ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಲೈಫಲ್ಲಿ ಗೆಲ್ಲಬೇಕು ಅನ್ನೋರು ಇದನ್ನ ಮಿಸ್ ಮಾಡದೇ ಓದಬೇಕು..!

ಲೈಫಲ್ಲಿ ಗೆಲ್ಲಬೇಕು ಅನ್ನೋರು ಇದನ್ನ ಮಿಸ್ ಮಾಡದೇ ಓದಬೇಕು..!

ವ್ಯಕ್ತಿತ್ವ ವಿಕಸನ ಕೌಶಲ್ಯಗಳು
(Personality Development Skills)
➡️ ಸೋಲು.. ಯಾರಿಗಾಗಿಲ್ಲ..? ಎಷ್ಟು ಜನ ಎದುರಿಸಿಲ್ಲ..? ಸೋಲದೇ ಇದ್ದವನು ಗೆದ್ದ ಉದಾಹರಣೇನೇ ಇಲ್ಲ..! ಇವತ್ತು ಇಡೀ ಪ್ರಪಂಚದಲ್ಲೇ ವೇಗವಾಗಿ ಓಡೋನು ಅನುಸ್ಕೊಂಡಿರೋ ಉಸೇನ್ ಬೋಲ್ಟ್ ಸಹ, ಸೋತು, ಬಿದ್ದು ಎದ್ದು ಈಗ ಗೆಲ್ತಾ ಇರೋದು.. ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..! ತುಂಬಾ ಸೋತವನನ್ನು ಕೇಳಿನೋಡಿ, ಇನ್ನಾಗಲ್ಲ ನಾನು ಸೋತು ಸುಣ್ಣ ಆಗ್ಬಿಟ್ಟಿದೀನಿ.. ಏನ್ ಮಾಡುದ್ರೂ ಕೈ ಹತ್ತುತಿಲ್ಲ.. ಏನ್ ಮಾಡ್ಬೇಕೋ ಗೊತ್ತಾಗ್ತಿಲ್ಲ ಅಂತ ಹೇಳ್ತಾರೆ.! ಅದೇ ಗೆದ್ದವರನ್ನು ಮಾತಾಡ್ಸಿ ನೋಡಿ. ಸೋತವನಿಗಿಂತ ಜಾಸ್ತಿ ಸಲ ಅವರೂ ಸೋತಿರ್ತಾರೆ..! ಆದ್ರೆ ಗೆಲ್ಲೋ ತನಕ ಸೋತಿದ್ದರ ಬಗ್ಗೆ ಚಿಂತೆ ಮಾಡಲ್ಲ ಅಂತ ಡಿಸೈಡ್ ಮಾಡಿರ್ತಾರೆ..! ಹಾಗಾಗಿ ಅವರು ಅಂತ ಸೋಲನ್ನು ಮೀರಿ ಗೆದ್ದಿರ್ತಾರೆ..!

➡️ಯಾವಾಗ ಸೋತು ಸೋತು ಗೆಲ್ಲಬೇಕು ಅನ್ನೋ ಹಠ ಶುರುವಾಗುತ್ತೋ ಅವಾಗ್ಲೆ ಗೆಲ್ಲೋಕೆ ಸಾಧ್ಯ..! ಯಾವಾಗ ಗೆಲ್ಲೋ ಹಠ ಜಾಸ್ತಿಯಾಗಿ ಗೆದ್ದುಬಿಡ್ತೀರೋ, ಆಮೇಲೆ ಗೆಲ್ಲೋದು ನಿಮಗೆ ಚಟ ಆಗೋಗುತ್ತೆ..! ಅದೊಂದೇ ಚಟ, ಜೀವನದ ಅತ್ಯಂತ ಒಳ್ಳೇ ಚಟ… ಜೀವನದಲ್ಲಿ ನಿಮ್ಮನ್ನು ಎತ್ತರೆತ್ತರಕ್ಕೆ ಕರ್ಕೊಂಡೋಗಿ ಬಿಡೋ ಚಟ..! ಆ ಚಟ ನಿಮಗೆ ಅಭ್ಯಾಸ ಆಗೋ ತನಕ ತಿರುಗಿ ನೋಡದೇ ನುಗ್ತಾ ಇದ್ರೆ, ಯಾವ ಸೋಲೂ ನಿಮ್ಮನ್ನು ಏನೂ ಮಾಡಕ್ಕಾಗಲ್ಲ..!
➡️ಜೀವನ ಹೆಂಗಿರುತ್ತೆ ಗೊತ್ತಾ..? ಎಂತವರನ್ನೆ ಕೇಳಿ ನೋಡಿ, ಸಾಕಾಗಿದೆ ಅನ್ನೋ ಉತ್ತರ ಕೊಡ್ತಾರೆ.. ಅವನು ರಸ್ತೇಲಿ ಭಿಕ್ಷೆ ಬೇಡೋನಾದ್ರೂ ಅಷ್ಟೆ, ಆಡಿ ಕಾರಲ್ಲಿ ಜುಮ್ ಅಂತ ಹೋಗೋನಾದ್ರೂ ಅಷ್ಟೆ..! ಅವರವರಿಗೆ ಅವರವರ ಸಮಸ್ಯೆಗಳು.. ಹಂಗಂತ ಸಮಸ್ಯೆಗಳನ್ನ ತಲೆ ಮೇಲೆ ಹೊತ್ಕೊಂಡು ಕೂತ್ರೆ ಸಮಸ್ಯೆ ಕಮ್ಮಿ ಆಗೋದೇ ಇಲ್ಲ..! ಸಮಸ್ಯೆ ಬರೋಕೆ ಮುಂಚೇನೇ ಅದನ್ನ ಹೆದರಿಸಿ ಓಡ್ಸೋ ಪ್ರಯತ್ನ ಮಾಡಬೇಕು. ಸಾಧ್ಯ ಆಗಲೇ ಇಲ್ಲ, ಸಮಸ್ಯೆ ಆಗೇ ಹೋಯ್ತು ಅಂದಾಗ ಅದನ್ನು ಎದುರಿಸೋ ತಾಕತ್ತು ಇರಬೇಕು.. ಐಸ್ ಕ್ರೀಮ್ ತಿನ್ನಬೇಕಾದ್ರೆ ಎಂಜಾಯ್ ಮಾಡ್ಕೊಂಡು ತಿನ್ನೋರು ಶೀತ ಆದ್ರೆ ಮಾತ್ರೆ ತಿನ್ನೋಕೂ ರೆಡಿ ಇರಬೇಕು..! ಬರೀ ಐಸ್ ಕ್ರೀಂ ಬೇಕು, ಶೀತ ಬೇಡ ಅಂದ್ರೆ ಆಗಲ್ಲ.. ಹಾಗೇನೇ, ಬರೀ ಗೆಲುವೇ ಬೇಕು, ಸೋಲು ಬರಲೇಬಾರದು ಅಂದ್ರೆ ಸಾಧ್ಯವೇ ಇಲ್ಲ..! ಇವತ್ತು ಗೆದ್ದವರೆಲ್ಲಾ ಸೋತು ಸೋತು ಸೋತು ಗೆದ್ದವರು..! ಗೆಲುವಿನ ಹಿಂದೆ ಸೋಲಿನ ಸರಮಾಲೆಗಳಿರುತ್ತೆ, ಸೋಲು ಅನ್ನೋದು ಶತೃವಿನ ಹಾಗೆ ಕಾಟ ಕೊಡುತ್ತೆ, ಸೋಲು ನಿಮ್ಮ ಸತ್ವ ಪರೀಕ್ಷೆ ಮಾಡುತ್ತೆ.. ಆದ್ರೆ ಅದನ್ನೆಲ್ಲಾ ಎದುರಿಸಿ, ಹೆದರಿಸಿ ನುಗ್ಗಿ ಗೆದ್ದು ಬಿಟ್ರೆ ಸೋಲು ನಿಮಗೇ ಶರಣಾಗಿ ಬಿಡುತ್ತೆ..!

  ತೆನಾಲಿ ರಾಮನಿಗೂ ಮರಣದಂಡನೆ

➡️ಸೋಲು ನಿಮ್ಮನ್ನು ಸೋಲಿಸುವ ಮುನ್ನ, ನೀವೇ ಸೋಲನ್ನು ಸೋಲಿಸಿಬಿಡಿ..!
ಜ್ಯಾಕ್ ಮಾ ಅಂತ ಒಂದು ಹೆಸರು ಕೇಳಿರಬೇಕು ನೀವು. ಅವರು ಚೀನಾದ ಅತ್ಯಂತ ಶ್ರೀಮಂತ..! ಆಲಿಬಾಬಾ ಡಾಟ್ ಕಾಮ್ ಸಂಸ್ಥೆಯ ಚೇರ್ಮನ್..! ಇವತ್ತು ಅವರ ಆಸ್ತಿ ಅದೆಷ್ಟೋ ಸಾವಿರ ಸಾವಿರ ಕೋಟಿ..! ಅವರು ಆ ಸಾವಿರ ಸಾವಿರ ಕೊಟಿ ಇವತ್ತು ಅನುಭವಿಸ್ತಿರಬಹುದು. ಆದ್ರೆ ಅದರ ಹಿಂದೆ ಸೋತಿದ್ದು ಎಷ್ಟು ಸಲ ಗೊತ್ತಾ.. ಲೆಕ್ಕವೇ ಇಲ್ಲದಷ್ಟು ಸಲ..! ನಿನ್ ಕೈಲಿ ಏನಾಗುತ್ತೆ ಹೋಗಲೆ ಅಂತ ಅವರನ್ನು ಕಾಲೆಳೆದವರು ಇವತ್ತು ಅವರದೇ ಆಫೀಸಲ್ಲಿ ಕೆಲಸ ಮಾಡ್ತಿದ್ದಾರೆ.. ಬರೀ 12 ಡಾಲರ್ ಸಂಬಳಕ್ಕೆ ಟೀಚರ್ ಕೆಲಸ ಮಾಡ್ತಿದ್ದವರು ಇವತ್ತು 15-20 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದಾರೆ.. ಪ್ರತಿಷ್ಟಿತ ಕೆ.ಎಫ್.ಸಿ ಸಂಸ್ಥೆ, ಅವರನ್ನು ಸರ್ವರ್ ಆಗಿಯೂ ಕೆಲಸಕ್ಕೆ ಸೇರಿಸಿಕೊಂಡಿರಲಿಲ್ಲ..! ಆದ್ರೆ ಇವತ್ತು ಆ ಸೋಲಿಗೆ ಹೆದರದೇ ಇದ್ದ ಕಾರಣಕ್ಕೆ ಎತ್ತರೆತ್ತಕ್ಕೆ ಏರಿದ್ದಾರೆ.. ಅವತ್ತು ಜ್ಯಾಕ್ ಮಾ ಜೊತೆ ಕೆ.ಎಫ್.ಸಿ ಗೆ 24 ಜನ ಕೆಲಸಕ್ಕೆ ಟ್ರೈ ಮಾಡಿದ್ರು. ನೀವು ನಂಬ್ತಿರೋ ಬಿಡ್ತಿರೋ, ಆ 23 ಜನಾನೂ ಸೆಲೆಕ್ಟ್ ಆಗಿದ್ರು. ಆದ್ರೆ ಜಾಕ್ ಮಾ ಆಗಿರಲಿಲ್ಲ..! ಅಯ್ಯೋ ನಾನು ಸೋತುಬಿಟ್ಟೆ ಅಂತ ಅವರೇನಾದ್ರೂ ಅನ್ಕೊಂಡಿದ್ದಿದ್ರೆ ಇವತ್ತು ಅಲಿಬಾಬಾ ಡಾಟ್ ಕಾಮ್ ಎಲ್ಲಿರ್ತಿತ್ತು..?

➡️ಗೆದ್ದಾಗ ಹೆಂಗೆ ಗೆಲ್ಲಬೇಕು ಅನ್ನೋದು ಗೊತ್ತಾದ್ರೆ, ಸೋತಾಗ ಇನ್ನು ಮುಂದೆ ಹೇಗೆ ಸೋಲಬಾರದು ಅನ್ನೋದು ಗೊತ್ತಗುತ್ತೆ..! ಸೋ ಸೋಲು ಅಂದ್ರೆ ಗೆಲ್ಲೋ ರೋಡಿನ ಹಂಪ್ ಗುಂಡಿ ಅಷ್ಟೆ..! ಅಯ್ಯೋ ಹೆಂಗಪ್ಪಾ ಈ ಗುಂಡಿ ದಾಟೋದು, ಹೆಂಗಪ್ಪಾ ಹಂಪ್ ಎಗರಿಸೋದು ಅಂತ ಯೋಚನೆ ಮಾಡ್ತಾ ಕೂತ್ರೆ ನಾವು ಯಾವತ್ತೂ ಗುರಿ ಮುಟ್ಟೋಕೆ ಸಾಧ್ಯಾನೇ ಆಗಲ್ಲ..!
➡️ಕೆಲವರು ಏನೋ ಮಾಡ್ಬೇಕು ಅಂತ ಹೋಗ್ತಾರೆ, ಆದ್ರೆ ಕೈ ಸುಟ್ಟುಕೊಂಡು ಸುಮ್ಮನಾಗಿಬಿಡ್ತಾರೆ.. ಒಂದು ಇಡ್ಲಿ ಅಂಗಡಿ ಓಪನ್ ಮಾಡೋನು ಮೊದಲ ದಿನವೇ 1000 ಇಡ್ಲಿ ಸೇಲ್ ಆಗಬೇಕು ಅಂತ ಯೋಚನೆ ಮಾಡೋದ್ರಲ್ಲಿ ತಪ್ಪಿಲ್ಲ..! ಆದ್ರೆ ಆಗಿಲ್ಲ ಅಂತ ಮಾರನೇ ದಿನವೇ ಅಂಗಡಿ ಮುಚ್ಚಿದ್ರೆ ಹೇಗೆ..? ಇವತ್ತು ಇಡ್ಲಿ ತಿಂದ ಹತ್ತಾರು ಜನ ನಾಳೆ ನೂರಾರು ಜನರಿಗೆ ಹೇಳಬೇಕು. ಅವರು ನಿಮ್ಮ ಹೋಟೆಲ್ ಹುಡುಕಿ ಬರಬೇಕು.. ಅವರಿಗೆ ನೀವು ಕೊಟ್ಟ ಇಡ್ಲಿ ಇಷ್ಟ ಆಗಬೇಕು. ಮತ್ತೆ ಅವರು ಮತ್ತಷ್ಟು ಜನರಿಗೆ ಹೇಳಬೇಕು.. ಹೀಗೆ ಮಾಡಿದಾಗ ಮಾತ್ರ ಸಾವಿರ ಇಡ್ಲಿ ಮಾರಬೇಕು ಅನ್ಕೊಂಡೋರು ಎರಡು ಸಾವಿರ ಇಡ್ಲಿ ಮಾರೋಕೆ ಸಾಧ್ಯ..! ಮೊದಲ ದಿನ ಅನ್ಕೊಂಡಷ್ಟು ಆಗದೇ ಇರಬಹುದು, ಆದ್ರೆ ಮುಂದೊಂದು ದಿನ ಅನ್ಕೊಂಡಿದ್ದಕ್ಕಿಂತ ಜಾಸ್ತಿ ಆಗುತ್ತೆ..! ಅಲ್ಲಿ ತನಕ ಕಾಯೋ ತಾಳ್ಮೆ ಇರಬೇಕು.

  ನಮ್ಮ ಭಾರತ ದೇಶದ ಸಂಪೂರ್ಣ ಮಾಹಿತಿ

➡️ ಫಸ್ಟ್ ಡೇ ಆಗಿಲ್ಲ ಅಂದಮಾತ್ರಕ್ಕೆ ಅದು ಸೋಲಲ್ಲ..! ಹಂಗೇನಾದ್ರೂ ರೆಡ್ ಬಸ್ ಡಾಟ್ ಇನ್ ಶುರು ಮಾಡಿದವರು ಆರಂಭದಲ್ಲಿ ಸೋತಾಗ ಹೆದರಿದ್ರೆ ಇವತ್ತು ಆ ಕಂಪನಿ ಎಲ್ಲಿರ್ತಿತ್ತು..? ಇವತ್ತು ನಾವು ಎಲ್ಲಿಗೇ ಹೋಗ್ಬೇಕು ಅಂದ್ರೆ ಬಸ್ ಟಿಕೆಟ್ ಬುಕ್ ಮಾಡೋಕೆ ರೆಡ್ ಬಸ್ ಡಾಟ್ ಕಾಮ್ ನೋಡ್ತೀವಿ. ಆದ್ರೆ ಅವತ್ತು ಇದೇ ರೆಡ್ ಬಸ್ ಕಂಪನಿ ಕಟ್ಟೋಕೆ ಅವರು ಅದೆಷ್ಟು ಒದ್ದಾಡಿದ್ರು ಗೊತ್ತಾ..? ಊಟ ತಿಂಡಿ ಬಿಟ್ಟು, ಇರೋ ದುಡ್ಡಲ್ಲಿ ಒದ್ದಾಡ್ಕೊಂಡು ಕಟ್ಟಿದ ಕಂಪನಿ ಇವತ್ತು ಮಿಲಿಯನ್ ಡಾಲರ್ ಕಂಪನಿ..! ಹಬ್ಬಕ್ಕೆ ಊರಿಗೆ ಹೋಗೋಕೆ ಬಸ್ ಟಿಕೆಟ್ ಸಿಗಲಿಲ್ಲ ಅನ್ನೋ ಕಾರಣಕ್ಕೆ ರಜದಲ್ಲಿ ಕೂತು ಅವರು ಡೆವಲಪ್ ಮಾಡಿದ ರೆಡ್ ಬಸ್ ಡಾಟ್ ಇನ್ ಆರಂಭದಲ್ಲಿ ಸೋತು ಸೋತು ಸತ್ತೇ ಹೋಗಬೇಕಿತ್ತು. ಆದ್ರೆ ಅದನ್ನು ಹುಟ್ಟುಹಾಕಿದ ಫಣೀಂದ್ರ ರೆಡ್ಡಿ ಸಮಾ, ಸುದಾಕರ್ ಪಸುಪುನುರಿ, ಚರಣ್ ಪದ್ಮರಾಜು ಆ ಸೋಲಿನ ಹೊಡೆತಕ್ಕೆ ಹೆದರಿಹೋಗ್ಲಿಲ್ಲ.. ಹೆಂಗಾದ್ರೂ ಗೆದ್ದೇ ಗೆಲ್ತೀನಿ ಅಂತ ಹಠಕ್ಕೆ ಬಿದ್ದರು ಅಷ್ಟೆ..! ಆರಂಭದಲ್ಲಿ ಇವರ ವೆಬ್ ಸೈಟ್ ಮೂಲಕ ನಿಮ್ಮ ಬಸ್ ಟಿಕೆಟ್ ಬುಕ್ ಮಾಡ್ಬೋದು ಅಂತ ಹೇಳಿದ್ರೆ ಬಸ್ ಏಜೆಂಟರು, ಬುಕಿಂಗ್ ಆಫೀಸಿನವರು ಬೈದು ಕಳಿಸೋರಂತೆ. ತಲೆ ತಿನಬೇಡ್ರಿ, ಹೋಗ್ರಪ್ಪ’ ಅಂತ..! ಆದ್ರೂ ಅವರು ನಾವು ಸೋಲ್ತೀವಿ ಅನ್ನೋ ಭಯಕ್ಕೆ ಬೀಳದೇ, ನಾವು ಗೆಲ್ಲಬೆಕು ಅನ್ನೋ ಚಟಕ್ಕೆ ಬಿದ್ರು..! ಆರಂಭದಲ್ಲಿ ಸೀಟು ಕೊಡದೇ ಇದ್ದವರು, ಇವರ ಕಾಟಕ್ಕೆ ಆಮೇಲಾಮೇಲೆ ಬಸ್ಸಿನ ಹಿಂದಿನ ಸೀಟುಗಳನ್ನು ಬುಕಿಂಗ್ ಗೆ ಕೊಟ್ರು.. ಆಮೇಲೆ ಅದರಲ್ಲಿನ ಬುಕಿಂಗ್ ನೋಡಿ ಮತ್ತಷ್ಟು ಸೀಟ್ ಕೊಟ್ರು.. ಇವತ್ತು ರೆಡ್ ಬಸ್ ಬೇಕು ಅಂದ್ರೆ ಸಪರೇಟ್ ಬಸ್ ಬಿಡೋಕೂ ಬಸ್ ಮಾಲೀಕರು ರೆಡಿ ಇರ್ತಾರೆ..! ಅವತ್ತು ಸೋತುಸೋತು ಸತ್ತುಹೋಗಬೇಕಾದವರು ಇವತ್ತು ಗೆದ್ದು ಬೀಗ್ತಾ ಇದ್ದಾರೆ.. ಅವತ್ತು ಒಂದು ಟಿಕೆಟ್ ಬುಕ್ ಆದ್ರೆ ಸಂಭ್ರಮಿಸ್ತಾ ಇದ್ದವರು, ಇವತ್ತು ದೇಶದ ಮೂಲೆಮೂಲೆಯಲ್ಲಿ ಲಕ್ಷಗಟ್ಟಲೇ ಟಿಕೆಟ್ ಬುಕ್ ಮಾಡಿ ಸಂಭ್ರಮಿಸ್ತಿದ್ದಾರೆ..! ಅವತ್ತು ಕೇವಲ ಬೆರಳೆಣಿಕೆಯ ಟಿಕೆಟ್ ಬುಕ್ ಆದಾಗಇದ್ಯಾಕೋ ಗೆಲ್ಲೋದು ಡೌಟು ‘ ಅನ್ನೋ ಸಣ್ಣ ಹುಳ ಏನಾದ್ರೂ ಅವರ ತಲೆ ಹೊಕ್ಕಿದ್ರೆ, ಇವತ್ತು ಅವರ ಕಂಪನಿಯನ್ನು 800 ಕೋಟಿ ರೂಪಾಯಿ ಕೊಟ್ಟು ಗೋ ಇಬಿಬೋ ತಗೋತಾ ಇರ್ಲಿಲ್ಲ..! ದಟ್ ಈಸ್ ಕಾಲ್ಡ್ ಎಫರ್ಟ್, ಅಂಡ್ ದಟ್ ಈಸ್ ಕಾಲ್ಡ್ ವಿನಿಂಗ್…!

  ಪೂರ್ವಜರ ಮಾತಿದು ಮರಿಬ್ಯಾಡ

ಕೃಪೆ: ವಾಟ್ಸ್ ಆ್ಯಪ್ ಗ್ರೂಪ್


Leave a Reply

Your email address will not be published. Required fields are marked *

Translate »