ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ

ನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ:-

ನಾರಾಯಣಬಲಿ
೧. ಉದ್ದೇಶ : ದುರ್ಮರಣ ಹೊಂದಿದ ಅಥವಾ ಆತ್ಮಹತ್ಯೆ ಮಾಡಿದ ಜೀವದ ಕ್ರಿಯಾಕರ್ಮಗಳು ಆಗದೇ ಇರುವುದರಿಂದ ಪ್ರೇತತ್ವವು ಮುಗಿದು ಪಿತೃತ್ವವು ಸಿಗದೇ ಇದ್ದುದರಿಂದ ಅದರ ಲಿಂಗದೇಹವು ಹಾಗೆಯೇ ಅಲೆದಾಡುತ್ತಿರುತ್ತದೆ. ಇಂತಹ ಲಿಂಗದೇಹವು ಕುಲದಲ್ಲಿ ಸಂತತಿ ಆಗಬಾರದೆಂದು ತೊಂದರೆಗಳನ್ನು ಕೊಡುತ್ತದೆ. ಅದೇ ರೀತಿ ಯಾವುದಾದರೊಂದು ರೀತಿಯಲ್ಲಿ ವಂಶಜರಿಗೆ ತೊಂದರೆ ಕೊಡುತ್ತದೆ. ಇಂತಹ ಲಿಂಗದೇಹಕ್ಕೆ ಗತಿಯನ್ನು ನೀಡಲು ನಾರಾಯಣಬಲಿ ವಿಧಿಯನ್ನು ಮಾಡಬೇಕಾಗುತ್ತದೆ.

೨. ವಿಧಿ
ಅ. ವಿಧಿಯನ್ನು ಮಾಡಲು ಯೋಗ್ಯ ಸಮಯ: ನಾರಾಯಣಬಲಿಯ ವಿಧಿಯನ್ನು ಮಾಡಲು ಯಾವುದೇ ತಿಂಗಳ ಶುಕ್ಲ ಏಕಾದಶಿ ಅಥವಾ ದ್ವಾದಶಿಯು ಯೋಗ್ಯವಾಗಿರುತ್ತದೆ. ಏಕಾದಶಿಯಂದು ಅಧಿವಾಸ (ದೇವರ ಸ್ಥಾಪನೆ) ಮಾಡಿ ದ್ವಾದಶಿಯಂದು ಶ್ರಾದ್ಧವನ್ನು ಮಾಡಬೇಕು (ಇತ್ತೀಚೆಗೆ ಹೆಚ್ಚಿನ ಜನರು ಒಂದೇ ದಿನ ವಿಧಿಯನ್ನು ಮಾಡುತ್ತಾರೆ). ಸಂತತಿ ಪ್ರಾಪ್ತಿಗಾಗಿ ಈ ವಿಧಿಯನ್ನು ಮಾಡುವುದಿದ್ದರೆ ದಂಪತಿಗಳು ಸ್ವತಃ ಈ ವಿಧಿಯನ್ನು ಮಾಡಬೇಕು. ಪುತ್ರಪ್ರಾಪ್ತಿಗಾಗಿ ಈ ವಿಧಿಯನ್ನು ಮಾಡುವುದಿದ್ದಲ್ಲ್ಲಿ ಶ್ರವಣ ನಕ್ಷತ್ರ, ಪಂಚಮಿ ಅಥವಾ ಪುತ್ರದಾ ಏಕಾದಶಿ ಇವುಗಳಲ್ಲಿನ ಯಾವುದಾದರೊಂದು ತಿಥಿಗೆ ಮಾಡಿದರೆ ಹೆಚ್ಚು ಲಾಭವಾಗುತ್ತದೆ.

  ಅಲ್ಲಮಪ್ರಭು ವಚನ ಸಂಪೂರ್ಣ ಸಂಗ್ರಹ - Allamaprabhu Vachana collection

ಆ. ವಿಧಿ ಮಾಡಲು ಯೋಗ್ಯ ಸ್ಥಳ: ನದಿತೀರದಂತಹ ಪವಿತ್ರ ಸ್ಥಳದಲ್ಲಿ ಈ ವಿಧಿಯನ್ನು ಮಾಡಬೇಕು.
ಇ. ಪದ್ಧತಿ
ಮೊದಲನೆಯ ದಿನ : ಮೊದಲು ತೀರ್ಥದಲ್ಲಿ ಸ್ನಾನ ಮಾಡಿ ನಾರಾಯಣಬಲಿಯ ಸಂಕಲ್ಪವನ್ನು ಮಾಡಬೇಕು. ಎರಡು ಕಲಶಗಳ ಮೇಲೆ ಶ್ರೀವಿಷ್ಣು ಮತ್ತು ವೈವಸ್ತವ ಯಮ ಇವರ ಸುವರ್ಣಮೂರ್ತಿಗಳನ್ನು ಸ್ಥಾಪಿಸಿ ಅವುಗಳಿಗೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಅನಂತರ ಆ ಕಲಶಗಳ ಪೂರ್ವಕ್ಕೆ ದರ್ಭೆಯಿಂದ ಒಂದು ರೇಖೆಯನ್ನು ಎಳೆದು ದಕ್ಷಿಣದ ಕಡೆಗೆ ದರ್ಭೆಗಳನ್ನು (ಕುಶ) ಹರಡಬೇಕು. ಅದರ ಮೇಲೆ ‘ಶುಂಧಂತಾಂ ವಿಷ್ಣುರೂಪೀ ಪ್ರೇತಃ’ ಈ ಮಂತ್ರದಿಂದ ಹತ್ತು ಬಾರಿ ನೀರನ್ನು ಬಿಡಬೇಕು.
ಅನಂತರ ದಕ್ಷಿಣಕ್ಕೆ ಮುಖಮಾಡಿ ಅಪಸವ್ಯದಿಂದ ವಿಷ್ಣುರೂಪೀ ಪ್ರೇತದ ಧ್ಯಾನವನ್ನು ಮಾಡಬೇಕು. ಆ ಹರಡಿರುವ ದರ್ಭೆಗಳ ಮೇಲೆ ಜೇನುತುಪ್ಪ, ತುಪ್ಪ ಮತ್ತು ಎಳ್ಳುಗಳಿಂದ ತಯಾರಿಸಿದ ಹತ್ತು ಪಿಂಡಗಳನ್ನು ‘ಕಶ್ಯಪಗೋತ್ರ… ಇವರ ಪ್ರೇತ ವಿಷ್ಣುದೈವತ ಅಯಂ ತೆ ಪಿಂಡಃ’ ಎಂದು ಹೇಳಿಕೊಡಬೇಕು. ಪಿಂಡಗಳನ್ನು ಗಂಧಾದಿ ಉಪಚಾರಗಳಿಂದ ಪೂಜಿಸಿ ಅನಂತರ ಅವುಗಳನ್ನು ನದಿಯಲ್ಲಿ ಅಥವಾ ಜಲಾಶಯದಲ್ಲಿ ವಿಸರ್ಜಿಸಬೇಕು. ಇದು ಹಿಂದಿನ ದಿನದ ವಿಧಿಯಾಯಿತು.
ಎರಡನೆಯ ದಿನ: ಮಧ್ಯಾಹ್ನದ ಸಮಯದಲ್ಲಿ ಶ್ರೀವಿಷ್ಣುವಿನ ಪೂಜೆಯನ್ನು ಮಾಡಬೇಕು. ಅನಂತರ ೧, ೩ ಅಥವಾ ೫ ಹೀಗೆ ಬೆಸ ಸಂಖ್ಯೆಯಲ್ಲಿ ಬ್ರಾಹ್ಮಣರನ್ನು ಆಮಂತ್ರಿಸಿ ಏಕೋದ್ದಿಷ್ಟ ವಿಧಿಯಿಂದ ಆ ವಿಷ್ಣುರೂಪೀ ಪ್ರೇತದ ಶ್ರಾದ್ಧವನ್ನು ಮಾಡಬೇಕು. ಈ ಶ್ರಾದ್ಧವನ್ನು ಬ್ರಾಹ್ಮಣರ ಪಾದಪ್ರಕ್ಷಾಲನದಿಂದ ತೃಪ್ತಿಪ್ರಶ್ನೆಯ ತನಕ ಮಂತ್ರರಹಿತವಾಗಿ ಮಾಡಬೇಕು. ಶ್ರೀವಿಷ್ಣು, ಬ್ರಹ್ಮಾ, ಶಿವ ಮತ್ತು ಸಪರಿವಾರ ಯಮ ಇವರಿಗೆ ನಾಮಮಂತ್ರಗಳಿಂದ ನಾಲ್ಕು ಪಿಂಡಗಳನ್ನು ಕೊಡಬೇಕು. ವಿಷ್ಣುರೂಪೀ ಪ್ರೇತಕ್ಕಾಗಿ ಐದನೆಯ ಪಿಂಡವನ್ನು ಕೊಡಬೇಕು. ಪಿಂಡಪೂಜೆಯನ್ನು ಮಾಡಿ ಅವುಗಳ ವಿಸರ್ಜನೆಯಾದ ನಂತರ ಬ್ರಾಹ್ಮಣರಿಗೆ ದಕ್ಷಿಣೆಯನ್ನು ಕೊಡಬೇಕು. ಓರ್ವ ಬ್ರಾಹ್ಮಣರಿಗೆ ವಸ್ತ್ರಾಲಂಕಾರ, ಹಸು ಮತ್ತು ಚಿನ್ನ ಈ ವಸ್ತುಗಳನ್ನು ಕೊಡಬೇಕು. ಅನಂತರ ಪ್ರೇತಕ್ಕೆ ತಿಲಾಂಜಲಿ ನೀಡುವ ಬಗ್ಗೆ ಬ್ರಾಹ್ಮಣರಿಗೆ ಪ್ರಾರ್ಥನೆಯನ್ನು ಮಾಡಬೇಕು. ಬ್ರಾಹ್ಮಣರು ದರ್ಭೆ, ಎಳ್ಳು ಮತ್ತು ತುಳಸೀದಳಗಳಿಂದ ಭರಿತವಾದ ನೀರನ್ನು ಬೊಗಸೆಯಲ್ಲಿ ತೆಗೆದುಕೊಂಡು ಅದನ್ನು ಪ್ರೇತಕ್ಕೆ ನೀಡಬೇಕು. ಅನಂತರ ಶ್ರಾದ್ಧಕರ್ತನು ಸ್ನಾನ ಮಾಡಿ ಭೋಜನ ಮಾಡಬೇಕು. ಈ ವಿಧಿಯಿಂದ ಪ್ರೇತಾತ್ಮಕ್ಕೆ ಸ್ವರ್ಗಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.
ಸ್ಮೃತಿಗ್ರಂಥದಲ್ಲಿ ನಾರಾಯಣಬಲಿ ಮತ್ತು ನಾಗಬಲಿ ಇವುಗಳನ್ನು ಒಂದೇ ಉದ್ದೇಶಕ್ಕಾಗಿ ಹೇಳಿರುವುದರಿಂದ ಎರಡೂ ವಿಧಿಗಳನ್ನು ಜೊತೆಯಲ್ಲಿ ಮಾಡುವ ಪರಂಪರೆಯಿದೆ. ನಾರಾಯಣ-ನಾಗಬಲಿ ಈ ಜೋಡಿಹೆಸರು ಇದೇ ಕಾರಣದಿಂದಾಗಿ ರೂಢಿಗೆ ಬಂದಿದೆ.
ನಾಗಬಲಿ
೧. ಉದ್ದೇಶ : ನಮ್ಮ ಮನೆತನದಲ್ಲಿ ಹಿಂದೆ ಯಾರಾದರೊಬ್ಬ ಪೂರ್ವಜರಿಂದ ನಾಗನ (ನಾಗರಹಾವಿನ) ಹತ್ಯೆಯಾಗಿದ್ದಲ್ಲಿ ಆ ನಾಗನಿಗೆ ಗತಿ ಸಿಗದೇ ಇದ್ದುದರಿಂದ ಅದು ಕುಲದಲ್ಲಿ ಸಂತತಿ ಆಗಬಾರದೆಂದು ತೊಂದರೆಗಳನ್ನು ಕೊಡುತ್ತದೆ, ಹಾಗೆಯೇ ಯಾವುದಾದರೊಂದು ರೀತಿಯಲ್ಲಿ ವಂಶಜರಿಗೆ ತೊಂದರೆಗಳನ್ನು ಕೊಡುತ್ತದೆ. ಈ ದೋಷದ ನಿವಾರಣೆಗಾಗಿ ಈ ವಿಧಿಯನ್ನು ಮಾಡುತ್ತಾರೆ.
೨. ವಿಧಿ : ಸಂತತಿಪ್ರಾಪ್ತಿಗಾಗಿ ಈ ವಿಧಿಯನ್ನು ಮಾಡುವುದಿದ್ದರೆ ಆ ದಂಪತಿಗಳು ಸ್ವತಃ ಈ ವಿಧಿಯನ್ನು ಮಾಡಬೇಕು. ಪುತ್ರಪ್ರಾಪ್ತಿಗಾಗಿ ಮಾಡಬೇಕಾಗಿದ್ದಲ್ಲಿ ಶ್ರವಣ ನಕ್ಷತ್ರ, ಪಂಚಮಿ ಅಥವಾ ಪುತ್ರದಾ ಏಕಾದಶಿ ಇವುಗಳಲ್ಲಿನ ಯಾವುದಾದರೊಂದು ತಿಥಿಗೆ ಮಾಡಿದರೆ ಹೆಚ್ಚು ಲಾಭವಾಗುತ್ತದೆ.’

  ತಾರ್ಕಿಕ ಆಲೋಚನೆ - Logical Thinking - Critical Thinking

ಕೃಷ್ಣಾರ್ಪಣಮಸ್ತು

Leave a Reply

Your email address will not be published. Required fields are marked *

Translate »