ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದೀಪವನ್ನು ಹಚ್ಚುವ ರೀತಿ ಮತ್ತು ಪದ್ಧತಿ

ದೀಪವನ್ನು ಎರಡು ರೀತಿಯಲ್ಲಿ ಹಚ್ಚುವ ಪದ್ಧತಿ ಇದೆ..!
1.ನಂದಾದೀಪ. 2 ತಾತ್ಕಾಲಿಕ ದೀಪ.

1.ನಂದಾದೀಪ.
ದಿನವಿಡಿ ನoದಿ ಹೋಗದೆ ದೇವರನ್ನು ಬೆಳಗುವ ದೀಪವೇ ನoದಾದೀಪ.“ನoದ” ಎಂದರೆ “ಭಗವಂತ” (ಆನಂದೋ ನಂದನೋ ನಂದಃ ವಿಷ್ಣುಸಹಸ್ರನಾಮ)
ನಂದಯತಿ ಭಕ್ತಾನ್ ಇತಿನಂದಃ |
” ನಂದಾದೀಪ” ಯಾರ ಮನೆಯಲ್ಲಿ ಬೆಳಗುತ್ತದೆಯೋ ಅಂತಹ ಮನೆಯಲ್ಲಿ ದೈವೀ ಪ್ರಭಾವ ಮತ್ತು ಶಕ್ತಿ ಹೆಚ್ಚಾಗಿರುತ್ತದೆ..!

  1. ತಾತ್ಕಾಲಿಕ ದೀಪ.
    ಒಮ್ಮೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಅದು ಉರಿಯುವಸ್ಟು ಕಾಲ ಇಡುವ ದೀಪ.

ದೀಪದ ಅರ್ಥ
ದೀಪ್ಯತೇ ದೀಪಯತಿ ವಾ ಸ್ವo ಪರಂ ಚೇತಿ ದೀಪಃ |
ಭಗವಂತನನ್ನು ತೋರಿಸುವ ವಸ್ತುವೇ ದೀಪ

ರವೇರಸ್ತ ಸಮಾರಭ್ಯ ಯಾವತ್ ಸೂರ್ಯೋದಯೋ ಭವೇತ್ |
ಯಸ್ಯ ತಿಷ್ಠತಿ ಗೃಹೇ ದೀಪಃ ತಸ್ಯ ನಾಸ್ತಿ ದರಿದ್ರತಾ ||

ಸೂರ್ಯಾಸ್ತವಾದ ಕೊಡಲೆ ಗೃಹಿಣಿಯು ದೇವರ ಮುoದೆ ಮಾರನೇ ದಿನ ಸೂರ್ಯೋದಯವಾಗುವವರೆಗೂ
ದೀಪವು ನಂದಿಹೋಗದಂತೆ ನೋಡಿಕೊಳ್ಳಬೇಕು. ಹೀಗೆ ದೀಪ ಬೆಳಗಿದ ಮನೆಯಲ್ಲಿ ಅಲಕ್ಷ್ಮಿಯು ಸುಳಿಯಲಾರಳು. ದಾರಿದ್ರ್ಯವು ಬರಲಾರದು.

ಆಯುರ್ದಃ ಪ್ರಾಙ್ಮುಖೋ ದೀಪೋ ಧನದಃ ಸ್ಯಾದುದಙ್ಮುಖಃ|
ಪ್ರತ್ಯಙ್ಮುಖೋ ದುಃಖದೋ$ಸೌ ಹಾನಿದೋ ದಕ್ಷಿಣಾಮುಖಃ||

ಪೂರ್ವಾಭಿಮುಖವಾಗಿ ದೀಪ ಹಚ್ಚುವುದು ಆಯುಃ ಪ್ರದ.ಉತ್ತರಾಭಿಮುಖವಾಗಿ ಹಚ್ಚಿದರೆ ಧನ ಪ್ರಾಪ್ತಿ.ಪಶ್ಚಿಮಾಭಿಮುಖವಾಗಿ ಹಚ್ಚಿದರೆ ದುಃಖ ಪ್ರಾಪ್ತಿ. ದಕ್ಷಿಣಾಭಿಮುಖವಾಗಿ ಹಚ್ಚಿದರೆ ಹಾನಿ ಉಂಟಾಗುತ್ತದೆ..

ದಕ್ಷಿಣಾಭಿಮುಖಂ ದೀಪಂ ಸ್ಥಾಪಯೇನ್ನ ಕದಾಚನ|
ಪ್ರತ್ಯಙ್ಮುಖಂ ತಥಾ ನೈವ ದೋಷಃ ಸ್ಯಾದೇಕದೀಪಕೇ||

ದಕ್ಷಿಣಾಭಿಮುಖವಾಗಿ ಎಂದಿಗೂ ದೀಪವನ್ನು ಹಚ್ಚಬಾರದು..ಅದೇ ರೀತಿ ಹಲವು ದೀಪಗಳನ್ನು ಪಶ್ಚಿಮಾಭಿಮುಖವಾಗಿ ಯೂ ಹಚ್ಚ ಬಾರದು. ಒಂದೇ ದೀಪ ಹಚ್ಚುವುದು ದೋಷಪ್ರದವಲ್ಲ.

ಘೃತ ದೀಪೋ ಭವೇದ್ದಕ್ಷೇ ತೈಲ ದೀಪಸ್ತು ವಾಮತಃ||

ತುಪ್ಪದ ದೀಪವನ್ನು ದೇವರ ಬಲಗಡೆಗೂ.ಎಣ್ಣೆಯ ದೀಪವನ್ನು ದೇವರ ಎಡಭಾಗಕ್ಕೆ ಹಚ್ಚ ಬೇಕು…ಇದು ಒಂದೇ ದೀಪ ಹಚ್ಚುವಾಗ.. ಹಲವು ದೀಪ ಹಚ್ಚುವಾಗ ಎಲ್ಲಾ ಕಡೆ ಹಚ್ಚ ಬಹುದು. ಇದು ಎಲ್ಲಾ ದೇವರಿಗೂ ಅನ್ವಯಿಸುತ್ತದೆ.

ದೀಪೇನ ದೀಪಂ ಪ್ರಜ್ವಾಲ್ಯ ದರಿದ್ರೀ ವ್ಯಾಧಿಮಾನ್ ಭವೇತ್||
ಒಂದು ದೀಪದಿಂದಲೇ ಇನ್ನೊಂದು ದೀಪವನ್ನು ಹಚ್ಚಿದರೆ ದರಿದ್ರನು,ರೋಗಿಯು ಆಗುವನು.

ದೀಪೇ ಶಲಾಕಾಂ ಪ್ರಜ್ವಾಲ್ಯ ತೇನ ದೀಪಪ್ರಜ್ವಾಲನಂ ಕಾರ್ಯಂ ನ ತು ಸಾಕ್ಷಾದ್ದೀಪೇ||
ಒಂದು ದೀಪದಿಂದ ಬೇರೆ ಬತ್ತಿ ಅಥವಾ ತುಳಸಿಯ ಕಡ್ಡಿ ಇಂದ ಜ್ವಾಲೆ ಹೊತ್ತಿಸಿ ಬೇರೆ ದೀಪ ಬೆಳಗಬೇಕು.

  ಶ್ರೀಶೈಲ ಶಿಖರ ದರ್ಶನದ ಹಿಂದಿನ ರಹಸ್ಯವೇನು ಗೊತ್ತಾ

ಲಕ್ಷ್ಮೀದೇವಿಯ ಸನ್ನಿಧಾನ ವಿಶೇಷವಿರುವ ತುಳಸಿ ಕಾಷ್ಠದಿoದ ದೇವರಿಗೆ ದೀಪವನ್ನು ಹಚ್ಚಿದರೆ ಭಗವಂತನು ಹೆಚ್ಚು ಸಂತುಷ್ಟನಾಗುವನು.
“ಆತ ಏವ ಶಲಾಕಾಂ ತತ್ರ ಸ್ಥಪಯಂತಿ “|

ದೀಪಪಾತ್ರಾದಿದೈವತ್ಯಂ ಮುಖೇ ಪಾವಕ ಮುಚ್ಯಂತೇ |
ದಂಡಮೀಶ್ವರದೈವತ್ಯಂ ಪಾದಂ ಪ್ರಜಾಪತಿಸ್ತಥಾ ||

ದೀಪಸ್ಥoಭಗಳಲ್ಲಿ ಅಗ್ರದಲ್ಲಿ ಅಗ್ನಿಯು, ದಂಡದಲ್ಲಿ ರುದ್ರನು, ಬುಡದಲ್ಲಿ ಬ್ರಹ್ಮದೇವನು ಇರುವರು.

ದೀಪವನ್ನು ಯಾವ ಯಾವ ಪಾತ್ರೆಯಲ್ಲಿ ಹಚ್ಚಬೇಕು.

“ಮೃಣ್ಮಯೇನ ತು ಪಾತ್ರೆಣ ಗೋಘ್ರುತೇನ ಸುರಾಧಿಪ|
ದೀಪಂ ದದಾತಿ ಯೋ ಭಕ್ತ್ಯಾ ಜ್ಞಾನೀ ಯೋಗೀ ಸುಖೀ ಭವೇತ್|
ಅಯೋಮಯೇನ ಪಾತ್ರೇಣ ದೀಪಮರ್ಪಯತೇ ಹರೇಃ।
ಸ ತು ದೀಪಶತೇನೈವ ಫಲಮಾಪ್ನೋತಿ ಪದ್ಮಜ ||
ಕಾಂಸ್ಯಪಾತ್ರೇಣ ದೀಪೇನ ಪೂಜಾಂ ಯಃ ಕುರುತೇ ನರಃ|
ತಸ್ಯ ತೇಜಃಸುಸೌಭಾಗ್ಯಂ ವರ್ಧತೇ ಪದ್ಮಸಂಭವ || ”
“ಯಸ್ತು ತಾಮ್ರಮಯೇ ಪಾತ್ರೆ ದೀಪಂ ದದ್ಯಾಚ್ಚ ಭಕ್ತಿತಃ|
ಸತು ದೀಪ ಸಹಸ್ರೆಣ ಫಲ ಮಾಪ್ನೋತಿ ಶೋಭನಮ್.
ಬ್ರಹ್ಮನ್ ರಜತಪಾತ್ರೆಷು ಯೋ ದದಾತಿ ಚ ದೀಪಿಕಾಮ್|
ಸತು ಲಕ್ಷ್ಯಗುಣೋ ಭೂತ್ವಾ ಮಾಂ ಸಮಾಯಾತಿ ನಿತ್ಯದಾ ||
ಯೋ ವೈ ಸ್ವರ್ಣಮಯೇ ಪಾತ್ರೆ ದೀಪಂ ದಾಸ್ಯತಿ ವಿಷ್ಣವೇ ।
ಅನಂತಗುಣಿತೋ ಭೂತ್ವಾ ಯಾತಿ ಮಾಂ ನಾತ್ರ ಸಂಶಯಃ |

  • ಮಣ್ಣಿನ ಪಾತ್ರೆಯಲ್ಲಿ ದೇವರಿಗೆ ದೀಪವನ್ನು ಹಚ್ಚಿದರೆ ದೀಪವನ್ನು ಹಚ್ಚಿದ ವ್ಯಕ್ತಿಯು ಜ್ಞಾನಿಯು , ಯೋಗಿಯು ಹಾಗು ಸುಖವಂತನು ಆಗುತ್ತಾನೆ .

*ಕಬ್ಬಿಣದ ಪತ್ರೆಯಲ್ಲಿ ದೀಪವನ್ನು ಹಚ್ಚುವವನಿಗೆ ಅಂತಹ ಒಂದು ನೂರು ದೀಪಗಳನ್ನು ಹಚ್ಚಿದರೆ ಮಾತ್ರ ಫಲ ಸಿದ್ಧಿಯಾಗುತ್ತದೆ .

*ಕಂಚಿನ ಪಾತ್ರೆಯಲ್ಲಿ ದೀಪವನ್ನು ಹಚ್ಚಿದರೆ ತೇಜಸ್ಸು ಮತ್ತು ಉತ್ತಮವಾದ ಸೌಭಾಗ್ಯ ಹೆಚ್ಚುತ್ತದೆ .

*ತಾಮ್ರದ ಪಾತ್ರೆಯಲ್ಲಿ ಯಾವನು ದೀಪವನ್ನು ಹಚ್ಚುತ್ತಾನೋ ಅವನು ಒಂದು ಸಾವಿರ ದೀಪಗಳನ್ನು ಹಚ್ಚಿ ಭಗವಂತನಿಗೆ ಸಮರ್ಪಿಸಿದರೆ ಉತ್ತಮವಾದ ಫಲವನ್ನು ಪಡೆಯುತ್ತಾನೆ .

  • ಬೆಳ್ಳಿಯ ಪಾತ್ರೆಯಲ್ಲಿ ಯಾವನು ದೀಪವನ್ನು ಹಚ್ಚುತ್ತಾನೋ ಅವನ ಪುಣ್ಯವು ಲಕ್ಷಪಾಲು ಹೆಚ್ಚುತ್ತದೆ .

*ಬಂಗಾರದ ಪಾತ್ರೆಯಲ್ಲಿ ಯಾವನು ದೀಪವನ್ನು ಹಚ್ಚಿ ಶ್ರೀಹರಿಗೆ ಸಮರ್ಪಿಸುತ್ತಾನೋ ಅವನಿಗೆ ಅನಂತ ಫಲವು ಉಂಟಾಗುತ್ತದೆ . ಮತ್ತು ಅವನು ಶ್ರೀಹರಿಯನ್ನೇ ಹೊಂದುತ್ತಾನೆ . ಆದ್ದರಿಂದ ಒಟ್ಟಿನಲ್ಲಿ ಮಣ್ಣಿನ ಕಬ್ಬಿಣದ ಕಂಚಿನ- ತಾಮ್ರದ – ಬೆಳ್ಳಿಯ – ಹಾಗೂ ಬಂಗಾರದ ಪಾತ್ರೆಗಳಲ್ಲಿ ಭಗವಂತನಿಗೆ ದೀಪವನ್ನು ಹಚ್ಚಬಹುದು .

  ಭಗವಂತ ಸರ್ವವ್ಯಾಪಿ - ಶ್ರೀಕೃಷ್ಣ ಕಾಪಾಡು

ದೀಪದ ಪಾತ್ರೆಯು ಆರು ವಿಧವಾಗಿದೆ.

ಸುವರ್ಣನಿರ್ಮಿತಪಾತ್ರೆ , ಮರದಿಂದ ನಿರ್ಮಿತ , ಲೋಹದಿಂದ ನಿರ್ಮಿತ ಮಣ್ಣಿನಿಂದ ನಿರ್ಮಿತ , ತೆಂಗಿನ ಚಿಪ್ಪಿನಿಂದ ನಿರ್ಮಿತ ತಾಳೆಯ ಚಿಪ್ಪಿನಿಂದ | ನಿರ್ಮಿತವಾದದ್ದು ಹೀಗೆ .
ತೈಜಸಂ ದಾರವಂ ಹಮಾರ್ತಿಕ್ಯಂ ನಾರಿಕೇಲಜಮ್ | ತೃಣಧ್ವಜೋದ್ಭವಂ ವಾಪಿ ದೀಪಪಾತ್ರಂ ಪ್ರಶಸ್ಯತೇ ॥

ದೀಪವನ್ನು ಹಚ್ಚುವಾಗ ಘಂಟಾನಾದ ಪೂರ್ವಕವಾಗಿಯೇ ಹಚ್ಚಬೇಕು . ದೀಪಮಾತ್ರವಲ್ಲದೆ ಸ್ನಾನ ( ಅಭಿಷೇಕ ) ಧೂಪಾರತಿ , ನೈವೇದ್ಯ ಭೂಷಣ ಮತ್ತು ನೀರಾಜನ ಕಾಲದಲ್ಲಿ ಘಂಟಾನಾದ ಆವಶ್ಯಕ .

ಸ್ನಾನೇ ಧೂಪೇ ತಥಾ ದೀಪೇ ನೈವೇದ್ಯ ಭೂಷಣೇ ತಥಾ |
ಘಂಟಾನಾದಂ ಪ್ರಕುರ್ವಿತ ತಥಾ ನೀರಾಜನೆಂಪಿ ಚ ||

ದೇವರ ದೀಪಕ್ಕೆ ಯಾವ ವಸ್ತು ಉತ್ತಮ.

ಕರ್ಪೂರಂ ಗೋಘ್ರೃತಂ ತೈಲಂ ಕೋಸುಂಭಂ ನಾರಿಕೇರಜಮ್।
ಆಜ್ಯಂ ಘೃತಂ ವಾ ಸಂಪಾದ್ಯ ಪುಮಾನೇವಂ ಸ್ವಶಕ್ತಿತಃ||
ಗೋಘೃತೇನ ತು ಸರ್ವೆಷ್ಟಫಲಸಿದ್ಧಿಂ ಲಭೇನ್ನರಃ |
ಅಮಂಗಲ್ಯಹರಂ ತೈಲಂ ಕೌಸುಂಭಂ ಕೀರ್ತಿವರ್ಧನಮ್ |
ನಾರಿಕೇರಂ ಸೌಖ್ಯದಂ ಚ ಹ್ಯಾಜ್ಯಂ ಭೋಗೈಕಸಾಧನಮ್ |
ಏರಂಡಂ ಮಾಹಿಷಮೃತಂ ಸರ್ವಥಾ ವರ್ಜಯೇದ್ಭುಧಃ ||

ಹಸುವಿನ ತುಪ್ಪದಿಂದ ದೀಪ ಹಚ್ಚಿದರೆ ಸಮಸ್ತ ಇಷ್ಟ ಪ್ರಾಪ್ತಿಯಾಗುತ್ತದೆ .
ಎಳ್ಳೆಣ್ಣೆಯಿಂದ ದೀಪ ಹಚ್ಚಿದರೆ ಅಮಂಗಲ ಪರಿಹಾರವಾಗುತ್ತದೆ .
ಕುಸುಬೆಎಣ್ಣೆಯಿಂದ ದೀಪ ಹಚ್ಚಿದರೆ ಕೀರ್ತಿಯು ಹೆಚ್ಚುತ್ತದೆ .
ಕೊಬ್ಬರೆಣ್ಣೆಯಿಂದ ದೀಪ ಹಚ್ಚಿದರೆ ಸೌಖ್ಯವು ಹೆಚ್ಚುತ್ತದೆ.

ಆಡಿನ ತುಪ್ಪದಿಂದ ದೀಪ ಹಚ್ಚುವುದು ಭೋಗಕ್ಕೆ ( ಸುಖಾನುಭವಕ್ಕೆ ) ಉತ್ತಮವಾದ ಸಾಧನವು . ಅಂದರೆ ಆಡಿನ ತುಪ್ಪದಿಂದ ದೇವರ ದೀಪ ಹಚ್ಚಿದರೆ ಸುಖವು ಸಿಗುತ್ತದೆ .
ಆದರೆ ಹರಳೆಣ್ಣೆ ಮತ್ತು ಎಮ್ಮಿಯ ತುಪ್ಪವನ್ನು ದೇವರ ದೀಪ ಹಚ್ಚಲು ಸರ್ವಥಾ ಉಪಯೋಗಿಸಬಾರದು . ಆದ್ದರಿಂದ ಒಟ್ಟಿನಲ್ಲಿ ಹಸುವಿನ ತುಪ್ಪ ಎಳ್ಳೆಣ್ಣೆ ಕೊಬ್ಬರೆಣ್ಣೆ , ಆಡಿನ ತುಪ್ಪ ಇವುಗಳಿಂದ ದೇವರ ದೀಪವನ್ನು ಹಚ್ಚಬಹುದು .

ದೀಪ ಹಚ್ಚುವ ಸ್ಥಳ.
ಸ್ಥಂಭೇ ಚ ಶಿಖರೇ ದೀಪಾಃ ಪ್ರಾಂಗಣೆ ಚತ್ವರೇ ತಥಾ |
ವೃಂದಾವನೇ ಧರ್ಮಶಾಲಾವ್ಯಾಖ್ಯಾಧ್ಯಯನಸದ್ಮನಿ ||

ಮನೆಯ ದ್ವಾರಗಳಲ್ಲಿ, ದೇವರ ಮನೆ, ದೇವಾಲಯ,ಕಂಭಗಳು, ದೇವಾಲಯದ ಶಿಖರ, ಮನೆಯ ಅಂಗಳ, ಚೌಕಗಳು, ತುಲಸೀ ವೃಂದಾವನ,ಪುರಾಣ ಪ್ರವಚನ ನಡೆಯುವ ಸ್ಥಳ, ಗೋಹಟ್ಟಿ, ವೇದಾಧ್ಯಯನ ನಡೆಯುವ ಸ್ಥಳ, ಅಶ್ವತ್ಥವನ, ಧಾತ್ರೀ(ನೆಲ್ಲಿ)ವನ, ಮಠಗಳಲ್ಲೀಯೂ ದೀಪಗಳ ನೀಡಬಹುದು. ಈ ಸ್ಥಳಗಳಲ್ಲಿ ಲಕ್ಷ್ಮಿದೇವಿವಾಸವಾಗಿರುತ್ತಾಳೆ.

  ಏಕಾದಶಿಗಳ ಹೆಸರುಗಳು ಮತ್ತು ಫಲ

ದೀಪದ ಬತ್ತಿಯು ಐದು ವಿಧವೆಂದು ಹೇಳಿದ್ದಾರೆ :

ಪದ್ಮಸೂತ್ರಭವಾದರ್ಭಗರ್ಭಸೂತ್ರಸಮುದ್ಭವಾ | ಶಾಣಜಾ ಬಾದರೀ ವಾಪೀ ಫಲಕೊಶೋದ್ಭವಾಥವಾ ವರ್ತಿಕಾ ದೀಪಕೃತ್ಯೇಷು ಸದಾ ಪಂಚವಿಧಾ ಸೃತಾ ||

ಪದ್ಮಸೂತ್ರದಬತ್ತಿ ,ದರ್ಭಸೂತ್ರಬತ್ತಿ , ಸೆಣಬಿನ ಸೂತ್ರಬತ್ತಿ, ತೆಂಗು ಮೊದಲಾದ ಕಾಯಿಯ ಸಿಪ್ಪೆಯ ಬತ್ತಿ ಮತ್ತು ಹತ್ತಿ ಕಾಯಿಯ ಬತ್ತಿ ಹೀಗೆ ಇವುಗಳನ್ನು ಬಳಸಿ ದೀಪ ಹಚ್ಚ ಬಹುದು.

ಯಾವ ಬತ್ತಿಯಿಂದ ಯಾವ ಫಲ ಪ್ರಾಪ್ತಿಯಾಗುತ್ತದೆ.

ಪಾದ್ಮೇನ ಜ್ವಲಿತಾ ದೀಪ್ತಿಃ ಸಾರ್ವಭೌಮಪ್ರದಾಯಿನೀ।
ಸರ್ವಷ್ಟದಾಯಿನೀ ನಿತ್ಯಂ ಸರ್ವಾಭೀಷ್ಟಾರ್ಥಸಿದ್ದಿದಾ||
ಕ್ಷೌಮೇಣ ಜ್ವಲಿತಾ ದೀಪ್ತಿಃ ಷಡೂರ್ಮಿ ಪರಿಹಾರಿಣೀ|
ನಿತ್ಯಯೌವನದಾತ್ರೀ ಸ್ಯಾತ್ ಸರ್ವಾಭೀಷ್ಟಪ್ರದಾಯಿನೀ||
ದಶಾ ನಿರ್ಮಿತಯಾ ವರ್ತ್ಯಾ ಜ್ವಲಿತಾ ದೀಪಿಕಾ ಪರಾ|
ಭವೇತ್ಪಾ ಪಕ್ಷಯಸ್ತಸ್ಯ ಜ್ಞಾನಸೌಭಾಗ್ಯ ಸಂಪದಃ||
ಕಾರ್ಪಾಸ ವರ್ತಿದೀಪೇನ ಪುಣ್ಯಂ ಪಾಪಕ್ಷಯೋ ಭವೇತ್|
ಏತಾನ್ಸಂಭೂಯ ಯೋ ಮಹ್ಯಂ ದೀಪಂ ಯಚ್ಛತಿ ಮಾನವಃ|
ಮದ್ಭಕ್ತಿಫಲಭಾಕ್ ನಿತ್ಯಂ ಸೋ$ಶ್ವಮೇಧಫಲಂ ಲಭೇತ್||

ತಾವರೆ ದಂಟಿನ ನಾರಿನಿಂದ ಬತ್ತಿ ಮಾಡಿ ಉರಿಸಿದರೆ ಸಾರ್ವಭೌಮತ್ವ ಪ್ರಾಪ್ತಿ, ಸಕಲ ಇಷ್ಟಾರ್ಥ ಪ್ರಾಪ್ತಿ.
ಅಗಸೆ ನಾರಿನ ಬತ್ತಿಯ ದೀಪದಿಂದ ಹಸಿವೆ,ನೀರಡಿಕೆ,ಮುಪ್ಪು,ಮೃತ್ಯು,ಶೋಕ,ಮೋಹ ಎಂಬ ಆರು ಧರ್ಮದಿಂದ ಪರಿಹಾರ ಸಿಗುವುದರ ಜೊತೆ ನಿತ್ಯದಲ್ಲೂ ಯೌವ್ವನ ಪ್ರಾಪ್ತಿ.
ನಾರಿನ ಬತ್ತಿಯಿಂದ ಪಾಪ ನಾಶ ಆಗುತ್ತದೆ ಜ್ಞಾನ ಸಿಗುತ್ತದೆ.
ಹತ್ತಿ ಬತ್ತಿಯಿಂದ ಪಾಪ ನಾಶ ಪುಣ್ಯ ಪ್ರಾಪ್ತಿ ಆಗುತ್ತದೆ.

ಇಷ್ಟೊಂದು ಮಹತ್ವವನ್ನು ಹೊಂದಿರುವ ದೀಪವನ್ನು ರಾತ್ರಿಯ ವೇಳೆ ಹಚ್ಚಿಡ ಬಾರದು ಎನ್ನುವುದು ಎಷ್ಟು ಉಚಿತ….? ಸಾಧ್ಯವಿದ್ದರೆ 24 ಗಂಟೆಯೂ ಹಚ್ಚಿಡಿ. ಸಾಧ್ಯ ಆಗದಿದ್ದರೆ ಎಸ್ಟು ಸಾಧ್ಯವೋ ಅಷ್ಟು ಕಾಲ ದೀಪವನ್ನು ಹಚ್ಚಿ…

ಸರ್ವೇ ಜನಾಃ ಸುಖಿನೋ ಭವಂತು

Leave a Reply

Your email address will not be published. Required fields are marked *

Translate »