ಗಜಾನನ ಸಂಕಷ್ಟ ಚತುರ್ಥಿ ಮುಹೂರ್ತ, ಪೂಜೆ ವಿಧಾನ, ಮಹತ್ವ..!
ಸಂಕಷ್ಟಹರ ಚತುರ್ಥೀ ಎಂದರೆ ತೊಂದರೆಗಳನ್ನು ನಾಶ ಮಾಡುವ ವ್ರತ ಎಂದರ್ಥ. ಹಿಂದೂ ಪಂಚಾಂಗದ ಪ್ರಕಾರ, ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ಥಿ ತಿಥಿಯನ್ನು ಸಂಕಷ್ಟಹರ ಚತುರ್ಥಿ ಎಂದು ಕರೆಯಲಾಗುತ್ತದೆ. ಆಷಾಢ ಮಾಸದ ಸಂಕಷ್ಟಹರ ಚತುರ್ಥಿಯನ್ನು ಗಜಾನನ ಸಂಕಷ್ಟಹರ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ವ್ರತವನ್ನು ಸೂರ್ಯೋದಯದಿಂದ ಚಂದ್ರೋದಯದವರೆಗೆ ಆಚರಿಸಲಾಗುತ್ತದೆ. ಸಂಕಷ್ಟಹರ ಚತುರ್ಥಿಯಂದು ಸಂಜೆ ಗಣಪತಿಯ ಪೂಜೆ ಮಾಡಿ ರಾತ್ರಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ ಈ ವ್ರತವನ್ನು ಮುಕ್ತಾಯಗೊಳಿಸುತ್ತಾರೆ. ಗಣೇಶನು ಗಜಾನನ ಸಂಕಷ್ಟಹರ ಚತುರ್ಥಿಯಂದು ಉಪವಾಸ ಮಾಡುವವರ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತಾನೆ ಎನ್ನುವ ನಂಬಿಕೆಯಿದೆ.
ಗಜಾನನ ಸಂಕಷ್ಟ ಚತುರ್ಥಿ
. ಆಷಾಢ ಮಾಸದಲ್ಲಿ ಭಗವಾನ್ ವಿಷ್ಣು ಯೋಗ ನಿದ್ರೆಗೆ ಹೋಗುವ ಮುನ್ನ ಸೃಷ್ಟಿಯ ಜವಾಬ್ದಾರಿಯನ್ನು ಶಿವನಿಗೆ ಒಪ್ಪಿಸಿ ಹೋಗುತ್ತಾನೆ. ಆದ್ದರಿಂದ ಈ ಅವಧಿಯಲ್ಲಿ ಹೆಚ್ಚಾಗಿ ಶಿವನ ಪೂಜೆಯನ್ನು ಮಾಡಲಾಗುತ್ತದೆ. ಗಣೇಶನು ಭಗವಾನ್ ಶಿವನ ಮಗನಾದ್ದರಿಂದ ಈ ಮಾಸದಲ್ಲಿ ಗಣಪತಿಯನ್ನು ಪೂಜಿಸುವುದು ಹೆಚ್ಚು ಪ್ರಧಾನವಾಗಿದೆ. ಈ ದಿನ ಗಣೇಶನನ್ನು ಪೂಜಿಸುವುದರಿಂದ ಓರ್ವ ವ್ಯಕ್ತಿಯು ಶಿವ, ಪಾರ್ವತಿ ಮತ್ತು ಗಣಪತಿಯ ಅನುಗ್ರಹವನ್ನು ಪಡೆದುಕೊಳ್ಳುತ್ತಾರೆ.
ಗಜಾನನ ಸಂಕಷ್ಟಹರ ಚತುರ್ಥಿ ಪಂಚಕ
ಗಜಾನನ ಸಂಕಷ್ಟಹರ ಚತುರ್ಥಿಯಂದು ಪಂಚಕವನ್ನೂ ಆಚರಿಸಲಾಗುತ್ತಿದೆ. ಶಾಸ್ತ್ರಗಳ ಪ್ರಕಾರ ಬುದ್ಧಿ ದಾತನಾದ ಗಣಪತಿಯ ಪೂಜೆಯಲ್ಲಿ ಪಂಚಕಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿಲ್ಲ. ಈ ದಿನ ಶುಭ ಸಮಯದಲ್ಲಿ ಪೂಜೆಯನ್ನು, ಉಪವಾಸ ವ್ರತವನ್ನು ಮಾಡಬಹುದು.
ಗಜಾನನ ಸಂಕಷ್ಟ ಚತುರ್ಥಿ ಮಹತ್ವ
ಗಣೇಶ ಪುರಾಣದ ಪ್ರಕಾರ, ಸಂಕಷ್ಟಹರ ಚತುರ್ಥಿಯ ಉಪವಾಸವು ಓರ್ವ ವ್ಯಕ್ತಿಯ ಎಲ್ಲಾ ರೀತಿಯ ದುಃಖಗಳನ್ನು ತೊಡೆದುಹಾಕಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಅಡೆತಡೆಗಳನ್ನು ನಿವಾರಿಸುವ ಗಣೇಶನಿಂದ ಆಶೀರ್ವಾದ ಪಡೆದ ವ್ಯಕ್ತಿಯು ಜೀವನದಲ್ಲಿ ಬರುವ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾನೆಂದು ಹೇಳಲಾಗಿದೆ. ಈ ವ್ರತದ ಮಹಿಮೆಯು ಓರ್ವ ವ್ಯಕ್ತಿಯ ಸಂತೋಷ ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ. ಗಣಪತಿಯು ನಿಮ್ಮ ದಾರಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತಾನೆ ಮತ್ತು ಅವುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ನಿಮಗೆ ಸಹಕರಿಸುತ್ತಾನೆ.
ಗಜಾನನ ಸಂಕಷ್ಟಹರ ಚತುರ್ಥಿ ಪೂಜೆ ವಿಧಾನ
– ಈ ದಿನ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ. ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ.
- ಈಶಾನ್ಯ ದಿಕ್ಕಿನಲ್ಲಿ ಪೂಜೆಯ ಪೀಠವನ್ನು ಇರಿಸಿ. ಅದರ ಮೇಲೆ ಕೆಂಪು ಅಥವಾ ಹಳದಿ ಬಣ್ಣದ ಸ್ವಚ್ಛವಾದ ಬಟ್ಟೆಯನ್ನು ಹರಡಿ. ನಂತರ ಅದರ ಮೇಲೆ ಗಣೇಶನ ವಿಗ್ರಹವನ್ನು ಇರಿಸಿ.
- ನಂತರ ಗಣೇಶನನ್ನು ಧ್ಯಾನಿಸಿ ಮತ್ತು ಉಪವಾಸ ವ್ರತ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ.
- ಈ ಸಮಯದಲ್ಲಿ ಗಣೇಶನಿಗೆ ನೀರು, ದೂರ್ವಾ, ಅಕ್ಷತೆ, ವೀಳ್ಯದೆಲೆ ಮತ್ತು ಅಡಿಕೆಯನ್ನು ಅರ್ಪಿಸಿ.
- ನಂತರ “ಗಂ ಗಣಪತಯೇ ನಮಃ:” ಎನ್ನುವ ಮಂತ್ರವನ್ನು ಭಕ್ತಿಯಿಂದ ಜಪಿಸಿ.
- ಗಣೇಶನಿಗೆ ಮೋತಿಚೂರ್ ಲಡ್ಡುಗಳನ್ನು ಅಥವಾ ಬೂಂದಿ ಅಥವಾ ಹಳದಿ ಮೋದಕವನ್ನು ಅರ್ಪಿಸಿ.
- ಗಣೇಶನ ಪೂಜೆಯ ನಂತರ ರಾತ್ರಿಯಲ್ಲಿ ಚಂದ್ರ ದೇವನನ್ನು ಪೂಜಿಸಿ.
- ಚಂದ್ರದೇವನಿಗೆ ಹಾಲು, ಶ್ರೀಗಂಧ ಮತ್ತು ಜೇನುತುಪ್ಪದೊಂದಿಗೆ ಅರ್ಘ್ಯವನ್ನು ಅರ್ಪಿಸಿ. ನಂತರ ನಿಮ್ಮ ಉಪವಾಸವನ್ನು ಮುಕ್ತಾಯಗೊಳಿಸಿ.
ಗಜಾನನ ಸಂಕಷ್ಟಹರ ಚತುರ್ಥಿ ಪೂಜೆ ಪ್ರಯೋಜನ
– ಈ ಸಂಕಷ್ಟಹರ ಚತುರ್ಥಿ ವ್ರತವನ್ನು ಆಚರಿಸುವುದರಿಂದ ಓರ್ವ ವ್ಯಕ್ತಿಯ ಆಸೆಗಳು ಈಡೇರುವುದು.
- ಉತ್ತಮ ಸಂತಾನ ಭಾಗ್ಯವನ್ನು ಪಡೆದುಕೊಳ್ಳುವಿರಿ.
- ಜೀವನದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುವುದು.
- ಸಮೃದ್ಧಿಯನ್ನು ಪಡೆದುಕೊಳ್ಳುವಿರಿ.
- ಪುನರ್ಜನ್ಮವು ನಿಮಗೆ ಲಭ್ಯವಿರುವುದಿಲ್ಲ.
- ಗಣೇಶ ಲೋಕದಲ್ಲಿ ಮೋಕ್ಷ ಪ್ರಾಪ್ತಿಯಾಗುವುದು. *ಶ್ರೀ ಗಜಾನನ ಅಷ್ಟೋತ್ತರ ಶತನಾಮಾವಲೀ
ಓಂ ಗಜಾನನಾಯ ನಮಃ |
ಓಂ ಗಣಾಧ್ಯಕ್ಷಾಯ ನಮಃ |
ಓಂ ವಿಘ್ನರಾಜಾಯ ನಮಃ |
ಓಂ ವಿನಾಯಕಾಯ ನಮಃ |
ಓಂ ದ್ವೈಮಾತುರಾಯ ನಮಃ |
ಓಂ ಸುಮುಖಾಯ ನಮಃ |
ಓಂ ಪ್ರಮುಖಾಯ ನಮಃ |
ಓಂ ಸನ್ಮುಖಾಯ ನಮಃ |
ಓಂ ಕೃತಿನೇ ನಮಃ | ೯
ಓಂ ಜ್ಞಾನದೀಪಾಯ ನಮಃ |
ಓಂ ಸುಖನಿಧಯೇ ನಮಃ |
ಓಂ ಸುರಾಧ್ಯಕ್ಷಾಯ ನಮಃ |
ಓಂ ಸುರಾರಿಭಿದೇ ನಮಃ |
ಓಂ ಮಹಾಗಣಪತಯೇ ನಮಃ |
ಓಂ ಮಾನ್ಯಾಯ ನಮಃ |
ಓಂ ಮಹನ್ಮಾನ್ಯಾಯ ನಮಃ |
ಓಂ ಮೃಡಾತ್ಮಜಾಯ ನಮಃ |
ಓಂ ಪುರಾಣಾಯ ನಮಃ | ೧೮
ಓಂ ಪುರುಷಾಯ ನಮಃ |
ಓಂ ಪೂಷ್ಣೇ ನಮಃ |
ಓಂ ಪುಷ್ಕರಿಣೇ ನಮಃ |
ಓಂ ಪುಣ್ಯಕೃತೇ ನಮಃ |
ಓಂ ಅಗ್ರಗಣ್ಯಾಯ ನಮಃ |
ಓಂ ಅಗ್ರಪೂಜ್ಯಾಯ ನಮಃ |
ಓಂ ಅಗ್ರಗಾಮಿನೇ ನಮಃ |
ಓಂ ಮಂತ್ರಕೃತೇ ನಮಃ |
ಓಂ ಚಾಮೀಕರಪ್ರಭಾಯ ನಮಃ | ೨೭
ಓಂ ಸರ್ವಸ್ಮೈ ನಮಃ |
ಓಂ ಸರ್ವೋಪಾಸ್ಯಾಯ ನಮಃ |
ಓಂ ಸರ್ವಕರ್ತ್ರೇ ನಮಃ |
ಓಂ ಸರ್ವನೇತ್ರೇ ನಮಃ |
ಓಂ ಸರ್ವಸಿದ್ಧಿಪ್ರದಾಯ ನಮಃ |
ಓಂ ಸರ್ವಸಿದ್ಧಾಯ ನಮಃ |
ಓಂ ಸರ್ವವಂದ್ಯಾಯ ನಮಃ |
ಓಂ ಮಹಾಕಾಲಾಯ ನಮಃ |
ಓಂ ಮಹಾಬಲಾಯ ನಮಃ | ೩೬
ಓಂ ಹೇರಂಬಾಯ ನಮಃ |
ಓಂ ಲಂಬಜಠರಾಯ ನಮಃ |
ಓಂ ಹ್ರಸ್ವಗ್ರೀವಾಯ ನಮಃ |
ಓಂ ಮಹೋದರಾಯ ನಮಃ |
ಓಂ ಮದೋತ್ಕಟಾಯ ನಮಃ |
ಓಂ ಮಹಾವೀರಾಯ ನಮಃ |
ಓಂ ಮಂತ್ರಿಣೇ ನಮಃ |
ಓಂ ಮಂಗಳದಾಯ ನಮಃ |
ಓಂ ಪ್ರಥಮಾಚಾರ್ಯಾಯ ನಮಃ | ೪೫
ಓಂ ಪ್ರಾಜ್ಞಾಯ ನಮಃ |
ಓಂ ಪ್ರಮೋದಾಯ ನಮಃ |
ಓಂ ಮೋದಕಪ್ರಿಯಾಯ ನಮಃ |
ಓಂ ಧೃತಿಮತೇ ನಮಃ |
ಓಂ ಮತಿಮತೇ ನಮಃ |
ಓಂ ಕಾಮಿನೇ ನಮಃ |
ಓಂ ಕಪಿತ್ಥಪನಸಪ್ರಿಯಾಯ ನಮಃ |
ಓಂ ಬ್ರಹ್ಮಚಾರಿಣೇ ನಮಃ |
ಓಂ ಬ್ರಹ್ಮರೂಪಿಣೇ ನಮಃ | ೫೪
ಓಂ ಬ್ರಹ್ಮವಿದೇ ನಮಃ |
ಓಂ ಬ್ರಹ್ಮವಂದಿತಾಯ ನಮಃ |
ಓಂ ಜಿಷ್ಣವೇ ನಮಃ |
ಓಂ ವಿಷ್ಣುಪ್ರಿಯಾಯ ನಮಃ |
ಓಂ ಭಕ್ತಜೀವಿತಾಯ ನಮಃ |
ಓಂ ಜಿತಮನ್ಮಥಾಯ ನಮಃ |
ಓಂ ಐಶ್ವರ್ಯದಾಯ ನಮಃ |
ಓಂ ಗುಹಜ್ಯಾಯಸೇ ನಮಃ |
ಓಂ ಸಿದ್ಧಸೇವಿತಾಯ ನಮಃ | ೬೩
ಓಂ ವಿಘ್ನಕರ್ತ್ರೇ ನಮಃ |
ಓಂ ವಿಘ್ನಹರ್ತ್ರೇ ನಮಃ |
ಓಂ ವಿಶ್ವನೇತ್ರೇ ನಮಃ |
ಓಂ ವಿರಾಜೇ ನಮಃ |
ಓಂ ಸ್ವರಾಜೇ ನಮಃ |
ಓಂ ಶ್ರೀಪತಯೇ ನಮಃ |
ಓಂ ವಾಕ್ಪತಯೇ ನಮಃ |
ಓಂ ಶ್ರೀಮತೇ ನಮಃ |
ಓಂ ಶೃಂಗಾರಿಣೇ ನಮಃ | ೭೨
ಓಂ ಶ್ರಿತವತ್ಸಲಾಯ ನಮಃ |
ಓಂ ಶಿವಪ್ರಿಯಾಯ ನಮಃ |
ಓಂ ಶೀಘ್ರಕಾರಿಣೇ ನಮಃ |
ಓಂ ಶಾಶ್ವತಾಯ ನಮಃ |
ಓಂ ಶಿವನಂದನಾಯ ನಮಃ |
ಓಂ ಬಲೋದ್ಧತಾಯ ನಮಃ |
ಓಂ ಭಕ್ತನಿಧಯೇ ನಮಃ |
ಓಂ ಭಾವಗಮ್ಯಾಯ ನಮಃ |
ಓಂ ಭವಾತ್ಮಜಾಯ ನಮಃ | ೮೧
ಓಂ ಮಹತೇ ನಮಃ |
ಓಂ ಮಂಗಳದಾಯಿನೇ ನಮಃ |
ಓಂ ಮಹೇಶಾಯ ನಮಃ |
ಓಂ ಮಹಿತಾಯ ನಮಃ |
ಓಂ ಸತ್ಯಧರ್ಮಿಣೇ ನಮಃ |
ಓಂ ಸದಾಧಾರಾಯ ನಮಃ |
ಓಂ ಸತ್ಯಾಯ ನಮಃ |
ಓಂ ಸತ್ಯಪರಾಕ್ರಮಾಯ ನಮಃ |
ಓಂ ಶುಭಾಂಗಾಯ ನಮಃ | ೯೦
ಓಂ ಶುಭ್ರದಂತಾಯ ನಮಃ |
ಓಂ ಶುಭದಾಯ ನಮಃ |
ಓಂ ಶುಭವಿಗ್ರಹಾಯ ನಮಃ |
ಓಂ ಪಂಚಪಾತಕನಾಶಿನೇ ನಮಃ |
ಓಂ ಪಾರ್ವತೀಪ್ರಿಯನಂದನಾಯ ನಮಃ |
ಓಂ ವಿಶ್ವೇಶಾಯ ನಮಃ |
ಓಂ ವಿಬುಧಾರಾಧ್ಯಪದಾಯ ನಮಃ |
ಓಂ ವೀರವರಾಗ್ರಗಾಯ ನಮಃ |
ಓಂ ಕುಮಾರಗುರುವಂದ್ಯಾಯ ನಮಃ | ೯೯
ಓಂ ಕುಂಜರಾಸುರಭಂಜನಾಯ ನಮಃ |
ಓಂ ವಲ್ಲಭಾವಲ್ಲಭಾಯ ನಮಃ |
ಓಂ ವರಾಭಯಕರಾಂಬುಜಾಯ ನಮಃ |
ಓಂ ಸುಧಾಕಲಶಹಸ್ತಾಯ ನಮಃ |
ಓಂ ಸುಧಾಕರಕಳಾಧರಾಯ ನಮಃ |
ಓಂ ಪಂಚಹಸ್ತಾಯ ನಮಃ |
ಓಂ ಪ್ರಧಾನೇಶಾಯ ನಮಃ |
ಓಂ ಪುರಾತನಾಯ ನಮಃ |
ಓಂ ವರಸಿದ್ಧಿವಿನಾಯಕಾಯ ನಮಃ | ೧೦೮
ಇತಿ ಶ್ರೀ ಗಜಾನನ ಅಷ್ಟೋತ್ತರ ಶತನಾಮಾವಳಿಃ |
ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!
ಅಡ್ಮಿನ್ ಬಳಗ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https:https://chat.whatsapp.com/HeahgtMbXsO3Kxfxgs5m9f
⬆️ಇಲ್ಲಿ ಕ್ಲಿಕ್ ಮಾಡಿ.