ಆಧುನಿಕತೆಯಿಂದಾಗಿ ಇಂದು ರಸ್ತೆಗಳು ಅಭಿವೃದ್ಧಿ ಹೊಂದಿದೆ. ಸ್ಟೇಟ್ ಹೈವೇ, ನ್ಯಾಷನಲ್ ಹೈವೇ, ಹೀಗೆ ಭಿನ್ನ ಭಿನ್ನವಾದ ರಸ್ತೆಗಳ ಹೆಸರನ್ನು ನಾವು ಕೇಳಿದ್ದೇವೆ. ಆದರೆ ಇದೆಲ್ಲವುಗಳಿಗಿಂತ ಭಿನ್ನವಾಗಿ ಪ್ರಪಂಚದ ಕೊನೆಯ ರಸ್ತೆ ಒಂದಿದೆ ಎಂದರೆ ನಿಮಗೆ ಇದು ಬಹಳ ವಿಚಿತ್ರ,ವಿಸ್ಮಯ ಹಾಗೂ ವಿಲಕ್ಷಣ ಕೂಡಾ ಎನಿಸಬಹುದು.
ಉತ್ತರ ಧೃವವು ಭೂಮಿಯ ತುತ್ತ ತುದಿಯಲ್ಲಿ ಇರುವ ಪ್ರದೇಶವಾಗಿದೆ. ಇಲ್ಲಿ ಭೂಮಿಯ ಅಕ್ಷವು ತಿರುಗುವ ಪ್ರದೇಶವಾಗಿದೆ. ಈ ಪ್ರದೇಶವು ನಾರ್ವೆಯ ಕೊನೆಯ ಭಾಗದಲ್ಲಿದ್ದು ಇಲ್ಲಿಂದ ಮುಂದಕ್ಕೆ ಹಾದು ಹೋಗುವ ರಸ್ತೆಯನ್ನೇ ವಿಶ್ವದ ಕೊನೆಯ ರಸ್ತೆ ಎಂದು ಕರೆಯಲಾಗುತ್ತದೆ. ಈ ರಸ್ತೆಗೆ ಒಂದು ಹೆಸರು ಕೂಡಾ ಇದೆ. ಇದನ್ನು ಇ-69 ಎಂದು ಕರೆಯಲಾಗುತ್ತದೆ. ಈ ರಸ್ತೆಯಲ್ಲಿ ಮುಂದೆ ಸಾಗಿದರೆ ಇದು ಭೂಮಿಯ ತುದಿಯನ್ನು ನಮಗೆ ಸಂಪರ್ಕಿಸುತ್ತದೆ. ಅದರಿಂದ ಮುಂದಕ್ಕೆ ಹಿಮ ತುಂಬಿರುವ ಪ್ರದೇಶದ ಹೊರತಾಗಿ ಬೇರಾವ ರಸ್ತೆಯೂ ಇಲ್ಲ ಅಥವಾ ಯಾವುದೇ ಭೂಭಾಗವೂ ಕೂಡಾ ಇಲ್ಲ.
ಇ-69 ರಸ್ತೆಯ ಉದ್ದ 14 ಕಿಮೀಗಳು. ಈ ಹೈವೆ ಹಾದಿಯಲ್ಲಿ ಹಲವು ಸ್ಥಳಗಳಲ್ಲಿ ಒಂಟಿಯಾಗಿ ನಡೆದು ಹೋಗುವುದನ್ನು ಅಥವಾ ವಾಹನದಲ್ಲಿ ಸಂಚಾರ ಮಾಡುವುದನ್ನು ನಿಷೇಧ ಮಾಡಲಾಗಿದೆ. ಈ ರಸ್ತೆಯಲ್ಲಿ ಒಂಟಿಯಾಗಿ ಯಾರನ್ನೂ ಸಂಚರಿಸಲು ಅನುಮತಿ ನೀಡಲಾಗುವುದಿಲ್ಲ. ಬದಲಿಗೆ ಜನರ ಗುಂಪು ಅಥವಾ ಒಟ್ಟಾಗಿ ಜನರು ಹೋಗಲು ಮಾತ್ರವೇ ಅನುಮತಿಯನ್ನು ನೀಡಲಾಗುವುದು. ಇದಕ್ಕೆ ಕಾರಣವೂ ಇದೆ. ಈ ಪ್ರದೇಶದ ಸುತ್ತಲೂ ಕೂಡಾ ದಟ್ಟವಾದ ಹಿಮ ಪದರಗಳು ಕಂಡು ಬರುವುದರಿಂದ ಜನರು ಕಳೆದು ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ.
ಈ ಪ್ರದೇಶವು ಉತ್ತರ ಧೃವದಲ್ಲಿ ಇರುವುದರಿಂದ ಚಳಿಗಾಲದಲ್ಲಿ ಇಲ್ಲಿ ರಾತ್ರಿಗಳು ಮುಗಿಯುವುದಿಲ್ಲ ಅಂದರೆ ದೀರ್ಘವಾದ ರಾತ್ರಿಗಳು ಇರುತ್ತದೆ. ಅದೇ ರೀತಿ ಬೇಸಿಗೆಯ ದಿನಗಳಲ್ಲಿ ಹಲವು ದಿನಗಳವರೆಗೆ ಸೂರ್ಯಾಸ್ತ ಎನ್ನುವುದು ಆಗುವುದೇ ಇಲ್ಲ. ಒಟ್ಟಾರೆ ಭೂಮಿಯ ಮೇಲಿನ ಕೊನೆಯ ರಸ್ತೆ ಇರುವ ಈ ಪ್ರದೇಶವು ಭೂಮಿಯ ಮೇಲಿರುವ ಅದ್ಭುತವಾದ ಪ್ರದೇಶಗಳಲ್ಲಿ ಒಂದು ಎಂದರೆ ಅದು ತಪ್ಪಾಗಲಾರದು.