ಸರ್ವವಿಘ್ನಗಳಿಂದ ಕಾಪಾಡುವ ‘ಮುಖ್ಯಪ್ರಾಣ ದೇವರ’ ಮಹಿಮೆಗಳು…!
“ॐ ಶ್ರೀರಾಮ ಜಯರಾಮ ಜಯ ಜಯ ರಾಮ”
ಈ ದೇಹಕ್ಕೆ ಜ್ಞಾನಶಕ್ತಿ ಕ್ರಿಯಾಶಕ್ತಿ ಕೊಟ್ಟು ಅದು ಕುಸಿಯದಂತೆಧರಿಸಿದವರು ನೀವಲ್ಲ ನಾನೇ ಎಂದು ಪ್ರಾಣದೇವರು ದೇವತೆಗಳಿಗೆ ಹೇಳುತ್ತಾರೆ ಕಣ್ಣಮುಂದೆ ಕಾಣುವ ನನ್ನ ಐದು ರೂಪಗಳಿಂದ ಈ ಶರೀರವನ್ನು ಪ್ರವೇಶಮಾಡಿ, ಅದನ್ನು ನಾನುಧರಿಸಿದ್ದೇನೆ ಹಾಗೂ ನೀವು ನನಗೆ ಅಧೀನರಾಗಿದ್ದೀರಿ” ಎನ್ನುತ್ತಾರೆ
ಪ್ರಾಣದೇವರ ಈ ಮಾತಿಗೆ ದೇವತೆಗಳು ವಿಶ್ವಾಸ ತೋರುವುದಿಲ್ಲ ಪ್ರಾಣದೇವರು ಹೇಳುತ್ತಾರೆ ನಮ್ಮಲ್ಲಿ ಒಬ್ಬೊಬ್ಬರಾಗಿ ಈ ದೇಹದಿಂದ ಹೊರ ಹೋಗೋಣ ಯಾರು ಹೊರ ಹೋದಾಗ ಈ ದೇಹ ಬಿದ್ದು ಹೋಗುತ್ತದೋ ಅವರು ನಿಜವಾದ ಧಾರಕ ಎಂದು ಹೇಳಿ ದೇಹದಿಂದ ಆಚೆ ಹೊರಟವರಂತೆ ಪ್ರಾಣದೇವರು ಏಳುತ್ತಾರೆ ಆಗ ಅಲ್ಲಿ ಇತರ ದೇವತೆಗಳಿಗೆ ನಿಲ್ಲಲು ಸಾಧ್ಯವಾಗುವುದಿಲ್ಲ ಅದೇ ರೀತಿ ದೇಹ ಪ್ರವೇಶ ಕ್ರಿಯೆಯಲ್ಲಿ ಒಬ್ಬೊಬ್ಬರಾಗಿ ಇತರ ದೇವತೆಗಳನ್ನು ದೇಹ ಪ್ರವೇಶಿಸುವಂತೆ ಹೇಳುತ್ತಾರೆ ಪ್ರಾಣ ದೇವರು.
ಆದರೆ ಎಲ್ಲಾ ದೇವತೆಗಳು ಪ್ರವೇಶಿಸಿದರೂ ಕೂಡಾ ಪ್ರಾಣದೇವರ ಪ್ರವೇಶದ ತನಕ ಅಲ್ಲಿ ಯಾವುದೇ ಚಟುವಟಿಕೆ ಅವರಿಂದ ಸಾಧ್ಯವಾಗಲಿಲ್ಲ ಆಗ ದೇವತೆಗಳಿಗೆ ಪ್ರಾಣದೇವರ ಪ್ರಾಮುಖ್ಯತೆ ಮನವರಿಕೆಯಾಗುತ್ತದೆ ಅವರನ್ನು ತಮ್ಮೆಲ್ಲರ ಮುಖಂಡ ಎಂದು ಅವರು ಒಪ್ಪಿಕೊಳ್ಳುತ್ತಾರೆ
ಮನೋಜವಂ ಮಾರುತ ತುಲ್ಯ ವೇಗಂ
ಜಿತೇಂದ್ರಿಯಂ ಬುಧ್ಧಿಮತಾಂ ವರಿಷ್ಠಂ
ವಾತಾತ್ಮಜಂ ವಾನರ ಯೂಥ ಮುಖ್ಯಂ
ಶ್ರೀ ರಾಮ ಧೂತಂ ಶಿರಸಾ ನಮಾಮಿ ||
ಬುಧ್ಧಿರ್ಬಲಂ ಯಶೋಧೈರ್ಯಂ
ನಿರ್ಭಯತ್ವಂ ಅರೋಗತ
ಅಜಾಡ್ಯಂ ವಾಕ್ಪಟುತ್ವಂಚ
ಹನುಮತ್ ಸ್ಮರಣಾತ್ ಭವೇತ್ ||
ಶನಿ ದೋಷವಿರುವವರು, ಆತ್ಮವಿಶ್ವಾಸದ ಕೊರತೆಯಿದ್ದವರು ಹನುಮಾನ್ ಚಾಲೀಸ್ ಓದಿ ಆಂಜನೇಯನನ್ನು ಆರಾಧಿಸಿದರೆ ಒಳಿತಾಗುವುದು ಎಂಬ ನಂಬಿಕೆಯಿದೆ.
ಹನುಮಾನ ಚಾಲೀಸ ಎನ್ನುವುದು ಶಕ್ತಿಶಾಲಿ ಮಂತ್ರ. ಅದರಲ್ಲೂ ಕೆಲವು ಸಾಲುಗಳನ್ನು ಪದೇ ಪದೇ ಓದುವುರಿಂದ ನಮ್ಮ ಜೀವನದಲ್ಲಿ ಬದಲಾವಣೆಯಾಗುತ್ತದಂತೆ.
‘ರಾಮದೂತ ಅತುಲಿತ ಬಲಧಾಮ, ಅಂಜನಿ ಪುತ್ರ ಪವನಸುತ ನಾಮ’ ಎನ್ನುವ ಈ ಖ್ಯಾತ ಸಾಲನ್ನು ಪದೇ ಪದೇ ಓದುವುದರಿಂದ ನಮ್ಮಲ್ಲಿ ದೈಹಿಕ ಸಾಮರ್ಥ್ಯದ ಕೊರತೆ ನೀಗಿ ಶಕ್ತಿವಂತರಾಗುತ್ತೇವೆ.
ಹಾಗೆಯೇ ‘ಮಹಾವೀರ ವಿಕ್ರಮ ಭಜರಂಗಿ’ ಎನ್ನುವ ವಾಕ್ಯವನ್ನು ಪದೇ ಪದೇ ಭಕ್ತಿಯಿಂದ ಪಠಿಸುವುದರಿಂದ ಬುದ್ಧಿವಂತರಾಗುತ್ತಾರೆ.
ಹಾಗೆಯೇ ‘ಭೀಮ್ ರೂಪಿ ಧಾರೀ ಅಸುರ್ ಸಂಹಾರೆ, ರಾಮಚಂದ್ರಜೀ ಕೇ ಕಾಜ್ ಸಂವಾರೆ’ ಎನ್ನುವ ವಾಕ್ಯವನ್ನು ಓದುವುದರಿಂದ ಶತ್ರುನಾಶವಾಗುತ್ತದೆ.
‘ಲಾಯ್ ಸಂಜೀವನ್ ಲಖನ್ ಜಿಯಾಯೆ, ಶ್ರೀರಘುಬೀರ್ ಹರಷಿ ಉರ್ ಲಾಯೆ’ ಎಂಬುದನ್ನು ಪದೇ ಪದೇ ಹೇಳುವುದರಿಂದ ಅನಾರೋಗ್ಯ ದೂರವಾಗುತ್ತದೆ.
ಶ್ರೀ ಗುರು ಚರಣ ಸರೋಜರಜ ನಿಜಮನ ಮುಕುರ ಸುಧಾರಿ |
ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ||
ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ |
ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ್ ||
ಶ್ರೀ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು