ಇದು 2016 ಅಂದ್ರೆ ಸುಮಾರು 6 ವರ್ಷಗಳಷ್ಟು ಹಳೆಯ ವಿಷಯ.
ಒಬ್ಬ ರೈಲ್ವೇ ಅಧಿಕಾರಿ ಇದ್ದರು ದೊಡ್ಡ ಅಧಿಕಾರಿ .
ವಿದ್ಯಾರ್ಹತೆಯಿಂದ ಇಂಜಿನಿಯರ್ ಆಗಿದ್ದರು.
ಅವರ ನಿವೃತ್ತಿಗೆ ಎರಡು ವರ್ಷ ಮಾತ್ರ ಉಳಿದಿತ್ತು.
ಸಾಮಾನ್ಯವಾಗಿ, ನಿವೃತ್ತಿಯ ವೇಳೆ, ಕೊನೆಯ ಪೋಸ್ಟಿಂಗ್ ಸಮಯ ಬಂದಾಗ, ಉದ್ಯೋಗಿಗೆ ಅವರ ಆಯ್ಕೆಯ ಸ್ಥಳದ ಬಗ್ಗೆ ಕೇಳಲಾಗುತ್ತದೆ.
ಕೊನೆಯ ಪೋಸ್ಟಿಂಗ್ ಅನ್ನು ಅವರ ಆಯ್ಕೆಯ ಸ್ಥಳದಲ್ಲಿ ನೀಡಲಾಗುತ್ತದೆ, ಇದರಿಂದಾಗಿ ಉದ್ಯೋಗಿ ಎರಡು ವರ್ಷಗಳಲ್ಲಿ ತನ್ನ ಸ್ವಂತ ಮನೆಯನ್ನು ಕಟ್ಟಿ ನೆಲೆಸಬಹುದು ಮತ್ತು ಆರಾಮವಾಗಿ ಬದುಕಬಹುದು ಅಂತ ಇರಬಹುದು .ಆದರೆ ಆ ಅಧಿಕಾರಿ ICF ಚೆನ್ನೈನಲ್ಲಿ ಅವರ ಕೊನೆಯ ಪೋಸ್ಟಿಂಗ್ ಅನ್ನು ಕೇಳಿದರು.
ಐಸಿಎಫ್ ಅಂದ್ರೆ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಅಥವಾ ರೈಲ್ವೇ ಕೋಚ್ ಫ್ಯಾಕ್ಟರಿ.
ರೈಲ್ವೆ ಮಂಡಳಿಯ ಅಧ್ಯಕ್ಷರು ನಿಮ್ಮ ಉದ್ದೇಶವೇನು ಅಂತ ಕೇಳಿದರು?
ಆ ಇಂಜಿನಿಯರ್ ತಾನು ದೇಶದಲ್ಲಿ ಸೆಮಿ ಹೈಸ್ಪೀಡ್ ರೈಲನ್ನು ನಿರ್ಮಿಸುವ ಉದ್ದೇಶ ಇದೆ ಅಂತ ಹೇಳ್ತಾರೆ.
ಸ್ಪ್ಯಾನಿಷ್ ಟಾಲ್ಗೊ ಕಂಪನಿಯ ಗಂಟೆಗೆ 180 ಕಿಮೀ ಓಡುವ ರೈಲಿನ ಪ್ರಯೋಗವು ದೇಶದಲ್ಲಿ ನಡೆಯುತ್ತಿದ್ದ ಅವಧಿ ಇದು.
ಪ್ರಯೋಗ ಯಶಸ್ವಿಯಾಯ್ತು ಆದರೆ ಆ ಕಂಪನಿಯು 10 ಬೋಗಿಯ ರೈಲಿಗೆ ಸುಮಾರು 250 ಕೋಟಿ ರೂ ಡಿಮ್ಯಾಂಡ್ ಮಾಡಿತ್ತು. ಅಷ್ಟೇ ಅಲ್ಲ ತಂತ್ರಜ್ಞಾನ ವರ್ಗಾವಣೆ ಒಪ್ಪಂದಕ್ಕೆ ಸಹಿ ಹಾಕಿರಲ್ಲ.
ಅಂತಹ ಪರಿಸ್ಥಿತಿಯಲ್ಲಿ, ಆ ಇಂಜಿನಿಯರ್ ತನ್ನ ಸ್ವಂತ ದೇಶದಲ್ಲಿ ಟಾಲ್ಗೊಕ್ಕಿಂತ ಉತ್ತಮವಾದ ರೈಲನ್ನು ಸ್ಥಳೀಯ ತಂತ್ರಜ್ಞಾನದೊಂದಿಗೆ ಅದರ ಅರ್ಧಕ್ಕಿಂತ ಕಡಿಮೆ ವೆಚ್ಚದಲ್ಲಿ ತಯಾರಿಸುವುದಾಗಿ ನಿರ್ಧರಿಸಿದರು.
ರೈಲ್ವೇ ಮಂಡಳಿಯ ಅಧ್ಯಕ್ಷರು ನಿಮಗೆ ವಿಶ್ವಾಸ ಇದೆಯಾ , ನಾವು ಅಂತಹ ರೈಲನ್ನು niರ್ಮಾನ ಮಾಡಬಹುದೇ? ಅಂತ ಕೇಳಿದರು.
ಖಂಡಿತ ಮಾಡಬಹುದು ಅಂತ ಅಂದ್ರು ಇವರು.
R&D ಗೆ ಎಷ್ಟು ಹಣ ಬೇಕು?
ಕೇವಲ 100 ಕೋಟಿ ಸರ್..
ರೈಲ್ವೇ ಅವರಿಗೆ ಐಸಿಎಫ್ ನಲ್ಲಿ ಪೋಸ್ಟಿಂಗ್ ನೀಡಿ 100 ಕೋಟಿ ರೂ ನೀಡಿತು.
ಆ ಅಧಿಕಾರಿ ತರಾತುರಿಯಲ್ಲಿ ರೈಲ್ವೇ ಇಂಜಿನಿಯರ್‌ಗಳ ತಂಡವನ್ನು ಬೆಳೆಸಿದರು ತಕ್ಷಣದಿಂದ ಎಲ್ಲರೂ ಕೆಲಸದಲ್ಲಿ ತೊಡಗಿದರು.
ಎರಡು ವರ್ಷಗಳ ದಣಿವರಿಯದ ಪರಿಶ್ರಮದ ನಂತರ ತಯಾರಾದ ವಿಶಿಷ್ಟ ಉತ್ಪನ್ನವನ್ನು ನಾವು ರೈಲ್ವೇ 18 ಅಂತ ಕರೆದರೆ ಅದನ್ನೇ ವಂದೇ ಭಾರತ್ ಟ್ರೇನ್ ಅಂತ ಕರೆಯಲಾಗುತ್ತದೆ.
ಈ 16 ಬೋಗಿಗಳ ರೈಲ್ವೇ 18 ಬೆಲೆ ಎಷ್ಟು ಗೊತ್ತಾ?
ಕೇವಲ 97 ಕೋಟಿ ಆದರೆ ಟಾಲ್ಗೋ ಕೇವಲ 10 ಕೋಚ್‌ಗಳಿಗೆ 250 ಕೋಟಿ ಕೇಳಿತ್ತು.
ರೈಲ್ವೇ 18 ಭಾರತೀಯ ರೈಲ್ವೆಯ ವೈಭವದ ಇತಿಹಾಸದಲ್ಲಿ ಅಪರೂಪದ ವಜ್ರವಾಗಿದೆ.
ಇದರ ವಿಶೇಷತೆ ಏನೆಂದರೆ, ಅದನ್ನು ಎಳೆಯಲು ಯಾವುದೇ ಎಂಜಿನ್ ಅಗತ್ಯವಿಲ್ಲ ಯಾಕೆಂದರೆ ಪ್ರತಿಯೊಂದು ಕೋಚ್ ಸ್ವಯಂ ಚಾಲಿತವಾಗಿದೆ,ಅಂದ್ರೆ , ಪ್ರತಿ ಕೋಚ್‌ನಲ್ಲಿ ಮೋಟಾರು ಇದೆ.
ಎರಡು ವರ್ಷಗಳಲ್ಲಿ ತಯಾರಾದ ಮೊದಲ ರೈಲನ್ನು ಅನ್ನು ವಂದೇ ಭಾರತ್ ಟ್ರೈನ್ ಹೆಸರಿನಲ್ಲಿ ವಾರಣಾಸಿ ನವದೆಹಲಿ ನಡುವೆ ಓಡಿಸಲಾಯಿತು.
ಆ ಇಂಜಿನಿಯರ್ ಹೆಸರು ಸುಧಾಂಶು ಮಣಿ .
2018 ರಲ್ಲಿ ನಿವೃತ್ತರಾದರು
ಈ ದೇಶದಲ್ಲಿ ಟ್ರೈನ್ 18 ನಂತಹ ಗಮನಾರ್ಹ ಸಾಧನೆಗಾಗಿ ಯಾರೂ ಅವರ ತಂಡದ ಬೆನ್ನು ತಟ್ಟಲಿಲ್ಲ.
ಇತ್ತೀಚಿಗೆ ವಂದೇ ಭಾರತ್ ಎಮ್ಮೆಗೆ ಡಿಕ್ಕಿ ಹೊಡೆದು ಅದರ ಮುಂಭಾಗಕ್ಕೆ ಹಾನಿಯಾದಾಗ ಎಡಪಂಥೀಯರು ಮತ್ತು ದೇಶವಿರೋಧಿಗಳೆಲ್ಲರೂ ರೈಲಿನ ವಿನ್ಯಾಸವನ್ನು ಅನಿಯಂತ್ರಿತವಾಗಿ ಬಾಯಿಗೆ ಬಂದ ಹಾಗೆ ಟೀಕಿಸಲು ಪ್ರಾರಂಭಿಸಿದರು,ಆಗ ಸುಧಾಂಶು ಅವರಿಗೆ ಬೇಸರವಾಗಿ ಟ್ರೇನ್ ನ ವಿಶೇಷತೆಯ ಬಗ್ಗೆ ಒಂದು ಪತ್ರ ಬರೆದಿದ್ದರು..
ಮಣಿ ಸಾಹೇಬರು ನಿವೃತ್ತರಾದರು ಈಗ ಲಕ್ನೌ ನಲ್ಲಿ ವಾಸವಾಗಿದ್ದಾರೆ.