂಜ ಸಮರ್ಪಿಸಿ…ಪ್ರಾರ್ಥಿಸಿ…ನಂತರ ವ್ಯಾಸರು… ಮಹಾಭಾರತವನ್ನ ಹೇಳುತ್ತಾ ಹೋಗುತ್ತಾರೆ…ಬರೆಯಲು ಶುರು ಮಾಡಿದ ಗಣೇಶ ಒಂದ್ ಅಕ್ಷರವೂ ತಪ್ಪಿಲ್ಲದೇ ಅವರು ಹೇಳುವ.. ವೇಗವನ್ನ..ತನ್ನ ಬರವಣಿಗೆಯಲ್ಲಿ ದುಂಡಾಗಿ.. ಬರೆಯುತ್ತಾ..ಸಾರ್ಗಿರ್ತಾನೆ ಮಹಾಭಾರತದ ಪಾತ್ರಗಳು…ಕಣ್ಣ ಮುಂದೆ ಬಂದಂತೆ ಅವರು..ಹೇಳುತ್ತಿರುವಾಗ ಬಾಲ ಗಣೇಶನ ಮುಖದಲ್ಲಿ…ಭಾವಗಳು ಬದಲಾಗುತ್ತಿದ್ದನ್ನು ವ್ಯಾಸರು ಗಮನಿಸಿದರು…ಅಷ್ಟೊಂದು ಬಾಲ ಗಣೇಶ ಬರೆಯುವದರಲ್ಲಿ ಮಗ್ನನಾಗಿದ್ದ…ಕೊನೆಗೆ ತನ್ನ ಒಂದು ದಂತವನ್ನೇ ಕಿತ್ತು ಬರೆಯ ತೊಡಗಿ…ಏಕದಂತನಾದ ಅಲ್ಲಿಗೆ…ಚೌತಿ ಮುಗಿದು…ಹತ್ತು ದಿನಗಳು ಕಳೆದಿದ್ದವು…ಚೌತಿ ಯಿಂದ 11 ನೇ ದಿನ ಅಂದ್ರೆ ಚತುರ್ದಶಿ… ( ಅನಂತ ಚತುರ್ದಶಿ ) ಬರೆಯುವದೆಲ್ಲಾ ಸಮಾಪ್ತಿಯಾಗಿತ್ತು….ಬರೆದು ಬರೆದು ಗಣೇಶನ ಮೈ ಬಿಸಿ ಏರಿತ್ತು ಆಗ…ವ್ಯಾಸರು ಬಾಲ ಗಣೇಶನನ್ನ ಅಲ್ಲೇ ಪಕ್ಕದಲ್ಲೇ ಗುಪ್ತಗಾಮಿಯಾಗಿ ಹರಿಯುತ್ತದ್ದ…ಸರಸ್ವತಿ ನದಿಯಲ್ಲಿ ಕೈ ಹಿಡಿದು ಕರೆದೋಯ್ದು…ಎರಡು ಬಾರಿ ಮುಳುಗಿಸಿ ಮೂರನೇ… ಬಾರಿ.. ಮುಳುಗಿಸಿದಾಗ ಗಣೇಶ ಸರಸ್ವತಿ ನದಿ ಮುಖಾಂತರ ಕೈಲಾಸಕ್ಕೆ ತೆರಳಿದ್ದ…ಶ್ರೀಗಣೇಶ ತಾನು ಬಂದ…ಸತ್ಕಾರ್ಯ ಮುಗಿದಿತ್ತು ಇತ್ತ… ವ್ಯಾಸರಿಗೂ..ತುಂಬಾ ಸಂತೋಷ… ಸಾಕ್ಷಾತ್ ಆ ಗೌರಿ ಪುತ್ರನೇ ಬಂದು…ಯಾವುದೇ ವಿಜ್ಞವಿಲ್ಲದೆ ತಮ್ಮ ಸುಧೀರ್ಘವಾದ… ಮಹಾಭಾರತ ಗ್ರಂಥ.. ಬರೆದನೆಂದು…🙏🙏 ಓಂ ಗಂ ಗಣಪತಯೇ ನಮಃ…
✍️$@M🔱

Leave a Reply

Your email address will not be published. Required fields are marked *

Translate »