ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಶಿವನ 21 ಹೆಸರುಗಳು ಮತ್ತು ಅರ್ಥ

ಶಿವನ 21 ಹೆಸರುಗಳು ಮತ್ತು ಅರ್ಥ

ಸೋಮವಾರ ಶಿವನಿಗೆ ವಿಶೇಷವಾಗಿ ಪ್ರಿಯವಾದ ವಾರ.

ಏಕೆಂದರೆ ಸೋಮವಾರ ‘ಸೋಮ’ ಅಂದರೆ ಚಂದ್ರನ ವಾರ. ಚಂದ್ರ ಮಹಾದೇವನ ಪರಮ ಭಕ್ತ. ಮಹಾದೇವನ ಪ್ರೀತ್ಯರ್ಥ ಆತನ ಶಿರವನ್ನು ಅಲಂಕರಿಸಿರುವನು. ಆದ್ದರಿಂದ ಮಹಾದೇವನಿಗೆ ಸೋಮಶೇಖರ, ಚಂದ್ರಮೌಳಿ, ಚಂದ್ರಶೇಖರ ಎಂಬಿತ್ಯಾದಿ ಹೆಸರುಗಳೂ ಇವೆ.

ಸೋಮವಾರದಂದು ಶಿವನ ನಾಮಗಳ ಸ್ಮರಣೆ ಮಾಡಿದರೆ ವಿಶೇಷ ಪ್ರಯೋಜನವಿದೆ

*ಈ ಹೆಸರುಗಳು ಮತ್ತು ಅವುಗಳ ಅರ್ಥವನ್ನಿಲ್ಲಿ ನೋಡೋಣ

ಶಿವ : ಮಂಗಳಕರನಾದುದರಿಂದ ಈತ ‘ಶಿವ’. ಶಿವ ಎಂಬ ಪದದ ಅರ್ಥವೇ ‘ಮಂಗಳ’.

ವಾಮದೇವ : ವಾಮ ಎಂದರೆ ಸುಂದರ. ಶಿವನಷ್ಟು ಸುಂದರ ಯಾರೂ ಇಲ್ಲ ಎಂಬ ಕಾರಣದಿಂದ ಈತನನ್ನು ‘ವಾಮ ದೇವ’ ಎಂದು ಸ್ತುತಿಸಲಾಗಿದೆ.

  ಕಲಶದ ವೀಳ್ಯದೆಲೆ ಮತ್ತು ವಿಶೇಷಗಳು

ಸುಂದರೇಶ್ವರ: ಗಜಚರ್ಮಾಂಬರ ಧಾರಿಯಾದ ಶಿವನು ಪಾರ್ವತೀದೇವಿಯನ್ನು ಮದುವೆಯಾಗಲು ಬಂದಾಗ ಆತನ ಅತ್ತೆ ಗಾಬರಿಯಿಂದ ತಲೆ ತಿರುಗಿ ಬೀಳುತ್ತಾಳೆ.

ಆಗ ಆಕೆಯನ್ನು ಸಮಾಧಾನ ಪಡಿಸಲು ಶಿವನು ನಾನಾವಿಧಾಲಂಕಾರ ಭೂಷಿತನಾಗಿ ಸುಂದರೇಶ್ವರನ ರೂಪ ತಾಳುತ್ತಾನೆ.

ವೃಷಭಧ್ವಜ: ಎತ್ತು ಅಥವಾ ನಂದಿಯನ್ನು ವಾಹನವಾಗಿ ಹೊಂದಿರುವುದರಿಂದ ಶಿವನು
‘ವೃಷಭಧ್ವಜ’’

ಆಶುತೋಶ : ಭಕ್ತರಿಗೆ ಒಲಿದು ಶೀಘ್ರದಲ್ಲಿ ವರ ನೀಡುವುದರಿಂದ ಆಶುತೋಷ

ಗಂಗಾಧರ : ಗಂಗೆಯನ್ನು ಶಿರಸ್ಸಿನಲ್ಲಿ ಧರಿಸಿರುವುದರಿಂದ ಶಿವನು ‘ ಗಂಗಾಧರ’

ಪಿನಾಕಿ : ಪಿನಾಕ ಧನಸ್ಸನ್ನು ಧರಿಸಿರುವುದರಿಂದ ಈ ಹೆಸರು.

ವಿಷಕಂಠ : ಸಮುದ್ರಮಥನ ಸಂದರ್ಭದಲ್ಲಿ ಹಾಲಾಹಲ ವಿಷವನ್ನು ನುಂಗಿ ಗಂಟಲಲ್ಲಿ ಇರಿಸಿಕೊಂಡು ಲೋಕವನ್ನು ರಕ್ಷಿಸಿದ ಈತ ವಿಷಕಂಠ. ಆಗ ಗಂಟಲು ನೀಲಿಗಟ್ಟಿ ‘ನೀಲಕಂಠ’ನೆಂಬ ಹೆಸರನ್ನೂ ಪಡೆದ.
ಸಾರಂಗಪಾಣಿ : ದಕ್ಷಿಣಾಮೂರ್ತಿ ರೂಪದಲ್ಲಿ ಶಿವನು ಕೈಯಲ್ಲಿ ಸಾರಂಗವನ್ನು ಧರಿಸಿರುವುದರಿಂದ ಸಾರಂಗಪಾಣಿ ಎಂಬ ಹೆಸರು.

  ಶ್ರೀರಾಮ ನಾಮದಿಂದ ಸಂಪೂರ್ಣ ಶರಣಾಗತಿ

ನಟರಾಜ : ನಾಟ್ಯದ ಮೂಲಕ ಅಪಸ್ಮಾರನನ್ನು ನಿಯಂತ್ರಿಸಿದ ಕಾರಣ ಈತ ನಟರಾಜ

ಸದಾಶಿವ : ಸದಾ ಸಜ್ಜನರಿಗೆ ಮಂಗಳವನ್ನು ಕರುಣಿಸುವನಾದ್ದರಿಂದ, “ಸದಾಶಿವ”

ನಾಗಾಭರಣ : ನಾಗ (ಸರ್ಪವನ್ನು)ನನ್ನು ಆಭರಣವಾಗಿ ಧರಿಸಿರುವುದರಿಂದ “ನಾಗಾಭರಣ.

ತ್ರಿಪುರಾರಿ : ತ್ರಿಪುರಾಸುರನನ್ನು ಸಂಹಾರ ಮಾಡಿದ್ದರಿಂದ – “ತ್ರಿಪುರಾರಿ”

ಮೃತ್ಯುಂಜಯ : ಮೃತ್ಯುವಿಗೆ ಅಭಿಮಾನಿಯಾದ ಯಮನನ್ನೂ ಮೀರಿಸಿರುವುದರಿಂದ “ಮೃತ್ಯುಂಜಯ”

ಧೂರ್ಜಟಿ : ತಪಸ್ಸಿನಿಂದಾಗಿ ಜಟೆಯನ್ನು ಹೊಂದಿರುವ ಕಾರಣದಿಂದ “ಧೂರ್ಜಟಿ”
ಕಾಮಾರಿ : ಕಾಮನನ್ನು ಗೆದ್ದು, ಆತನನ್ನು ದಹಿಸಿದ್ದರಿಂದ ಈತ ಕಾಮಾರಿ.

ಮಹಾದೇವ : ದೇವತೆಗಳ ದೇವನಾದ್ದರಿಂದ ‘ಮಹಾದೇವ’
ಅರ್ಧನಾರೀಶ್ವರ : ತನ್ನ ದೇಹದ ಅರ್ಧಭಾಗದಲ್ಲಿ ಪಾರ್ವತಿಯನ್ನು ಹೊಂದಿರುವುದರಿಂದ ಈತ ಅರ್ಧನಾರೀಶ್ವರ

ಶಂಕರ : ಶಂ ಎಂದರೆ ಸುಖ. ಸಕಲ ಸುಖವನ್ನೂ ಕರುಣಿಸುವವನು ಶಂಕರ.

  What happens after death ?

ಆದಿಯೋಗಿ : ಮಹಾ ತಾಪಸಿಯಾದ ಶಿವ ಯೋಗಿಗಳ ಮಹಾದೇವ. ಯೋಗಿಗಳ ಪರಮಗುರು. ಆದ್ದರಿಂದ ಈ ಹೆಸರು
ಮಹಾಕಾಲ : ಸ್ವಯಂ ಕಾಲನೂ, ಮಹಾಕಾಳಿಯ ಅರ್ಧಾಂಗನೂ ಆಗಿರುವುದರಿಂದ ಈ ಹೆಸರು.

ಶಿವಾರ್ಪಣಮಸ್ತು
ಸದ್ವಿಚಾರ ಸಂಗ್ರಹ
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »

You cannot copy content of this page