ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸಂವತ್ಸರದ ಐದು ನವರಾತ್ರಿಗಳು


ಒಂದು ಸಂವತ್ಸರದಲ್ಲಿ ಒಟ್ಟೂ ಐದು ನವರಾತ್ರಿಗಳು ಬರುತ್ತವೆ.
೧. ವಸಂತ ನವರಾತ್ರಿ,

೨. ಗುಪ್ತ ನವರಾತ್ರಿ ಅಥವಾ ಶಾಕಂಬರಿ ನವರಾತ್ರಿ,

೩ ಶಾರದಾ ನವರಾತ್ರಿ ಅಥವಾ ಶರನ್ನವರಾತ್ರಿ,

೪. ಪೌಷ ನವರಾತ್ರಿ ಮತ್ತು ೫. ಮಾಘ ನವರಾತ್ರಿ.

ಚಿಕ್ಕದಾಗಿ ವಿವರಣೆ ತಿಳಿಯೋಣ:

೧. ವಸಂತ ನವರಾತ್ರಿ: ಇದು ಮಾರ್ಚ್ ಏಪ್ರಿಲ್ ಸಮಯದಲ್ಲಿ ಘಟಿಸುತ್ತದೆ. ಚೈತ್ರಶುದ್ಧ ಪಾಡ್ಯದಿಂದ ನವಮಿಯವರೆಗೆ ನಡೆಯುವ ಈ ನವರಾತ್ರಿ ರಾಮನವಮಿಯನ್ನು ಒಳಗೊಂಡಿರುವುದರಿಂದ ರಾಮನವರಾತ್ರಿ ಎಂತಲೂ ಕರೆಯುತ್ತಾರೆ. ಈ ಕಾಲದಲ್ಲೂ ಕೂಡ ನವ ಶಕ್ತಿಗಳ ಆರಾಧನೆ ನಡೆಯುತ್ತದೆ.

೨. ಗುಪ್ತ ನವರಾತ್ರಿ ಅಥವಾ ವಾರಾಹಿ ನವರಾತ್ರಿ: ಅಷಾಢ ಮಾಸದ ಶುಕ್ಲಪಕ್ಷದ ಪ್ರತಿಪದೆಯಿಂದ ನವಮಿಯವರೆಗೆ ದೇವಿಯರ ಆರಾಧನೆ, ವಿಶೇಷವಾಗಿ ಗಾಯತ್ರೀಮಾತೆಯ ಅಥವಾ ವಾರಾಹಿ ರೂಪದಲ್ಲಿ ಆರಾಧನೆ ಈ ಕಾಲಘಟ್ಟದ ನವರಾತ್ರಿಯದ್ದು.

೩. ಶಾರದೀಯ ನವರಾತ್ರಿ ಅಥವಾ ಶರನ್ನವರಾತ್ರಿ: ಮೇಲೆ ಹೇಳಿದ ಹಾಗೇ ಶರನ್ನವರಾತ್ರಿ ಅಥವಾ ಮಹಾನವರಾತ್ರಿ ಎಂತಲೂ ಕರೆಯಲ್ಪಟ್ಟಿದೆ. ದುಷ್ಟ ಶಕ್ತಿಗಳ ನಿಗ್ರಹ ಮತ್ತು ಶಿಷ್ಟರ ಪರಿಪಾಲನೆ ನಡೆದ ನೆನಪಿನಲ್ಲಿ ಈ ಆಚರಣೆ. ಪಾಂಡವರು ಬನ್ನಿ ಮರಕ್ಕೆ ಕಟ್ಟಿದ್ದ ತಮ್ಮ ಆಯುಧಗಳನ್ನು ಮರಳಿ ಪಡೆದ ಕಾಲ, ಶ್ರೀರಾಮ ರಾವಣನನ್ನು ವಧಿಸಿದ ಕಾಲ, ಕೌರವರನ್ನು ಕೊಂದು ಪಾಂಡವರು ಧರ್ಮಸಾಮ್ರಾಜ್ಯವನ್ನು ಸ್ಥಾಪಿಸಿದ ಕಾಲ ಇದಾಗಿತ್ತು ಎಂಬುದು ಪ್ರಾಗೈತಿಹಾಸದಿಂದ ತಿಳಿದುಬಂದ ವಿಷಯ. ಇಲ್ಲಿ ನವದಿನಗಳಲ್ಲಿ ಯಾವ ಯಾವ ದೇವಿಯರನ್ನು ಆರಾಧಿಸುತ್ತಾರೆ ಸ್ವಲ್ಪ ನೋಡೋಣ.

  ಗರುಡ ಯಾರು? ತಿರುಪತಿ ಬೆಟ್ಟಕ್ಕೆ ಗರುಡಾಚಲ ಹೆಸರು ಏಕೆ?

ಪ್ರತಿಪದೆಯ ದಿನ : ಶೈಲಪುತ್ರಿ ಜಗನ್ಮಾತೆ ಈ ದಿನ ಗಿರಿಜೆಯಾಗಿ ಪೂಜೆ ಸ್ವೀಕರಿಸುತ್ತಾಳೆ.ದುರ್ಗೆಯ ಮೊದಲನೇ ಮುಖ. ಅರ್ಧಚಂದ್ರನನ್ನು ಶಿರದಲ್ಲಿ ಧರಿಸಿ ನಂದಿವಾಹನೆಯಾಗಿ ಬಂದಿದ್ದಳಂತೆ ಜಗತ್ತಿಗೆ ಈ ದಿನ, ಆ ನೆನಪಿನಲ್ಲಿ ಹಾಗೇ ಪೂಜೆ.

ಬಿದಿಗೆಯ ದಿನ: ಬ್ರಹ್ಮಚಾರಿಣಿ ರೂಪದಲ್ಲಿ ದೇವಿಗೆ ಪೂಜೆ. ದುರ್ಗೆಯ ಎರಡನೇ ಮುಖ, ಕೈಯಲ್ಲಿ ಗುಲಾಬಿ ಹೂಗಳನ್ನೂ ಕಮಂಡಲವನ್ನೂ ಧರಿಸಿದ್ದಳಂತೆ. ಅದೇ ರೀತಿಯಲ್ಲಿ ಧ್ಯಾನಿಸಿ ಪೂಜಿಸಲ್ಪಡುತ್ತಾಳೆ.

ತದಿಗೆಯ ದಿನ: ಚಂದ್ರಘಂಟಾ ಎಂಬ ರೂಪದಲ್ಲಿ ದೇವಿಯನ್ನು ದರ್ಶಿಸುತ್ತೇವೆ. ಜಗದ್ಧಾತ್ರಿಯ ಮೂರನೇ ಮುಖ ಇದಾಗಿದೆ, ಬಹಳ ಕೋಪದಿಂದ ಹೊರಡುತ್ತಾ ಶಿರದಲ್ಲಿ ಅರ್ಧಚಂದ್ರನನ್ನು ಧರಿಸಿ ಹುಲಿಯಮೇಲೆ ಕುಳಿತು, ಚಂದ್ರಘಂಟಾ ಎಂದು ಕರೆಯಲ್ಪಟ್ಟಳಂತೆ-ಅದೇ ರೂಪದಲ್ಲಿ ಪೂಜೆ.

ಚತುರ್ಥಿಯ ದಿನ : ಕೂಷ್ಮಾಂಡ ರೂಪಿಣಿಯಾಗಿ ಕಾಣುತ್ತಾಳೆ. ಎರಡು ಕೈಗಳಲ್ಲಿ ರಕ್ತತುಂಬಿದ ಎರಡು ಹೂಜೆಗಳನ್ನು ಹಿಡಿದು ಆರ್ಭಟಿಸುವ ಶಕ್ತಿ ಸೃಷ್ಟಿಯ ಸೃಷ್ಟಿ, ಸ್ಥಿತಿ. ಲಯ ಕರ್ತೆಯಾಗಿ, ಸೂರ್ಯಮಂಡಲವನ್ನು ತನ್ನ ಶಕ್ತಿಯಿಂದ ಸೃಜಿಸಿದಳೆಂಬ ಕಾರಣಕ್ಕಾಗಿ ಆಕೆಯನ್ನು ಅದೇ ರೂಪದಲ್ಲಿ ಆರಾಧಿಸಲಾಗುತ್ತದೆ.

ಪಂಚಮಿಯ ದಿನ: ಸ್ಕಂದಮಾತಾ ಅಂದರೆ ಕಾರ್ತಿಕೇಯನಿಗೆ ಜನ್ಮವಿತ್ತ ದೇವಿ ಸಿಂಹಾಸನದಮೇಲೆ ಕುಳಿತು ಕಮಲದ ಹೂಗಳನ್ನು ಧರಿಸಿದ್ದಳಂತೆ. ಅದೇ ರೂಪದಲ್ಲಿ ಈ ದಿನ ಪೂಜೆ.

  ತಾಳಿಯ ಪವಿತ್ರತೆ ಮತ್ತು ಮಹತ್ವ

ಷಷ್ಠಿಯ ದಿನ : ಕಾತ್ಯಾಯನಿ ಯಾಗಿ ಅಲಂಕಾರಗೊಳ್ಳುತ್ತಾಳೆ. ಕಾತ್ಯ ಋಷಿಯ ಮಗಳಾಗಿ, ಚಂದ್ರಹಾಸವೆಂಬ ಆಯುಧವನ್ನು ಹಿಡಿದು ಸಿಂಹವಾಹನೆಯಾಗಿ ಕಡುಕೋಪದಲ್ಲಿ ವಿಜೃಂಭಿಸಿದ ಶಕ್ತಿ ಕಾತ್ಯಾಯಣಿ. ಈ ದಿನ ಆ ರೂಪದಲ್ಲಿ ಪೂಜೆ.

ಸಪ್ತಮಿಯ ದಿನ : ಭಯಂಕರವಾಗಿ ಘರ್ಜಿಸುತ್ತಾ ಬೆಳಕೇ ಕಾಣಿಸದಂತೆ ಕತ್ತಲರೂಪವನ್ನೂ ಕತ್ತಲಲ್ಲೇ ಮಿರುಗುವ ಬಣ್ಣಬಣ್ಣದ ಆಭರಣಗಳನ್ನೂ ಧರಿಸಿದ ದೇವಿ ಕತ್ತೆಯನ್ನೇರಿ ಕಾಣಿಸಿಯೂ ಕಾಣಿಸದಂತಾಗಿ ದುಷ್ಟರನ್ನು ಮಟ್ಟಹಾಕುವ ಕಾಲರಾತ್ರಿಯಾಗಿ ಸಂಹರಿಸಿದ ದಿನವೆಂದು ತಿಳಿಯಲಾಗಿದೆ, ಕಾಲರಾತ್ರಿಯ ಆರಾಧನೆ.

ಅಷ್ಟಮಿಯ ದಿನ : ಮಹಾಗೌರಿಯಾಗಿರುತ್ತಾಳೆ. ಷೋಡಶಿಯಾಗಿದ್ದ ಗಿರಿಜೆ ಮಹಾದೇವನ ಮಡದಿಯಾಗುತ್ತಾಳೆ. ಮಹಾದೇವಿ ಮಹಾಗೌರಿ ಎನಿಸುತ್ತಾಳೆ. ಗೌರನ ಅರ್ಧಾಂಗಿ ಶ್ರೀಗೌರಿಯ ಆರಾಧನೆ ಈ ದಿನ ನಡೆಯುತ್ತದೆ.

ನವಮಿಯ ದಿನ : ಸಿದ್ಧಿದಾತ್ರಿ! ಸಿದ್ಧರು, ಯಕ್ಷರು, ಗಂಧರ್ವರು, ಕಿನ್ನರರು, ಕಿಂಪುರುಷರು, ಕೆಲವು ಅಸುರರು, ದೇವತೆಗಳು ಎಲ್ಲರೂ ತಮ್ಮ ತಮ್ಮ ಸಿದ್ಧಿಗಾಗಿ ಪ್ರಾರ್ಥಿಸಿದಾಗ ಸಿದ್ಧಿದಾತ್ರಿಯಾಗಿ ಸಿದ್ಧಿಯನ್ನು ಅನುಗ್ರಹಿಸುವವಳಾಗಿ ಕಾಣಿಸಿಕೊಂಡಳಂತೆ. ಅದಕ್ಕೇ ಈ ದಿನ ಸಿದ್ಧಿದಾತ್ರಿಯ ಆರಾಧನೆ ನಡೆಯುತ್ತದೆ. ದುರ್ಗೆಯನ್ನು ಆಹ್ವಾನಿಸಿ ವಾಹನ, ಯಂತ್ರೋಪಕರಣ, ಆಯುಧಗಳ ಪೂಜೆ ನಡೆಯುತ್ತದೆ.

ಇದಲ್ಲದೇ ಬ್ರಹ್ಮಾಣಿ, ವೈಷ್ಣವಿ, ಮಾಹೇಶ್ವರಿ, ಇಂದ್ರಾಣಿ, ಕೌಮಾರಿ, ವಾರಾಹಿ ಮತ್ತು ಚಾಮುಂಡಾ ಎಂಬ ಅಷ್ಟಮಾತೃಕೆಯರ ಆರಾಧನೆಯೂ ಸಹ ನಡೆಯುತ್ತದೆ. ಮೂಲಾ ನಕ್ಷತ್ರ ಆರಂಭವಾದ ದಿನ ವಿಗ್ರಹ ರೂಪದಲ್ಲೋ ಅಥವಾ ಪುಸ್ತಕಗಳ ರೂಪದಲ್ಲೋ ಶಾರದೆಯನ್ನು ಸ್ಥಾಪಿಸಲಾಗುತ್ತದೆ. ಅಂದಿನಿಂದ ದಶಮಿಯವರೆಗೆ ನಾಲ್ಕು ದಿನಗಳ ಪರ್ಯಂತ ಸರಸ್ವತಿಗೆ ಪೂಜೆ ಸಲ್ಲುತ್ತದೆ. ಅಷ್ಟಮಿ ನವಮಿ ಮತ್ತು ದಶಮಿಗಳಂದು ಮಹಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತೀ ಪೂಜೆ ನಡೆಯುತ್ತದೆ. ‌‌

  ಧೃತರಾಷ್ಟ್ರನ ೧೦೦ ಪುತ್ರ ಶೋಕಕ್ಕೆ ಕಾರಣದ ಕಥೆ

‌ ‌ ‌ ೪. ಪೌಷ ನವರಾತ್ರಿ : ಈ ನವರಾತ್ರಿಯನ್ನು ಶಾಕಂಬರಿ ನವರಾತ್ರಿ ಎಂದು ಕೂಡ ಕರೆಯಲಾಗುತ್ತದೆ. ಇದನ್ನು ಪುಷ್ಯ ಮಾಸದ ಶುಕ್ಲ ಅಷ್ಟಮಿ ಯಿಂದ ಪೌರ್ಣಮೆಯವರೆಗೂ ಆಚರಿಸಲಾಗುತ್ತದೆ. ಈ ಸಮಯದಲ್ಲಿ ದೇವಿ ಬನಶಂಕರಿ ರೂಪದಲ್ಲಿ ಆರಾಧನೆ ನಡೆಯುತ್ತದೆ. ‌ ‌ ‌ ‌ ‌ ‌ ‌ ‌‌

‌ ‌ ೫. ಮಾಘ ನವರಾತ್ರಿ : ಈ ನವರಾತ್ರಿಯನ್ನು ಶ್ಯಾಮಲಾ ನವರಾತ್ರಿ ಎಂದು ಕೂಡ ಕರೆಯಲಾಗುತ್ತದೆ. ಇದನ್ನು ಮಾಘ ಮಾಸದ ಶುಕ್ಲ ಪಾಡ್ಯಮಿ ಯಿಂದ ನವಮಿಯವರೆಗೂ ಆಚರಿಸಲಾಗುತ್ತದೆ. ಈ ಸಮಯದಲ್ಲಿ ದೇವಿಯನ್ನು ರಾಜ ಮಾತಂಗಿ ರೂಪದಲ್ಲಿ ಆರಾಧನೆ ನಡೆಯುತ್ತದೆ.
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »