ದೀಪಕ್ಕೊಂದು ಅಜ್ಞಾತ ಹಾಗೂ ಅಗಾಧ ಶಕ್ತಿಯಿದೆ..!
ಓಂ ಅಸತೋಮ ಸದ್ಗಮಯ,
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತಂಗಮಯ
ಓಂ ಶಾಂತಿ ಶಾಂತಿ ಶಾಂತಿ:
ಕತ್ತಲೆಯನ್ನು ಹಿ೦ದಕ್ಕೆ ಬಿಟ್ಟು ಬೆಳಕನ್ನು ಪಡೆಯುವತ್ತ – ಪಡೆದ ಬೆಳಕನ್ನು ಎಲ್ಲರೊ೦ದಿಗೆ ಹ೦ಚಿಕೊ೦ಡು ಬದುಕಬೇಕೆ೦ಬ ಸನ್ಮಸನ್ನು ಪಡೆಯುವತ್ತ, ಸಮಸ್ತ ಜೀವಿಗಳ ಮೇಲೆ ದೃಷ್ಟಿ ನೆಟ್ಟಿರಬೇಕು.
ಕತ್ತಲೆ ಋಣಾತ್ಮಕವಾದರೆ, ಬೆಳಕು ಧನಾತ್ಮಕ. ದೀಪ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಬೆಳಕು. ಬೆಳಕು ಜೀವನದ ಅಂಧಕಾರವನ್ನು ತೊಡೆದುಹಾಕುತ್ತದೆ. ಬೆಳಕು ಎಂದರೆ ಜ್ಞಾನದ ಸಂಕೇತ. ಇಂತಹ ಬೆಳಕು ಎಂದಾಕ್ಷಣ ನಮಗೆ ನೆನಪಾಗುವುದೇ ದೀಪ. ದೀಪಕ್ಕೊಂದು ಅಜ್ಞಾತ ಹಾಗೂ ಅಗಾಧ ಶಕ್ತಿಯಿದೆ. ಬೆಳಗುವ ದೀಪ ಮನಸ್ಸಿನ ಕತ್ತಲೆಯನ್ನು ದೂರಗೊಳಿಸುತ್ತದೆ ಮತ್ತು ಎಲ್ಲಾ ಕಲ್ಮಶಗಳನ್ನೂ ದೂರ ಸರಿಸಿ ಶಾಂತಿ ಮೂಡಿಸುವ ಶಕ್ತಿ ದೀಪಕ್ಕಿದೆ.
ದೀಪ ಎಂದರೆ ಶಾಂತಿ, ದೀಪ ಎಂದರೆ ಸಮೃದ್ಧಿ, ದೀಪ ಎಂದರೆ ಬೆಳಕು, ದೀಪ ಎಂದರೆ ಆರೋಗ್ಯ, ದೀಪ ಎಂದರೆ ಸಂಪತ್ತು, ದೀಪ ಎಂದರೆ ಪ್ರಖರತೆ.. ಹೀಗೆ ದೀಪ ಜೀವನದ ಒಂದು ಸಕಾರಾತ್ಮಕ ಬೆಳವಣಿಗೆ. ಇಂಥಹ ದೀಪವನ್ನು ಬೆಳಗಿಸುವುದು ದಿನವೂ ನಿಮ್ಮ ಜೀವನಕ್ಕೊಂದು ಸಂತೋಷ, ನೆಮ್ಮದಿ, ಶಾಂತಿಯನ್ನು ತರಬಲ್ಲುದು.
ದೇವರ ಧ್ಯಾನ, ಪ್ರಾರ್ಥನೆಯಲ್ಲಿ ದೊಡ್ಡ ಶಕ್ತಿಯಿದೆ. ಪ್ರಾರ್ಥನೆಯ ಮೂಲಕ ತನ್ನ ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಶಾಂತಿ, ಸೌಭಾಗ್ಯ ದೊರೆಯುತ್ತದೆ. ಮನೆಯಲ್ಲಿ ದೀಪ ಹಚ್ಚುವುದರಿಂದ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ಮಹತ್ವದ ಪ್ರಾಮುಖ್ಯತೆ ಇದೆ. ಯಾವುದೇ ಕಾರ್ಯಕ್ರಮ ಅಥವಾ ಪೂಜಾ ಕೈಂಕರ್ಯಗಳನ್ನು ನಡೆಸಬೇಕಾದರೆ ಆ ಕಾರ್ಯಕ್ರಮ, ಪೂಜೆ ನಡೆಯುವುದು ದೀಪ ಬೆಳಗುವ ಮೂಲಕವೇ. ಮನೆಯಲ್ಲಿ ದೀಪ ಹಚ್ಚುವುದರಿಂದ ಅಲ್ಲಿನ ವಾತಾವರಣ ಶಾಂತಿ, ನೆಮ್ಮದಿ ಹಾಗೂ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ, ಇದು ವೈಜ್ಞಾನಿಕವಾಗಿಯೂ ಧೃಢವಾಗಿದೆ.
( ಸಂಗ್ರಹ )