ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ರಾಜದಂಡ ಸೆಂಗೋಲ್ ನ್ಯಾಯದಂಡ

ನ್ಯಾಯದಂಡ…!

ಅರಮನೆಯ ದೇವರ ಕೋಣೆಯೊಳಗೆ, ಪ್ರಧಾನ ದೈವದ ಕೋಣೆಯೊಳಗೆ ಇರುತ್ತಿದ್ದ ರಾಜದಂಡ ಅನ್ನುವ ಆಯುಧ ಇದೀಗ ಯಥೇಷ್ಟ ಪ್ರಚಾರ ಪಡೆದುಕೊಂಡಿದೆ.ಅದಕ್ಕೆ ಕಾರಣ, ನೂತನ ಲೋಕಸಭಾ ಕಟ್ಟಡದೊಳಗೆ ಖಾಯಂ ಆಗಿ ಇರಿಸುವ ಹೊಸ ಕ್ರಮ ಅನುಷ್ಠಾನಕ್ಕೆ ಬರುವುದು.

ಈ ರಾಜದಂಡಕ್ಕೆ ಸೆಂಗೋಲ್ ಅನ್ನುವುದು ಅದು ತಮಿಳು ಭಾಷೆಯಲ್ಲಿ ಹುಟ್ಚಿರಬಹುದಾದ ಪದವಾಗಿರಬಹುದೇನೊ,ನನಗೆ ತಿಳಿದಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಸಂದರ್ಭದಲ್ಲಿ ಈ ಸೆಂಗೋಲ್ ಅನ್ನು ಕೂಡಾ ಅಧಿಕಾರ ಹಸ್ತಾಂತರ ಸಂಕೇತವಾಗಿ ನೆಹರೂ ಅವರ ಕೈಗೆ ಲಾರ್ಡ್ ಮೌಂಟ್ ಬ್ಯಾಟನ್ ಅವರು ಕೊಟ್ಟರು ಅನ್ನುವುದು ಅಲಿಖಿತ ಶಾಸನ.ಹಾಗೆ ಸ್ವೀಕರಿಸಿದ್ದನ್ನು ವಸ್ತು ಸಂಗ್ರಹಾಲಯದಲ್ಲಿಯೆ ಇರಿಸಿದ್ದರು ಅನ್ನುವುದು ಚಾಲ್ತಿಯಲ್ಲಿರುವ ಮಾತುಗಳು.

ಅಧಿಕಾರ ಹಸ್ತಾಂತರದ ಅಧಿಕೃತ ಮುದ್ರೆಯಾಗಿ ಆ ಸೆಂಗೋಲ್ ಬಳಕೆಯಾಗಿದೆ, ಅದು ನಿಜವಾದ ಕ್ರಮ. ಬ್ರಿಟಿಷರುಗಳು ಕಿಂಗ್ ಆಳ್ವಿಕೆಯವರಾಗಿದ್ದರಿಂದ,ಪ್ರಜಾಪ್ರಭುತ್ವದ ಕಲ್ಪನೆಯೂ ಇಲ್ಲವಾಗಿದ್ದರಿಂದಲೇ ಅವರು ನೆಹರೂ ಅವರಿಗೆ ರಾಜದಂಡ ಪ್ರದಾನ ಮಾಡಿದ್ದರಲ್ಲಿ ಸರಿಯಾದ ಅರ್ಥವಿದೆ.

ದೇಶದಲ್ಲಿ ಪ್ರಜಾಪ್ರಭುತ್ವ ಆಳ್ವಿಕೆಗೆ ಬಂದರೂ ಸಹ ಪ್ರಾದೇಶಿಕ ಮಟ್ಟದಲ್ಲಿ ರಾಜರುಗಳು,ಅರಮನೆಗಳು ಮುಂದುವುರಿದುಕೊಂಡು ಬಂದಿವೆ. ಅದು ಪಾರಂಪರಿಕವಾಗಿ ಮುಂದವರಿದುಕೊಂಡು ಬಂದಿವೆ. ಅನೇಕ ಅರಮನೆಗಳು ನಿರ್ಜೀಕಗೊಂಡದ್ದೂ ಇರುವುದರಿಂದ ಕಾರಣ ,ಅವರಿಗೆ ಆಸ್ತಿ ,ಉಂಬಳಿ ಉಳಿದಿಲ್ಲ, ಸರಕಾರಕ್ಕೋ, ಉಳುವವರಿಗೋ ಸೇರಿದ್ದರಿಂದ ಕೆಲವು ಅರಮನೆಗಳು ಕುರುಹೂ ಇಲ್ಲದಂತೆ ಅಳಿದಿವೆ.

ನಮ್ಮ ದ. ಕ. ಹಾಗೂ ಉಡುಪಿ ಜಿಲ್ಲೆಯಲ್ಲಿಯೂ ಕೆಲವಾರು ಅರಮನೆಗಳಿದ್ದುವು/ಇವೆ. ಆ ಅರಮನೆಗಳಿಗೆ ಪಟ್ಚದರಸ ಅಂತ ನೇಮಕವಾಗುವುದಿದೆ. ಮಕ್ಕಳ ಕಟ್ಟು,ಅಳಿಯಕಟ್ಚು ಪ್ರಕಾರ ಪುರುಷನೊಬ್ಬನಿಗೆ ಪದ್ಧತಿ ಪ್ರಕಾರ ಪಟ್ಟಾಭಿಷೇಕ ಮಾಡಲಾಗುತ್ತದೆ.

ವಿಟ್ಲ ಅರಮನೆ,ಮೂಲ್ಕಿ ಅರಮನೆ,ಮೂಡುಬಿದಿರೆ ಅರಮನೆ,ಪಣಪಿಲ,ಅಳದಂಗಡಿ,ಬಂಗಾಡಿ,ವೇಣೂರು,ತಿಂಗಳೆ,ಹಲ್ಸನಾಡು ಹಾಗೆ ಅನೇಕ ಊರುಗಳಲ್ಲಿ ಅರಮನೆ ಇದೆ. ಅದಕ್ಕೆ ಇಂತಿಷ್ಟೇ ಗ್ರಾಮಗಳು ಸೇರಿಕೊಂಡಿರುತ್ತದೆ. ಅರಮನೆಯಲ್ಲಿ ಪ್ರಸಿದ್ಧ ಕುಲ ದೇವರು , ಪ್ರಸಿದ್ದ ದೈವ ಸಾನಿಧ್ಯ ಇದ್ದೇ ಇರುತ್ತದೆ.ಅದರ ಆಜ್ಞಾಪಾಲಕನಾಗಿರುತ್ತಾನೆ ಈ ಪಟ್ಟಕ್ಕೆ ಕುಳಿತು ಅರಸು ಎಂದು ಕರೆಯಿಸಿಕೊಳ್ಳುವವನು.

  ದೀಪವನ್ನು ಹಚ್ಚುವ ರೀತಿ ಮತ್ತು ಪದ್ಧತಿ

ಅವನಿಗೆ ಪಟ್ಟಾಭಿಷೇಕ ಮಾಡುವಾಗಲೇ ಆ ದಂಡಕ್ಕೆ ಜಲಾಭಿಷೇಕ ಮಾಡಿ ಹಸ್ತಾಂತರ ಮಾಡಲಾಗುತ್ತದೆ.ಅದನ್ನು ಪುರೋಹಿತ ವರ್ಗದವರು ಶಾಸ್ತ್ರ ವಿಧಿ ವಿಧಾನಗಳಿಂದಲೇ ಮಾಡಿ ನೆರವೇರಿಸುತ್ತಾರೆ.
ಆ ರಾಜದಂಡದ ತಲೆಯಲ್ಲಿ ನಂದಿಯ ಕೆತ್ತನೆಯಿರುವುದು.ಎಲ್ಲ ಕಡೆಯ ರಾಜದಂಡದಲ್ಲೂ ನಂದಿಯ ಕೆತ್ತನೆಯೆ ಇರುವುದು. ಸುಮಾರು ಮೂರರಿಂದ ಮೂರೂವರೆ ಅಡಿಗಳಷ್ಟು ಉದ್ದಳತೆಯಲ್ಲಿರುವುದು.

ಅದಕ್ಕೆ ನ್ಯಾಯ ದಂಡ ಅಂತಲೂ ಹೇಳುವುದು ಯಾಕೆಂದರೆ ,ಅರಸ ನ್ಯಾಯ ಹೇಳುವಾಗ ಅದನ್ನು ಕೈಯಲ್ಲಿ ಹಿಡಿದುಕೊಂಡು ಹೇಳುವುದು ವಾಡಿಕೆ,ಪದ್ಧತಿ. ಆ ಮನೆಯ ದೈವ ದೇವರ ಶಕ್ತಿಯ ಪ್ರಭಾವವನ್ನು ಆ ರಾಜದಂಡ ಅಥವಾ ನ್ಯಾಯದಂಡ ವಶೀಕರಿಸಿಕೊಂಡಿರುತ್ತದೆ.ಅರಸನು ಒಟ್ಚಾರೆಯಾಗಿ ಮಾತು,ತೀರ್ಮಾನ ಕೊಡದಂತೆ ಅದು ಭಯ ತರುತ್ತದೆ.ಬೇರೆ ದಿನಗಳಲ್ಲಿ ಅದನ್ನು ದೈವ ,ದೇವರ ಕೊಠಡಿಯಲ್ಲಿರಿಸಲಾಗುತ್ತದೆ. ವರ್ಷದಲ್ಲಿನ ವಿಶೇಷ ಕಾರ್ಯಕ್ರಮವಾಗುವಾಗ ಪೀಠಾಧಿಪತಿ ಆ ದಂಡವನ್ನು ಕೈಯಲ್ಲಿ ಹಿಡಿದುಕೊಂಡಿರಬೇಕು. ನವಮಿ,ವಿಜಯ ದಶಮಿ ಹಬ್ಬದ ದಿನಗಳಲ್ಲಿ ಆ ದಂಡ ಕೂಡಾ ಕೈಗೆ ಬರುತ್ತದೆ.ದಂಮಡಕ್ಕೆ ವಿಶೇಷ ಪೂಜೆಯನ್ನೂ ಮಾಡಲಾಗುತ್ತದೆ. ಯಾವುದಾದರೂ ಒಂದು ಸಂದರ್ಭದಲ್ಲಿ ಪೀಠದ ಅರಸನ ಅನುಪಸ್ಥಿತಿಯಾದಲ್ಲಿ ಆ ರಾಜದಂಡಕ್ಕೆ ಎಲ್ಲ ಮರ್ಯಾದೆಯನ್ನು ಒಪ್ಪಿಸಬೇಕು. ಅವನ ಪವರ್ ಆಫ್ ಅಟಾರ್ನಿಯನ್ನು ಆ ರಾಜದಂಡಕ್ಕೆ ಕೊಡಲಾಗಿರುತ್ತದೆ.!

ಐ. ಪಿ. ಎಸ್. ಅಧಿಕಾರಿಗಳು, ಪೊಲೀಸ್ ವೃತ್ತ ನಿರೀಕ್ಷಕರ ಕೈಯಲ್ಲಿರುವ ಪುಟ್ಟ ಕೋಲು ಕೂಡಾ ನ್ಯಾಯದಂಡವೆಂದೇ ಕರೆಯುವಂಥದ್ದು. ಅದನ್ನವರು ಕೈಯಲ್ಲಿ ಹಿಡಿದುಕೊಂಡೇ ಇರುತ್ತಾರೆ,ಮೇಜಿನ ಮೇಲೆ ಹೊರಳಾಡಿಸುತ್ತಲೇ ನ್ಯಾಯ ವಿಮರ್ಶೆ ಮಾತಾಡುತ್ತಾರೆ.

ಹಿಂದಿನ ರಾಜ ಮಹರಾಜರುಗಳ ಕಾಲದಲ್ಲಿ ಅದು ಬೆಳ್ಳಿಯಿಂದ ,ಚಿನ್ನದಿಂದ ತಯಾರು ಮಾಡಿದ್ದರೆ ಕಾಲ ನಂತರ ಅದನ್ನು ತುಂಡರಸುಗಳು ಯೋಗ್ಯ ಮರವನ್ನು ಬಳಸಿ ತಯಾರು ಮಾಡತೊಡಗಿದರು. ಯಾಕೆಂದರೆ ಅದಕ್ಕೆ ಭದ್ರತೆ ಬೇಕು,ದುರುಪಯೋಗಕ್ಕೂ ಸಾಧ್ಯತೆ ಉಂಟು.

  ತೆನಾಲಿ ರಾಮ ಮತ್ತು ವರ್ಣರಂಜಿತ ಹಕ್ಕಿ

ಅದು ಸಂಸ್ಕಾರ ಹೊರತು ಸಂಸ್ಥಾನದಲ್ಲಿ ಇರುವುದಿಲ್ಲ. ಉದಾಹರಣೆಗೆ ಕೆಲವೊಂದು ಸಂಸ್ಥಾನ ಮಠಗಳಿವೆ,ಅಲ್ಲಿ ಅದು ಇದೆಯಾದರೂ ಅದು ನಿಜವಾದ ಪದ್ಧತಿ ಪ್ರಕಾರವಾಗಿರುವುದಿಲ್ಲ. ಇನ್ನು ಉಡುಪಿ ಮಠದ ಪರ್ಯಾಯ ಸಮಯಗಲ್ಲಿ ನಡೆಯುವ ದರ್ಬಾರ್,ಅಲ್ಲಿ ಕಾಣುವ ಸೆಂಗೋಲ್ ಅದಕ್ಕೆಲ ಯಾವುದೇ ಸಂಸ್ಕಾರ ಅಂತ ಇರುವುದಿಲ್ಲ.ಅದೆಲ್ಲ ಆಡಂಭರ ಭೂಷಣ ಅಷ್ಟೆ. ಸಂಸಾರ ತ್ಯಾಗಿಯಾದವರು,ಅಮೆ ಸೂತಕವನ್ನು ಕಳಚಿಕೊಂಡವರು ರಾಜದರ್ಬಾರ್ ಮಾಡುವುದಕ್ಕೆ ಅರ್ಥವೇನುಂಟು?

ಇನ್ನು, ಜಗದ್ಗುರು ಪೀಠಾಧಿಕಾರದಲ್ಲಿ ಈ ರಾಜದಂಡಕ್ಕೆ ಸ್ಥಾನವುಂಟು. ನಮ್ಮಲ್ಲಿನ ಶೃಂಗೇರಿಯ ಜಗದ್ಗುರು ಪೀಠಾಧಪತಿಗೆ ಪಟ್ಟಾಭಿಷೇಕವಾಗವಾಗ ರಾಜದಂಡ ಹಸ್ತಾಂತರ ಮಾಡುವುದಕ್ಕಿದೆ.ಅದೂ ಕೂಡ ಶ್ರೇಷ್ಠವೆನಿಸಿದ ನ್ಯಾಯ ಸ್ಥಾನದ ಸಾನಿಧ್ಯ ಪೀಠವಾಗಿದೆ.

ಇದೀಗ ನಮ್ಮ ಸಂಸತ್ ಹಾಲಿನಲ್ಲಿ ಈ ರಾಜದಂಡವನ್ನು ಇರಿಸುವುದು ಸೂಕ್ತವೇ ಅನ್ನುವ ಮಾತಿಗ ಬರುವುದಾದರೆ,ಅಲ್ಲಿ ರಾಜ ಅಥವಾ ಅಧಿಪತಿ ಯಾರೆನ್ನುವುದರ ತೀರ್ಮಾನಕ್ಕೆ ಬರಬೇಕಾಗುತ್ತದೆ. ಹಾಗೆ ನಿರ್ಧಾರಕ್ಕೆ ಬರುವುದಾದರೆ ರಾಜದಂಡ ಇರಬೇಕಾದ ಜಾಗ ರಾಷ್ಟ್ರಪತಿ ಭವನ. ದೇಶದ ರಾಜನೆಂದು ಕರೆಯಲ್ಪಡುವುದು ರಾಷ್ಟ್ರಪತಿಯನ್ನು. ಇನ್ನು ಅದು ಸಂಸತ್ ಹಾಲಿನಲ್ಲೇ ಇರಬೇಕೆಂದರೆ ಅದು ಸ್ಪೀಕರಿ ಬಳಿ ಇರತಕ್ಕದ್ದು. ಅಲ್ಲಿ ನ್ಯಾಯ ಕೊಡುವುದು ಹಾಗೂ ಪ್ರಧಾನಿಯವರಿಗಿಂತಲೂ ಎತ್ತರದ ವೇದಿಕೆಯ ಆಸನದಲ್ಲಿ ಕೂರುವುದು ಸ್ಪೀಕರ್. ಆತನ ನ್ಯಾಯದಾನವನ್ನು ಬಾಹ್ಯ ನ್ಯಾಯಾಲಯ ಕೂಡಾ ಅಳಿಸಲಿಕ್ಕಾಗುವ ಸಂವಿಧಾನ ಭಾರತದ್ದಲ್ಲ.

ರಾಷ್ಚ್ರಪತಿಯು ಬರೇ ಹಸ್ತಾಕ್ಷರಕ್ಕೇ ಸೀಮಿತವಾಗಿರುವ ನಮ್ಮ ಸಂವಿಧಾನದಲ್ಲಿ ರಾಜನ ಅಧಿಕಾರ ಸ್ಥಾನಮಾನ ಸ್ಪೀಕರಿಗೆ ವರ್ಗಾವಣೆಯಾಗಿರುತ್ತದೆ.ಆತನು ಇಡೀ ಸದನಕ್ಕೇ ಪೀಠಾಧಿಪತಿ. ಆತನ ಆಸನವನ್ನು ಪೀಠ ಎಂದು ಸಂಬೋಧಿಸಲಾಗುತ್ತದೆ.

ದೇವಾರಾಧನೆಯಲ್ಲಿ ದೀವಟಿಗೆ ಪ್ರಮುಖವಾಗಿರುತ್ತದೆ. ದೈವ ಏನೆಲ್ಲ ಹೇಳುವುದು,ನಿವೇದಿಸಿಕೊಳ್ಳುವುದಿದ್ದರೂ ಅದಕ್ಕೆ ಅಗ್ನಿ ಸಾಕ್ಷಿಯೇ ಬೇಕು,ಹಾಗಾಗಿ ಅದು ದೊಂದಿಯನ್ನು ಹಿಡಿದುಕೊಳ್ಳುವುದು.

ದೀವಟಿಗೆಯಲ್ಲಿ ಎರಡು ವಿಧ ಕೋಲು ಮತ್ತೊಂದು ಪಂಚ ದೀವಟಿಕೆ.ಕೋಲು ಅದು ಒಂಟಿ, ಪಂಟ ದೀವಟಿಕೆ ಅದು,ಐದು ಕವಲುಗಳಲ್ಲಿರುವುದು.ಅದು ಎಲ್ಲ ದೈವಗಳಿಗೆ ಹಿಡಿಯಲಿಕ್ಕೆ ಅವಕಾಶವಿಲ್ಲ.

  What happens after death ?

ಆ ದೀವಟಿಕೆಯನ್ನು ಉರಿಸಿ ಹಿಡಿದುಕೊಳ್ಳುವುದು ಮಡಿವಾಳ ಜಾತಿ ಸಮುದಾಯಕ್ಕೆ ಸೇರಿದವರು. ಕೋಲು ದೀವಟಿಕೆಯನ್ನು ಹಿಡಿಯುವ ಮಜಿವಾಳನಿಗೆ ದೈವದ ಒಪ್ಪಿಗೆ ಬೇಕಾಗಿಲ್ಲ ಆಗರೆ ಪಂಚ ದೀವಟಿಕೆ ಹಿಡಿಯುವಾತನಿಗೆ ಊರಿನ ರಾಜಂದೈವದ ಒಪ್ಪಿಗೆ ಪಡೆದಿರಬೇಕು.ಅದಕ್ಕೆಲ್ಲ ಕೆಲವು ಆಚರಣೆ, ವಿಧಿ ವಿಧಾನಗಳೊಂದಿಗೆ ಒಪ್ಪಿಗೆ( ಪರವಾನಗಿ) ಪ್ರದಾನ ಮಾಡುವುದು ಉಂಟು.ಅದಕ್ಕೆ ಪಟ್ಟಿಯಾಗುವುದು ಎಂದು ಊರೊಳಗೆ ಹೆಸರಿಸುತ್ತಾರೆ.

ಪಟ್ಟಿಯಾಗದವನು ಯಾವನೇ ಮಡಿವಾಳ ಸಂಬಳದ ಆಸೆಗಾಗಿ ಪಂಚ ದೀವಟಿಕೆಯನ್ನು ಹಮಡಿದು ದೈವದ ಕೋಲ ಸುಧಾರಿಸಿದನೆಂದಾದಲ್ಲಿ ಮುಂದೆ ಅವನಿಗೆ ಮನಸ್ಸು ಚಂಚಲತೆಯ ಖಾಯಿಲೆ ಬರುತ್ತದೆ,ಹುಚ್ಚುಚ್ಚಾಗಿ ವರ್ತಿಸುತ್ತಾನೆ, ಮರ್ಯಾದೆ ಕಳೆದುಕೊಳ್ಳುತ್ತಾನೆ.ಅಂಥದ್ದು ಸಂಭವಿಸಿದ್ದರಿಂದಲೇ ಪಂಚ ದೀವಟಿಕೆ.ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದಿರುತ್ತಾರೆ.

ರಾಜದಂಡವನ್ನು ಕೂಡಾ ಮನೆ ಮಂದಿ ಹಿಡಿದುಕೊಳ್ಳುವಂತಿಲ್ಲ. ಮಹಿಳೆಯರಂತೂ ಅತ್ತ ಸೋಕಬಾರದು.ಯಾಕೆಂದರೆ ಅದು ದೈವದ ಖಾಸಗಿ ಸ್ವತ್ತು ಎಂದೇ ಪರಿಗಣಿಸಿರುತ್ತದೆ.ದೈವ ದೇವರ ಪರವಾಗಿ,ಅದರ ವಿಶೇಷ ಅನುಮತಿಯಲ್ಲಿ ಅರಸನಿಗೆ ರಾಜದಂಡದ ಅಧಿಕಾರ.ಕೆಲವು ಅರಮನೆಯವ್ಲಿ ಅಜ್ಜ,ಪಿಜ್ಜ ಕಾಲದಿಂದ ಬೇರೆ ಯಾರಿಗೂ ಪಟ್ಚಾಭಿಷೇಕವಾಗಿರುವುದಿಲ್ಲವಾದಿದರಿಂದ ಅಲ್ಲಿ ಅರಸನ ಮರ್ಯಾದೆ ಪೂರ್ತಿ ರಾಜದಂಡಕ್ಕೆ ಸಲ್ಲುತ್ತಿರುತ್ತದೆ, ಪುರೋಹಿತರು ಅದನ್ನು ನೆರವೇರಿಸುತ್ತಾರೆ. ಸಂಸತ್ತಿನಲ್ಲಿರಿಸಲಾಗುವ ಸೆಂಗೋಲ್ ಅಥವಾ ರಾಜದಂಡ ಅಥವಾ ನ್ಯಾಯ ದಂಡವು ನಿಯಮ ಹಾಗೂ ವಾಸ್ತು ಪ್ರಕಾರವಾಗಿ ಸ್ಪೀಕರ್ ಅವರ ಪೀಠದ ಬಳಿ ಇರಬೇಕು.ಕಾರಣ ಅದಕ್ಕೆ ಪ್ರಧಾನಿ ಅಸನದ ಬಳಿ ಅಥವಾ ಬೇರೆಲ್ಲೇ ಇಟ್ಚರೂ ಅದು ಅವಮಾನ ಮಾಡಿದಂತಾಗುತ್ತದೆ. ಸೆಂಗೋಲ್ ಅದು ಸ್ಪೀಕರ್ ಪೀಠದಲ್ಲಿಯೆ ಇರಬೇಕು.

-ವಿ. ಕೆ. ವಾಲ್ಪಾಡಿ


Leave a Reply

Your email address will not be published. Required fields are marked *

Translate »