ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ

||ಓಂ||

ವಿಷಯ : ಕಾವೇರಿ ತೀರ್ಥ ಉಗಮ

ಕೊಡಗು:ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ದಿನಾಂಕ, ಸಮಯ ನಿಗದಿಯಾಗಿದೆ. 2022 ಅಕ್ಟೋಬರ್​ 17ರಂದು ಸೋಮವಾರ ರಾತ್ರಿ 7:21ಕ್ಕೆ ಮೇಷ ಲಗ್ನದ ಶುಭ ಘಳಿಗೆಯಲ್ಲಿ ಪವಿತ್ರ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.‌

  1. ಅಕ್ಟೋಬರ್ ತಿಂಗಳು ಹಲವಾರು ವಿಷಯಗಳಿಂದ ಪರಿಶುದ್ಧ ಮಾಸ ಎಂದು ಹೇಳಬಹುದು ಮೊದಲನೆಯದಾಗಿ ಅಕ್ಟೋಬರ್ ತಿಂಗಳಲ್ಲಿ ಬರುವ ತುಲಾ ಸಂಕ್ರಮಣ ಇದು ಬಹಳ ವಿಶೇಷವಾದಂತಹ ದಿನ ಎರಡನೆಯದಾಗಿ ಅಕ್ಟೋಬರ್ 17ರಂದು ಪ್ರತಿವರ್ಷ ಕಾವೇರಿ ನದಿಯ ತೀರ್ಥ ಉಗಮ ವಾಗುತ್ತೆ ಭಾಗಮಂಡಲ ದಲ್ಲಿ.
  2. ಕಾವೇರಿ ನದಿಯು ಕರ್ನಾಟಕ ರಾಜ್ಯದ ಜೀವನದಿ ಎಂದು ಕರೆಯಲಾಗಿದೆ ಆದರೂ ತಮಿಳು ನಾಡಿನಲ್ಲೂ ಸಹ ಕಾವೇರಿ ನದಿಗೆ ಸಂಬಂಧಪಟ್ಟಹಾಗೆ ಅಕ್ಟೋಬರ್ ಮಾಸದಲ್ಲಿ ಆಚರಣೆಗಳನ್ನು ಮಾಡಿಕೊಳ್ಳುತ್ತಾರೆ ತಮಿಳರಿಗೂ ಸಹ ಕಾವೇರಿ ನದಿಯು ಪ್ರಮುಖವಾದ ನದಿಯಾಗಿರುತ್ತದೆ ಪ್ರಾಚೀನ ತಮಿಳು ಚರಿತ್ರೆಯಲ್ಲಿ / ಇತಿಹಾಸದಲ್ಲಿ ಕಾವೇರಿಗೆ ಪೂನ್ನಿನಾತಿ / ಪೂನ್ನೀನಾಧಿ ಎಂಬ ಹೆಸರಿನಿಂದ ತಮಿಳುನಾಡಿನಲ್ಲಿ ಕರೆಯುತ್ತಾರೆ, ಪೂನ್ನಿ ನಾತಿ ಎಂದರೆ ಚಿನ್ನದ ಹುಡುಗಿ ಎಂದು ಅರ್ಥ, ಚೋಳರ ಕಾಲದ ಇತಿಹಾಸ ದಲ್ಲಿ ಕಾವೇರಿಯ ನದಿಯ ಪ್ರಭಾವ ಎದ್ದು ಕಾಣುತ್ತದೆ ಇಂದು ತಿಳಿದು ಬರುತ್ತದೆ
    ( ರಾಜ ರಾಜ ಚೋಳನ ಅವಧಿಯಲ್ಲಿ ) ತಮಿಳುನಾಡಿನಲ್ಲಿ ಪೊನ್ನಿ ಎಂಬ ಅಕ್ಕಿಯನ್ನು ಸಹ ಬೆಳೆಯಲಾಗುತ್ತದೆ

ಸೂಚನೆ : ನಮ್ಮ ಕನ್ನಡ ಚಲನಚಿತ್ರ ಗಳಲ್ಲಿ ಕಾವೇರಿ ನದಿಯ ಬಗ್ಗೆ ವರ್ಣಿಸಿದ್ದಾರೆ
ಅವುಗಳಲ್ಲಿ,
ಶರಪಂಜರ ದ ಕೊಡಗಿನ ಕಾವೇರಿ……

ಜೀವನದಿ ಚಿತ್ರದ ಕನ್ನಡ ನಾಡಿನ ಜೀವನದಿ ಕಾವೇರಿ…

ಮುತ್ತಿನ ಹಾರ ಚಿತ್ರದ ಕೊಡಗಿನ ವೀರಾ…….. ಇನ್ನು ಇತ್ಯಾದಿ ಅನೇಕ ಕನ್ನಡ ಚಿತ್ರಗಳಲ್ಲಿ ಕಾವೇರಿ ಬಗ್ಗೆ ಹಾಗೂ ಕಾವೇರಿ ಜನನ ಸ್ಥಳ ಕೊಡಗಿನ ಬಗ್ಗೆ ವರ್ಣನೆ ಮಾಡಲಾಗಿರುವುದು ಗಮನಾರ್ಹ

  ತ್ರಿಕೂಟೇಶ್ವರ ದೇವಸ್ಥಾನ ಗದಗ

ಹಾಗೇ ಪೂನ್ನಿಯನ್ ಸೆಲ್ವನ್ 1 ತೆಮಿಳು ಚಿತ್ರದಲ್ಲಿ ಕಾವೇರಿ ನದಿಯ ಸೊಬಗನ್ನು ತುಂಬಾ ಚೆನ್ನಾಗಿ ವರ್ಣಿಸಲಾಗಿದೆ

ಕಾವೇರಿ ನದಿಯ ತೀರದಲ್ಲಿ ಹುಟ್ಟಿದಂತ ಎಲ್ಲಾ ಜೀವಿಗಳು ವೀರರು ಶೂರರು ಶಕ್ತಿವಂತರು ತ್ಯಾಗವಂತರು ಹೋರಾಟಗಾರರು ಜನರಿಗೆ ಉಪಕಾರಿಗಳು ಕಾವೇರಿ ತಾಯಿಯ ಮಡಿಲ ಮಕ್ಕಳು ಮಕ್ಕಳು ಚಿನ್ನದಂತ ಮಕ್ಕಳು ತಾಯಿಯ ದೈವ ಕೃಪೆ ಇರುವಂತಹ ಮಕ್ಕಳು / ರೈತರು. ಎಂಬ ಇತ್ಯಾದಿ ವರ್ಣನೆಗಳು ಕಾಣುತ್ತದೆ ಎಂಬುದು ಗಮನಹವಾಗಿದೆ

  1. ಕಾವೇರಿಯು ಕೊಡಗಿನಲ್ಲಿ ಜನಿಸುವುದರಿಂದ ಕೊಡಗಿನ ಜನರ ಮನೆದೇವರಾಗಿರುತ್ತಾಳೆ
    ಯಾವುದೇ ಪ್ರಮುಖ ಕೆಲಸ ಕಾರ್ಯಗಳನ್ನು ಮಾಡಬೇಕಾದರೂ ಕಾವೇರಿ ತಾಯಿಯನ್ನು ಪೂಜೆ ಮಾಡಿ ನಂತರ ಕೆಲಸಗಳನ್ನು ಆರಂಭಿಸುತ್ತಾರೆ , ಕಾವೇರಿಯನ್ನು ಕಾವೇರಮ್ಮ
    ಎಂಬ ದೇವತೆಯ ರೂಪದಲ್ಲಿ ಪೂಜೆ ಮಾಡುತ್ತಾರೆ
  2. ತುಲಾ ಸಂಕ್ರಮಣದ ದಿನವೆಂದರೆ ಸೂರ್ಯನು ತುಲಾ ರಾಶಿಗೆ ಪ್ರವೇಶ ಮಾಡುವ ದಿನವಾಗಿರುತ್ತದೆ, ಈ ದಿನದ ವಿಶೇಷವೇನೆಂದರೆ ಜನರು ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಪಿತೃ ತರ್ಪಣ ನೀಡುತ್ತಾರೆ ಇದಾದ ನಂತರ ಎಳ್ಳು ಬೆಲ್ಲವನ್ನು ಹಂಚುವಂತಹ ಪದ್ಧತಿ ಇರುತ್ತದೆ
    ಈ ಸಂಕ್ರಮಣದ ದಿನ ಕೆಲವರು ಉಪವಾಸವನ್ನು ಕೂಡ ಆಚರಿಸುತ್ತಾರೆ
    ಈ ತುಲಾ ಸಂಕ್ರಮಣದ ಬಗ್ಗೆ ಮತ್ಸ್ಯ ಪುರಾಣದಲ್ಲಿ ಉಲ್ಲೇಖ ಮಾಡಲಾಗಿದೆ ಈ ಆಚರಣೆಯನ್ನು ಕೇರಳ ತಮಿಳುನಾಡು ಹಾಗೂ ಕರ್ನಾಟಕ ಜನ ಆಚರಿಸುತ್ತಾರೆ
  3. ಇನ್ನು ಕಾವೇರಿ ತೀರ್ಥ ಉಗಮ ದಿನದಂದು ವಿಶೇಷವಾಗಿ ಕೇರಳ ತಮಿಳುನಾಡು ಹಾಗೂ ಕರ್ನಾಟಕದ ಜನರು ಕಾವೇರಿ ನದಿಯಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಾರೆ , ಇಂಥ ಸಮಯದಲ್ಲಿ ಮಾಡುವ ಸ್ನಾನ ಸರ್ವ ವ್ಯಾಧಿ ಹಾಗೂ ಸರ್ವ ಪಾಪಕರ್ಮಗಳನ್ನು ದೋಷಗಳನ್ನು ನಿವಾರಣೆ ಮಾಡುತ್ತದೆ ಎಂಬ ನಂಬಿಕೆ ಇರುತ್ತದೆ
    ನಮ್ಮ ಕರ್ನಾಟಕದ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ವಿಶೇಷವಾಗಿ ತೀರ್ಥ ಉಗಮವಾಗುತ್ತದೆ, ಈ ಸಂದರ್ಭದಲ್ಲಿ ವಿಶೇಷವಾಗಿ ಸಾವಿರಾರು ಜನ ಭಕ್ತರು ತೀರ್ಥ ಸ್ನಾನ ಮಾಡುವುದರ ಜೊತೆಗೆ ಕಾವೇರಿ ನದಿಯ ಪೂಜೆಯನ್ನು ಮಾಡಿ ಕಾವೇರಮ್ಮ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ
  4. ವಿಶೇಷವಾಗಿ ಕೊಡಗು ಜನರ ಹಬ್ಬ ಇದಾಗಿರುತ್ತದೆ ಈ ದಿನದಲ್ಲಿ ಕೊಡಗು ಜನರು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಗೀತ ನೃತ್ಯಗಳಿಂದ ಕಾವೇರಿ ದೇವಿಯ ಪೂಜೆ ಹಾಗೂ ಆಚರಣೆಯನ್ನು ಮಾಡುತ್ತಾರೆ ಇದು ಆ ಒಂದು ಪ್ರದೇಶದ ಜನರ ಸಂಪ್ರದಾಯ ಹಬ್ಬವಾಗಿರುತ್ತದೆ ಈ ತೀರ್ಥ ಉಗಮವಾದಂತ ದಿನ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಇಡೀ ಅಕ್ಟೋಬರ್ ತಿಂಗಳು ಪೂರ್ತಿ ಶುಭವಾಗಿರುತ್ತದೆ ಕಾವೇರಿ ಪೂಜೆ ಮಾಡಲು ಹಾಗೂ ಕಾವೇರಿ ನದಿಯ ನೀರಿನ ತೀರ್ಥವನ್ನು ತಂದು ಇಟ್ಟುಕೊಳ್ಳಲು.
  5. ಇಂಥ ವಿಶೇಷ ಸಂದರ್ಭದಲ್ಲಿ ಪ್ರತಿಯೊಬ್ಬರೂ ಪವಿತ್ರ ಸ್ನಾನವನ್ನು ಮಾಡುವುದು ಸೂಕ್ತ ಒಂದು ವೇಳೆ ಸ್ನಾನ ಮಾಡಲು ಸಾಧ್ಯವಿಲ್ಲದಿದ್ದರೆ ನದಿಯ ನೀರನ್ನು ತಂದು ಮನೆಯವರು ತಮ್ಮ ಸ್ನಾನದಲ್ಲಿ ನದಿ ನೀರನ್ನು ಮಿಶ್ರಣ ಮಾಡಿಕೊಂಡು ಸ್ನಾನ ಮಾಡಬಹುದು ಇದು ಸಹ ಪವಿತ್ರ ಸ್ನಾನ ಎಂದು ಎನಿಸಿಕೊಳ್ಳುತ್ತದೆ
  6. ಈ ದಿನದಲ್ಲಿ ವಿಶೇಷವಾಗಿ ಒಂದು ತಂಬಿಗೆಯಲ್ಲಿ ನೀರನ್ನು ಸಂಗ್ರಹಿಸಿ ಕಳಸದ ರೂಪದಲ್ಲಿ ಕಾವೇರಿ ಮಾತೆಯನ್ನು ಆಹ್ವಾನ ಮಾಡಿ ಶೋಡಸ ಪೂಜೆಯನ್ನು ಮಾಡಿ ಕಾವೇರಿ ಅಷ್ಟೋತ್ತರವನ್ನು ಹೇಳುವುದು ಶುಭವಾಗಿರುತ್ತದೆ. ಪಂಚಭೂತ ತತ್ವಗಳಲ್ಲಿ ಜಲತತ್ವ ಒಂದಾಗಿರುತ್ತದೆ ಮನುಷ್ಯನಿಗೆ ಜಲದ ರೂಪದಲ್ಲಿ ಭಾರತ ದೇಶದಲ್ಲಿ ಅನೇಕ ನದಿಗಳು ಸಹಾಯಕಾರಿಯಾಗಿವೆ ಅಂತ ಒಂದು ಮಹಾನದಿಗಳಲ್ಲಿ ಕಾವೇರಿ ನದಿಯು ಒಂದು ಎಂದು ಹೇಳಿಕೊಳ್ಳಲು ನಮ್ಮ ಕರ್ನಾಟಕದ ಜನರಿಗೆ ಹೆಮ್ಮೆ ಅನಿಸುತ್ತದೆ ಕಾವೇರಿ ನದಿಯು ದಕ್ಷಿಣದ ಗಂಗಾ ನದಿ ಎಂಬ ಹೆಸರಿಗೆ ಕಾರಣವಾಗಿದೆ , ಗಂಗಾ ನದಿಯು ಹೇಗೆ ಸರ್ವ ಪಾಪವನ್ನು ತೊಳೆದು ಜನರಿಗೆ ಉಪಕಾರಿಯಾಗಿರುವುದು ಅದೇ ರೀತಿಯಲ್ಲಿ ಕಾವೇರಿ ನದಿಯು ಸಹ ಪವಿತ್ರ ನದಿಯಾಗಿ ಹೆಸರು ಪಡೆದಿದೆ
    ಅಂತ ನದಿಯ ತೀರ್ಥ ಉಗಮವಾದ ದಿನ ಕಾವೇರಿ ತಾಯಿಗೆ ಪೂಜೆ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಆಗಿರುತ್ತದೆ
    ನದಿಗೆ ಹೋಗಿ ಪೂಜೆ ಮಾಡಲು ಸಾಧ್ಯವಾಗದಿದ್ದರೂ ಮನೆಯಲ್ಲಿ ಕಳಸದ ರೂಪದಲ್ಲಿ ಕಾವೇರಿಯನ್ನು ಪೂಜೆ ಮಾಡಬಹುದಲ್ಲವೇ ??
  7. ಕಾವೇರಿ ತೀರ್ಥ ಉಗಮವಾದ ಈ ದಿನ ಅತ್ಯಂತ ಶುಭವಾಗಿರುತ್ತದೆ ಕಾವೇರಿಯನ್ನು ಈ ದಿನ ಮಹಾಲಕ್ಷ್ಮಿ ಹಾಗೂ ಪಾರ್ವತಿ ದೇವಿಯ ಸ್ವರೂಪದಲ್ಲಿ ಆರಾಧಿಸಲಾಗುತ್ತದೆ, ಇದರಿಂದ ಮನುಷ್ಯನು ಸರ್ವ ಪಾಪದ ದೋಷಗಳಿಂದ ಮುಕ್ತಿ ಹೊಂದಿ ಸಕಲ ಸೌಭಾಗ್ಯವನ್ನು ಪಡೆಯುತ್ತಾನೆ ಎಂದು ಹೇಳಲಾಗಿದೆ
  ನಾಗದೇವತೆಯ ಪೂಜೆಯನ್ನು ಮನೆಯಲ್ಲಿಯೇ ಹೇಗೆ ಮಾಡಬೇಕು ?

ಸೂಚನೆ :
ನದಿ ಪೂಜೆ, ನೀರಿನ ಪೂಜೆ, ಬಾವಿ ಸಮುದ್ರಗಳ ಪೂಜೆ ಮಾಡುವುದರಿಂದ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಎಂದು ಹೇಳಲಾಗಿದೆ ಅಂದರೆ ಜಲ ಮೂಲವೂ ಐಶ್ವರ್ಯ ಭಾಗ್ಯದ ಸೂಚಕವೂ ಆಗಿದೆ ಎಂಬ ಅರ್ಥ

ಇದು ಕಾವೇರಿ ನದಿಯ ಬಗ್ಗೆ ಹಾಗೂ ತುಲಾ ಸಂಕ್ರಮಣ ಮತ್ತು ಕಾವೇರಿ ತೀರ್ಥ ಉಗಮ ದಿನದ ಬಗ್ಗೆ ಸಂಕ್ಷಿಪ್ತ ಮಾಹಿತಿ

ಈ ಬಾರಿ ತುಲಾ ಸಂಕ್ರಮಣವು ಭಾನುವಾರ ಬಂದಿರುವುದು ವಿಶೇಷವಾಗಿರುತ್ತದೆ
ಸೂರ್ಯನನ್ನು ಪೂಜೆ ಮಾಡುವುದರಿಂದ ಸರ್ವ ಸಂಕಷ್ಟಗಳಿಂದ ಮುಕ್ತಿ ಹೊಂದಿ ಆರೋಗ್ಯವನ್ನು ಪಡೆಯಬಹುದು

  ಹಾಲು ಮೊಸರುತುಪ್ಪ ಆಗುವುದು ಯಾಕೆ?

ಧನ್ಯವಾದಗಳು
ಜ್ಯೋತಿಷ್ಯ ಆಚಾರ್ಯ ಮೇಘನ ವರ್ಷ
ಜ್ಯೋತಿಷ್ಯ ಸಲಹೆಗಾರರು ಉಪನ್ಯಾಸಕರು ಲೇಖಕರು ಸಂಶೋಧಕರು
9886887383

15.10.2022
ಭಾನುವಾರ

ಸರ್ವಂ ಶ್ರೀಕೃಷ್ಣಾರ್ಪಣಮಸ್ತು

Leave a Reply

Your email address will not be published. Required fields are marked *

Translate »