ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗೃಹಿಣಿಯ ದಿನೋತ್ಸವ. Happy Housewife Day

ಆಕೆ..

ಆಕೆಗೆ ಬೇಕಾದಷ್ಟು ವೇಳೆ ತೆಗೆದುಕೊಳ್ಳಲು ಬಿಡಿ..
ಆಕೆ ಕುಡಿಯುವ ಕಪ್ಪು ಕಾಫಿಯಾದರೂ ಹಾಯಾಗಿ ಕುಡಿಯಲು ಬಿಡಿ…
ಎಷ್ಟು ಮುಂಜಾವುಗಳನ್ನು ತನ್ನವರಿಗಾಗಿ, ತಾನು ತಣ್ಣನೆ ಕಾಫಿ ಕುಡಿದಿರಲಿಕ್ಕಿಲ್ಲ..
ತಾನು ಕುಡಿಯುವ ಮೊದಲು ಎಲ್ಲರದನ್ನೂ ಅಣಿ ಮಾಡಿ ಕುಳಿತಿರುವ ಆಕೆಯನ್ನು ಸ್ವಲ್ಪ ಹಾಗೆಯೇ ಇರಲು ಬಿಡಿ..

ಹೋಟೆಲಿಗೆ ಹೋದಾಗ ಆಕೆಯ ನೆಚ್ಚಿನದನ್ನು ತರಿಸಲು ಬಿಡಿ…
ದಿನವೂ ಮನೆಯಲ್ಲಿ ಎಲ್ಲರಿಗೂ ಬೇಕಾದುದನ್ನು ಬಡಿಸಿದ ಆಕೆ ತನಗಾಗಿ ಒಂದು ದಿನವೂ ಬೇಕಾದುದನ್ನು ಬಡಿಸಿಕೊಳ್ಳಲಿಲ್ಲ..

ಹೊರಗೆ ಹೋಗುವಾಗ ತಯಾರಾಗಲು ಆಕೆಗೆ ಸಾಕಷ್ಟು ಸಮಯವನ್ನು ಕೊಡಿ..
ತನ್ನ ಪತಿ, ಮಕ್ಕಳು, ಎಲ್ಲರೆದುರು ಚೆನ್ನಾಗಿ ಕಾಣಲು ಬಟ್ಟೆಗಳನ್ನು ಹದವಾಗಿ ಇಸ್ತ್ರಿಮಾಡಿ, ಅವುಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸುವದಿಲ್ಲವೇ?

  ವಿಸ್ಮಯ ಶಿಖರ ಆಚಾರ್ಯ ಶಂಕರ ಜಯಂತಿ

ನೋಡುವ ಹತ್ತು ನಿಮಿಷಗಳ ಟಿವಿಯನ್ನು ಹಾಯಾಗಿ ನೋಡಲು ಬಿಡಿ….
ಹಾಗೆ ನೋಡುವದೂ ಸಹ ಈ ಕೆಳಗಿನ ಯೋಚನೆಗಳೊಂದಿಗೆಯೇ…

.. ಅಯ್ಯೋ ಪತಿಗೆ, ಹುಡುಗರಿಗೆ ಊಟದ ವೇಳೆ ಆಯಿತೇನೋ..
..ಅತ್ತೆಯವರಿಗೆ ಔಷಧಿಯ ವೇಳೆ ಆಯಿತೇನೋ..

ಬೆಳಗಿನ ಉಪಾಹಾರ ತಡವಾಗಿ ಮಾಡಿದರೆ ಮಾಡಲಿ ಬಿಡಿ…
ತನಗಾಗಿ ಎಷ್ಟು ತಡವಾದರೂ
ನಮಗೆ ಮಾತ್ರ ಒಳ್ಳೆಯ ರುಚಿಕಟ್ಟಾದುದನ್ನು ಬಡಿಸುತ್ತಾಳೆ, ಅದೂ ನಮ್ಮೆಲ್ಲರ* ಬಯ್ಗಳೊಂದಿಗೆ
(*ಪತಿಯ/ಮಕ್ಕಳ)

ಸಂಜೆಯ ವೇಳೆ…
ಟೀ ಕುಡಿದು…
ಎಲ್ಲವನ್ನೂ ಮರೆತು ಸ್ವಲ್ಪ ಹೊತ್ತು ಕಿಟಕಿಯಿಂದ ಹೊರಗಿನ ಪ್ರಪಂಚವನ್ನು ನೋಡುತ್ತಾ ತನ್ನನ್ನು ತಾನು ಮರೆಯಲು ಬಿಡಿ!
ಅದೆಷ್ಟು ಸಂಜೆಗಳು ತನ್ನವರಿಗಾಗಿ ಕಳೆದಿಲ್ಲ ಅಕೆ…

  ಮಾಘ ಹುಣ್ಣಿಮೆ

ಎಷ್ಟು ಹಗಲುಗಳನ್ನು,
ಅದೆಷ್ಟು ರಾತ್ರಿಗಳನ್ನು,
ತನ್ನವರಿಗಾಗಿ ನಿದ್ರೆ ತಿನಿಸು ಬಿಟ್ಟು ಸೇವಿಸಿಲ್ಲ…

ತನಗಾಗಿ ಅಷ್ಟು ಮಾತ್ರ ಸಮಯ ಒದಗಿಸಿಕೊಳ್ಳುವದು ಸಮಂಜಸವಲ್ಲವೇ..

*ಅಹುದಂತೀರೋ ? ಇಲ್ಲವೋ ?*

ಆಕೆ ಒಬ್ಬ ತಾಯಿ…
ಒಬ್ಬ ಗೃಹಿಣಿ…
ಒಬ್ಬ ಸೊಸೆ..
ಸ್ತ್ರೀ ಜಾತಿಗೆ….
ನನ್ನ ಹೃದಯಪೂರ್ವಕ ವಂದನೆಗಳು!!!
🙏🙏🙏🙏🙏🙏🙏🙏

ಈ ದಿನ ಗೃಹಿಣಿಯ ದಿನೋತ್ಸವ.

Happy Housewife Day
💐💐💐💐💐💐💐💐💐

Leave a Reply

Your email address will not be published. Required fields are marked *

Translate »