ಒಬ್ಬ ವ್ಯಕ್ತಿ ಒಂದು ಹಂದಿಯೊಂದಿಗೆ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ!
ಆ ದೋಣಿಯಲ್ಲಿ ಸಹ ಪ್ರಯಾಣಿಕರೊಂದಿಗೆ ಓರ್ವ ಪಂಡಿತನೂ ಪ್ರಯಾಣಿಸುತ್ತಿದ್ದ… ಯಾವತ್ತೂ ದೋಣಿಯಲ್ಲಿ ಪ್ರಯಾಣಿಸದ ಹಂದಿ ಮಾತ್ರ ಒಂದು ಕಡೆ ಕುಳಿತುಕೊಳ್ಳದೇ ಇಲ್ಲಿಂದಲ್ಲಿಗೇ ಅಲ್ಲಿಂದಿಲ್ಲಿಗೆ ಓಡಾಡುತ್ತಿತ್ತು…..
ಇದನ್ನು ಕಂಡ ನಾವಿಕ ಹೇಳಿದ, ಹಂದಿಯನ್ನು ಒಂದೇ ಕಡೆ ನಿಲ್ಲುವಂತೆ ಮಾಡದಿದ್ದರೆ ಈ ದೋಣಿ ಮುಳುಗುವ ಸಂಭವವಿದೆ ಎಂದ…
ಇದನ್ನು ನೋಡಿದ ಪಂಡಿತ ಹೇಳಿದ… ಹಂದಿಯ ಮಾಲೀಕರು ಸಮ್ಮತಿಸಿದರೆ ಹಂದಿಯನ್ನು ನಾನು ಒಂದೇ ಕಡೆ ಕುಳಿತುಕೊಳ್ಳುವಂತೆ ಮಾಡುತ್ತೇನೆ ಎಂದ… ಇದಕ್ಕೆ ಹಂದಿಯ ಮಾಲೀಕನೂ ಒಪ್ಪಿದ….
ಪಂಡಿತನು ಹಂದಿಯನ್ನು ತೆಗೆದು ಸೀದಾ ನೀರಿಗೆ ಎಸೆದುಬಿಟ್ಟ…. ಹಂದಿ ತುಂಬಾ ಹೆದರಿಹೋಯ್ತು…. ತುಂಬಾ ಕಷ್ಟಪಟ್ಟು ಈಜಿಕೊಂಡು ದೋಣಿಯ ಕಡೆ ಬರಲಾರಂಭಿಸಿತು… ಯಾರಾದರೂ ನನ್ನನ್ನು ಕಾಪಾಡಿ ಅನ್ನೋ ಧೈನ್ಯತೆಯಿಂದ ನೋಡುತ್ತಿತ್ತು….
ಕೊನೆಗೆ ಪಂಡಿತನೇ ಹಂದಿಯನ್ನು ನೀರಿನಿಂದ ಮೇಲಕ್ಕೆತ್ತಿ ದೋಣಿಯಲ್ಲಿ ಹಾಕಿದ…. ಹಂದಿ ಹೋಗಿ ಒಂದು ಮೂಲೆಯಲ್ಲಿ ಕುಳಿತುಕೊಂಡಿತು…. ಇದನ್ನು ನೋಡಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರಿಗೂ ಆಶ್ಚರ್ಯವಾಯ್ತು….
ಇಡೀ ದೋಣಿಯಲ್ಲಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೇ ಓಡಾಡುತ್ತಿದ್ದ ಹಂದಿ ಒಮ್ಮೆಲೇ ಯಾಕೆ ಶಾಂತವಾಯ್ತು ಅಂತ ಒಬ್ಬ ಪಂಡಿತನನ್ನು ಕೇಳಿಯೇ ಬಿಟ್ಟ….
ಅದಕ್ಕೆ ಪಂಡಿತ ಹೇಳಿದ…. ಎಲ್ಲಿಯವರೆಗೆ ತಮಗೆ ಸಿಕ್ಕಿರುವ ಸ್ವಾತಂತ್ರ್ಯದ ಬಗ್ಗೆ ತಮಗೇ ಅರಿವಿಲ್ಲದೇ ಬೇಕಾಬಿಟ್ಟಿ ಇರುತ್ತೇವೆಯೋ ಅಲ್ಲಿಯವರೆಗೆ ತಮಗೆ ತಮ್ಮ ಮನೆ ದೇಶದ ಬಗೆಗಿನ ಹಿರಿಮೆಯ ಅರಿವಿರುವುದಿಲ್ಲ… ಹಂದಿಗೆ ನೀರಿಗೆ ಬಿದ್ದಮೇಲೆ ದೋಣಿಯ ಮಹತ್ವ ತಿಳಿಯಿತು… ಅಲ್ಲಿಯವರೆಗೆ ಅದು ತನ್ನ ಅನಗತ್ಯ ಓಡಾಟದಿಂದ ದೋಣಿ ಮುಳುಗುತ್ತೆ, ಅದರಿಂದಾಗಿ ಎಲ್ಲರೂ ಸಾಯುತ್ತಾರೆ ಅನ್ನೋ ಪರಿಜ್ಞಾನವಿಲ್ಲದೇ ಬೇಕಾಬಿಟ್ಟಿ ತಿರುಗುತ್ತಿತ್ತು… ಅದೇ ನೀರಿಗೆ ಬಿದ್ದಮೇಲೆ ದೋಣಿಯ ಮಹತ್ವದ ಅರಿವಾಗಿ ಸುಮ್ಮನೇ ಮೂಲೆಯಲ್ಲಿ ಕುಳಿತಿದೆ…..