ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಯಾವ ರೀತಿ ದೇವಸ್ಥಾನದೊಳಗೆ ಹೋಗಬೇಕು ಅನ್ನೋ ಪದ್ಧತಿ

ದೇವಸ್ಥಾನದೊಳಗೆ ಶರ್ಟ್ ಧರಿಸಬಾರದು ಅನ್ನೋ ಪದ್ದತಿ ಶುರುವಾಗಿದ್ದೇ…
ಒಳಗ್ ಬರೋವ್ರು ಜನಿವಾರ ಹಾಕಿದಾರೋ ಇಲ್ವೋ ಅಂತ ಚೆಕ್ ಮಾಡಿ ಸಪರೇಟ್ ಮಾಡೋದಕ್ಕೆ ಬ್ರಾಹ್ಮಣರು ಮಾಡಿದ ಹುನ್ನಾರ…
ಅನ್ನೋ ಕಾಗಕ್ಕಗುಬ್ಬಕ್ಕ ಕಥೆಯೊಂದನ್ನು
ಬೌದ್ಧ & ಕ್ರಿಶ್ಚಿಯನ್ ಮಿಷಿನರಿಗಳ ಪ್ರಾಯೋಜಕತ್ವದಲ್ಲಿ ಬುದ್ಧಿಜೀವಿ ಬಳಗ ಸಮಾಜದಲ್ಲಿ ಅದ್ಯಾವ್ ರೇಂಜಿಗೆ ಹಬ್ಬಿಸಿಬಿಟ್ಟಿದಾರೆ ಅಂದ್ರೆ,
ಎಲ್ಲಾ ತಿಳಿದಿರೋ ತಲೇಲಿ ಮೆದುಳೂ ಇರೋ ಅಪ್ಪಟ ಹಿಂದುತ್ವವಾದಿಗಳೂ ಕೂಡಾ ಇವ್ರೇಳಿದ್ದನ್ನು ಹೌದೌದ್ ಅಂತ ಕಣ್ಮುಚ್ಚಿಕೊಂಡು ನಂಬಿಬಿಟ್ಟಿದಾರಿಲ್ಲಿ…

ಹಿಂದೆಲ್ಲಾ ದೇವಸ್ಥಾನಗಳಿಗೆ…
ಯಾವುದೇ ಶುಭಕಾರ್ಯಗಳಿಗೂ ಕತ್ತರಿ, ಹೊಲಿಗೆ ಪ್ರಯೋಗಿಸದೆ ತಯಾರಾದ ಅಹತವಸ್ತ್ರಗಳನ್ನೇ ಧರಿಸಲಾಗ್ತಿತ್ತು.
ಬಟ್ಟೆಗಳನ್ನು ಹರಿಯುವುದು, ಹೊಲಿಗೆಯೆಲ್ಲಾ ಅಶುಭ/ಅನಿಷ್ಟವೆಂಬ ನಂಬಿಕೆಯಿದ್ದ ಕಾಲಘಟ್ಟವದು.
ಹಾಗಾಗಿ ಈ ಸಂದರ್ಭಗಳಿಗಾಗಿ ಒಂದಿಡೀ ದಾರದುಂಡೆಯಿಂದಲೇ ನೇಯ್ದ ಪಂಚೆ ಶಲ್ಯಗಳನ್ನೇ ಬಳಸಲಾಗುತ್ತಿತ್ತು.
ಇದು ಕೇವಲ ಗಂಡಸರಿಗೆ ಮಾತ್ರವಲ್ಲ,
ಹೆಂಗಸರೂ ಕೂಡಾ ಇದೇ ತರಹದ ಅಹತವಸ್ತ್ರಗಳನ್ನೇ ಧರಿಸಿ ದೇವಸ್ಥಾನಗಳಿಗೆ ಹೋಗಬೇಕಿತ್ತು…

ಈ ನಂಬಿಕೆ ಕೇವಲ…
ಶುಭಸಂದರ್ಭಗಳಲ್ಲಿ ಮಾತ್ರವಲ್ಲ, ಶವವನ್ನು ಹೊತ್ತೊಯ್ಯೋ ಚಟ್ಟ ಕಟ್ಟೋ ಹಗ್ಗವನ್ನೂ ಕೂಡಾ ತುಂಡರಿಸುವಂತಿಲ್ಲ, ಒಂದೇ ದಾರದುಂಡೆಯಿಂದಲೇ ಇಡೀ ಚಟ್ಟ ಕಟ್ಟಬೇಕೆಂಬ ನಿಯಮ ಈಗಲೂ ನಮ್ಮಲ್ಲಿ ಚಾಲ್ತಿಯಲ್ಲಿದೆ…

  ಪ್ರಜಾಕೀಯ - ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ

ನಂತರದಲ್ಲಿ…
ಯಾವಾಗ ಅಂಗಿಗಳ ಬಳಕೆ ಶುರುವಾಯ್ತೋ, ಇವುಗಳನ್ನು ಕತ್ತರಿಪ್ರಯೋಗಿಸಿಯೇ ತಯಾರಿಸೋ ಕಾರಣ, ದೇವಸ್ಥಾನಗಳ ಒಳಗೆ ಶರ್ಟು ಧರಿಸುವಂತಿಲ್ಲ ಅನ್ನೋ ಪದ್ದತಿ ಚಾಲ್ತಿಗೆ ಬಂದಿದ್ದು.
ಬರ್ತಾ ಬರ್ತಾ ಹೇಗ್ ಆಗ್ತಾ ಹೋಯ್ತು ಅಂದ್ರೆ, ಈ ಕಟ್ಟಳೆಯನ್ನು ಇಲ್ಲಿಂದ ಮುಂದಕ್ಕೆ ತಗೊಂಡೋಗೋಕೆ ಸಾಧ್ಯವೇ ಇಲ್ಲ ಅನ್ನೋ ರೇಂಜಿಗೆ ಬಟ್ಟೆಗಳ ಆಧುನೀಕರಣದ ಭರಾಟೆ ಶುರುವಾಗೋದ ಕಾರಣ,
ಈ ಪದ್ಧತಿ ಕೇವಲ ಗಂಡಸರಿಗಷ್ಟೇ ಸೀಮಿತವಾಗಿ, ಅದೂ ಶರ್ಟಿಗಷ್ಟೇ ಸೀಮಿತವಾಗಿ ( ಯಾಕಂದ್ರೆ ಶರ್ಟಷ್ಟೇ ಅಲ್ಲ ಪ್ಯಾಂಟು ಧರಿಸಬೇಡಿ ಅನ್ಬೋದು ಆದರೆ ಬಟ್ಟೆ ಕತ್ತರಿಸಿಯೇ ತಯಾರಿಸೊ ಕಾಚವೂ ಧರಿಸುವಂತಿಲ್ಲ ಲಂಗೋಟಿಯೇ ಧರಿಸಿಬನ್ನಿ ಅಂತ ಹೇಗ್ ಹೇಳೋದು), ಕೊನೆಕೊನೆಗೆ ಅಹತವಸ್ತ್ರ ಬಿಡೀ, ಸಾಂಪ್ರದಾಯಿಕ ಬಟ್ಟೆ ಧರಿಸಿದ್ರೆ ಅದೇ ದೊಡ್ ಉಪಕಾರ ಅನ್ನೋ ಮಟ್ಟಿಗಾಗೋಯ್ತು….

ಒಂದು ತಿಳ್ಕೊಳೀ…
ದೇವಸ್ಥಾನಗಳಲ್ಲಿ ಬ್ರಾಹ್ಮಣರು ಜನಿವಾರಧಾರಿಗಳನ್ನು ಪ್ರತ್ಯೇಕಿಸೋಕೆ, ದಲಿತರನ್ನು ಹೊರಗಿಡೋಕೆ ಈ ನಿಮಯ ಜಾರಿಗೆ ತಂದರು ಅನ್ನೋ ಲಾಜಿಕ್ಕೇ ಮೂರ್ಖತನದ ಪರಮಾವಧಿ.
ಯಾಕೆಂದರೆ,
ಹಿಂದೆಲ್ಲಾ ಬ್ರಾಹ್ಮಣರು ತಮ್ಮ ಮನೆಯನ್ನೇ ದೇವಾಲಯ ಮಾಡಿಕೊಂಡು ತಮ್ಮಿಷ್ಟದಂತೆ ಮಡಿಯಿಂದ ದೇವಾರಾಧನೆ ಮಾಡಿಕೊಂಡಿದ್ದವರು.
ಕಾಲಕ್ರಮೇಣ ಇತರ ಮೇಲ್ವರ್ಗದ ಜಾತಿಗಳೂ, ತಾವೂ ಬ್ರಾಹ್ಮಣರಂತೆ ದೇವರ ಪೂಜಿಸಬೇಕು, ಅನುಗ್ರಹ ದರ್ಶನ ಪಡೆಯಬೇಕು ಅನ್ನೋ ಬಯಕೆಯಿಂದಾಗಿ ಹುಟ್ಟಿಕೊಂಡಿದ್ದು ದೇವಸ್ಥಾನಗಳು…

  ರಾಯರ ಬಗ್ಗೆ ಕೆಲವು ವಿಷಯಗಳನ್ನು ತಿಳಿಯೋಣ

ಹಾಗಾಗಿ….
ಬ್ರಾಹ್ಮಣರು, ಜನಿವಾರ ನೋಡಿ ದಲಿತರನ್ನು ಶೂದ್ರರನ್ನು ಪ್ರತ್ಯೇಕಿಸೋಕೆ, ದೇವಾಲಯ ಪ್ರವೇಶಿಸದಂತೆ ತಡೆಯೋಕೆ ಅನ್ನೋ ಲಾಜಿಕ್ ಹೇಳ್ತಿದಾನೆ ಅಂತಾದ್ರೆ ಒಂದೋ ಆತ ಶತಮೂರ್ಖ ಆಗಿರಬೇಕು ಅಥವಾ ಜಾತಿಗಳಡಿಯಲ್ಲಿ ಧರ್ಮ ಒಡೆಯೋಕಂತಾನೇ ಹುಟ್ಟಿರೋ ನೀಚ ನಿಕೃಷ್ಟ ವಿಕೃತ ಮನಸ್ಸಿನ ಕ್ರಿಮಿಗಳೇ ಆಗಿರಬೇಕು.
ಯಾಕೆಂದರೆ…
ದೇವಸ್ಥಾನದೊಳಗೆ ಶರ್ಟ್ ಧರಿಸುವಂತಿಲ್ಲ ಅನ್ನೋ ಪದ್ದತಿ, ಶೂದ್ರರೇ ಪೂಜಿಸೋ, ಶೂದ್ರರೇ ನಡೆಸೋ ದೇವಸ್ಥಾನ, ದೈವಸ್ಥಾನಗಳಲ್ಲೂ ಕೂಡಾ ಆಚರಣೆಯಲ್ಲಿದೆ.
ಇಲ್ಲಿ ಇರೋದೂ ಬರೋದೂ ಎಲ್ಲರೂ ಜನಿವಾರ ಹಾಕದ ಶೂದ್ರರೇ ಅಂದ್ಮೇಲೆ
ಇಲ್ಯಾರನ್ನು ಚೆಕ್ ಮಾಡೋಕಂತ ಹೀಗ್ ಮಾಡೋ ಅಗತ್ಯವಿದೆ ನೀವೇ ಹೇಳಿ ನೋಡೋಣ?.
ಒಂದ್ ತಿಳ್ಕೊಳಿ…
ದೇವಸ್ಥಾನದಲ್ಲಿ ಶೂದ್ರರಿಗೆ ಪ್ರವೇಶಿಸಲು ನಿಷೇಧವೂ ಇರಲಿಲ್ಲ.
ಜನಿವಾರ ಹಾಕದವರೆಲ್ಲಾ ದಲಿತರು ಅನ್ನೋ ನಂಬಿಕೆಯೂ ಕೂಡಾ ಇರಲಿಲ್ಲ…

  ಕೃಷ್ಣಾಷ್ಟಮಿ ಪೂಜಾ ಮಾಡುವುದು ಹೇಗೆ? ಮಂತ್ರ ಸಹಿತ ವಿವರಣೆ

ಕೊನೆಯದಾಗಿ‌ :
ಪ್ರತಿಯೊಂದು ಕಡೆಯಲ್ಲೂ,
ಅದರೊಳಗೆ ಪ್ರವೇಶಿಸುವಾಗ ಅದರದ್ದೇ ಆದ ರೂಲ್ಸು ರೆಗ್ಯುಲೇಶನ್ಸುಗಳಿರುತ್ತವೆ.
ಈವನ್…ಮೋಜು ಮಸ್ತಿ ಮಾಡಿ ಕುಡಿದು ತೂರಾಡೋ ಪಬ್ಬುಗಳಿಗ್ ಹೋಗೋದಕ್ಕೂ, ನಮ್ ದುಡ್ಡಲ್ಲಿ ನಾವ್ ತಿನ್ನೋಕಂತ ಫೈವ್ ಸ್ಟಾರ್ ಹೋಟೆಲ್ ಒಳಗ್ ಹೋಗೋದಕ್ಕೂ ಕೂಡಾ ಅವರದ್ದೇ ಆದ ಡ್ರೆಸ್ ಕೋಡ್ ಗಳಿರ್ತಾವೆ.
ನಮ್ ದುಡ್ಡು ನಮ್ಮಿಷ್ಟ ಅಂತ ನಮ್ಗಿಷ್ಟಬಂದಂಗೆ ಒಳನುಗ್ಗೋಹಾಗಿಲ್ಲ ಅಲ್ಲೆಲ್ಲಾ. ಅವ್ರೇಳಿದ್ದೇ ಶಾಸನ.
ಅಷ್ಟಕ್ಕೂ…
ಯಾವ ರೀತಿ ದೇವಸ್ಥಾನದೊಳಗೆ ಹೋಗಬೇಕು ಅನ್ನೋ ಪದ್ಧತಿಯಿದೆಯೇ ಹೊರತು,
ಪ್ರತಿಯೊಬ್ಬರೂ ದೇವಸ್ಥಾನದೊಳಗೆ ಹೋಗಲೇಬೇಕು ಅನ್ನೋ ರೂಲ್ಸುಗಳಾಗಲೀ ಫತ್ವಾಗಳಾಗಲೀ ಅಂದೂ ಇರಲಿಲ್ಲ ಇಂದೂ ಕೂಡಾ ಇಲ್ಲ.
ಇಷ್ಟವಿಲ್ವೋ… ಹೋಗದೆ ಇದ್ರಾಯ್ತು ಸಿಂಪಲ್…!!

Leave a Reply

Your email address will not be published. Required fields are marked *

Translate »