ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸಾತ್ವಿಕ ಗುಣ ಹೊಂದಿರುವ ರಾಶಿ ಮತ್ತು ಗ್ರಹಗಳು

ಪ್ರತಿಯೊಂದು ಜೀವಿಯಲ್ಲೂ / ಪ್ರತಿಯೊಬ್ಬ ಮನುಷ್ಯನಲ್ಲೂ ಮೂರು ರೀತಿಯ ಗುಣಗಳು ಇರುತ್ತವೆ.

ಆ ಗುಣಗಳೇ – ಸಾತ್ವಿಕ ಗುಣ , ರಾಜಸಿಕ ಗುಣ ಮತ್ತು ತಾಮಸಿಕ ಗುಣ.

ನವಗ್ರಹಗಳಲ್ಲಿ ಕೂಡ ಈ ಮೂರು ರೀತಿಯ ಗುಣಗಳು (ಅಂದರೆ ಸಾತ್ವಿಕ ಗುಣ, ರಾಜಸಿಕ ಗುಣ ಮತ್ತು ತಾಮಸಿಕ ಗುಣ) ಹೊಂದಿರುವ ಗ್ರಹಗಳು ಇವೆ.

ಆಯಾ ಗ್ರಹಗಳು ಹೊಂದಿರುವ ಗುಣ ಸ್ವಭಾವಕ್ಕೆ ಅನುಗುಣವಾಗಿ – ಆಯಾ ನಿರ್ದಿಷ್ಟ ಗ್ರಹಗಳನ್ನು ಸಾತ್ವಿಕ ಗ್ರಹಗಳು, ರಾಜಸಿಕ ಗ್ರಹಗಳು ಮತ್ತು ತಾಮಸಿಕ ಗ್ರಹಗಳು ಎಂಬುದಾಗಿ ಜ್ಯೋತಿಷ್ಯ ಮಹರ್ಷಿಗಳು ವಿಂಗಡಣೆ ಮಾಡಿದ್ದಾರೆ.

ಬುಧ ಮತ್ತು ಗುರು ಗ್ರಹಗಳನ್ನು ಸಾತ್ವಿಕ ಗ್ರಹಗಳು ಎಂಬುದಾಗಿ ಮಹರ್ಷಿಗಳು ಹೇಳಿದ್ದಾರೆ.

ಗುರು ಗ್ರಹವನ್ನು ಅತಿ ಹೆಚ್ಚು ಸಾತ್ವಿಕ ಗುಣ ಹೊಂದಿರುವ ಗ್ರಹ (first grade / high grade satwik planet) ಎಂಬುದಾಗಿ ಜ್ಯೋತಿಷ್ಯ ಮಹರ್ಷಿಗಳು ಹೇಳಿದ್ದಾರೆ.

  ಬೆಳಗ್ಗಿನ ಸಮಯದಲ್ಲಿ ಏಕೆ ಸ್ನಾನ ಮಾಡಬೇಕು ?

ಇದೇ ರೀತಿ ಬುಧ ಗ್ರಹವನ್ನು ಸಾಧಾರಣವಾದ ಸಾತ್ವಿಕ ಗುಣ ಹೊಂದಿರುವ ಗ್ರಹ (second grade / normal grade satwik planet) ಎಂಬುದಾಗಿ ಜ್ಯೋತಿಷ್ಯ ಮಹರ್ಷಿಗಳು ಹೇಳಿದ್ದಾರೆ.

ಭಚಕ್ರದ ನಾಲ್ಕು ಮೂಲೆ ರಾಶಿಗಳು (4 Corner Houses of the Zodiac) – ಮಿಥುನ ಕನ್ಯಾ ಧನಸ್ಸು ಮತ್ತು ಮೀನ ರಾಶಿಗಳು ಆಗಿವೆ.

ಈ ನಾಲ್ಕು ರಾಶಿಗಳನ್ನು ಸಾತ್ವಿಕ ರಾಶಿಗಳು / ಅಥವಾ ಸಾತ್ವಿಕ ಗುಣ ಹೊಂದಿರುವ ರಾಶಿಗಳು ಎಂಬುದಾಗಿ ಜ್ಯೋತಿಷ್ಯ ಮಹರ್ಷಿಗಳು ಹೇಳಿದ್ದಾರೆ.

ಈ ನಾಲ್ಕು ಸಾತ್ವಿಕ ರಾಶಿಗಳನ್ನು ತಲಾ ಎರಡು ರಾಶಿಗಳಂತೆ ಈ ಎರಡು ಸಾತ್ವಿಕ ಗ್ರಹಗಳಿಗೆ ಹಂಚಲಾಗಿದೆ.

ಮಿಥುನ ಮತ್ತು ಕನ್ಯಾ ರಾಶಿಗಳನ್ನು ಬುಧ ಗ್ರಹದ ಆಧಿಪತ್ಯಕ್ಕೆ ನೀಡಲಾಗಿದೆ.

ಇದೇ ರೀತಿ ಧನಸ್ಸು ಮತ್ತು ಮೀನ ರಾಶಿಗಳನ್ನು ಗುರು ಗ್ರಹದ ಆಧಿಪತ್ಯಕ್ಕೆ ನೀಡಲಾಗಿದೆ.

  ಆರತಿಯನ್ನು ತೆಗೆದುಕೊಳ್ಳುವಾಗ ನಾವು ಆರತಿ ತಟ್ಟೆಗೆ ಹಣವನ್ನೇಕೆ ಹಾಕಬೇಕು

ಆಧಿಪತ್ಯ ಎಂದರೆ ಆಯಾ ರಾಶಿಗಳನ್ನು ಆಳುವ ಗ್ರಹಗಳು (Lord of the Houses) ಎಂದು ಅರ್ಥ.

ಸಾತ್ವಿಕ ಗುಣ ಹೊಂದಿರುವ ಗ್ರಹಗಳು – ಪ್ರಧಾನವಾಗಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಗ್ರಹಗಳು (their main character is to solve the problems and give suggestions and remedies to the problems) ಆಗಿವೆ.

ಬುಧ ಗ್ರಹವು – ಯಾವುದೇ ಸಮಸ್ಯೆಗೆ ತಾತ್ಕಾಲಿಕ ಪರಿಹಾರ (temporary remedy / temporary solution for any problem) ಸೂಚಿಸುತ್ತದೆ.

ಇದೇ ರೀತಿ ಗುರು ಗ್ರಹವು ಯಾವುದೇ ಸಮಸ್ಯೆಗೆ ಶಾಶ್ವತವಾದ ಪರಿಹಾರ (permanent remedy / permanent solution for any problem) ಸೂಚಿಸುತ್ತದೆ.

ಜಾತಕದಲ್ಲಿ ಬುಧ ಗ್ರಹದ ಶುಭ ಪ್ರಭಾವ (good influence of the Planet Mercury) ಹೊಂದಿರುವವರು – ತಮ್ಮ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ (temporary Solution for their problems) ಕಂಡು ಕೊಳ್ಳಬೇಕು.

  ಲಕ್ಷ್ಮಿ ಯಾರ ಮನೆಯಲ್ಲಿ ನೆಲೆಸುತ್ತಾಳೆ ?

ಇದೇ ರೀತಿ ಜಾತಕದಲ್ಲಿ ಗುರು ಗ್ರಹದ ಶುಭ ಪ್ರಭಾವ (Good influence of the Planet Jupiter) ಹೊಂದಿರುವವರು – ತಮ್ಮ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ (Permanent Solution for their problems) ಕಂಡು ಕೊಳ್ಳಬೇಕು.

ನಮಸ್ಕಾರ .🙏
ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ

Leave a Reply

Your email address will not be published. Required fields are marked *

Translate »