ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮನುಷ್ಯನ ಪಾಪ ಪುಣ್ಯ ಎಲ್ಲಿ ಹೋಗುತ್ತದೆ ?

👣ಹೆಜ್ಜೆ👣
ಇಡುವ
ಮುನ್ನ~~

ಪುಷ್ಕರದ ಸಮಯವೊಂದರಲ್ಲಿ ನದೀ ತೀರದಲ್ಲಿ ನಿಂತಿದ್ದ ಮುನಿವರ್ಯನೊಬ್ಬ ಪುಣ್ಯ ಸ್ನಾನಗಳನ್ನು ಮಾಡುತ್ತಿದ್ದ ಭಕ್ತರನ್ನು ಕಂಡೊಡನೆ ಸಂದೇಹವೊಂದು ಉಂಟಾಗಿ ಕೂಡಲೇ ಆ ನದಿ ಮಾತೆಯನ್ನು ಕರೆದು ಕೇಳುತ್ತಾನೆ- ಮಾತೆಯೇ, ಇವರೆಲ್ಲರೂ ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳೆಲ್ಲವನ್ನು ನೀನು
ಹೊರುವೆಯಲ್ಲಾ ನಿನಗೆ ಭಾರವೆನಿಸದೆ? ಆಗ ಆ ನದಿ ನಾನೆಲ್ಲಿ ಹೊರುತ್ತೇನೆ ಎಲ್ಲವನ್ನು ತೆಗೆದುಕೊಂಡು ಹೋಗಿ ಆ ಸಮುದ್ರದಲ್ಲಿ ಬೆರೆಸುತ್ತಿರುವೆನಲ್ಲವೇ ಎಂದಿತು. ನಂತರ ಆ ಮುನಿಗಳು ಆ ಸಮುದ್ರವನ್ನು ಇದೇ ಪ್ರಶ್ನೆ ಕೇಳಿದಾಗ ನಾನೆಲ್ಲಿ ಭರಿಸುವೆ? ಅವೆಲ್ಲ ಆವಿಯಾಗಿ ಮೇಘಗಳಿಗೆ ಕೊಂಡೈಪಡುವವಲ್ಲವೇ? ಆಶ್ಚರ್ಯಗೊಂಡ ಆ ಮುನಿಯು ಆ ಮೋಡಗಳನ್ನು ಕೇಳಿದನು. ನೀವುಗಳು ಈ ಎಲ್ಲಾ ಪಾಪಗಳನ್ನು
ಹೊರುತ್ತಿರುವಿರಾ? ಆಗ ಮೇಘರಾಜ ಹೇಳಿದನು- ನಾನೇಕೆ ಹೊರಲಿ? ಮುನಿವರ್ಯರೇ, ಆವಿಯಾಗಿ ನನ್ನಲ್ಲಿಗೆ ಬಂದ ಅವುಗಳು ಮತ್ತೆ ಮಳೆಯಾಗಿ ಅದೇ ಮಾನವರ ಮೇಲೆ ಸುರಿಯಲ್ಪಡುವವಲ್ಲವೇ?

  ಕನ್ನಡ ನಾಣ್ನುಡಿ ಸಂಗ್ರಹ ಭಾಗ - ೭ Kannada Proverb Collection

ಮಿತ್ರರೇ ಈ ದೃಷ್ಟಾಂತದ ಅರ್ಥವಿಷ್ಟೇ– ಮಾಡಿದ ಪಾಪಗಳಾಗಲಿ, ಪುಣ್ಯಗಳಾಗಲಿ ಹೊರಳಿ ಬಂದು ನಮ್ಮನ್ನೇ ಸೇರುತ್ತದೆ ಇದು ಖಚಿತ.

ಪ್ರತಿ
👣 ಹೆಜ್ಜೆ👣
ಇಡುವಾಗಲೂ ಯೋಚಿಸಬೇಕಾದವರು/ ಆಲೋಚಿಸಬೇಕಾದವರು ನಾವೇ ಅಲ್ಲವೇ????

Leave a Reply

Your email address will not be published. Required fields are marked *

Translate »