ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಜ್ಯೋತಿರಾಯುರ್ವೇದ – ಜ್ವರಾದಿ ಸಕಲ ರೋಗಮೂಲಗಳು

🍃ಜ್ಯೋತಿರಾಯುರ್ವೇದ – 1
(ಜ್ವರಾದಿ ಸಕಲ ರೋಗಮೂಲಗಳು)

ಆಯುರ್ವೇದ – ಇದು ಋಗ್ವೇದದ ಆಧಾರದಿಂದ ಉದ್ಭವಿಸಿದ ಒಂದು ಚಿಕಿತ್ಸಾ ಪದ್ಧತಿ. ಅದರಂತೆ ರೋಗ, ಪರಿಹಾರ, ಚಿಕಿತ್ಸೆ, ರೋಗಮೂಲ, ಪರಿಣಾಮ; ಇವುಗಳ ಬಗ್ಗೆ ವಿಶೇಷ ಅಧ್ಯಯನ ಸ್ವರೂಪವೇ ಆಯುರ್ವೇದ. ಋಗ್ವೇದದಲ್ಲಿ ಬರೇ ಜ್ವರದ ಪರಿಣಾಮವನ್ನು ೨೮ ವಿಧದಲ್ಲಿ ಗುರುತಿಸಿದ್ದಾರೆ. ಮಂಡಲ ೧೦ರಲ್ಲಿ ೧೬೩ನೇ ಸೂಕ್ತವು ಅದನ್ನು ವಿವರಿಸುತ್ತದೆ.

ವಿವೃಹಾ ಕಾಶ್ಯಪ ಋಷಿಃ; ಯಕ್ಷ್ಮಘ್ನಮ್ ದೇವತಾ; ಅನುಷ್ಟುಪ್ ಛಂದಃ

ಹಾಗೆಯೇ ಯಕ್ಷ್ಮನಾಶನ – ಅಂದರೆ ಜ್ವರ ಪರಿಹಾರ ವಿಧಾನವನ್ನೂ ಗುರುತಿಸಿದೆ. ಅಲ್ಲದೆ ಮಹಾಜ್ವರಗಳಾದ ಉಷ್ಣಪಿತ್ತದಿಂದಾಗುವ, ಕಫದ ಮೂಲದ ಬೇರೆ ಬೇರೆ ರೀತಿಯ ಜ್ವರಗಳು ಗುರುತಿಸಲ್ಪಟ್ಟು ಅವುಗಳಿಗೆ ಮಹಾಜ್ವರ ಅಥವಾ ರಾಜಯಕ್ಷ್ಮವೆಂದು ಹೆಸರಿಸಿದರು.

  ಭಗವದ್ಗೀತೆ - ಸಂಕ್ಷಿಪ್ತ ಅರ್ಥ

ಅವನ್ನು ಗುರುತಿಸುವ ವಿಚಾರವಾಗಿ:-
v ವಿವರಣೆ,
v ಗ್ರಹಗತಿ,
v ಗೋಚಾರ ಸ್ಥಿತಿ,
v ರೋಗಿಯ ಜಾತಕ,
v ಸಂಧಿಕಾಲಗಳು,
v ದಶಾಕಾಲಗಳು,
v ವಯಸ್ಸು,
v ಆಹಾರ,
v ವಿಹಾರ,
v ಕುಲ,
v ಬದುಕುವ ಪ್ರದೇಶ

ಇವುಗಳೂ ಕೂಡ ವಿಮರ್ಶಿಸಲ್ಪಟ್ಟಿದೆ. ಹಾಗೆ ನೋಡಿದಾಗ ಆಯುರ್ವೇದ ವೈಧ್ಯನೊಬ್ಬನು ಜ್ಯೋತಿಷ್ಯ ತಿಳಿದಿರಬೇಕು ಎಂಬುದೇ ಇದರ ಅರ್ಥ. ಹಾಗಾಗಿ ಜ್ಯೋತಿರಾಯುರ್ವೇದವೆಂಬ ಪದ್ಧತಿ ಬಳಕೆಯಲ್ಲಿ ಬಂದರೆ ರೋಗಿಯ ರೋಗನಿಧಾನ ಪದ್ಧತಿ ತುಂಬಾ ಸೂಕ್ತವೂ, ಸಮರ್ಥವೂ ಆಗಿರುತ್ತದೆ ಎಂದು ಹೇಳಬಹುದು. ಜ್ಯೋತಿಷ್ಯ ಹಾಗೂ ಆಯುರ್ವೇದಗಳೆಂಬ ೨ ವಿಭಾಗಗಳೂ ಋಗ್ವೇದ ಮೂಲದಿಂದಲೇ ಉದ್ಭವಿಸಿದೆ ಎಂದರೆ ಅರ್ಥಮಾಡಿಕೊಳ್ಳಿ ಅದಕ್ಕಿರುವ ಅನಿವಾರ್ಯ ಸಂಬಂಧ.

ಹಿಂದೆ ತಿಳಿಸಿದಂತೆ ಜ್ಯೋತಿಷ್ಯವೂ, ಆಯುರ್ವೇದವೂ ಎರಡೂ ಕೂಡಿ ವ್ಯವಹರಿಸಿದಲ್ಲಿ ಖಂಡಿತವಾಗಿ ಸಮಾಜಕ್ಕೆ ಉಪಯುಕ್ತವಾಗಬಹುದು ಎಂಬುದನ್ನು ಸೋದಾಹರಣ ಪೂರ್ವಕವಾಗಿ ವಿವರಿಸುತ್ತೇನೆ.

  ಕಗ್ಗ - ಜೀವನದ ಕಲಿಕೆ

ಮೊದಲಾಗಿ ಖಾಯಿಲೆಗಳು ೯ ವಿಧದಲ್ಲಿ ಮನುಷ್ಯನಿಗೆ ಬಾಧಿಸುತ್ತವೆ:-

೧. ವಂಶವಾಹಿಯಿಂದ ಬರುವವು:- ಸೂಕ್ತ ಸಂಸ್ಕಾರ ಹೊಂದದೆ ಮಗುವಿಗೆ ಜನ್ಮ
ಕೊಡುವುದರಿಂದ ಉಂಟಾಗುತ್ತದೆ.

೨. ಆಹಾರ ಜನ್ಯ:- ಕಾಲ, ದೇಶ, ಪರಿಸ್ಥಿತಿ ಗಣನೆಗೆ ತೆಗೆದುಕೊಂಡು ಹೊಂದಿಸಿಕೊಳ್ಳುವುದರಿಂದ.

೩. ವಾತಾವರಣ ಜನ್ಯ:- ಜ್ಯೋತಿಷ್ಯಾದಿಗಳ ಸಹಾಯದಿಂದ ಮುನ್ನೆಚ್ಚರಿಕೆ ವಹಿಸುವುದರಿಂದ.

೪. ಪರಿಸರ ಜನ್ಯ:- ಪ್ರಕೃತಿಗೆ ಹೊಂದುವಂತೆ ಸ್ವಾಭಾವಿಕ ಜೀವನ ವಿಧಾನದಿಂದ. [ಓದಿರಿ:- ಭಾರತದ ನಗರಗಳಲ್ಲೆಲ್ಲ ಕಸ ಕಸ ಕಸ]

೫. ದೈಹಿಕ ಅಶಕ್ತತೆ:- ಪೌಷ್ಠಿಕ ಆಹಾರ, ವ್ಯಾಯಮ, ಯೋಗಗಳಿಂದ.

೬. ಮಾನಸಿಕ ಜನ್ಯ:- ಪ್ರಾಣಾಯಾಮ, ದೃಢನಿಶ್ಚಯ, ಉತ್ತಮರ ಸಂಪರ್ಕ, ಸತ್ಕಾರ್ಯ
ವಿಲೀನ ಇವುಗಳಿಂದ.

೭. ವಯೋಜನ್ಯ:- ವಯಸ್ಸಿಗೆ ಹೊಂದಾಣಿಕೆ ಮಾಡುವುದರಿಂದ.

  ಹೃದಯಾಘಾತ - ಪರಿಹಾರ ಆಯುರ್ವೇದದಲ್ಲಿ

೮. ಶಾಪಜನ್ಯ:- ಈ ಖಾಯಿಲೆಗಳು ಬಾರದಂತೆ ಶುದ್ಧಜೀವನ ನಡೆಸುವುದರಿಂದ.

೯. ಮರಣ ಪ್ರಶ್ನೆ:- ಈ ಖಾಯಿಲೆಯನ್ನು ಸ್ವಸಂತೋಷದಿಂದ ಸ್ವಾಗತಿಸುವುದರಿಂದಲೂ, ಜೀವನದಲ್ಲಿ ಜ್ಯೋತಿಷ್ಯದ ಮುಖೇನ ಖಾಯಿಲೆಗಳನ್ನು ಗುರುತಿಸಿ, ಸಮರ್ಥರಾದ ಜ್ಯೋತಿಷಿ ವೈಧ್ಯರ ಮುಖೇನ ಸಲಹೆ ಪಡೆಯಬಹುದು.

ಇವೆಲ್ಲಕ್ಕೂ ಮುಖ್ಯವಾಗಿ ಶುದ್ಧ, ಸಾತ್ವಿಕ, ನ್ಯಾಯಯುತ ಪರೋಪಕಾರೀ ಜೀವನ ಪದ್ಧತಿಯನ್ನು ರೂಢಿಸಿಕೊಂಡು ಶಾಂತ ಜೀವನ ನಡೆಸಿದಲ್ಲಿ ನೀವೇ ಸ್ವತಃ ವೈಧ್ಯರ ವೈಧ್ಯರಾಗುತ್ತೀರಿ. ಇದು ಸತ್ಯ!

Leave a Reply

Your email address will not be published. Required fields are marked *

Translate »