ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶ್ರೀರಾಘವೇಂದ್ರತೀರ್ಥ ಗುರು ಸಾರ್ವಭೌಮರ ವರ್ದಂತಿ ಮತ್ತು ಶ್ರೀ ರಾಘವೇಂದ್ರ ಸ್ತೋತ್ರ

ಇಂದು ಶ್ರೀರಾಘವೇಂದ್ರತೀರ್ಥ ಗುರು ಸಾರ್ವಭೌಮರು ಧರೆಯಲ್ಲವತರಿಸಿದ ದಿನ.

ಪಾಮರರನ್ನು ಉದ್ಧರಿಸಲು ಧರೆಗೆ ಬಂದ ಮಹಾಗುರುಗಳ *427* ನೇ ವರ್ಧಂತಿ. ಇಂತಹ ಪರ್ವಕಾಲದಲ್ಲಿ ಗುರುಗಳನ್ನು ವಿಶೇಷವಾಗಿ ಸ್ಮರಿಸೋಣ. ಅನನ್ಯ ಭಕ್ತಿಯಿಂದ ಯತಿಕುಲ ತಿಲಕರನ್ನು ಬೇಡೋಣ.

ಶಂಕುಕರ್ಣಾಖ್ಯದೇವಸ್ತು ಬ್ರಹ್ಮ ಶಾಪಾಶ್ಚ ಭೂತಲೇ| ಪ್ರಹ್ಲಾದ ಇತಿ ವಿಖ್ಯಾತಃ ಭೂಭಾರಕ್ಷಪಣೇರತಃ | ಕಲೌ ಯುಗೇ ರಾಮಸೇವಾಂ ಕುರ್ವನ್ಮಂತ್ರಾಲಯೇ ಭವೇತ್ | ಸ ಏವ ರಾಘವೇಂದ್ರಾಖ್ಯೋ ಯತಿರೂಪೇಣ ಸರ್ವದಾ||

(ಶಂಕುಕರ್ಣ ಎಂಬ ದೇವತೆ, ಬ್ರಹ್ಮದೇವರ ಶಾಪದಿಂದ ಭೂಮಿಯಲ್ಲಿ ಪ್ರಹ್ಲಾದರಾಜರಾಗಿ ಅವತರಿಸಿದರು. ನಂತರ ದ್ವಾಪರದಲ್ಲಿ ಬಾಹ್ಲೀಕರಾಜರಾದರು. ಕಲಿಯುಗದಲ್ಲಿ ಗೋಪಾಲಕೃಷ್ಣನ ಸೇವೆ ಮಾಡಿ, ನಂತರ ಶ್ರೀರಾಮದೇವರ ಸೇವೆಗಾಗಿ ಮಂತ್ರಾಲಯದಲ್ಲಿ ಶ್ರೀರಾಘವೇಂದ್ರತೀರ್ಥ ಎಂಬ ಯತಿಗಳಾಗಿ ನಿಂತಿದ್ದಾರೆ).

ಶಂಕುಕರ್ಣ ಎಂಬ ದೇವತೆ ಬ್ರಹ್ಮದೇವರ ಪರಿಚಾರಕನಾಗಿದ್ದರು. ಶ್ರೀಮನ್ಮೂಲರಾಮದೇವರ(ರಮಯತೇ ಇತಿ ರಾಮಃ) ಪೂಜೆಗೆ ಸುಗಂಧ ಪುಷ್ಪ ಹಾಗೂ ಶ್ರೀತುಳಸಿ ತಂದುಕೊಡುವುದು ಇವರ ಕೆಲಸವಾಗಿತ್ತು. ಒಮ್ಮೆ ಬ್ರಹ್ಮನ ಕೋಪಕ್ಕೆ ಗುರಿಯಾದರು. ಇದರ ಫಲವಾಗಿ ಹಿರಣ್ಯಕಶ್ಯಪುವಿನ ಮಗ ಪ್ರಹ್ಲಾದರಾಜರಾಗಿ, ನಂತರ ದ್ವಾಪರಯುಗದಲ್ಲಿ ಬಾಹ್ಲೀಕರಾಜರಾಗಿ ಅವತರಿಸಿದರು. ಕಲಿಯುಗದಲ್ಲಿ ಶ್ರೀವ್ಯಾಸತೀರ್ಥರಾಗಿ ಶ್ರೀಗೋಪಾಲಕೃಷ್ಣನನ್ನು ಆರಾಧಿಸಿ, ನಂತರ ಶ್ರೀವೆಂಕಟನಾಥರಾಗಿ ಜನಿಸಿದರು. ಇದೇ ವೆಂಕಟನಾಥರು ಶ್ರೀರಾಘವೇಂದ್ರ ಗುರುಸಾರ್ವಭೌಮರಾಗಿ ಮಂತ್ರಾಲಯ ಸುಕ್ಷೇತ್ರದಲ್ಲಿ ನಿಂತು ಅಧುನಾ ಪೀಠಾಧಿಪತಿಗಳ ಹೃತ್ಕಮಲದಲ್ಲಿ ನಿಂತು ಶ್ರೀಮನ್ಮೂಲರಾಮದೇವರ ಸೇವೆ ನಡೆಸುತ್ತಿದ್ದಾರೆ.

ದ್ವೈತ ಸಾಮ್ರಾಜ್ಯದ ಮೇರು ಚಕ್ರವರ್ತಿಗಳು, ಯತಿಗಳಲ್ಲೇ ಇಂದ್ರನಂತೆ ಶೋಭಿಸುವ ರಾಯರು, 1595ರಲ್ಲಿ ತಮಿಳುನಾಡಿನ ಭುವನಗಿರಿಯಲ್ಲಿ ಶ್ರೀತಿಮ್ಮಣ್ಣ ಭಟ್ಟ ಹಾಗೂ ಸಾಧ್ವಿ ಗೋಪಿಕಾಂಬೆಯರ ಪುತ್ರನಾಗಿ ಜನಿಸಿದರು.

ತಿಮ್ಮಣ್ಣಭಟ್ಟರ ಕುಲದೈವ ಭೂ ವೈಕುಂಟವೆನಿಸಿರುವ ತಿರುಪತಿಯ ಶ್ರೀ‌ನಿವಾಸನ ಅನುಗ್ರಹದಿಂದ ಜನಿಸಿದ ಮಗುವಿಗೆ ವೆಂಕಟನಾಥನೆಂದು ನಾಮಕರಣ ಮಾಡಿದರು.

ಬಾಲ್ಯದಲ್ಲೇ ಅತ್ಯಂತ ಸೂಕ್ಷ್ಮಮತಿಯಾಗಿದ್ದ ವೆಂಕಟನಾಥರಿಗೆ, ಆರಂಭದಲ್ಲಿ ಸಹೋದರಿಯ ಪತಿ ಲಕ್ಷ್ಮೀನರಸಿಂಹಾಚಾರ್ಯರ ಬಳಿ ವಿದ್ಯಾಭ್ಯಾಸ ಮಾಡುವ ಅವಕಾಶ ಪ್ರಾಪ್ತವಾಯಿತು.

ವಿದ್ಯಾಭ್ಯಾಸದ ನಂತರ, ದ್ವೈತ ಸಿದ್ಧಾಂತ ಸುಧಾಂಬುದಿಯಲ್ಲಿ ವಿಹರಿಸಬೇಕೆಂಬ ಅಗಮ್ಯವಾದ ಆಸೆಯಿಂದ ಕುಂಭಕೋಣದಲ್ಲಿದ್ದ ಶ್ರೀಸುಧೀಂದ್ರತೀರ್ಥರ ಬಳಿ ಆಶ್ರಯ ಪಡೆದು ಯಶಕಂಡರು. ನಂತರ ಶ್ರೀಸುಧೀಂದ್ರತೀರ್ಥರ ಗುರುಗಳಾದ ಚತುಃಷಷ್ಠಿ(ಅರವತ್ತನಾಲ್ಕು) ವಿದ್ಯಾ ವಿಶಾರದರಾದ ಶ್ರೀವಿಜಯೀಂದ್ರತೀರ್ಥರಿಂದ ಪ್ರೇರಿತರಾಗಿ ಸಾಕಷ್ಟು ಪಾರಮಾರ್ಥಿಕ ಸಾಧನೆ ಮಾಡಿದರು. ಕೊನೆಗೆ ಶ್ರೀರಾಮದೇವರ ಇಚ್ಛೆಯಂತೆ, ಶ್ರೀವಾಗ್ದೇವಿಯ ಅನುಜ್ಣೆಪಡೆದು ಶ್ರೀಸುಧೀಂದ್ರತೀರ್ಥರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿ ‘ಶ್ರೀರಾಘವೇಂದ್ರತೀರ್ಥ’ ರಾದರು.

ಈ ಮಹಾನುಭಾವರ ಮಹತ್ವ ಎಷ್ಟು ವರ್ಣಿಸಿದರು ಸಾಲದು..

ಕಷ್ಟದಲ್ಲಿರುವವರ ಪಾಲಿಗೆ ಕರಿವರದ(ಆನೆಯನ್ನು ಅನುಗ್ರಹಿಸಿದ)ನಂತೆ ‘ಕರುಣೆ ತೋರುವ’ ಕಲಿಯುಗದ ಕಾಮಧೇನು. ದೇಹಿ ಎಂದ ದೀನರ ಪಾಲಿಗೆ ‘ಬವಣೆಯಲ್ಲವೀ ಬದುಕು’ ಎಂದು ‘ಅಜನಪಿತನ(ಬ್ರಹ್ಮನ ತಂದೆ)’ ತೋರುವ ದಯಾನಿಧಿ. ನಾನು ಅನಾಥ ಎಂದಾಕ್ಷಣ ‘ನಾರಾಯಣ’ ನಂತೆ ‘ನಾಥ(ಒಡೆಯ)’ನಾಗಿ ಕೈಪಿಡಿವ ಕಾರುಣ್ಯದ ಕಡಲು.  ಮನಕೆ ದುಃಖವಾದಾಗ ಮುದದಿ ‘ಮಂದರೋದ್ಧಾರ(ಮಂದರ ಪರ್ವತವನ್ನೊತ್ತ)’ ನಂತೆ ಮಂದಾನಿಲ(ತಂಗಾಳಿ) ಸುರಿಸುವ ಮಂತ್ರಾಲಯದ ಮಹಾಪ್ರಭು. ಜಗತ್ತು, ಜೀವನ ಕತ್ತಲು ಎಂದು ಭಾಸವಾದಾಗ ‘ಜಗನ್ನಾಥ ವಿಠ್ಠಲ’ ನೆಂಬ ‘ಜೀಯ(ಒಡೆಯ)’ನಿದ್ದಾನೆಂದು ತೋರುವ ಕಲ್ಪಧ್ರುಮ. ಸುಖವಿಲ್ಲದೆ ಬಾಳಿಗೆ ‘ಗಂಗಾಜನಕ’(ಶ್ರೀತ್ರಿವಿಕ್ರಮ) ನಂತೆ ಸುಂದರ ಸುಧೆಯನ್ನು ಸ್ಪುರಿಸಿ ಸಮ್ಮೋಹನಗೊಳಿಸುವ ಸುರತರು. ನಲಿವನ್ನು ಕಾಣದ ನೋವಿನ ಮನಸ್ಸಿಗೆ ‘ಕಪಿಲ’ ನಂತೆ ತಂಪೆರೆವ ಸುರನದಿ. ಅನ್ಯರಿಂದ ಅಪಮಾನವಾಯಿತೆಂದು ನೊಂದ ಜೀವಕೆ  ‘ಕಂದಾ ನಾನಿರುವೆನೆಂದ’ ನರಹರಿಯ ತೋರುವ ಯತಿರಾಜರು. ಮಧ್ವಮತದ ಮೇರು ಕುಸುಮವಾಗಿ ಮಂದಿಗೆ ‘ಮಾಧವ’ನ ತೋರಿದ. ಬಡವ, ಬಲ್ಲಿದನೆಂಬ ಭೇದ ತೋರದೆ ಅನುಗ್ರಹಿಸುತ್ತಿರುವ ಕಲಿಯುಗದ ಕಲ್ಪವೃಕ್ಷ, ಮಹಾನುಭಾವರಾದ *‘ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರು’.

ಇಂತಹ ಮಹಾನುಭಾವರ ಜನ್ಮದಿನದಂದು ಅವರನ್ನು ಸ್ಮರಿಸುವುದರ ಜತೆ, ಭಜಿಸೋಣ. ಸ್ಮರಣೆಯ ಫಲ ‘ರಾ’ ಎಂದರೆ ರಾಶಿ ದೋಷಗಳನ್ನು ದೂರಮಾಡುವರು. ‘ಘ’ ಎಂದರೆ ಘನ ಗಾನ ಭಕ್ತಿಯನ್ನು ನೀಡುವರು. ‘ವೇಂ’ ಎಂದರೆ ವೇಗದಿ ಜನನ ಮರಣಗಳನ್ನು ದೂರ ಮಾಡುವರು, ‘ದ್ರ’ ಎಂದರೆ ದ್ರವಿಣಾರ್ಥ ಶ್ರುತಿ ಪಾದ್ಯನಾದ ಶ್ರೀಹರಿಯನ್ನು ತೋರಿಸುವರು.

  ನಮಸ್ಕಾರ ಪ್ರಾಮುಖ್ಯತೆ

ಈ ದಿನ ಸಾಧ್ಯವಾದವರು ರಾಯರ ಸ್ತೋತ್ರ ಪಠಿಸಿ, ಸಾಧ್ಯವಾಗದಿದ್ದಲ್ಲಿ ಸಂಕ್ಷಿಪ್ತವಾಗಿ ಕೆಳಗೆ ಅರ್ಥ ನೀಡಲಾಗಿದೆ, ಓದಿ ಅರ್ಥೈಸಿಕೊಳ್ಳಿ.

ಶ್ರೀ ರಾಘವೇಂದ್ರ ಸ್ತೋತ್ರ:

ಶ್ರೀಪೂರ್ಣಬೋಧಗುರುತೀರ್ಥಪಯೋಬ್ಧಿಪಾರಾ ಕಾಮಾರಿಮಾಕ್ಷವಿಷಮಾಕ್ಷಶಿರಃ ಸ್ಪೃಶನ್ತೀ । ಪೂರ್ವೋತ್ತರಾಮಿತತರಂಗಚರತ್ಸುಹಂಸಾ ದೇವಾಲಿಸೇವಿತಪರಾಂಘ್ರಿಪಯೋಜಲಗ್ನಾ ॥ 1॥
ಜೀವೇಶಭೇದಗುಣಪೂರ್ತಿಜಗತ್ಸುಸತ್ತ್ವ ನೀಚೋಚ್ಚಭಾವಮುಖನಕ್ರಗಣೈಃ ಸಮೇತಾ ।
ದುರ್ವಾದ್ಯಜಾಪತಿಗಿಲೈರ್ಗುರುರಾಘವೇನ್ದ್ರವಾಗ್ದೇವತಾಸರಿದಮುಂ ವಿಮಲೀಕರೋತು ॥ 2॥
ಶ್ರೀರಾಘವೇನ್ದ್ರಃ ಸಕಲಪ್ರದಾತಾ ಸ್ವಪಾದಕಂಜದ್ವಯಭಕ್ತಿಮದ್ಭ್ಯಃ ।
ಅಘಾದ್ರಿಸಮ್ಭೇದನದೃಷ್ಟಿವಜ್ರಃ ಕ್ಷಮಾಸುರೇನ್ದ್ರೋಽವತು ಮಾಂ ಸದಾಽಯಮ್ ॥ 3॥
ಶ್ರೀರಾಘವೇನ್ದ್ರೋಹರಿಪಾದಕಂಜನಿಷೇವಣಾಲ್ಲಬ್ಧಸಮಸ್ತಸಮ್ಪತ್ ।
ದೇವಸ್ವಭಾವೋ ದಿವಿಜದ್ರುಮೋಽಯಮಿಷ್ಟಪ್ರದೋ ಮೇ ಸತತಂ ಸ ಭೂಯಾತ್ ॥ 4॥
ಭವ್ಯಸ್ವರೂಪೋ ಭವದುಃಖತೂಲಸಂಘಾಗ್ನಿಚರ್ಯಃ ಸುಖಧೈರ್ಯಶಾಲೀ ।
ಸಮಸ್ತದುಷ್ಟಗ್ರಹನಿಗ್ರಹೇಶೋ ದುರತ್ಯಯೋಪಪ್ಲವಸಿನ್ಧುಸೇತುಃ ॥ 5॥
ನಿರಸ್ತದೋಷೋ ನಿರವದ್ಯವೇಷಃ ಪ್ರತ್ಯರ್ಥಿಮೂಕತ್ತ್ವನಿದಾನಭಾಷಃ ।
ವಿದ್ವತ್ಪರಿಜ್ಞೇಯಮಹಾವಿಶೇಷೋ ವಾಗ್ವೈಖರೀನಿರ್ಜಿತಭವ್ಯಶೇಷಃ ॥ 6॥
ಸನ್ತಾನಸಮ್ಪತ್ಪರಿಶುದ್ಧಭಕ್ತಿವಿಜ್ಞಾನವಾಗ್ದೇಹಸುಪಾಟವಾದೀನ್ ।
ದತ್ತ್ವಾ ಶರೀರೋತ್ಥಸಮಸ್ತದೋಷಾನ್ ಹತ್ತ್ವಾ ಸ ನೋಽವ್ಯಾದ್ಗುರುರಾಘವೇನ್ದ್ರಃ ॥ 7॥
ಯತ್ಪಾದೋದಕಸಂಚಯಃ ಸುರನದೀಮುಖ್ಯಾಪಗಾಸಾದಿತಾ-
ಸಂಖ್ಯಾಽನುತ್ತಮಪುಣ್ಯಸಂಘವಿಲಸತ್ಪ್ರಖ್ಯಾತಪುಣ್ಯಾವಹಃ ।
ದುಸ್ತಾಪತ್ರಯನಾಶನೋ ಭುವಿ ಮಹಾ ವನ್ಧ್ಯಾಸುಪುತ್ರಪ್ರದೋ
ವ್ಯಂಗಸ್ವಂಗಸಮೃದ್ಧಿದೋ ಗ್ರಹಮಹಾಪಾಪಾಪಹಸ್ತಂ ಶ್ರಯೇ ॥ 8॥
ಯತ್ಪಾದಕಂಜರಜಸಾ ಪರಿಭೂಷಿತಾಂಗಾ ಯತ್ಪಾದಪದ್ಮಮಧುಪಾಯಿತಮಾನಸಾ ಯೇ ।
ಯತ್ಪಾದಪದ್ಮಪರಿಕೀರ್ತನಜೀರ್ಣವಾಚಸ್ತದ್ದರ್ಶನಂ ದುರಿತಕಾನನದಾವಭೂತಮ್ ॥ 9॥
ಸರ್ವತನ್ತ್ರಸ್ವತನ್ತ್ರೋಽಸೌ ಶ್ರೀಮಧ್ವಮತವರ್ಧನಃ ।
ವಿಜಯೀನ್ದ್ರಕರಾಬ್ಜೋತ್ಥಸುಧೀನ್ದ್ರವರಪುತ್ರಕಃ ।
ಶ್ರೀರಾಘವೇನ್ದ್ರೋ ಯತಿರಾಟ್ ಗುರುರ್ಮೇ ಸ್ಯಾದ್ಭಯಾಪಹಃ ॥ 10॥
ಜ್ಞಾನಭಕ್ತಿಸುಪುತ್ರಾಯುಃ ಯಶಃ ಶ್ರೀಪುಣ್ಯವರ್ಧನಃ ।
ಪ್ರತಿವಾದಿಜಯಸ್ವಾನ್ತಭೇದಚಿಹ್ನಾದರೋ ಗುರುಃ ।
ಸರ್ವವಿದ್ಯಾಪ್ರವೀಣೋಽನ್ಯೋ ರಾಘವೇನ್ದ್ರಾನ್ನವಿದ್ಯತೇ ॥ 11॥
ಅಪರೋಕ್ಷೀಕೃತಶ್ರೀಶಃ ಸಮುಪೇಕ್ಷಿತಭಾವಜಃ ।
ಅಪೇಕ್ಷಿತಪ್ರದಾತಾಽನ್ಯೋ ರಾಘವೇನ್ದ್ರಾನ್ನವಿದ್ಯತೇ ॥ 12॥
ದಯಾದಾಕ್ಷಿಣ್ಯವೈರಾಗ್ಯವಾಕ್ಪಾಟವಮುಖಾಂಕಿತಃ ।
ಶಾಪಾನುಗ್ರಹಶಕ್ತೋಽನ್ಯೋ ರಾಘವೇನ್ದ್ರಾನ್ನವಿದ್ಯತೇ ॥ 13॥
ಅಜ್ಞಾನವಿಸ್ಮೃತಿಭ್ರಾನ್ತಿಸಂಶಯಾಪಸ್ಮೃತಿಕ್ಷಯಾಃ ।
ತನ್ದ್ರಾಕಮ್ಪವಚಃಕೌಂಠ್ಯಮುಖಾ ಯೇ ಚೇನ್ದ್ರಿಯೋದ್ಭವಾಃ ।
ದೋಷಾಸ್ತೇ ನಾಶಮಾಯಾನ್ತಿ ರಾಘವೇನ್ದ್ರಪ್ರಸಾದತಃ ॥ 14॥
`ಓಂ ಶ್ರೀ ರಾಘವೇನ್ದ್ರಾಯ ನಮಃ ‘ ಇತ್ಯಷ್ಟಾಕ್ಷರಮನ್ತ್ರತಃ ।
ಜಪಿತಾದ್ಭಾವಿತಾನ್ನಿತ್ಯಂ ಇಷ್ಟಾರ್ಥಾಃ ಸ್ಯುರ್ನಸಂಶಯಃ ॥ 15॥
ಹನ್ತು ನಃ ಕಾಯಜಾನ್ದೋಷಾನಾತ್ಮಾತ್ಮೀಯಸಮುದ್ಭವಾನ್ ।
ಸರ್ವಾನಪಿ ಪುಮರ್ಥಾಂಶ್ಚ ದದಾತು ಗುರುರಾತ್ಮವಿತ್ ॥ 16॥
ಇತಿ ಕಾಲತ್ರಯೇ ನಿತ್ಯಂ ಪ್ರಾರ್ಥನಾಂ ಯಃ ಕರೋತಿ ಸಃ ।
ಇಹಾಮುತ್ರಾಪ್ತಸರ್ವೇಷ್ಟೋ ಮೋದತೇ ನಾತ್ರ ಸಂಶಯಃ ॥ 17॥
ಅಗಮ್ಯಮಹಿಮಾ ಲೋಕೇ ರಾಘವೇನ್ದ್ರೋ ಮಹಾಯಶಾಃ ।
ಶ್ರೀಮಧ್ವಮತದುಗ್ಧಾಬ್ಧಿಚನ್ದ್ರೋಽವತು ಸದಾಽನಘಃ ॥ 18॥
ಸರ್ವಯಾತ್ರಾಫಲಾವಾಪ್ತ್ಯೈ ಯಥಾಶಕ್ತಿಪ್ರದಕ್ಷಿಣಮ್ ।
ಕರೋಮಿ ತವ ಸಿದ್ಧಸ್ಯ ವೃನ್ದಾವನಗತಂ ಜಲಮ್ ।
ಶಿರಸಾ ಧಾರಯಾಮ್ಯದ್ಯ ಸರ್ವತೀರ್ಥಫಲಾಪ್ತಯೇ ॥ 19॥
ಸರ್ವಾಭೀಷ್ಟಾರ್ಥಸಿದ್ಧ್ಯರ್ಥಂ ನಮಸ್ಕಾರಂ ಕರೋಮ್ಯಹಮ್ ।
ತವ ಸಂಕೀರ್ತನಂ ವೇದಶಾಸ್ತ್ರಾರ್ಥಜ್ಞಾನಸಿದ್ಧಯೇ ॥ 20॥
ಸಂಸಾರೇಽಕ್ಷಯಸಾಗರೇ ಪ್ರಕೃತಿತೋಽಗಾಧೇ ಸದಾ ದುಸ್ತರೇ ।
ಸರ್ವಾವದ್ಯಜಲಗ್ರಹೈರನುಪಮೈಃ ಕಾಮಾದಿಭಂಗಾಕುಲೇ ।
ನಾನಾವಿಭ್ರಮದುರ್ಭ್ರಮೇಽಮಿತಭಯಸ್ತೋಮಾದಿಫೇನೋತ್ಕಟೇ ।
ದುಃಖೋತ್ಕೃಷ್ಟವಿಷೇ ಸಮುದ್ಧರ ಗುರೋ ಮಾ ಮಗ್ನರೂಪಂ ಸದಾ ॥ 21॥
ರಾಘವೇನ್ದ್ರಗುರುಸ್ತೋತ್ರಂ ಯಃ ಪಠೇದ್ಭಕ್ತಿಪೂರ್ವಕಮ್ ।
ತಸ್ಯ ಕುಷ್ಠಾದಿರೋಗಾಣಾಂ ನಿವೃತ್ತಿಸ್ತ್ವರಯಾ ಭವೇತ್ ॥ 22॥
ಅನ್ಧೋಽಪಿ ದಿವ್ಯದೃಷ್ಟಿಃ ಸ್ಯಾದೇಡಮೂಕೋಽಪಿ ವಾಗ್ಪತಿಃ ।
ಪೂರ್ಣಾಯುಃ ಪೂರ್ಣಸಮ್ಪತ್ತಿಃ ಸ್ತೋತ್ರಸ್ಯಾಸ್ಯ ಜಪಾದ್ಭವೇತ್ ॥ 23॥
ಯಃ ಪಿಬೇಜ್ಜಲಮೇತೇನ ಸ್ತೋತ್ರೇಣೈವಾಭಿಮನ್ತ್ರಿತಮ್ ।
ತಸ್ಯ ಕುಕ್ಷಿಗತಾ ದೋಷಾಃ ಸರ್ವೇ ನಶ್ಯನ್ತಿ ತತ್ಕ್ಷಣಾತ್ ॥ 24॥
ಯದ್ವೃನ್ದಾವನಮಾಸಾದ್ಯ ಪಂಗುಃ ಖಂಜೋಽಪಿ ವಾ ಜನಃ ।
ಸ್ತೋತ್ರೇಣಾನೇನ ಯಃ ಕುರ್ಯಾತ್ಪ್ರದಕ್ಷಿಣನಮಸ್ಕೃತಿ ।
ಸ ಜಂಘಾಲೋ ಭವೇದೇವ ಗುರುರಾಜಪ್ರಸಾದತಃ ॥ 25॥
ಸೋಮಸೂರ್ಯೋಪರಾಗೇ ಚ ಪುಷ್ಯಾರ್ಕಾದಿಸಮಾಗಮೇ ।
ಯೋಽನುತ್ತಮಮಿದಂ ಸ್ತೋತ್ರಮಷ್ಟೋತ್ತರಶತಂ ಜಪೇತ್ ।
ಭೂತಪ್ರೇತಪಿಶಾಚಾದಿಪೀಡಾ ತಸ್ಯ ನ ಜಾಯತೇ ॥ 26॥
ಏತತ್ಸ್ತೋತ್ರಂ ಸಮುಚ್ಚಾರ್ಯ ಗುರೋರ್ವೃನ್ದಾವನಾನ್ತಿಕೇ ।
ದೀಪಸಂಯೋಜನಾಜ್ಞಾನಂ ಪುತ್ರಲಾಭೋ ಭವೇದ್ಧ್ರುವಮ್ ॥ 27॥
ಪರವಾದಿಜಯೋ ದಿವ್ಯಜ್ಞಾನಭಕ್ತ್ಯಾದಿವರ್ಧನಮ್ ।
ಸರ್ವಾಭೀಷ್ಟಪ್ರವೃದ್ಧಿಸ್ಸ್ಯಾನ್ನಾತ್ರ ಕಾರ್ಯಾ ವಿಚಾರಣಾ ॥ 28॥
ರಾಜಚೋರಮಹಾವ್ಯಾಘ್ರಸರ್ಪನಕ್ರಾದಿಪೀಡನಮ್ ।
ನ ಜಾಯತೇಽಸ್ಯ ಸ್ತೋತ್ರಸ್ಯ ಪ್ರಭಾವಾನ್ನಾತ್ರ ಸಂಶಯಃ ॥ 29॥
ಯೋ ಭಕ್ತ್ಯಾ ಗುರುರಾಘವೇನ್ದ್ರಚರಣದ್ವನ್ದ್ವಂ ಸ್ಮರನ್ ಯಃ ಪಠೇತ್ ।
ಸ್ತೋತ್ರಂ ದಿವ್ಯಮಿದಂ ಸದಾ ನಹಿ ಭವೇತ್ತಸ್ಯಾಸುಖಂ ಕಿಂಚನ ।
ಕಿಂ ತ್ವಿಷ್ಟಾರ್ಥಸಮೃದ್ಧಿರೇವ ಕಮಲಾನಾಥಪ್ರಸಾದೋದಯಾತ್ ।
ಕೀರ್ತಿರ್ದಿಗ್ವಿದಿತಾ ವಿಭೂತಿರತುಲಾ ಸಾಕ್ಷೀ ಹಯಾಸ್ಯೋಽತ್ರ ಹಿ ॥ 30॥
ಇತಿ ಶ್ರೀ ರಾಘವೇನ್ದ್ರಾರ್ಯ ಗುರುರಾಜಪ್ರಸಾದತಃ ।
ಕೃತಂ ಸ್ತೋತ್ರಮಿದಂ ಪುಣ್ಯಂ ಶ್ರೀಮದ್ಭಿರ್ಹ್ಯಪ್ಪಣಾಭಿದೈಃ ॥ 31॥
ಇತಿ ಶ್ರೀ ಅಪ್ಪಣ್ಣಾಚಾರ್ಯವಿರಚಿತ ಶ್ರೀರಾಘವೇಂದ್ರಸ್ತೋತ್ರಂ ಸಂಪೂರ್ಣಮ್

ಶ್ರೀ ಪೂರ್ಣ ಬೋಧರೆನೆಸಿದ ಮಧ್ವಾಚಾರ್ಯ ರೆಂಬ ಸಾಗರವನ್ನು ಸೇರುವ ಗಂಗೆಯಂತಿರುವ ಪೂರ್ವ -ಉತ್ತರ ಮೀಮಾಂಸಾ ಶಾಸ್ತ್ರ ಗಳೆಂಬ ಅಲೆಗಳುಳ್ಳ ರಾಘವೇಂದ್ರರೆಂಬ ವಾಕ್ ಪ್ರವಾಹವು ನಮ್ಮನ್ನು ಸಲಹಲಿ.  ಶ್ರೀ ರಾಘವೇಂದ್ರರು ಸಕಲಾಭೀಷ್ಟದಾತರು. ತಮ್ಮನ್ನು ನಂಬಿದವರ ಸಕಲ ಪಾಪಗಳೆಂಬ ರಾಶಿಗೆ ವಜ್ರಾಯುಧ ದಂತೆ ಇರುವ ದಯಾನಿಧಿ. ಇಂದ್ರ ಸಮಾನರಾದ ಗುರುಗಳು ನಮ್ಮನ್ನು ಕಾಪಾಡಲಿ.  ಶ್ರೀ ರಾಘವೇಂದ್ರರುಹರಿಪಾದ ಕಮಲ ಸೇವೆಯಿಂದಲಭಿಸಿದ ಸಕಲ ಸಂಪತ್ತುಳ್ಳ ದೇವತಾ ಸ್ವಭಾವದವರು. ಕಲ್ಪತರುವಿನಂತಿರುವ ಗುರುಗಳು ಇಷ್ಟ ಪ್ರದಾತರಾಗಲಿ. ಶ್ರೀರಾಘವೇಂದ್ರಾಯ ನಮಃಎಂಬ ಮಂತ್ರದಿಂದ ಎಲ್ಲಾ ದೋಷಗಳು ಪರಿಹಾರವಾಗುತ್ತದೆ ಈ ಮಂತ್ರದ ಜಪದಿಂದ ಸಕಲಾಭೀಷ್ಚಲಿಸಿಧ್ಧಿ ,ಸೌಖ್ಯ ಲಭಿಸುತ್ತದೆ ರಾಘವೇಂದ್ರರು ಮಹಿಮೆ ಯುಳ್ಳವರು. ಸಕಲ ಯಾತ್ರಾಫಲವು ವೃಂದಾವನ ಪ್ರದಕ್ಷಣೆ ,ತೀರ್ಥ ಸ್ವೀಕಾರ ಮಾಡಿದರೆ ಸರ್ವಾಭೀಷ್ಟ ಸಿದ್ಘಿ,ಜ್ಞಾನ ಸಿದ್ಧಿಸುತ್ತದೆ. ಸತ್ಯ ಧರ್ಮ ರೂಪನಾದ ಪರಮಾತ್ಮನಲ್ಲಿ ಆಸಕ್ತರಾಗಿ ನಂಬಿದವರಿಗೆ ಕಲ್ಪವೃಕ್ಷದಂತೆ ,ನಂಬಿದವರಿಗೆ ಕಾಮಧೇನುವಿನಂತೆ ಇರುವ ಗುರುಸಾರ್ವಭೌಮ ರಾಘವೇಂದ್ರತೀರ್ಥರಿಗೆ ನಮನಗಳು. 

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

ಮೂಕೋಪಿ ಯತ್ಪ್ರಸಾದೇನ ಮುಕುಂದ ಶಯನಾಯತೇ| ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ||

ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ| ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ ||

ಆಪಾದಃ ಮೌಲಿ ಪರ್ಯಂತಂ ಗುರೂಣಾಂ ಆಕೃತಿಂ ಸ್ಮರೇತ್| ತೇನ ವಿಘ್ನಾಃ ಪ್ರಣಶ್ಯಂತಿ ಸಿಧ್ಧ್ಯಂತಿ ಚ ಮನೋರಥಾಃ ||

ಶ್ರೀಮದ್ರಾಘವೇಂದ್ರತೀರ್ಥ ಗುರುವಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಸೀತಾಪತಿ ಶ್ರೀಮನ್ಮೂಲರಾಮ ದೇವರು ಎಲ್ಲರನ್ನು ಅನುಗ್ರಹಿಸಲಿ.
🙏🙏🙏

Leave a Reply

Your email address will not be published. Required fields are marked *

Translate »