ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕೃಷ್ಣ ಸುಧಾಮ ನ ಅವಲಕ್ಕಿ ಹಿಂದಿನ ಕಥೆ

“ಏನು?ಈ ಮೂರು ಮುಷ್ಟಿಯಷ್ಟು ಮುಗ್ಗುಲು ಅವಲಕ್ಕಿಯನ್ನ ಒಯ್ಯುವುದಾ?ಇದನ್ನು ಉಡುಗೊರೆ ಎನ್ನಲಾದೀತೆ ಸುಶೀಲಾ?ಹಾಂ ನಾವು ದಟ್ಟ ದರಿದ್ರರಿದ್ದೇವೆ ಎಂಬುದನ್ನ ನಾನೂ ಒಪ್ಪುತ್ತೇನೆ…ಆದರೆ ಅವನು?ಅವನು ಒಂದು ಸಾಮ್ರಾಜ್ಯದ ರಾಜನಾಗಿದ್ದಾನೆ…ಯಾರಾದರೂ ರಾಜನಿಗೆ ಮುಗ್ಗು ಹಿಡಿದ ಮೂರು ಮುಷ್ಟಿ ಅವಲಕ್ಕಿಯನ್ನ ಒಯ್ದು ಇದು ನಿಮಗೆ ನಮ್ಮ ಉಡುಗೊರೆ ಅಂತ ಕೊಡಲಾದೀತೆ?”

ಗೆಳೆಯ ಶ್ರೀಕೃಷ್ಣನ ಭೆಟ್ಟಿಗೆ ದ್ವಾರಕೆಗೆ ಹೋಗಲು ತನ್ನ ಜೋಳಿಗೆಯನ್ನ ಹೆಗಲಿಗೆ ಹಾಕಿಕೊಂಡು ತಯಾರಾಗುತ್ತಿದ್ದ ಸುಧಾಮ,ಅವಲಕ್ಕಿಯ ಸಂಚಿಯನ್ನ ತಂದುಕೊಟ್ಟ ತನ್ನ ಹೆಂಡತಿಗೆ ಮೇಲಿನ ಮಾತನ್ನು ಹೇಳಿದ.

“ನೋಡಿ, ಉಡುಗೊರೆಯ ಸಂಬಂಧವು ಅದನ್ನು ಪಡೆಯುವವನ ಭಾಗ್ಯಕ್ಕಿಂತ,ಉಡುಗೊರೆ ನೀಡುವವನ ಭಾವನೆಯೊಂದಿಗೆ ಮಿಳಿತವಾಗಿರುತ್ತದೆ ನನ್ನೊಡೆಯಾ.ಅಲ್ಲದೇ ಒಬ್ಬ ಬಡ ಭಿಕ್ಷುಕ ಬ್ರಾಹ್ಮಣನ ಮನೆಯ ಮೂರು ಮುಷ್ಟಿ ಅವಲಕ್ಕಿಯ ಮೌಲ್ಯವನ್ನ ಶ್ರೀಕೃಷ್ಣ ಅರಿಯದಿದ್ದಲ್ಲಿ ಬೇರಾರು ಅರಿತಾರು?ನೀವು ನಿಶ್ಚಿಂತರಾಗಿ ಇದನ್ನು ತೆಗೆದುಕೊಂಡು ಹೋಗಿ ಬನ್ನಿ ನನ್ನ ಪ್ರಭು.”
ಸುಶೀಲಾ ಆ ಬ್ರಾಹ್ಮಣನ ಮನೆತನದ ಲಕ್ಷ್ಮಿಯಾಗಿರುವಳು.ತನ್ನ ಸೆರಗಿನಲ್ಲಿ ಆ ಮನೆತನದ ಸಮ್ಮಾನವನ್ನ ಕಟ್ಟಿಕೊಂಡು,ಅದಕ್ಕೆ ಯಾವುದೇ ಅಪಚಾರವಾಗದಂತೆ ನೋಡಿಕೊಳ್ಳುವ ದೇವತೆಯಾಗಿದ್ದವಳು.

  ಆಧ್ಯಾತ್ಮಿಕ ದೃಷ್ಟಿಯಿಂದ ಮದ್ಯ ಹಾನಿಕರ, ಹಣ್ಣಿನ ರಸ ಲಾಭದಾಯಕ ಏಕೆ ?

ಸುಶೀಲಾ ಇಷ್ಟೆಲ್ಲಾ ಹೇಳಿದರೂ ಸುಧಾಮನಲ್ಲಿಯ ಸಂಕೋಚ,ಹಿಂಜರಿಕೆ ಕಡಿಮೆಯಾಗಲಿಲ್ಲ.
ಹಾಗಾಗಿ ಹೆಂಡತಿಯ ಮಾತಿಗೆ ಆತ “ಅಲ್ಲ ಸುಶೀಲಾ ನಾವಂತೂ ಕಡು ಬಡವರಿದ್ದೇವೆ ಸರಿ.ಆದರೆ ಆತನೀಗ ರಾಜನಾಗಿದ್ದಾನೆ.ಆತನ ಪದವಿಯ ಪ್ರತಿಷ್ಠೆಯ ಬಗ್ಗೆಯಾದರೂ ನಾವು ಯೋಚಿಸಬೇಕಲ್ಲವೇ?ಹಾಗಾಗಿ ಈ ಅವಲಕ್ಕಿ ಎಲ್ಲಾ ಏನೂ ಬೇಡ.ನಾನು ಹಾಗೆಯೇ ಹೋಗಿ ಅವನನ್ನು ಭೇಟಿಯಾಗುವೆ.”

“ಗೆಳೆಯನನ್ನು ಸ್ಮರಿಸುವಾಗ ಆತನ ಅಂತಸ್ತು,ಐಶ್ವರ್ಯದ ಕುರಿತು ಯೋಚಿಸಿದರೆ ಆ ಗೆಳೆತನವು ಪಾವಿತ್ರ್ಯವನ್ನು ಕಳೆದುಕೊಂಡಂತೆ ನನ್ನೊಡೆಯಾ.ಆತ ದ್ವಾರಕಾಧೀಶನೆಂಬುದನ್ನ ಮರೆತು,ಆತ ಕೇವಲ ನಿಮ್ಮ ಬಾಲ್ಯದ ಗೆಳೆಯ.ಬಾಲ್ಯದಲ್ಲಿ ಗುರುಕುಲದಲ್ಲಿ ಸಹಪಾಠಿಯಾಗಿದ್ದಾಗ ನಿಮ್ಮೊಡನೆ ಆತನೂ ಭಿಕ್ಷಾಟನೆಗೆ ಬಂದದ್ದನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳಿ.”

“ಎಂತಹ ಮಾತನಾಡುತ್ತಿರುವೆ ದೇವಿ?ಅವು ನಮ್ಮ ಬಾಲ್ಯದ ದಿನಗಳು.ಈಗ ಸಮಯವು ಎಲ್ಲವನ್ನು ಬದಲಿಸಿದೆ.ಆಗ ಅವನು ಬೆಣ್ಣೆಕಳ್ಳನಾಗಿದ್ದ.ಈಗ?ಈಗ ಅವನು ವಿಶ್ವದ ಸರ್ವಶ್ರೇಷ್ಠ ಯೋಧನಾಗಿದ್ದಾನೆ.ಈ ಯುಗದ ಧರ್ಮ ಸಂಸ್ಥಾಪಕನಾಗಿದ್ದಾನೆ.”… ಸುಧಾಮನ ಪುರುಷ ಸಹಜವಾದ ಸಂಕೋಚವು ಅವಲಕ್ಕಿಯನ್ನ ಒಯ್ಯದಂತೆ ತಡೆಹಿಡಿಯುತ್ತಿತ್ತು.

” ಸಮಯ ಅನ್ನೋದು ನಮ್ಮಂತಹ ಸಾಮಾನ್ಯರನ್ನು ಬದಲಿಸುತ್ತದೇ ವಿನಾ ಶ್ರೀಕೃಷ್ಣನಂತಹ ಮಹಾನಾಯಕನನ್ನಲ್ಲ ಸ್ವಾಮಿ.ಆತ ಒಂದೇ ಶರೀರದಲ್ಲಿ ಅನೇಕ ರೂಪಗಳ ಧರಿಸುವಂತಹ ಶಕ್ತಿಯುಳ್ಳವನಾಗಿದ್ದಾನೆ.ಆತ ಯಾರ ಮುಂದೆ ಯಾವ ರೂಪದಲ್ಲಿ ಪ್ರಕಟವಾಗುತ್ತಾನೊ,ಅವರ ಮುಂದೆ ಯಾವಾಗಲೂ ಅದೇ ರೂಪದಲ್ಲಿ ಪ್ರಕಟವಾಗುತ್ತಾನೆ..ನೀವೇ ಹೇಳಿ.ರಾಧೆಗೆ ಮುರಳಿ ಮೋಹನ ಈಗ ನಿನ್ನ ಪ್ರೇಮಿಯಲ್ಲ,ಈಗ ಅವನೊಬ್ಬ ಯೋಧ ಅಂತ ಹೇಳಿದರೆ ಆಕೆ ಆ ಮಾತನ್ನ ಒಪ್ಪುವಳಾ?ಇಲ್ಲ.
ನಂದನಿಗೆ ಈಗ ನಿನ್ನ ಮಗ ತುಂಟ ಕನ್ಹಯ್ಯನಲ್ಲ.ಈಗವನು ಇಡೀ ವಿಶ್ವದ ತಂದೆ ಅಂತ ಹೇಳಿದರೆ ಒಪ್ಪುವನೆ?ಇಲ್ಲ.
ಆತ ಈಗ್ಯೂ ಬೃಂದಾವನದ ಗೋಪಿಕೆಯರ ದೃಷ್ಟಿಯಲ್ಲಿ ಬೆಣ್ಣೆಕಳ್ಳನೇ ಹೌದು.ಹಾಗೆಯೇ ನಂದ-ಯಶೋದೆಯರಿಗೆ ತುಂಟ ಬಾಲಕೃಷ್ಣನೇ ಹೌದು.ರಾಧೆಗೇ ಈಗಲೂ ಆತ ಪ್ರಿಯ ಸಖನಾಗಿದ್ದಾನೆ.
ಆತ ಅರ್ಜುನನಿಗೆ ಏನಾಗಿರುವನೊ,ದ್ರೌಪತಿಗಾಗಿ ಅದಾಗದೇ ಬೇರೆಯಾಗಿರುವನು.ಗೋಕುಲದ ಕೃಷ್ಣನೇ ಬೇರೆ.ದ್ವಾರಕೆಯ ಕೃಷ್ಣನೇ ಬೇರೆ….
ಹಸ್ತಿನಾಪುರಕ್ಕಾಗಿ ಆತನದು ಒಂದು ರೂಪವಾದರೆ,ಮಗಧರಾಜ್ಯಕ್ಕೇ ಮತ್ತೊಂದು ರೂಪ!
ನೀವು ಹೋಗಿ ಆತನನ್ನ ಭೆಟ್ಟಿಯಾಗಿ.ಆತ ನಿಮಗೆ ಗುರುಕುಲದಲ್ಲಿಯ ನಿಮ್ಮ ಆತ್ಮೀಯ ಸಹಪಾಠಿಯಾಗಿ ಕಾಣದಿದ್ದಲ್ಲಿ ಆಗ ನನಗೆ ಹೇಳಿ…ಇದೇ ಆತನ ವಿರಾಟ ಸ್ವರೂಪ.ಇದೇ ಅವನಲ್ಲಿಯ ಸೌಂದರ್ಯ.”..ಈ ಮಾತುಗಳನ್ನ ಹೇಳುವಾಗ ಶ್ರಿಕೃಷ್ಣ ಸುಧಾಮನ ಗೆಳೆಯನಲ್ಲ ತನ್ನ ಗೆಳೆಯನೇನೋ ಎಂಬಂತೆ ಸುಶೀಲಾಳ ಭಾವವಿತ್ತು..

  ಹನುಮಂತನ ಜನ್ಮರಹಸ್ಯ

ಸುಶೀಲಾಳ ಈ ಮಾತುಗಳನ್ನ ಕೇಳಿದ ಸುಧಾಮ ಮುಗುಳ್ನಗುತ್ತಾ”ಎಲ್ಲವನ್ನೂ ನಿನ್ನ ಕಣ್ಣ ಮುಂದೆ ಕಂಡಿರುವಂತೆ ಹೇಳುವೆಯಲ್ಲ ಇದು ಹೇಗೆ ಸಾಧ್ಯ ದೇವಿ?” ಎಂದು ಕೇಳಿದ.

ಅದಕ್ಕೆ ಸುಶೀಲಾ ನಸುನಗುತ್ತಾ “ಪುರುಷನು ಜಗತ್ತನ್ನ ತನ್ನ ಕಣ್ಣುಗಳಿಂದ ನೋಡಿದರೆ,ಸ್ತ್ರೀಯು ಅದೇ ಜಗತ್ತನ್ನ ತನ್ನ ಮನಸ್ಸಿನಿಂದ ನೋಡುತ್ತಾಳೆ…ಹಾಂ ಎರಡೂ ಮೋಸ ಹೋಗಬಹುದು.ಆದರೂ ಬದಲಾಗವು”..

ಪತ್ನಿ ಕೊಟ್ಟ ಅವಲಕ್ಕಿಯ ಸಂಚಿಯನ್ನು ತಾನು ಹೆಗಲಿಗೇರಿಸಿದ್ದ ಜೋಳಿಗೆಯೊಳಗಿಟ್ಟು ಭಗವಂತನ ಸ್ಮರಣೆ ಮಾಡಿ ಗೆಳೆಯನ ಭೇಟಿಗೆ ಹೊರಟ…
ಆದರೆ ಅತ್ತ ದ್ವಾರಕೆಯಲ್ಲಿ ತನ್ನ ಬರುವಿಕೆಗಾಗಿಯೇ ಪರಿತಪಿಸುತ್ತ ನೀರು ತುಂಬಿದ ಕಣ್ಣುಗಳಿಂದ ಕೃಷ್ಣ ಜಾತಕ ಪಕ್ಷಿಯಂತೆ ಕಾಯುತ್ತಿರುವುದು ಸುಧಾಮನಿಗೆ ತಿಳಿದಿರಲಿಲ್ಲ….

  ಫಾಲ್ಗುಣ ಅಮಾವಾಸ್ಯೆ: ಅಮಾವಾಸ್ಯೆ ಪೂಜೆ ವಿಧಾನ ಮತ್ತು ಪರಿಹಾರಗಳು ಹೀಗಿವೆ

” ಶ್ರೀಕೃಷ್ಣನೆಂದೂ ಬದಲಾಗನು.”

ಕೃಷ್ಣಂ ವಂದೇ ಜಗದ್ಗುರುಂ 🙏🙏..

Leave a Reply

Your email address will not be published. Required fields are marked *

Translate »