ಗಣೇಶ ಚತುರ್ಥಿ
ಗಣೇಶ ಪೂಜಾ ವಿಧಾನ..!
ಭಾದ್ರಪದಮಾಸದ ಶುಕ್ಲಪಕ್ಷದ ಚತುರ್ಥೀ ದಿನ ಗಣೇಶವ್ರತ. ಮಣ್ಣಿನ ಗಣೇಶಮೂರ್ತಿಯನ್ನು ಪೀಠದಲ್ಲಿ ಪ್ರತಿಷ್ಠಾಪಿಸಿ ಕಲ್ಪೋಕ್ತಪೂಜೆಯನ್ನು ಮಾಡಿ ಅಂದೇ ಸಾಯಂಕಾಲ ಅಥವಾ ಮುಂದಿನ ದಿನಗಳಲ್ಲಿ ಮಣ್ಣಿನ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸುವ ಪದ್ಧತಿ ಎಲ್ಲೆಡೆ ಚಾಲ್ತಿಯಲ್ಲಿದೆ.
ಈ ದಿನ ರಾತ್ರಿ ಚಂದ್ರನನ್ನು ನೋಡಿದರೆ ಅಪವಾದ ತಪ್ಪದು ಎಂಬ ನಂಬಿಕೆಯಿದೆ. ಅಕಸ್ಮಾತ್ ಚಂದ್ರನನ್ನು ಕಂಡರೆ ಸ್ಯಮಂತಕಮಣಿಯ ಕಥೆಯನ್ನು ಸ್ಮರಿಸಬೇಕು. ಅದಕ್ಕಾಗಿ
ಈ ಶ್ಲೋಕವನ್ನು ಹೇಳಬೇಕು.
ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾ ರೋದೀಃ ತವ ಹ್ಯೇಷಃ ಸ್ಯಮಂತಕಃ ||
[ಗಣೇಶನಿಗೆ ಬೆಲ್ಲದ ಭಕ್ಷ್ಯಗಳು, ಕಬ್ಬು, ಗರಿಕೆ, ಕೆಂಪುಬಣ್ಣದ ಹೂವು, ರಕ್ತವಸ್ತ್ರಗಳು ಪ್ರಿಯವಾದುವು.]
ಪೂಜಾವಿಧಾನ ಸಂಕ್ಷಿಪ್ತ
ಸಿದ್ಧಿವಿನಾಯಕಾಂತರ್ಗತ ಪ್ರಾಣಸ್ಥಶ್ರೀವಿಶ್ವಂಭರಪ್ರೀತ್ಯರ್ಥಂ ಗಣೇಶಪುಜಾಂ ಕರಿಷ್ಯೇ | ಎಂದು ಸಂಕಲ್ಪಿಸಿ,
ಘಂಟಾನಾದ ಮಾಡಿ, ಕಲಶ ಪೂಜೆ ಶಂಖಪೂಜೆ ಮಾಡಿ, ಶಂಖದ ನೀರನ್ನು ಗಣೇಶಪ್ರತಿಮೆಗೂ ಪ್ರೋಕ್ಷಿಸಿ,
ಧ್ಯಾನ
ರಕ್ತಾಂಬರೋ ರಕ್ತತನೂ ರಕ್ತಮಾಲ್ಯಾನುಲೇಪನಃ | ಮಹೋದರೋ ಗಜಮುಖಃ ಪಾಶದಂತಾಂಕುಶಾಭಯೇ ||
ಬಿಭ್ರದ್ಧ್ಯೇಯೋ ವಿಘ್ನಹರಃ ಕಾಮದಸ್ತ್ವರಯಾಹ್ಯಯಮ್ ||
ಗಣೇಶಾಯ ನಮಃ | ಧ್ಯಾಯಾಮಿ | ಧ್ಯಾನಂ ಸಮರ್ಪಯಾಮಿ ||
ಆಗಚ್ಛ ದೇವ ವಿಘ್ನೇಶ ಸ್ಥಾನೇ ಚಾತ್ರ ಸ್ಥಿರೋ ಭವ |
ಯಾವತ್ಪೂಜಾಂ ಕರಿಷ್ಯೇಽಹಂ ತಾವತ್ ಸನ್ನಿಹಿತೋ ಭವ ||
ಗೌರೀಪುತ್ರಾಯ ನಮಃ | ಆವಾಹಯಾಮಿ | ಆವಾಹನಂ ಸಮರ್ಪಯಾಮಿ ||
ವಕ್ರತುಂಡಾಯ ನಮಃ | ಸಿಂಹಾಸನಂ ಸಮರ್ಪಯಾಮಿ ||
ಏಕದಂತಾಯ ನಮಃ | ಸ್ವಾಗತಂ ಸಮರ್ಪಯಾಮಿ ||
ಕೃಷ್ಣಪಿಂಗಾಯ ನಮಃ | ಅರ್ಘ್ಯಂ ಸಮರ್ಪಯಾಮಿ ||
ಗಜಕರ್ಣಾಯ ನಮಃ | ಪಾದ್ಯಂ ಸಮರ್ಪಯಾಮಿ ||
ಲಂಬೋದರಾಯ ನಮಃ | ಆಚಮನೀಯಂ ಸಮರ್ಪಯಾಮಿ ||
ವಿಕಟಾಯ ನಮಃ | ಮಧುಪರ್ಕಂ ಸಮರ್ಪಯಾಮಿ ||
ವಿಘ್ನರಾಜಾಯ ನಮಃ | ಪುನರಾಚಮನಂ ಸಮರ್ಪಯಾಮಿ ||
ಧೂಮ್ರವರ್ಣಾಯ ನಮಃ | ಸ್ನಾನಂ ಸಮರ್ಪಯಾಮಿ || [ಶುದ್ಧೋದಕದಿಂದ ಪ್ರೋಕ್ಷಣೆ]
ಫಾಲಚಂದ್ರಾಯ ನಮಃ | ರಕ್ತವಸ್ತ್ರದ್ವಯಂ ಸಮರ್ಪಯಾಮಿ ||
ವಿನಾಯಕಾಯ ನಮಃ | ಯಜ್ಞೋಪವೀತಂ ಸಮರ್ಪಯಾಮಿ ||
ದ್ವಿಜಪ್ರಿಯಾಯ ನಮಃ | ಗಂಧಂ ಸಮರ್ಪಯಾಮಿ ||
ದೇವಾನೀಕಾರ್ಚಿತಾಯ ನಮಃ | ಹರಿದ್ರಾಕುಂಕುಮಂ ಸಮರ್ಪಯಾಮಿ ||
ಕ್ಷಿಪ್ರಪ್ರಸಾದಾಯ ನಮಃ | ಪುಷ್ಪಾಣಿ ಸಮರ್ಪಯಾಮಿ ||
ಹಸ್ತಿರಾಜವದನಾಯ ನಮಃ | ದೂರ್ವಾಯುಗ್ಮಂ ಸಮರ್ಪಯಾಮಿ ||
ದ್ವಾದಶನಾಮಪೂಜಾಂ ಕರಿಷ್ಯೇ
[ಎರಡೆರಡು ಗರಿಕೆಯಿಂದ ಅರ್ಚಿಸಬೇಕು]
ಸುಮುಖಾಯ ನಮಃ | ಏಕದಂತಾಯ ನಮಃ | ಕಪಿಲಾಯ ನಮಃ | ಗಜಕರ್ಣಾಯ ನಮಃ |
ಲಂಬೋದರಾಯ ನಮಃ | ವಿಕಟಾಯ ನಮಃ | ವಿಘ್ನರಾಜಾಯ ನಮಃ | ಗಣಾಧಿಪಾಯ ನಮಃ | ಧೂಮಕೇತವೇ ನಮಃ | ಗಣಾಧ್ಯಕ್ಷಾಯ ನಮಃ | ಫಲಾಚಂದ್ರಾಯ ನಮಃ | ಗಜಾನನಾಯ ನಮಃ |
ಸಿದ್ಧಿವಿನಾಯಕಾಯ ನಮಃ ದ್ವಾದಶನಾಮಪೂಜಾಂ ಸಮರ್ಪಯಾಮಿ ||
ವಿಶ್ವಪ್ರಿಯಾಯ ನಮಃ | ಧೂಪಮಾಘ್ರಾಪಯಾಮಿ ||
ಆಕಾಶಾಧಿಪತಯೇ ನಮಃ | ದೀಪಂ ದರ್ಶಯಾಮಿ ||
ಮೋದಕಪ್ರಿಯಾಯ ನಮಃ | ಮೋದಕಾದಿಭಕ್ಷ್ಯಾಣಿ ಸಮರ್ಪಯಾಮಿ ||
ಪಾಶಾಂಕುಶಧರಾಯ ನಮಃ | ನೀರಾಜನಂ ಸಮರ್ಪಯಾಮಿ ||
ನಮಸ್ತೇ ವಿಘ್ನರಾಜೇಶ ನಮಸ್ತೇ ಸಿದ್ಧಿದಾಯಕ | ನಮಸ್ತೇ ಪಾರ್ವತೀಪುತ್ರ ನಮಸ್ತೇ ಗಣನಾಯಕ ||
ನಮಸ್ಕಾರಾನ್ ಸಮರ್ಪಯಾಮಿ || [ ನಮಸ್ಕಾರಗಳನ್ನು ಮಾಡಬೇಕು]
ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ | ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||
ಗಣಾಧಿಪತಯೇ ನಮಃ | ಪ್ರಾರ್ಥನಾಂ ಸಮರ್ಪಯಾಮಿ ||
ಅನೇನ ಗಣಪತಿಪೂಜನೇನ ಗಣಪತ್ಯಂತರ್ಗತ ಪ್ರಾಣಸ್ಥಶ್ರೀವಿಶ್ವಂಭರಃ ಪ್ರೀಯತಾಮ್ ||
ವಿಸರ್ಜನೆಯ ದಿನದಂದು ರಾತ್ರಿಪೂಜೆಯನ್ನು ಮಾಡಿ,
ಗಚ್ಛ ಗಚ್ಛ ಸುರಶ್ರೇಷ್ಠ ಸ್ವಸ್ಥಾನಂ ಸಿದ್ಧಿದಾಯಕ | ಯತ್ರ ಗೌರೀಶಿವಸ್ಕಂದಾಃ ತತ್ರ ತಿಷ್ಠ ಗಜಾನನ || ಎಂದು ವಾದ್ಯಘೋಷಗಳೊಂದಿಗೆ ನೀರಿನಲ್ಲಿ ಪ್ರತಿಮೆಯನ್ನು ವಿಸರ್ಜಿಸಬೇಕು.
ಪ್ರಶಾಂತ್ ಭಟ್ ಕೋಟೇಶ್ವರ