ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪಕ್ಷಿರಾಜ ಗರುಡ ಮಂತ್ರ ಪಠಣ ಮಾಡಿದರೆ ಯಾವ ಫಲಗಳು ಸಿದ್ಧಿಸುತ್ತವೆ ?


ಪಕ್ಷಿರಾಜ ಗರುಡ ಮಂತ್ರ ಪಠಣ ಮಾಡಿದರೆ ಈ ಫಲಗಳು ಸಿದ್ಧಿಸುತ್ತವೆ.
ಶ್ರದ್ಧಾ ಭಕ್ತಿಯಿಂದ ಕೆಳಗಿನ ಗರುಡ ಮಂತ್ರ ಪಠಿಸಿದರೆ ಎಲ್ಲಾ ತರಹದ ಗ್ರಹ ದೋಷಗಳು ಪರಿಹಾರ ಆಗುತ್ತವೆ. ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮಾಡಿಸಿದವರಿಗೂ ದೋಷ ಪರಿಹಾರ ಆಗದೇ ಇದ್ದರೆ ಈ ಮಂತ್ರ ಅಷ್ಟೋತ್ತರ ಭಕ್ತಿ ಶ್ರದ್ಧೆಯಿಂದ ಪಾರಾಯಣ ಮಾಡಿದರೆ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಪಡೆಯಬಹುದು.

ಹಿಂದೂಗಳು ಪ್ರತಿ ಪ್ರಾಣಿ ಪಕ್ಷಿಗಳಲ್ಲಿ ಅಂತರ್ಯಾಮಿಯಾಗಿರುವ ಭಗವಂತನನ್ನು ಕಾಣುತ್ತಾರೆ. ಅದರಲ್ಲಿ ಗರುಡ ರಾಜ ಎಲ್ಲಾ ಪಕ್ಷಿಗಳಲ್ಲಿ ಅತ್ಯಂತ ದೊಡ್ಡ ಪಕ್ಷಿ ಮತ್ತು ಶ್ರೇಷ್ಠ ಪಕ್ಷಿ. ಗರುಡ ರಾಜ ಸದಾ ಶ್ರೀ ವೈಕುಂಠ ಲೋಕದಲ್ಲಿ ತನ್ನ ಭಕ್ತಿಯನ್ನು ಸ್ವಯಂ ಶ್ರೀ ಮಹಾ ವಿಷ್ಣುವಿನ ಕಡೆಗೆ ತೋರಿಸುತ್ತಿರುತ್ತದೆ. ಶ್ರೀಮನ್ನಾರಾಯಣ ಈ ಅದ್ಭುತವಾದ ಪಕ್ಷಿಯ ಮೇಲೆ ಮೇಲೆ ಅನಂತಾದಿ ಬ್ರಹ್ಮಾಂಡದಲ್ಲಿ ಸಂಚರಿಸುವ ಪಕ್ಷಿ ಇದಾಗಿದೆ.

ಗರುಡ ಮಂತ್ರ:”
ಕುಂಕುಮಾಂಕಿತ ವರ್ಣಾಯ ಕುದೇಂದು ಧವಲಾಯಚ |
ವಿಷ್ಣುವಾಹನ ನಮಸ್ತುಭ್ಯಂ ಪಕ್ಷಿರಾಜಾಯ ತೇ ನಮಃ ||

  ಮಾಧ್ವ ಸ೦ಪ್ರದಾಯದ ಸೂತ್ರಗಳು ..!

ಶ್ರೀ ಗರುಡ ದೇವರ ಅಷ್ಟೋತ್ತರ ಫಲ

 1. ಕಣ್ಣಿಗೆ ಸಂಬಂಧಪಟ್ಟ ಸಮೀಪ ದೃಷ್ಟಿ ದೋಷ, ದೂರ ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಕಣ್ಣು ಕೆಂಪಗಾಗುವುದು, ನೋವು, ಉರಿ ನಿವಾರಣೆಯಾಗುತ್ತದೆ.
  2. ದ್ವಿತೀಯ ರಾಹು, ಪಂಚಮ ರಾಹು, ಸಪ್ತಮ ರಾಹು, ದ್ವಾದಶ ರಾಹು ದೋಷಗಳು, ಸರ್ವರೀತಿಯ ಸರ್ಪದೋಷಗಳೂ ನಿವಾರಣೆಯಾಗುತ್ತವೆ.
  3. ಮನಸ್ಸಿನಲ್ಲಿ ನೋವು, ಅಸಮಾಧಾನ, ಬೇಸರ ಇಟ್ಟುಕೊಂಡು ಮನದಲ್ಲೇ ಕೊರಗುವವರು ಮೇಲಿನ ಮಂತ್ರವನ್ನು ಪಠಿಸಿದರೆ ಮನಸ್ಸು ನಿರ್ಮಲವಾಗುತ್ತದೆ, ಅಂತಹವರು ಶಾಂತವಾಗಿರುತ್ತಾರೆ.
  4. ಸರ್ಪದೋಷ, ಕಾಳ ಸರ್ಪದೋಷ… ಇತ್ಯಾದಿ ಸರ್ಪದೋಷಗಳು ಪೂರ್ಣವಾಗಿ ನಿವಾರಣೆಯಾಗುತ್ತವೆ.
  5. ಸಮಸ್ತ ಕುಜದೋಷಗಳು ನಿವಾರಣೆಯಾಗುತ್ತದೆ.
  6. ಸರ್ಪಸುತ್ತು ವಾಸಿಯಾಗುತ್ತದೆ.
  7. ರಾಹು ನಕ್ಷತ್ರಗಳಲ್ಲಿ ಜನಿಸಿದ್ದರೆ ಆರಿದ್ರಾ, ಸ್ವಾತಿ, ಶತಭಿಷ.. ಕೇತು ನಕ್ಷತ್ರಗಳಲ್ಲಿ ಜನಿಸಿದ್ದರೆ ಅಶ್ವಿನಿ, ಮಖಾ, ಮೂಲಾ .. ಕುಜನ ನಕ್ಷತ್ರಗಳಲ್ಲಿ ಜನಿಸಿದ್ದರೆ ಮೃಗಶಿರ, ಚಿತ್ತ, ಧನಿಷ್ಟ.. ಆದವರ ನಕ್ಷತ್ರಗಳ ದೋಷ ನಿವಾರಣೆಯಾಗುತ್ತದೆ.
  8. ಮಿಥುನ ಲಗ್ನದಲ್ಲಿ ಜನಿಸಿದ ಎಲ್ಲರೂ, ವಿವಾಹದ ನಂತರ ಜೀವನದಲ್ಲಿ ನೆಮ್ಮದಿ ಇಲ್ಲದವರು.. ಇದನ್ನು ಪಠಿಸಿದರೆ ನೆಮ್ಮದಿ ಹಾಗೂ ಶಾಂತಿಯಿಂದ ಜೀವನ ಮಾಡುತ್ತಾರೆ.
  9. ದೈವ ದೋಷವಿರುವವರು, ದೈವ ಶಾಪವಿರುವವರು, ಆಶ್ಲೇಷ ಬಲಿ ಮಾಡಿಸಿದ್ದರೂ ದೋಷ ಹೋಗದೇ ಕಷ್ಟ ಅನುಭವಿಸುತ್ತಿದ್ದರೆ ಅಂತಹವರು ಗರುಡ ಅಷ್ಟೋತ್ತರ ಪಠಿಸಿದರೆ ಸರ್ವ ದೋಷಗಳು ನಿವಾರಣೆಯಾಗುತ್ತವೆ.
  10. ಸರ್ಪ ಸಂಸ್ಕಾರ ಮಾಡಿಸಿಯೂ ದೋಷ ಹೋಗದಿದ್ದರೆ, ನೆನೆದ ಕಾರ್ಯಗಳು ಆಗದೇ ಇದ್ದರೆ ಅಂತಹವರು ಪಠಿಸಿದರೆ ಶುಭವಾಗುತ್ತದೆ.
  11. ಸತಿಪತಿಗಳ ಜಗಳ ನಿವಾರಣೆಯಾಗುತ್ತದೆ.. ರಾಹು-ಕೇತು ದೋಷಗಳು ನಿವಾರಣೆಯಾಗುತ್ತವೆ.
  12. ಅನುಮಾನ, ಒಳಜಗಳ, ಪರದಾಟಗಳು ನಿವಾರಣೆಯಾಗುತ್ತವೆ.
  13. ಪ್ರಸವ ಕಾಲದಲ್ಲಿ ಶಿಶುವು ಮಾಲೆಯನ್ನು ಹಾಕಿಕೊಂಡು ಜನಿಸಿದ್ದರೆ, ಕರುಳಬಳ್ಳಿ ಸುತ್ತಿ ಹುಟ್ಟಿದೆ ಎನ್ನುವ ದೋಷಗಳೆಲ್ಲವೂ ನಿವಾರಣೆಯಾಗುತ್ತದೆ.
  14. ಮಕ್ಕಳು ತುಂಬಾ ಅನಾರೋಗ್ಯದಿಂದ ಇದ್ದು, ಜ್ವರ ಬಂದು ವಾಸಿಯಾಗದೇ ಇದ್ದರೆ, ಮಗುವಿನ ಕತ್ತು ಮತ್ತು ಸೊಂಟ ಸರಿಯಾಗಿ ನಿಲ್ಲದಿದ್ದರೆ, ಅಂತಹವರ ಪೋಷಕರು ಶಾಸ್ತ್ರೋಕ್ತವಾಗಿ ಗರುಡದೇವರನ್ನು ಪೂಜಿಸಿ, ಯಾವುದಾದರೂ ಎಣ್ಣೆಯಲ್ಲಿ ಅಭಿಮಂತ್ರಿಸಿ ಹಚ್ಚಿದರೆ ಬಹಳ ಬೇಗ ಮಗು ಆರೋಗ್ಯವಂತವಾಗುತ್ತದೆ.
  15. ಕಣ್ಣಿನಲ್ಲಿ ಪೊರೆ ಬರುತ್ತಿರುವವರು, ಕಣ್ಣು ಕೆಂಪಗೆ ಆಗುತ್ತಿದ್ದರೆ, ಉರಿ ಬರುತ್ತಿದ್ದರೆ, ಗರುಡ ಮಂತ್ರವನ್ನು ನೀರಿನಲ್ಲಿ ಅಭಿಮಂತ್ರಿಸಿ, ಆ ನೀರನ್ನುಕಣ್ಣಿನ ಮೇಲೆ ಹಾಕಿ ನೀರಿನಿಂದ ಕಣ್ಣು ಶುದ್ಧ ಮಾಡಿಕೊಂಡರೆ, ಸಮಸ್ತ ನೇತ್ರದೋಷ ಪೂರ್ಣವಾಗಿ ನಿವಾರಣೆಯಾಗುತ್ತದೆ.🙏
  !! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »