ಹತ್ತು ರೂಪಾಯಿಯ ನಿಜವಾದ ಬೆಲೆ ಎಷ್ಟು?
ಒಂದು ಹಳ್ಳಿಯಲ್ಲಿ ಒಬ್ಬ ಪ್ರಖ್ಯಾತ ವಿದ್ವಾಂಸನಿದ್ದರು .
ಅವರು ಒಳ್ಳೆ ವಾಗ್ಮಿಯಾಗಿದ್ದು, ಅವರ ಪ್ರವಚನ ಕೇಳಲು ಸಾವಿರಾರು ಜನ ಕದಲದೆ
ಕೂತು ಕೇಳುತ್ತಿದ್ದರು.
ಸುತ್ತಮುತ್ತಲಿನ ಅನೇಕ ಹಳ್ಳಿಗಳಲ್ಲಿ ಅವರ ಖ್ಯಾತಿ ಹರಡಿತ್ತು.
ಒಮ್ಮೆ ಅವರು ಪ್ರವಚನಕ್ಕಾಗಿ ಪಕ್ಕದೂರಿಗೆ ಹೋಗಬೇಕಿತ್ತು.
ಆ ಊರಿಗೆ ಹೋಗುವ ಬಸ್ಸು ಹತ್ತಿ ಟಿಕೆಟ್ ತೆಗೆದುಕೊಂಡರು.
ಗಡಿಬಿಡಿಯಲ್ಲಿ ಬಸ್ ಕಂಡಕ್ಟರ್ ಚಿಲ್ಲರೆ ವಾಪಾಸ್ ಕೊಡುವಾಗ 10 ರೂಪಾಯಿ ಹೆಚ್ಚು ಕೊಟ್ಟುಬಿಟ್ಟ. ಅದನ್ನು ಗಮನಿಸಿದ ಆ ವಿದ್ವಾಂಸ ಅದನ್ನು ಹಿಂದಿರುಗಿಸಲು ಯೋಚಿಸಿದರು.
ಆದರೆ ಬಸ್ಸು ತುಂಬಾ ಜನರಿಂದ ತುಂಬಿತ್ತು.
ಇಳಿಯುವಾಗ ಕೊಟ್ಟರಾಯಿತು ಎಂದುಕೊಂಡು ಕುಳಿತರು.
ಸ್ವಲ್ಪ ಸಮಯದ ನಂತರ ಅವನ ಮನಸ್ಸು ಬದಲಾಯಿತು.,,
–ಆ ಕಂಡಕ್ಟರ್ ಕೂಡ ಎಷ್ಟೋ ಜನರ ಬಳಿ ಸರಿಯಾದ ಚಿಲ್ಲರೆ ಕೊಡದೆ ತಾನೇ ಹೊಡೆದಿರ ಬಹುದಲ್ಲಾ!!.
ಈ ಬಸ್ಸು ಕೂಡ ಒಂದು ಕಂಪನಿಯದೇ! ಎಷ್ಟು ಜನರು ಈ ಕಂಪನಿಗೆ ಮೋಸ ಮಾಡಿ ದುಡ್ಡು ತಿನ್ನುವುದಿಲ್ಲ!?
ನನ್ನ ಹತ್ತು ರೂಪಾಯಿಯಿಂದ ಆಗುವ ನಷ್ಟವೇನು?
ಈ ಹತ್ತು ರೂಪಾಯಿಗಳನ್ನು ಯಾವುದಾದರೂ ದೈವಿಕ ಕಾರ್ಯಕ್ಕೆ ಬಳಸಿದರಾಯಿತು…’
ಹೀಗೆ ಯೋಚಿಸಿ ಸುಮ್ಮನೆ ಕುಳಿತರು .
ಅಷ್ಟರಲ್ಲಿ ಊರು ಬಂತು…. ಬಸ್ಸು ನಿಂತಿತು.
ಬಸ್ಸಿನಿಂದ ಕೆಳಗಿಳಿಯುವಾಗ ಬಸ್ ಕಂಡಕ್ಟರ್ ಹತ್ತಿರ ಬರುತ್ತಿದ್ದಂತೆ
ಅನೈಚ್ಛಿಕವಾಗಿ ಆ ಕಂಡಕ್ಟರ ಕೈಗೆ –ನೀವು ಚಿಲ್ಲರೆ ವಾಪಸ್ ಕೊಡುವಾಗ ಹತ್ತು ರೂಪಾಯಿ ಹೆಚ್ಚು ಕೊಟ್ಟಿದ್ದೀರಿ ಎಂದು ಆ ಹತ್ತು ರೂಪಾಯಿಯನ್ನು ವಾಪಸ್ ಕೊಟ್ಟರು.
ಅದಕ್ಕೆ ಕಂಡಕ್ಟರ್,
“ಸ್ವಾಮಿ ! ನಾನು ನಿಮ್ಮ ಪ್ರವಚನಗಳನ್ನು ಅನೇಕ ದಿನಗಳಿಂದ ಬಹಳ ಗಮನವಿಟ್ಟು ಕೇಳುತ್ತಿದ್ದೆ.,, ನೀವು ಭೋಧಿಸುವಂತೆ
ಪಾಲಿಸುವಿರಾ ಅಥವಾ ಇಲ್ಲವಾ? ಎಂದು ನಾನು ಸಣ್ಣ ಪರೀಕ್ಷೆ ಮಾಡಿದೆ,”ಎಂದು ಹೇಳಿದನು .
ಆ ವಿದ್ವಾಂಸ ಸಣ್ಣಗೆ ಬೆವರುತ್ತಾ ಬಸ್ಸಿನಿಂದ ಇಳಿದರು.
ಬರೀ ಹತ್ತು ರೂಪಾಯಿಯ ಆಸೆಯಲ್ಲಿ ನಾನು ನನ್ನ ಮೌಲ್ಯಗಳಿಗೆ ತಿಲಾಂಜಲಿ ಬಿಡುತ್ತಿದ್ದೆನಲ್ಲಾ… ಎಂತಹ ಅಚಾತುರ್ಯವಾಗಿ ಬಿಡುತ್ತಿತ್ತಲ್ಲ,,
ನನ್ನ ಅದೃಷ್ಟ ಚೆನ್ನಾಗಿದೆ,,,
ನನ್ನ ಆತ್ಮಸಾಕ್ಷಿಯು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡು
ನನ್ನ ಮೌಲ್ಯಗಳನ್ನು ಉಳಿಸಿಕೊಂಡು ಕಾಪಾಡಿಕೊಂಡoತಾಯಿತು ಎಂದುಕೊಂಡರು .
ಜೀವಿತಾವಧಿಯಲ್ಲಿ ಸಂಪಾದಿಸಿ ಕಾಪಾಡಿಕೊಂಡ ಒಳ್ಳೆಯತನ
ಸರ್ವನಾಶವಾಗಲು
ಒಂದು ಕ್ಷಣ ಸಾಕಲ್ಲವೇ??
ಈಗ ಹೇಳಿ ಹತ್ತು ರೂಪಾಯಿಯ ನಿಜವಾದ ಬೆಲೆ ಎಷ್ಟು?
😊💐🙏🏼