ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗಡ್ ಬಡ್ ಐಸ್ ಕ್ರೀಂ ಉಡುಪಿಯಲ್ಲಿ ಹುಟ್ಟಿದ ಕಥೆ

“ಗಡ್ಬಿಡಿ”ಯಲ್ಲಿ ಬಂದ “ಗಡ್ ಬಡ್” :-

ಮಕ್ಕಳು ಮತ್ತು ಯುವ ಜನತೆಯನ್ನು ಆಕರ್ಷಿಸುವ ಸ್ವಾದಿಷ್ಟ ಭರಿತ ಸ್ನಾಕ್ಸ್ ಎಂದರೆ “ಗಡ್ಬಡ್”. ಹೆಸರೇ ಸೂಚಿಸುವಂತೆ ತರಾತುರಿಯ ಗಡ್ಪಡ್ನಲ್ಲಿ ಇರುವುದು, ತರಹೇ ವಾರಿ ಹಣ್ಣುಗಳು, ಡ್ರೈ ಫ್ರೂಟ್ಸ್ ತುಂಡುಗಳು, ಮಿಲ್ಕ್ ಕ್ರೀಮ್ ಮತ್ತು
ಸಕ್ಕರೆ ಬೆರೆಸಿ ಗೊಟಾಯಿಸಿದ “ಗಡ್ಬಡ್”. ಇದರ ಉತ್ಪತ್ತಿ ಆಗಿತ್ತು “ಉಡುಪಿ” ಯಲ್ಲಿ ತಡರಾತ್ರಿಯಲ್ಲಿ ಯಾವ ಪೂರ್ವಾಪರ ಸಿದ್ಧತೆ ಇಲ್ಲದೆ ತಕ್ಷಣಕ್ಕೆ ಆಗಿದ್ದು.

ದಕ್ಷಿಣ ಕನ್ನಡ ಜಿಲ್ಲೆ ಕರಾವಳಿ ಪ್ರದೇಶ ಮಳೆಗಾಲದಲ್ಲಿ ಬಾರಿ ಮಳೆ, ಬೇಸಿಗೆಯಲ್ಲಿ ಹೊರಗೆ ಬರಲಾರದಷ್ಟು ಬಿಸಿಲಿನ ತಾಪ. ತುಂಬಿ ಹರಿವ ಅಗಲವಾದ ದೊಡ್ಡ ನದಿಗಳು, ಇಲ್ಲಿ ಗಸಡು- ದಪ್ಪವಲ್ಲದ “ತೆಳ್ಳಗಿನ” ನೀರು ಕುಡಿದ ಬುದ್ಧಿವಂತ ಸಾತ್ವಿಕ ಜನರು. ಇಲ್ಲಿನ ಪ್ರಮುಖ ಆಹಾರ “ಕುಚಲಕ್ಕಿ” ಯಿಂದ ಅನ್ನ – ಗಂಜಿ ಊಟಕ್ಕೆ,( ಬೆಳ್ತಕ್ಕಿನೂ ಇರುತ್ತದೆ) . ಕುಚಲಕ್ಕಿ ಅನ್ನ ಸಪ್ಪೆ ಊಟದ ಜೊತೆಗೆ, ಬಾಡಿಸಿಕೊಂಡು ತಿನ್ನಲು ( ಕುಚಲಕ್ಕಿಗೆ ಯಾವ ಮೇಲೊಗರಗಳು ಹೊಂದಿಕೆ ಆಗಲ್ಲ) ಬಾಡಕಲ ಮೆಣಸಿನ ಕಾಯಿ, ಕರಿದ ತಿಂಡಿಗಳು, ಬಗೆ ಬಗೆಯ ಪಲ್ಯ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಹಾಗೂ ಸಿಹಿ ತಿನಿಸು ಒಂದಾದರೂ ಇರಬೇಕು.
ಬೆಳಗಿನ ಉಪಹಾರಕ್ಕೆ ತಿಂಡಿಗೆ ಕಡಬು, ದೋಸೆ, ನೀರ್ ದೋಸೆ, ಹಬೆಯಲ್ಲಿ ಬೇಯಿಸಿದ ಕಡುಬುಗಳು, ಹಲಸು, ಮಾವು, ಸೌತೆ, ಕಾಲದಲ್ಲಿ ಅಡುಗೆಯಲ್ಲಿ
ಇವುಗಳದ್ದೆ ಕಾರುಬಾರು, ಬಗೆ ಬಗೆಯ ಸ್ವಾದಿಷ್ಟ ಪದಾರ್ಥಗಳು.

“ಗಡ್ಬಡ್” ಇದರ ಉತ್ಪತ್ತಿ 1965- 70ರ ಸಾಲಿನಲ್ಲಿ ಇರಬಹುದು. ದೂರದ (ಆಗ)ಮುಂಬೈಯಿಂದ ಪ್ರವಾಸ ಹೊರಟ, ಯುವಕರು ಹಾಗೂ ಮಧ್ಯವ ವಯಸ್ಕ ರ ತಂಡ ಒಂದಷ್ಟು ಪ್ರವಾಸ ಮುಗಿಸಿ, ದಕ್ಷಿಣ ಕನ್ನಡ ಜಿಲ್ಲೆಯತ್ತ ಹೊರಟರು. ಇಲ್ಲಿ ಊಟ, ತಿಂಡಿ ಚೆನ್ನಾಗಿರುತ್ತೆ ಅಂತ ಬೇರೆಲ್ಲೂ ಮಾಡದೆ ರಾತ್ರಿ ಊಟಕ್ಕೆ ಚೆನ್ನಾಗಿರು ಹೋಟೆಲ್ ಹುಡುಕುತ್ತಾ ಹೊರಟರೆ ಎಲ್ಲೂ ಸಿಗದೆ ಉಡುಪಿಗೆ ಬರುವ ಹೊತ್ತಿಗೆ ತಡರಾತ್ರಿ ಆಗಿತ್ತು. ಏನೂ ತಿಂದಿರಲಿಲ್ಲ. ಬೇಸಿಗೆ ಸಮಯ ರಾತ್ರಿಯಾದಂತೆ ಹೊರಗೂ, ಒಳಗೂ ಸೆಕೆ. ಹಸಿವು, ಬಾಯಾರಿಕೆ ಹುಡುಕುತ್ತಾ ಬಂದವರಿಗೆ ಒಂದು ಕಡೆ ಹೋಟೆಲ್ ತೆರೆದಿತ್ತು ಸಿಕ್ಕಿತು ಸದ್ಯ ಎಂದು ಬಸ್ ನಿಲ್ಲಿಸಿ ಹೋದರು. ಆದರೆ ಹೋಟೆಲು ಬಾಗಿಲು ಹಾಕುವ ತಯಾರಿಯಲ್ಲಿತ್ತು. ಒಂದು ಬಸ್ ಜನ. ಈಗ ಎಲ್ಲಾ ಖಾಲಿಯಾಗಿದೆ, ಬಾಗಿಲು ಹಾಕುವ ಸಮಯ ಎಂದು ಹೇಳಲು ಹೋಟೆಲ್ ಮ್ಯಾನೇಜರ್ ಗೆ ಮನಸ್ಸು ಒಪ್ಪದೇ, ಏನು ಎಂದು ಕೇಳಿದರು. ಸಾರ್ ನಮಗೆ ಎಲ್ಲೂ ಊಟ ಸಿಕ್ಕಿಲ್ಲ ಬಹಳ ಹಸಿದಿದ್ದೇವೆ. ನಿಮ್ಮಲ್ಲಿ ಏನಿದಿಯೋ ಅದನ್ನೇ ಕೊಡಿ ಎಂದು ಕೇಳಿದರು. ಆ ಹೊತ್ತಿಗೆ ಹೋಟೆಲ್ ಸಿಬ್ಬಂದಿಗಳೆಲ್ಲ ಮನೆಗೆ ಹೋಗಿದ್ದು, ಇದ್ದವರು ಮ್ಯಾನೇಜರ್ ಅಡಿಗೆ ಭಟ್ಟರು ಸೇರಿ ಮೂವರು ಮಾತ್ರ. ಯೋಚನೆ ಮಾಡಿದರು ಎಲ್ಲರಿಗೂ ಹಸಿವು, ಆಯಾಸ, ಬಳಲಿಕೆ, ಆಗಿದೆ. ಇಡ್ಲಿ- ದೋಸೆ- ಉಪ್ಪಿಟ್ಟು – ಚಿತ್ರಾನ್ನ ಮಾಡುವಷ್ಟಾಗಲಿ, ಹಿಟ್ಟು ಕಲೆಸಿ ಬೇಯಿಸುವಷ್ಟು ಸಮಯ ಇಲ್ಲ.

  ಚಂದ್ರಘಂಟ ಅವತಾರ - ನವರಾತ್ರಿ 3ನೇ ದಿನ - ಪೂಜಾ ವಿಧಾನ

ಮ್ಯಾನೇಜರು, ಅಡಿಗೆ ಭಟ್ಟರು ಉಗ್ರಾಣಕ್ಕೆ ಹೋಗಿ ನೋಡಿದರು. ಬಗೆ ಬಗೆಯ ಹಣ್ಣುಗಳು ಹರಡಿತ್ತು. ತಕ್ಷಣ ಅವರಿಗೊಂದು ಉಪಾಯ ಹೊಳೆಯಿತು ಎಲ್ಲಾ ತರದ ಹಣ್ಣುಗಳನ್ನು ಹಾಗೂ ಮೂಲೆಯಲ್ಲಿ ಬಾಳೆಹಣ್ಣಿನ ಕೊನೆ ಕಟ್ಟಿದ್ದರು. ಎಲ್ಲ
ಹಣ್ಣನ್ನು ಸಣ್ಣದಾಗಿ ಕತ್ತರಿಸಿ ದೊಡ್ಡ ಕಡಾಯಿಗೆ ಹಾಕಿ ಹಾಲಿನ ಕ್ರೀಮ್- ಸಕ್ಕರೆ ಹಾಕಿದರು. ಸಣ್ಣದಾಗಿ ಕತ್ತರಿಸಿದ ಡ್ರೈ ಫ್ರೂಟ್ಸ್ ಹಾಕಿ, ತುಪ್ಪದಲ್ಲಿ ಕರಿದ ಗೋಡಂಬಿ ಬಾದಾಮಿ ಚೂರುಗಳನ್ನು ಹದವಾಗಿ ಬೆರೆಸಿದರು. ಆಗೆಲ್ಲ ಒಂದು ಮೊಳ ಉದ್ದದ ಗಾಜಿನ ಗ್ಲಾಸ್ ಇರುತ್ತಿತ್ತು. ಅಂತಹ ಗ್ಲಾಸ್ ಗಳಿಗೆ ಮೂರ್ನಾಲ್ಕು ಸೌಟು ತುಂಬಿಸಿದರು ಮೇಲೆ ಐಸ್ ಕ್ರೀಮ್ ಹಾಕಿದರು. ಚೆರ್ರಿ ಹಣ್ಣುಗಳನ್ನು ಇಟ್ಟು ಅಲಂಕರಿಸಿದರು. ಬಂದವರಿಗೆಲ್ಲ ಸಪ್ಲೈ ಮಾಡಿದರು. ಇದು ಏನು ಎಂಥ ಎಂದು ಕೇಳದೆ ಹಸಿವು ಬಾಯಾರಿಕೆಯಿಂದ ಬಳಲಿದ್ದ ಅವರು ಸರ ಸರ ರುಚಿ ರುಚಿಯಾಗಿ
ಮಧ್ಯದಲ್ಲಿ ಕರಂ ಕುರುಂ ಎನ್ನುವ ಗೋಡಂಬಿ ಬಾದಾಮಿ ಚೂರು ರುಚಿಯಾಗಿ ತಿಂದರು. ಆ ಗ್ಲಾಸ್ ತುಂಬಾ ಅಂದರೆ ಊಟ ಮಾಡಿದಷ್ಟೇ ಹೊಟ್ಟೆ ತುಂಬುತ್ತದೆ. ಎಲ್ಲರಿಗೂ ತೃಪ್ತಿ ಆಯ್ತು ವಾವ್ ಸೂಪರ್ ನಾವು ಇದುವರೆಗೂ ಈ ತರದ ಫುಡ್ ತಿಂದಿಲ್ಲ. ಹೊಟ್ಟೆ ತುಂಬಿ, ಬಾಯಾರಿಕೆ ಹೋಗಿ, ಆಯಾಸವು ಕಡಿಮೆಯಾಯಿತು ದೇಹ- ಮನಸ್ಸು ತಂಪಾಯಿತು. ಈ ಖಾದ್ಯದ ಹೆಸರೇನು ಎಂದು ಆಶ್ಚರ್ಯದಿಂದ ಕೇಳಿದರು.

  ದೇವಾಲಯದಲ್ಲಿ ದರ್ಶನ ಮಾಡಿದ ನಂತರ ಏಕೆ ಕುಳಿತುಕೊಳ್ಳಬೇಕು?

ಅಲ್ಲಿ ತಯಾರಿಸಿದವರಿಗೂ ಹೆಸರು ಗೊತ್ತಿಲ್ಲ. ಮ್ಯಾನೇಜರ್ ಹೇಳಿದರು ನೀವೆಲ್ಲ ಹಸಿದು ಬಂದಿದ್ದೀರಿ ತಕ್ಷಣಕ್ಕೆ ಏನಾದರೂ ಮಾಡಬೇಕೆಂದು ಇಲ್ಲಿ ಇದ್ದುದನ್ನೆ ಹಾಕಿ “ಗಡ್ಬಿಡಿ” ಯಲ್ಲಿ ಮಾಡಿದ್ದು ಎಂದರು. ಬಂದವರಿಗೆ ಏನು ಕೇಳಿತೋ, ಗೊತ್ತಿಲ್ಲ ಅವರೆಲ್ಲರೂ ವಾವ್ “ಗಡ್ ಬಡ್” ಇದರಂತ ರುಚಿಯಾದ ಸವಿಯಾದ ತಿನಿಸು ಬೇರೆ ಇಲ್ಲ ಎಂದರು. ಹೋಟೆಲ್ ನವರಿಗೂ ಆ ಹೆಸರು ಸರಿಯನಿಸಿತು ಹೌದು ಗಡಿಬಿಡಿ ಯಲ್ಲಿ ಮಾಡಿದ ಆಹಾರ “ಗಡ್ಬಡ್” ಎಂದರು. ತಡರಾತ್ರಿಯ ಗಡಿಬಿಡಿ ಯಲ್ಲಿ ಉತ್ಪತ್ತಿಯಾದ “ಗಡ್ಬಡ್” ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರ ಮನಸ್ಸನ್ನು ಆಕರ್ಷಿಸುತ್ತದೆ. ಅಂದಿನಿಂದಲೇ ಶುಚಿ- ರುಚಿ, ಅಂದ- ಚಂದ ಎಲ್ಲವೂ ಸೇರಿದ “ಗಡ್ಬಡ್”ಎಂದು ಪ್ರಸಿದ್ಧಿಯಾಗಿ ಎಲ್ಲರ ತನು ಮನ ತಣಿಸುವ, ಆಡು ಮಾತಿನಲ್ಲಿ ಹೇಳುವ “ಫ್ರೂಟ್ ಸಲಾಡ್” ನ ಇನ್ನೊಂದು ಹೆಸರೇ “ಗಡ್ಬಡ್” ಎಂಬ ಖ್ಯಾತಿ ಪಡೆಯಿತು.

  ವೈಜ್ಞಾನಿಕ ಹಿನ್ನೆಲೆಯಿರುವ ಸಂಸ್ಕಾರ - ಯಜ್ಞೋಪವೀತ - ಜನಿವಾರ ಧಾರಣೆ

ಗಡ್ಬಡ್:-
ತಡರಾತ್ರಿ“ಗಡಿಬಿಡಿ” ಯಲ್ಲೆ
ಹೊಸ ಆವಿಷ್ಕಾರ ಬಂದಿತು
ಬಾಳೆ- ಮಾವು ಸೇರಿತು
ದ್ರಾಕ್ಷಿ- ಪೈನಾಪಲ್ ಬೆರೆಯಿತು

ಸೇಬು- ದಾಳಿಂಬೆ ದವಡೆ ಜಗಿಯಿತು
ಕ್ರೀಮು- ಕೆನೆ ನಾಲಿಗೆಗೆ ಸವರಿತು
ಚೆರ್ರಿ -ಬೆರ್ರಿ ಕಣ್ಣಿಗೆ ತಂಪು ಕೊಟ್ಟಿತು
ಅವಸರದಲ್ಲಿ ಸವಿ- ರುಚಿ ಹುಟ್ಟಿತು

ಮೊಳದುದ್ದ ಗ್ಲಾಸ್ ಮುಂದೆ ಬಂದಿತು
ಸೌಟು ಕಡಾಯಿಂದ ತುಂಬಿ ತುಂಬಿ ಹಾಕಿತು
ಬಾಯಲ್ಲಿ ಇಳಿದು ಕುಣಿಯಿತು
ಅತಿಥಿಗಳಿಗೆ ಇನ್ನಿಲ್ಲದಂತ ಆತಿಥ್ಯ ಆಯಿತು

ಕಣ್ಣು ಮುಚ್ಚಿ ನಾಲಿಗೆ ಸವಿಯಿತು
ಆಹಾ ಓಹೋ- ಆಹಾ ಓಹೋ
ಆನಂದದ ಉದ್ಘಾರ ಹೊರಹೊಮ್ಮಿತು
ಖುಷಿಯಾಗಿ ಮನ ತೇಲಾಡಿತು
ಹೋಟೆಲ್ಲಿಗೆ ಸಿಕ್ಕಿತು ಬಾರಿ ಬಂಪರ್

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

One thought on “ಗಡ್ ಬಡ್ ಐಸ್ ಕ್ರೀಂ ಉಡುಪಿಯಲ್ಲಿ ಹುಟ್ಟಿದ ಕಥೆ

  1. ಈ ಕಥೆ ನಿಜವಾಗಿಯೂ ಆಸಕ್ತಿದಾಯಕವಾಗಿದೆ! ಗಡ್ಬಿಡಿ ಪರಿಸ್ಥಿತಿಯಲ್ಲಿ ಹುಟ್ಟಿಕೊಂಡ ಗಡ್ಬಡ್ ಅನ್ನುವ ಪದವು ಹೇಗೆ ಪ್ರಸಿದ್ಧಿಯಾಯಿತು ಎಂಬುದು ನಿಜಕ್ಕೂ ಅದ್ಭುತ. ಇದು ಕೇವಲ ಒಂದು ತಿಂಡಿಯ ಹೆಸರು ಮಾತ್ರವಲ್ಲ, ಅದು ಜನರ ಸಹಾನುಭೂತಿ ಮತ್ತು ಸೃಜನಶೀಲತೆಯನ್ನು ತೋರಿಸುವ ಒಂದು ಉದಾಹರಣೆ. ಮ್ಯಾನೇಜರ್ ಮತ್ತು ಅಡಿಗೆ ಭಟ್ಟರು ತಮ್ಮ ಸಾಮರ್ಥ್ಯದಲ್ಲಿ ಏನು ಮಾಡಬಹುದೋ ಅದನ್ನು ಮಾಡಿ ಜನರನ್ನು ಸಂತೋಷಪಡಿಸಿದ್ದು ಮೆಚ್ಚುಗೆಗೆ ಪಾತ್ರ. ಇಂತಹ ಸನ್ನಿವೇಶಗಳು ನಮ್ಮ ಜೀವನದಲ್ಲಿ ಸಣ್ಣ ಸಣ್ಣ ಸಂತೋಷಗಳನ್ನು ತರಬಲ್ಲವು ಎಂಬುದನ್ನು ಇದು ನೆನಪಿಸುತ್ತದೆ. ಗಡ್ಬಡ್ ಅನ್ನುವ ಪದವು ಈಗ ಎಷ್ಟು ಜನಪ್ರಿಯವಾಗಿದೆಯೆಂದು ನೋಡಿದರೆ, ಅದು ಕೇವಲ ಒಂದು ತಿಂಡಿಯ ಹೆಸರು ಮಾತ್ರವಲ್ಲ, ಅದು ಒಂದು ಸಂಸ್ಕೃತಿಯ ಭಾಗವಾಗಿದೆ. ನೀವು ಗಡ್ಬಡ್ ಅನ್ನು ಪ್ರಯತ್ನಿಸಿದ್ದೀರಾ? ಅದರ ರುಚಿ ಹೇಗಿತ್ತು?

Leave a Reply

Your email address will not be published. Required fields are marked *

Translate »