ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶಿವನು ಪಾರ್ವತಿ ಮಡಿಲಲ್ಲಿ ಮಲಗಿರುವ ಏಕೈಕ ಕ್ಷೇತ್ರ ಕೊಂಡೇಶ್ವರ

🔯 ಆಧ್ಯಾತ್ಮಿಕ ವಿಚಾರ.📖🔯

ಶಿವನು ಪಾರ್ವತಿ ಮಡಿಲಲ್ಲಿ ಮಲಗಿರುವ ಏಕೈಕ ಕ್ಷೇತ್ರ..!

ದೇಶದಲ್ಲಿ ಹಲವಾರು ಶಿವನ ದೇವಾಲಯಗಳು ಇವೆ. ಅವುಗಳಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಶಿವನು ಲಿಂಗರೂಪದಲ್ಲಿಯೇ ಕಾಣಸಿಗುತ್ತಾನೆ. ಕೆಲವು ಕ್ಷೇತ್ರಗಳಲ್ಲಿ ಮಾತ್ರ ಮಾನವ ರೂಪದ ವಿಗ್ರಹದ ಮೂಲಕ ಕಾಣಸಿಗುತ್ತಾನೆ. ಅದೂ ಕೂಡಾ ನಿಂತಿರುವ ಭಂಗಿಯಲ್ಲೇ ಕಾಣಸಿಗುವುದು. ಆದರೆ

ಆಂಧ್ರಪ್ರದೇಶದ ಪಲ್ಲಿ ಕೊಂಡೇಶ್ವರ ಕ್ಷೇತ್ರದಲ್ಲಿ ಶಿವನು ಪಾರ್ವತಿಯ ಮಡಿಲಿನಲ್ಲಿ ಮಲಗಿರುವ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ.
ಮಲಗಿರುವ ಶಿವ ದೇಶದಲ್ಲಿ ಬೇರೆಲ್ಲೂ ಇಲ್ಲ
ಶಿವನು ಮಲಗಿರುವಂತಹ ಶಿವನ ವಿಗ್ರಹವಿರುವುದು ಇಡೀ ದೇಶದಲ್ಲಿ ಇದೊಂದೇ ದೇವಸ್ಥಾನದಲ್ಲಿ. ಈ ದೇವಸ್ಥಾನವನ್ನು ಸುರುಟ್‌ಪಳ್ಳಿ ಎಂದೂ ಕರೆಯುತ್ತಾರೆ.

ಸುತ್ತಲೂ ಹಸಿರು, ಕಡಲತಡಿಯ ಮಧ್ಯೆ ಇರುವ ಈ ಕ್ಷೇತ್ರ
ಪುರಾಣಗಳ ಪ್ರಕಾರ
ಸಮುದ್ರ ಮಂಥನ ಸಂದರ್ಭದಲ್ಲಿ ಹೊರಬರುವ ವಿಷವನ್ನು ಶಿವನು ಕುಡಿಯುತ್ತಾನೆ. ಹಾಗಾಗಿ ಆತನಿಗೆ ನೀಲಕಂಠೇಶ್ವರ ಎನ್ನುವ ಹೆಸರು ಬಂದಿರುವ ಕಥೆ ನಿಮಗೆ ಗೊತ್ತೇ ಇರಬಹುದು.

  ಪ್ರಜಾಕೀಯ - ದೇಶದ ಅಬಿವ್ರದ್ದಿ

ಅಮುದಾಂಬಿಕೆ ಎನ್ನುವ ಹೆಸರೂ ಇದೆ.

ಶಿವ ಕುಡಿದ ವಿಷ ಒಳಗೆ ಹೋಗಬಾರದೆಂದು ಪಾರ್ವತಿ ದೇವಿ

ಶಿವನ ಗಂಟಲನ್ನು ಗಟ್ಟಿಯಾಗಿ ಹಿಡಿಯುತ್ತಾಳೆ. ಒಳ ಸೇರುತ್ತಿದ್ದ ವಿಷವನ್ನು ತಡೆದು ಜೀವವನ್ನು ಅಮೃತವಯವಾಗಿಸಿದ್ದಕ್ಕೆ ಆಕೆಗೆ ಅಮುದಾಂಬಿಕೆ ಎನ್ನುವ ಹೆಸರು ಕೂಡಾ ಬಂತು.

ಶಿವ ಶಯನ ಕ್ಷೇತ್ರಂ

ಈ ಘಟನೆಯ ನಂತರ ಪಾರ್ವತಿ, ಪರಮೇಶ್ವರರು ತಿರುಗಿ ಕೈಲಾಸಕ್ಕೆ ಹೊರಡುತ್ತಾರೆ. ಆ ಪ್ರಯಾಣ ಸಂದರ್ಭ ಕೊಂಡೇಶ್ವರ ಕ್ಷೇತ್ರ ಹತ್ತಿರ ಬರುವಾಗ

ಶಿವನ ಶರೀರದಲ್ಲಿ ಇನ್ನೂ ವಿಷದ ಪ್ರಭಾವ ಇರುವುದು ಕಂಡುಬರುತ್ತದೆ. ಶಿವ ಅಲ್ಲೇ ಸ್ವಲ್ಪ ಸುಧಾರಿಸಿಕೊಳ್ಳಲು ಮಲಗುತ್ತಾನೆ. ಆಗ ಪಾರ್ವತಿ ತನ್ನ ತೊಡೆಯ ಮೇಲೆ ಶಿವನನ್ನು ಮಲಗಿಸುತ್ತಾಳೆ. ಶಿವನು ಪಾರ್ವತಿಯ ಮಡಿಲಲ್ಲಿ ಮಲಗಿರುವ ಕಾರಣ ಈ ಕ್ಷೇತ್ರಕ್ಕೆ ಶಿವ ಶಯನ ಕ್ಷೇತ್ರಂ ಎನ್ನುವ ಹೆಸರು ಬಂದಿದೆ

  ಸಾರಂಗಪಾಣಿ ಶ್ರೀ ಲಕ್ಷ್ಮೀ ದೇವಸ್ಥಾನ

ಮೊದಲು ಪಾರ್ವತಿಯ ದರ್ಶನ ಪಡೆಯಬೇಕು.

ಶಿವನನ್ನು ವಿಷದಿಂದ ರಕ್ಷಿಸಿದ ಕಾರಣ ಮೊದಲಿಗೆ ಪಾರ್ವತಿ ದೇವಿಯ ದರ್ಶನ ಪಡೆಯಬೇಕು. ಈ ಕ್ಷೇತ್ರದಲ್ಲಿ ಅಮುದಾಂಬಿಕೆಯ ರೂಪದಲ್ಲಿರುವ ಪಾರ್ವತಿಯನ್ನು ದರ್ಶನ ಪಡೆಯುವುದು ಸಂಪ್ರವಿಗ್ರಹ

12 ಅಡಿ ಎತ್ತರದ ವಿಗ್ರಹ

ಶ್ರೀ ಪಲ್ಲಿ ಕೊಂಡೇಶ್ವರ ಸ್ವಾಮಿಯ ವಿಗ್ರಹವು 12 ಅಡಿ ಎತ್ತರವಿದೆ. ಈ ವಿಗ್ರಹವು ಶಿವ ಪಾರ್ವತಿಯ ಮಡಿಲಲ್ಲಿ ಮಲಗಿದ್ದು,

ದೇವತೆಗಳು, ಸುತ್ತಲೂ ನಿಂತು ಪ್ರಾರ್ಥಿಸುತ್ತಿರುವ ರೀತಿಯಲ್ಲಿ ವಿಗ್ರಹ ಕಾಣಿಸುತ್ತದೆ.

ಸುರುಟ್ ಪಲ್ಲಿ ಎನ್ನುವ ಹೆಸರು ಬಂದಿದ್ದು ಯಾಕೆ?

  ಸೋಮಾರಿತನ ಹಾಗೂ ರೈತನ ಶ್ರಮದ ಕಥೆ

ಸುರುಟ್ ಅಂದರೆ ದೇವತೆಗಳು. ಶಿವ ಚೇತರಿಸಿಕೊಳ್ಳುವವರೆಗೂ ದೇವತೆಗೆಳೂ ಬ್ರಹ್ಮ, ಮಹಾವಿಷ್ಣು ಅಲ್ಲೇ ಇದ್ದರು. ಹಾಗಾಗಿ ಈ ಕ್ಷೇತ್ರಕ್ಕೆ ಸುರುಟ್ ಪಲ್ಲಿ ಎಂದೂ ಕರೆಅಭಿಷೇಕವಿಲ್ಲ

ವಿಗ್ರಹಕ್ಕೆ ಅಭಿಷೇಕವಿಲ್ಲ.

ಈ ವಿಗ್ರಹಕ್ಕೆ ಅಭೀಷೇಕ ಮಾಡಿದರೆ ವಿಷ ದೇಹದ ಒಳಕ್ಕೆ ಸೇರುತ್ತದೆ ಎನ್ನುವ ಕಾರಣಕ್ಕೆ ಹದಿನೈದು ದಿನಕ್ಕೊಮ್ಮೆ ತಮಿಳುನಾಡಿನ ಒಂದು ಗುಪ್ತ ಸ್ಥಳದಿಂದ ಚಂದನ ತೈಲವನ್ನು ಈ ವಿಗ್ರಹಕ್ಕೆ ಲೇಪಿಸುತ್ತಾರೆ. ಇದರಿಂದ ವಿಷದ ಪ್ರಭಾವ ಕಡಿಮೆಯಾಗುತ್ತದೆ ಎನ್ನುವ ನಂಬಿಕೆ ಅಲ್ಲಿಯವರದ್ದು,

ಓಂ ನಮಃ ಶಿವಾಯ

Leave a Reply

Your email address will not be published. Required fields are marked *

Translate »