ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸಣ್ಣವರಿದ್ದಾಗ – ದೊಡ್ಡವರಾದ ಮೇಲೆ – ಕಾಲ

ಕಾಲ

◆◆◆◆◆

ಸಣ್ಣವರಿದ್ದಾಗ

ಜೇಬಿನಲ್ಲಿ ಚಿಲ್ಲರೆ ಕಾಸು ಇರುತ್ತಿತ್ತು ದೊಡ್ಡವರಾದ ಮೇಲೆ

ಚಿಲ್ಲರೆ ಯೋಚನೆಗಳು ಬರುತ್ತಿವೆ.

ಸಣ್ಣವರಿದ್ದಾಗ ಹಣ ಕದ್ದರೆ ದೇವರು ನೋಡುತ್ತಾನೆಂದು ಹೆದರುತ್ತಿದ್ದೆವು

ದೊಡ್ಡವರಾದ ಮೇಲೆ ಅಕ್ರಮ ಹಣ ತಿಂದು ದೇವರಿಗೆ ಅರ್ಪಿಸುತ್ತಿದ್ದೇವೆ

ಸಣ್ಣವರಿದ್ದಾಗ ಸಹೋದರ-ಸಹೋದರಿಯರ ಜೊತೆಗೆ, ಜಗಳ ಆಡಿ, ಒಂದಾಗುತ್ತಿದ್ದೇವು

ಈಗ ಆಸ್ತಿಗಾಗಿ ಬೇರೆ ಬೇರೆ ಆಗುತ್ತಿದ್ದೇವೆ ,ಕೋರ್ಟ್ ಕಛೇರಿ ಅಲೆಯುತ್ತಿದ್ದೇವೆ

ಸಣ್ಣವರಿದ್ದಾಗ ಬಟ್ಟೆಗಳು ಮಸಿಯಾಗಿದ್ದವು ಮನಸ್ಸು ಶುಭ್ರವಾಗಿತ್ತು

ದೊಡ್ಡವರಾದ ಮೇಲೆ ಬಟ್ಟೆಗಳು ಶುಭ್ರವಾಗಿವೆ ಮನಸ್ಸು ಮಸಿಯಾಗಿದೆ

ಸಣ್ಣವರಿದ್ದಾಗ ಸುಮ್ಮ ಸುಮ್ಮನೆ ನಗುತ್ತಿದ್ದೆವು

  ಗರುಡ ಪುರಾಣದ ಪ್ರಕಾರ ಆರು ವಿಧದ ಶುದ್ಧೀಕರಣ ಸ್ನಾನ

ದೊಡ್ಡವರಾದ ಮೇಲೆ ಹಣ ಕೊಟ್ಟು ನಗಲು ಆಗುತ್ತಿಲ್ಲ

ಸಣ್ಣವರಿದ್ದಾಗ ಮೈ ಮೇಲೆ ಗಾಯ ಆಗುತ್ತಿದ್ದವುದೊಡ್ಡವರಾದ ಮೇಲೆ ಮನಸ್ಸಿನ ಮೇಲೆ ಗಾಯಗಳಾಗಿವೆ

ಸಣ್ಣವರಿದ್ದಾಗ ಶಾಲೆ ಪಾಟಿ ಚೀಲ ಬಾರ ಇರುತ್ತಿತ್ತು

ದೊಡ್ಡವರಾದ ಮೇಲೆ ಚಿಂತೆಗಳು ,ಯೋಚನೆಗಳು ಭಾರವಾಗಿವೆ

ಸಣ್ಣವರಿದ್ದಾಗ ಮಳೆಯಲ್ಲಿ ನೆನೆಯುತ್ತಿದ್ದೆವು

ದೊಡ್ಡವರಾದ ಮೇಲೆ ಬೆವರು, ಕಣ್ಣೀರಿನಲ್ಲಿ ನೆನೆಯುತ್ತೆವೆ

ಸಣ್ಣವರಿದ್ದಾಗ ಕೆರೆ ಬಾವಿಯಲ್ಲಿ ಮೋಜು ಮಸ್ತಿಯಿಂದ ಈಜಾಡುತ್ತಿದ್ದೆವು

ದೊಡ್ಡವರಾದ ಮೇಲೆ* *ಜೀವನ ಸಾಗರದಲ್ಲಿ* *ಗೋಳಾಡುತ್ತೇವೆ**

ಸಣ್ಣವರಿದ್ದಾಗ ಗುಣ* *ನೋಡಿ ಗೆಳೆತನ* *ಮಾಡುತ್ತಿದ್ದೆವು**

  ಕನ್ನಡ ಚಾಣಕ್ಯ ನೀತಿ - Kannada Chanakya Neeti

ದೊಡ್ಡವರಾದ ಮೇಲೆ* *ಹಣ,ಲಾಭಕ್ಕಾಗಿ**ಲೆವೆಲ್ ನೋಡಿ* *ಗೆಳೆತನ* *ಮಾಡುತ್ತೆವೆ**

ಸಣ್ಣವರಿದ್ದಾಗ* *ತೊದಲು* *ನುಡಿಗಳು ಜನರಿಗೆ* *ಅರ್ಥ ಆಗುತ್ತಿದ್ದವು**

ದೊಡ್ಡವರಾದ ಮೇಲೆ ಹೇಗೆ ಮಾತನಾಡಿದರೂ ತಪ್ಪಾಗಿ ಅರ್ಥೈಸಲಾಗುತ್ತದೆ**

ಸಣ್ಣವರಿದ್ದಾಗ ಸುಳ್ಳು ಹೇಳಿದರೆ, ಗುರುಗಳು ,ಹೆತ್ತವರು ಹೊಡೆಯುತ್ತಿದ್ದರು…**

ದೊಡ್ಡವರಾದ ಮೇಲೆ* *ಸತ್ಯ ಹೇಳಿದರೆ ಶಿಕ್ಷೆಗೆ* *ಗುರಿಯಾಗುವೆವು**

ಸಣ್ಣವರಿದ್ದಾಗ ಗಣಿತ ವಿಜ್ಞಾನ ತಿಳಿಯುತ್ತಿದ್ದಿಲ್ಲ*

*ದೊಡ್ಡವರಾದ ಮೇಲೆ ಸಮಾಜ ತಿಳಿಯುತ್ತಿಲ್ಲ**

ಸಣ್ಣವರಿದ್ದಾಗ ಎಲ್ಲರ ಜೊತೆಗೆ ಬೆರೆಯುತ್ತಿದ್ದೆವು* *

ದೊಡ್ಡವರಾದ ಮೇಲೆ* *ಜಾತಿ ,ಧರ್ಮ* *ನೋಡಿ ಬೆರೆಯುತ್ತೆವೆ**

ಸಣ್ಣವರಿದ್ದಾಗ ಸ್ನೇಹ* *ಸಂಬಂಧಗಳಿಗೆ ಬೆಲೆ* *ಇತ್ತು**

  ಕಾಶಿಯಲ್ಲಿ ಮೋಕ್ಷ ಭವನ

ದೊಡ್ಡವರಾದ ಮೇಲೆ* *ಆಸ್ತಿ ಅಂತಸ್ತಿಗೆ ಮಾತ್ರ* *ಬೆಲೆ ಇದೆ**ಸಣ್ಣವರಿದ್ದಾಗ* *ಅರಿವಿಲ್ಲದ ಅರಿವು* *ಇತ್ತು**

ದೊಡ್ಡವರಾದ ಮೇಲೆ* *ಅರಿವಿದ್ದರೂ* *ಅರಿವುಗೇಡಿಗಳಾಗಿದ್ದೆವೆ*

*ಸಣ್ಣವರಿದ್ದಾಗ ವಿಶ್ವ* *ಮಾನವರಾಗಿದ್ದೆವು**

ದೊಡ್ಡವರಾದ ಮೇಲೆ* *ಅಲ್ಪ* *ಮಾನವರಾಗಿದ್ದೇವೆ.*

ಬದಲಾವಣೆ ನಮ್ಮಿಂದ ಸಾಧ್ಯ . . . ಪ್ರಯತ್ನಿಸೋಣ

🙏🏻

●●●●●●● ●●●●

Leave a Reply

Your email address will not be published. Required fields are marked *

Translate »