ರಾಜಸಿಕ ಗ್ರಹಗಳು .
ಶುಕ್ರ ಮತ್ತು ಚಂದ್ರರು ರಾಜಸಿಕ ಗ್ರಹಗಳು. ಸ್ತ್ರೀ ತತ್ವ ಗುಣ ಹೊಂದಿರುವ ಗ್ರಹಗಳು. ಸೌಂದರ್ಯ ಸೂಚಿಸುವ ಗ್ರಹಗಳು.
ರಾಜಸಿಕ ಗ್ರಹಗಳು ಲೌಕಿಕ ಜೀವನದಲ್ಲಿ ಹೆಚ್ಚು ಆಸೆಯನ್ನು ಮೂಡಿಸುತ್ತವೆ.
ಹಾಗಾಗಿ ಈ ಎರಡು ಗ್ರಹಗಳ ಶುಭ ಪ್ರಭಾವ ಹೊಂದಿರುವವರು ಸೌಂದರ್ಯವಂತರು. ಬಟ್ಟೆ ಒಡವೆ ಅಲಂಕಾರ ಮುಖಕ್ಕೆ ಶೃಂಗಾರ ರುಚಿಯಾದ ಆಹಾರ ಸೇವನೆ ಹೊಸ ಬಟ್ಟೆ ಖರೀದಿಸುವಿಕೆ ಇವುಗಳಲ್ಲಿ ಹೆಚ್ಚು ಆಸಕ್ತಿ ತೋರುವರು. ಇವುಗಳಲ್ಲಿ ಹೆಚ್ಚು ಆಸೆ ಹೊಂದಿರುವವರು. ಯಾವಾಗಲೂ ಶುಚಿಯಾಗಿ ಇರುವರು. ಒಳ್ಳೆಯ ಬಟ್ಟೆ ಶುಚಿಯಾದ ಬಟ್ಟೆ ಹೊಸ ಬಟ್ಟೆ ಉಡುವರು. ಮತ್ತು ಈ ಎಲ್ಲಾ ವಿಚಾರಗಳಿಗಾಗಿ ಹೆಚ್ಚು ಹಣ ಖರ್ಚು ಮಾಡುವರು.
ಇಂತಹವರುಗಳು ಸಾಂಸಾರಿಕ ಜೀವನದಲ್ಲಿ ಹೆಚ್ಚು ಆಸಕ್ತಿ ವಹಿಸುವರು. ಮಕ್ಕಳ ಪಾಲನೆಯನ್ನು ಚೆನ್ನಾಗಿ ನಿರ್ವಹಿಸುವರು. ಗೃಹ ಧರ್ಮ ಪಾಲಿಸುವರು. ಮನೆ ಮತ್ತು ಸಂಸಾರವನ್ನು ಚೆನ್ನಾಗಿ ನಿಭಾಯಿಸುವರು.
ಮನೆಯಲ್ಲಿ ಹೆಣ್ಣು ಮಗಳು, ಗಂಡನ ಮನೆಯಲ್ಲಿ ಹೆಂಡತಿ ಮತ್ತು ತಾಯಿಯಾಗಿ ಚೆನ್ನಾಗಿ ಪಾತ್ರ ನಿರ್ವಹಿಸುವರು.
ತಮ್ಮ ಸಂಗಾತಿ ಯಾವಾಗಲೂ ಜೊತೆಯಲ್ಲಿ ಇರಬೇಕು ಎಂದು ಬಯಸುವವರು. ರುಚಿಯಾದ ಅಡುಗೆ ಮಾಡುವುದರಲ್ಲಿ ಆಸಕ್ತಿ ವಹಿಸುವರು. ಅದೇ ರೀತಿ ರುಚಿಯಾದ ಆಹಾರ ಸೇವನೆ ಮಾಡುವರು.
ಮದುವೆ ಗೃಹ ಪ್ರವೇಶ ಮುಂತಾದ ಶುಭ ಸಮಾರಂಭಗಳಲ್ಲಿ ಇಂತಹವರುಗಳು ಎದ್ದು ಕಾಣುವರು ಹಾಗೂ ಎಲ್ಲರ ಗಮನ ಸೆಳೆಯುವರು.
ಈ ಎರಡು ಗ್ರಹಗಳ ಶುಭ ಪ್ರಭಾವ ಹೊಂದಿರುವ ಜಾತಕರು ತಮ್ಮ ಮುಖದಲ್ಲಿ ಸದಾ ನಗು ಮತ್ತು ಕಳೆಯನ್ನು ಹೊಂದಿರುವವರು. ಯಾವಾಗಲೂ ಹಸನ್ಮುಖಿಯಾಗಿ ಇರುವರು.
ದಾಂಪತ್ಯ ಜೀವನದಲ್ಲಿ ಇವರುಗಳು ತಮ್ಮ ಸಂಗಾತಿಗೆ ಹೆಚ್ಚು ಪ್ರೀತಿ ಹಾಗೂ ಒಲವು ತೋರುವರು.
ಪೂಜೆಯ ವಿಚಾರಕ್ಕೆ ಬಂದರೆ ಇಂತಹವರು ಸೌಂದರ್ಯ ದೇವತೆಗಳನ್ನು ಹೆಚ್ಚು ಪೂಜಿಸುವರು. ಈ ಎರಡು ಗ್ರಹಗಳ ಶುಭ ಪ್ರಭಾವ ಹೊಂದಿರುವವರಿಗೆ ಲಕ್ಷ್ಮಿ ಬೇಗನೆ ಒಲಿಯುವಳು. ಇಂತಹವರುಗಳಿಗೆ ಲಕ್ಷ್ಮಿ ಕೃಪಾಕಟಾಕ್ಷ ಬೇಗನೆ ಆಗುವುದು.