ಸೂರ್ಯನಾರಾಯಣನ ಆರಾಧನೆ
‘ಸೂರ್ಯದೇವನೇ ಎಲ್ಲಾ ಅವನಿಲ್ಲದೆ ಏನೂ ಇಲ್ಲ’: ಯಶಸ್ಸಿನ ಹಾದಿಗೆ ಸೂರ್ಯ ಶ್ಲೋಕಗಳು ಇಲ್ಲಿವೆ…
ಹಿಂದೂ ಧರ್ಮದಲ್ಲಿ ಕೋಟಿ ಕೋಟಿ ದೇವತೆಗಳು ಇದ್ದರೂ ನಮ್ಮ ಕಣ್ಣಿಗೆ ಕಾಣುವ ದೇವರೆಂದರೇ ಅದು ತಾಯಿಯನ್ನು ಬಿಟ್ಟರೇ ಸೂರ್ಯದೇವನೇ ಆಗಿದ್ದಾನೆ. ಈತನನ್ನು ಪ್ರತಿದಿನವು ನಾವು ನೋಡಲೇಬೇಕು ಮತ್ತು ಪೂಜಿಸಲೇ ಬೇಕು. ಪ್ರತಿದಿನವು ಈತನಿಂದಲೇ ಆರಂಭ, ಈತನಿಂದಲೇ ಅಂತ್ಯ. ಶೈವ ಧರ್ಮದಲ್ಲಿ ಸೂರ್ಯನನ್ನು ಶಿವನೆಂದು, ವೈಷ್ಣವ ಧರ್ಮದಲ್ಲಿ ವಿಷ್ಣುವೆಂದು ಪೂಜಿಸುತ್ತಾರೆ.
ಸೂರ್ಯನನ್ನು ವೈವಸ್ವತ, ರವಿ, ಆದಿತ್ಯ, ಪುಷ, ದಿವಾಕರ, ಸವಿತಾ, ಅರ್ಕ, ಮಿತ್ರ, ಭಾನು, ಭಾಸ್ಕರ ಮತ್ತು ಗ್ರಹಪತಿ ಅಥವಾ ಗ್ರಹರಾಜ ಎಂದೂ ಕೂಡ ಕರೆಯಲಾಗುತ್ತದೆ. ಈ ರೀತಿಯಿಂದ ಕರೆಸಿಕೊಳ್ಳುವ ಸೂರ್ಯ ದೇವನಿಗೆ ಅವನದ್ದೇ ಮಂತ್ರಗಳ ಮೂಲಕ ಪಠಣೆ ಮಾಡಿ ಅವನನ್ನು ಪೂಜಿಸಿದರೆ ನಮಗೆ ಒಳ್ಳೆಯ ಆಯಸ್ಸು ಮತ್ತು ಜೀವನ ಪ್ರಾಪ್ತಿಯಾಗುತ್ತದೆ ಎಂಬುದು ಭಾರತೀಯರ ಮನೋಭಾವ. ಹಾಗಾಗೀ ಸೂರ್ಯನನ್ನು ಕುರಿತು 108 ಹೆಸರುಗಳಿಂದ ಕರೆಯುತ್ತಾರೆ.
ಸೂರ್ಯನನ್ನು ಕುರಿತು ಇರುವ ಮಂತ್ರಗಳ ಮಹತ್ವ :
ಈಗಾಗಲೇ ಹೇಳಿರುವ ಹಾಗೇ ಹಿಂದೂ ಧರ್ಮದ ಪ್ರಮುಖ ದೇವರಾದ ಸೂರ್ಯನು ಕತ್ತಲನ್ನು ನಿವಾರಿಸಿ ಬೆಳಕನ್ನು ಹೊರಸೂಸುವ ದೇವ. ಇದರರ್ಥ ಜಗತ್ತಿನಲ್ಲಿ ಅಜ್ಞಾನವನ್ನು ತೊಡೆದು ಹಾಕಿ ಸುಜ್ಞಾನವು ಬೆಳಗುವಂತೆ ಮಾಡುವ ಈತನ ಕಿರಣಗಳಿಗೆ ಜೀವರಾಶಿಯನ್ನು ಸಂರಕ್ಷಿಸುವ, ಸಂಹಾರ ಮಾಡುವ ಎರಡೂ ಗುಣವೂ ಇದೆ. ಪ್ರತಿದಿನವು ಬೆಳಗಿನಿಂದ ಸಂಜೆಯವರೆಗೆ ಒಳಿತನ್ನು ಮಾಡುವ ಸೂರ್ಯದೇವನನ್ನು ಪೂಜಿಸಿದರೆ ಪ್ರತಿನಿತ್ಯದ ಕಷ್ಟವು ದೂರಾಗುತ್ತದೆ.
ಜಗತ್ತಿಗೆ ಬೆಳಕನ್ನು ನೀಡುವ ಪ್ರತ್ಯಕ್ಷ ದೈವ ಸೂರ್ಯನನ್ನು ಪೂಜಿಸುವುದರಿಂದ ನಮ್ಮ ಜೀವನದಲ್ಲೂ ಸಕಾರಾತ್ಮಕ, ಸಂತೋಷದ, ಯಶಸ್ಸು ಮತ್ತು ಸಮೃದ್ಧಿಯ ಬೆಳಕು ಮೂಡುವುದು.
ಭಗವಾನ್ ಸೂರ್ಯ ನಮ್ಮ ಆತ್ಮವನ್ನು ಪ್ರತಿನಿಧಿಸುತ್ತಾನೆ. ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯ ದೇವನಿಗೆ ವಿಶೇಷ ಪೂಜೆ ಪುನಸ್ಕಾರ ಮಾಡುವುದರಿಂದ ಬದುಕಲ್ಲಿ ಸಾಕಷ್ಟು ಬದಲಾವಣೆ ಹಾಗೂ ಧನಾತ್ಮಕ ರೀತಿಯಲ್ಲಿ ಯಶಸ್ಸು ದೊರೆಯುವುದು. ಸೂರ್ಯನಿಗೆ ತಾಮ್ರದ ಪಾತ್ರೆಯಲ್ಲಿ ಅರ್ಘ್ಯ ಅಥವಾ ನೀರನ್ನು ಅರ್ಪಿಸುವುದರ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ಸೂರ್ಯನಿಗೆ ಸಂಬಂಧಿಸಿದ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರಿಂದ ಸಾಕಷ್ಟು ಉತ್ತಮ ಫಲವನ್ನು ಪಡೆದುಕೊಳ್ಳಬಹುದು.
ಸೂರ್ಯ ದೇವನನ್ನು ಮನಸ್ಸಿಗೆ ಬಂದಹಾಗೆಲ್ಲ ಪೂಜಿಸುವಂತಿಲ್ಲ. ಅವನನ್ನು ಪೂಜಿಸಲು ಪ್ರತ್ಯೇಕ ಸಮಯವಿದೆ. ಮುಂಜಾನೆ ಸೂರ್ಯ ಹುಟ್ಟಿದಾಕ್ಷಣ ಸ್ನಾನ ಮಾಡಿ ಪರಿಶುದ್ಧ ಮನಸ್ಸಿನಿಂದ ಆತನನ್ನು ಪೂಜಿಸಬೇಕು. ಸೂರ್ಯನನ್ನು ಪೂಜಿಸುವಾಗ ಪಠಿಸಬೇಕಾದ ಕೆಲವು ಮುಖ್ಯವಾದ ಮಂತ್ರಗಳು ಹೀಗಿವೆ: ಸೂರ್ಯ ನಮಸ್ಕಾರದ ಮಂತ್ರ
ಸೂರ್ಯ ನಮಸ್ಕಾರ ಮಾಡುವಾಗ 12 ವಿಭಿನ್ನ ಯೋಗಾಸನವನ್ನು ಮಾಡಬೇಕಾಗುವುದು.
ಓಂ ಮಿತ್ರಾಯ ನಮಃ
ಓಂ ರವಯೇ ನಮಃ
ಓಂ ಸೂರ್ಯಾಯ ನಮಃ
ಓಂ ಭಾನವೇ ನಮಃ
ಓಂ ಖಗಾಯ ನಮಃ
ಓಂ ಪೂಷ್ಣೇ ನಮಃ
ಓಂ ಹಿರಣ್ಯಗರ್ಭಾಯ ನಮಃ
ಓಂ ಮರೀಚಯೇ ನಮಃ
ಓಂ ಆದಿತ್ಯಾಯ ನಮಃ
ಓಂ ಸವಿತ್ರೇ ನಮಃ
ಓಂ ಅರ್ಕಾಯ ನಮಃ
ಓಂ ಭಾಸ್ಕರಾಯ ನಮಃ
ಪ್ರಯೋಜನ: ಈ ಮಂತ್ರಗಳನ್ನು ಆಸನಗಳನ್ನು ಮಾಡುವಾಗ ಜಪಿಸಬೇಕು. ಆಗ ವ್ಯಾಯಾಮವು ಉತ್ತಮವಾಗಿ ನೆರವೇರುವುದು. ಜೊತೆಗೆ ವ್ಯಾಯಾಮದ ಸಂಪೂರ್ಣ ಫಲ ದೊರೆಯುವುದು.
“ಸೂರ್ಯ ಬೀಜ ಮಂತ್ರ”
” ಓಂ ಹ್ರಾಂ ಹ್ರೀಂ ಹ್ರೌಂ ಸಃ ಸೂರ್ಯಾಯ ನಮಃ“
ಎಂದರೆ ಸೂರ್ಯನ ಅನುಗ್ರಹಕ್ಕಾಗಿ ನಮಸ್ಕಾರಗಳು ಎನ್ನುವುದನ್ನು ತಿಳಿಸುತ್ತದೆ. ಈ ಬೀಜ ಮಂತ್ರವನ್ನು ಜಪಿಸುವುದರಿಂದ ಸಮೃದ್ಧಿ ಮತ್ತು ಯಶಸ್ಸು ವೃದ್ಧಿಯಾಗುವುದು. ಇದು ಒಬ್ಬರ ಸ್ವಭಾವದಲ್ಲಿ ನಕಾರಾತ್ಮಕ ಪ್ರವೃತ್ತಿಯನ್ನು ತೆಗೆದುಹಾಕುವುದು ಎನ್ನುವ ನಂಬಿಕೆ ಇದೆ.
“ಸೂರ್ಯ ಗಾಯತ್ರಿ ಮಂತ್ರ”
” ಓಂ ಭಾಸ್ಕರಾಯ ವಿದ್ಮಹೇ ಮಾರ್ತಾಂಡಾಯ ಧೀಮಹೀ ತನ್ನೋ ಸೂರ್ಯಃ ಪ್ರಚೋದಯಾತ್“
ಈ ಮಂತ್ರವನ್ನು ಹೇಳುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಮಂತ್ರವು ದೇಹವನ್ನು ಬಲಪಡಿಸುತ್ತದೆ. ಒಬ್ಬರ ಮನಸ್ಸನ್ನು ಶುದ್ಧೀಕರಿಸುತ್ತದೆ. ಅವರನ್ನು ಆಧ್ಯಾತ್ಮಿಕವಾಗಿ ಉನ್ನತಿಗೊಳಿಸುವುದು. ಇದು ಖ್ಯಾತಿ ಮತ್ತು ಯಶಸಸನ್ನು ತರಬಲ್ಲದು.
“ಸೂರ್ಯ ಮಂತ್ರ”
” ನಮಃ ಸೂರ್ಯ ಶಾಂತಾಯ ಸರ್ವರೋಗ ನಿವಾರಿಣೇ
ಆಯುರಾರೋಗ್ಯಮೈಶ್ವರ್ಯಂ ದೇಹೀ ದೇವಾಃ ಜಗತ್ಪತೇ“
ಈ ಮಂತ್ರವನ್ನು ಜಪಿಸುವುದರಿಂದ ಯಾವುದೇ ಆರೋಗ್ಯ ಸಮಸ್ಯೆಯಿದ್ದರೂ ಅದನ್ನು ಬೇರು ಸಮೇತ ಕಿತ್ತುಹಾಕುವುದು. ಜೊತೆಗೆ ಮಾನಸಿಕ ಮತ್ತು ದೈಹಿಕ ಆರೋಗ್ಯವು ಸುಧಾರಣೆ ಕಾಣುವುದು.
“ಆದಿತ್ಯ ಹೃದಯ ಮಂತ್ರ”
” ಆದಿತ್ಯ ಹೃದಯಂ ಪುಣ್ಯಂ ಸರ್ವ ಶತ್ರು ವಿನಾಶನಂ
ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಮಂ ಶಿವಂ“
ಈ ಮಂತ್ರವನ್ನು ನಿತ್ಯ ಜಪಿಸುವುದಿಂದ ಕೆಲಸದಲ್ಲಿ ಜ್ಞಾನ, ವೇಗ ಮತ್ತು ಯಶಸ್ಸು ದೊರೆಯುವುದು. ಜೊತೆಗೆ ವ್ಯಕ್ತಿಯನ್ನು ನಿರ್ಭಯನನ್ನಾಗಿ ಇರಿಸುತ್ತದೆ.
“ಯಶಸ್ಸಿಗೆ ಸೂರ್ಯ ಮಂತ್ರ”
” ಓಂ ನಮೋ ಶ್ರೀ ಸೂರ್ಯಾಯ ಸಹಸ್ರ ಕಿರಣಾಯ ಇಷ್ಟಾರ್ಥಸಿದ್ಧಿಕರಾಯ|
ಮನೋವಾಂಚಿತ ಪೂರಯ ಪೂರಯ, ಕಷ್ಟಂ ಚೂರಯ ಚೂರಯ, ಓಂ ಹ್ರೀಂ ಸೂರ್ಯಾಯ ನಮೋ ನಮಃ | ಸರ್ವ ಸೌಭಾಗ್ಯಂ ದೇಹಿ ದೇಹಿ “
ಜೀವನದಲ್ಲಿ ಯಾವುದೇ ಕೆಲಸ ಕಾರ್ಯದಲ್ಲಿ ಯಶಸ್ಸನ್ನು ಪಡೆಯಬೇಕು ಎಂದಾದರೆ ಈ ಯಶಸ್ಸಿನ ಮಂತ್ರವನ್ನು ಜಪಿಸಬೇಕು.
ಸೂರ್ಯ ಗಾಯತ್ರಿ ಮಂತ್ರ-2
” ಓಂ ಆದಿತ್ಯಾಯ ವಿದ್ಮಹೇ ಸಹಸ್ರ ಕಿರಣಾಯ ಧೀಮಹೀ ತನ್ನೋ ಸೂರ್ಯಃ ಪ್ರಚೋದಯಾತ್ “
ಈ ಮಂತ್ರವನ್ನು ಜಪಿಸುವುದರಿಂದ ಆತ್ಮವಿಶ್ವಾಸ ಮತ್ತು ಧೈರ್ಯ ಬರುತ್ತದೆ. ಇದು ಎಲ್ಲಾ ಪ್ರಯತ್ನಗಳಲ್ಲಿ ಜ್ಞಾನ, ಬುದ್ಧಿವಂತಿಕೆ, ಯಶಸ್ಸು ಮತ್ತು ಖ್ಯಾತಿಯನ್ನು ನೀಡುತ್ತದೆ.
ಸೂರ್ಯ ವಶೀಕರಣ ಮಂತ್ರ
” ಓಂ ನಮೋ ಭಗವತೇ ಶ್ರೀ ಸೂರ್ಯಾಯ ಹ್ರೀಂ ಸಹಸ್ರ ಕಿರಣಾಯ ಐಂ ಅತುಲಬಲ ಪರಾಕ್ರಮಾಯ ನವಗ್ರಹ ದಶದಿಕ್ಪಾಲ ಲಕ್ಷ್ಮೀ ದೇವತಾಯ ಧರ್ಮ ಕರ್ಮ ಸಹಿತಾಯ ಅಮುಕ ನಾಥಾಯ ನಾಥಾಯ, ಮೋಹಯ ಮೋಹಯ ಆಕರ್ಶಯ ಆಕರ್ಶಯ ದಾಸಾನುದಾಸಂ ಕುರು ಕುರು ವಶಂ ಕುರು ಕುರು ಸ್ವಾಹಾ “
ಈ ಮಂತ್ರವನ್ನು ಜಪಿಸುವುದರಿಂದ ಪ್ರೀತಿಯ ಸಂಬಂಧ ಸುಧಾರಿಸುವುದು. ವೈವಾಹಿಕ ಸಂಬಂಧವನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಸ್ನಾನ ಮಾಡಿದ ನಂತರ 108 ಬಾರಿ ಜಪಿಸಬೇಕು. ಬೆಲ್ಲದೊಂದಿಗೆ ಸೂರ್ಯನಿಗೆ ಅರ್ಘ್ಯವನ್ನು ನೀಡಬೇಕು.
ಸಂತಾನ ಮಂತ್ರ
” ಓಂ ಭಾಸ್ಕರಾಯೇ ಪುತ್ರಂ ದೇಹಿ ಮಹತೇಜಸ್ ಧೀಮಹಿ ತನ್ನೋ ಸೂರ್ಯ ಪ್ರಚೋದಯಾತ್ “
ಮಕ್ಕಳನ್ನು ಹೊಂದಲು ಬಯಸುವ ದಂಪತಿಗಳು ಈ ಮಂತ್ರವನ್ನು ಜಪಿಸಬೇಕು. ಅನಂತ ಬೆಳಕು ಮತ್ತು ಶಕ್ತಿಯನ್ನು ಹೊಂದಿರುವ ಸೂರ್ಯ ದೇವನೇ ಸಂತಾನ ಭಾಗ್ಯ ಪಡೆಯಲು ಆಶೀರ್ವದಿಸಬೇಕು ಎಂದು ಕೇಳಿಕೊಳ್ಳುವ ಪ್ರಾರ್ಥನೆಯಾಗಿದೆ.
ಶತ್ರು ನಾಶ ಮಂತ್ರ
” ಶತ್ರು ನಶ್ಯ ಓಂ ಹ್ರೀಂ ಹ್ರೀಂ ಸೂರ್ಯಾಯ ನಮಃ “
ದೊಡ್ಡ ಶಕ್ತಿಯ ಸೂರ್ಯ ದೇವನೇ ಶತ್ರುವನ್ನು ಜಯಿಸಲು ಶಕ್ತಿ ನೀಡು ಎಂದು ಕೇಳಿಕೊಳ್ಳುವ ಮಾರ್ಗವಾಗಿದೆ.
ರೋಗ ನಿವಾರಣಾ ಮಂತ್ರ
” ಓಂ ಘೃಣಿ ಸೂರ್ಯ ಆದಿತ್ಯಾಯ ನಮಃ“
ಉತ್ತಮ ಖ್ಯಾತಿ, ಉತ್ತಮ ದೃಷ್ಟಿ ಮತ್ತು ರೋಗಗಳ ಪರಿಹಾರಕ್ಕೆ ಈ ಮಂತ್ರವನ್ನು ಪ್ರತಿ ದಿನ 108 ಬಾರಿ ಪಠಿಸಬೇಕು.
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!