ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗರುಡ ಯಾರು? ತಿರುಪತಿ ಬೆಟ್ಟಕ್ಕೆ ಗರುಡಾಚಲ ಹೆಸರು ಏಕೆ?

🔯 ಆಧ್ಯಾತ್ಮಿಕ ವಿಚಾರ.🔯

ಕಶ್ಯಪ ಮುನಿಯಿಂದ ವಿನತೆಯಲ್ಲಿ ಜನಿಸಿದ ಗರುಡ ಒಬ್ಬ ಪಕ್ಷಿರಾಜ.

ಈತನೇ ಶ್ರೀಮನ್ನಾರಾಯಣನ ವಾಹನ.

ಪ್ರಸ್ತುತ ವೈವಸ್ವತ ಮನ್ವಂತರದಲ್ಲಿನ ಬ್ರಹ್ಮನ ಒಂದು ತಿಂಗಳ ೧೪ನೇ ದಿನದಲ್ಲಿ ಗರುಡ ಅವತರಿಸಿದನೆಂಬುದಾಗಿ ಹೇಳಲಾಗುತ್ತದೆ.

ಆ ದಿನಕ್ಕೆ ಗರುಡಕಲ್ಪವೆಂದು ಕರೆಯಲಾಗುತ್ತದೆ. ಪೌಷ ಶುಕ್ಲ ಅಮಾವಾಸ್ಯೆಯಂದು ಗರುಡ ಜಯಂತಿಯನ್ನು ಆಚರಿಸಲಾಗುತ್ತದೆ.

ಶ್ರೀಮನ್ನಾರಾಯಣನು ತನ್ನ ವರಾಹವತಾರವನ್ನು ಸಂಪೂರ್ಣಗೊಳಿಸಿದ ಬಳಿಕ, ಅದೇ ರೂಪವನ್ನು ಧರಿಸಿ ವೈಕುಂಠಕ್ಕೆ ಹೋದಲ್ಲಿ ಲಕ್ಷ್ಮೀ ತನ್ನನ್ನು ವಿನೋದಮಾಡುವಳೆಂಬ ಭಾವನೆಯಿಂದ, ವಿಷ್ಣು ಗರುಡನಲ್ಲಿ, ವೈಕುಂಠದಲ್ಲಿರುವ ತನ್ನ ಕ್ರೀಡಾಪರ್ವತವನ್ನು ಭೂಲೋಕಕ್ಕೆ ತರುವಂತೆ ಆಜ್ಞಾಪಿಸಿದ.

  ಹಿಂದಿನ ಕಾಲದ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಶಿಕ್ಷೆಗೆ ಅರ್ಥ

ಸ್ವಾಮಿಯ ಆಜ್ಞೆಯನ್ನು ಪಾಲಿಸಿದ ಗರುಡ, ವೈಕುಂಠದ ಕ್ರೀಡಾಪರ್ವತವನ್ನು ಭೂಲೋಕಕ್ಕೆ ತರಲು, ವಿಷ್ಣುವು ಅಲ್ಲಿಯೇ ನೆಲೆಸಿದ.

ಬಹಳ ಕಾಲ ನಿರೀಕ್ಷಿಸಿದರೂ ವೈಕುಂಠಕ್ಕೆ ಬಾರದ ಸ್ವಾಮಿಯು, ಭೂಮಿಯಲ್ಲಿ ನೆಲೆಸಿರುವುದನ್ನು ತಿಳಿದು, ಸ್ವಾಮಿಯನ್ನು ಮತ್ತೆ ಸೇರುವ ತವಕದಿಂದ, ಆಕಾಶರಾಯನಿಗೆ ಪದ್ಮಾವತಿಯೆಂಬ ಹೆಸರಿನಿಂದ ಮಗಳಾಗಿ ಜನಿಸಿ, ವಿಷ್ಣುವನ್ನು ಮದುವೆಯಾದಳು.

ಹೀಗಾಗಿ ಗರುಡನು ತಂದ ಬೆಟ್ಟಕ್ಕೆ ಗರುಡಾಚಲವೆಂದು ಹೆಸರು, ಇದನ್ನು ಈಗ ತಿರುಪತಿ ಬೆಟ್ಟವೆಂದು ಕರೆಯುತ್ತಾರೆ.

Image credit: @vertigowarrior twitter


▬▬▬▬▬▬ஜ۩۞۩ஜ▬▬▬▬▬▬
ಸರ್ವಜನ ಸುಖಿನೋಭವತು ಕೃಷ್ಣಾರ್ಪಣಮಸ್ತು
▬▬▬▬▬▬ஜ۩۞۩ஜ▬▬▬▬▬▬
|| ಕೃಷ್ಣಾರ್ಪಣಾಮಸ್ತು |l

Leave a Reply

Your email address will not be published. Required fields are marked *

Translate »