ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಭಾಗವತ ಎಂದರೇನು?

ಭಾಗವತ ಎಂದರೇನು?

ಭಾಗವತ ಎಂದರೆ ಏನು ಎಂದು ವೇದವ್ಯಾಸರು ಹೇಳುತ್ತಾರೆ. ಭ ಎಂದರೆ ಮಹಾತ್ಮಜ್ಞಾನ ರೂಪವಾದ ಸರ್ವತೋಮುಖವಾದ ಸ್ನೇಹ ಎನ್ನುತ್ತಾರೆ.

ಅಂದರೆ ಸರ್ವತ್ರದಲ್ಲಿ ಸರ್ವಕಾಲದಲ್ಲಿ ಸರ್ವದೇಶದಲ್ಲಿ ಲಕ್ಷ್ಮೀಪತಿಯಾದ ನಾರಾಯಣನೇ ಸರ್ವೊತ್ತಮ ಎಂಬ ತತ್ವವನ್ನು ತಿಳಿಸುವುದೇ ಭಕ್ತಿಯಾಗಿದೆ.
ಗ ಎಂದರೆ ಜ್ಞಾನ
ಅಂದರೆ ಭಗವಂತನ ವಿಶಿಷ್ಟವಾದ ಜ್ಞಾನವನ್ನು ಹೊಂದುವುದು.
ವ ಎಂದರೆ ಸಕಲ ವಿಚಾರಗಳಲ್ಲಿ ವೈರಾಗ್ಯ ಭಾವವನ್ನು ಹೊಂದುವುದು
ಯಾರು ಈ ಮೂರನ್ನು ಹೊಂದುತ್ತಾರೋ ಅವರಲ್ಲಿ ತತ್ತ್ವ ನಿಶ್ಚಯ ಉಂಟಾಗುತ್ತದೆ ಎಂಬುದು ವೇದವ್ಯಾಸರ ಭಾವ.

ಸಪ್ತಾಹ ಪಾರಾಯಣದ ಉಲ್ಲೇಖ

ಶ್ರೀಮತ್‌ ಭಾಗವತ್‌ ಪುರಾಣ ಸಪ್ತಾಹದ ಉಲ್ಲೇಖ ಪದ್ಮಪುರಾಣದಲ್ಲಿ ಬರುತ್ತದೆ.

ಶ್ರೀಕೃಷ್ಣ ಪರಮಾತ್ಮ ವೈಕುಂಠವನ್ನು ಸೇರಿದ ಮೇಲೆ ಪಾಂಡವರೆಲ್ಲರೂ ಸ್ವರ್ಗಾರೋಹಣ ಮಾಡಿದ ನಂತರ ಮೂವತ್ತು ವರ್ಷಗಳ ನಂತರ ಶುಕಾಚಾರ್ಯರು ಪರೀಕ್ಷಿತ ಮಹಾರಾಜನಿಗೋಸ್ಕರ ಮೊದಲ ಸಪ್ತಾಹ ಮಾಡುತ್ತಾರೆ.

ಅದಾಗಿ 200 ವರ್ಷಗಳ ನಂತರ ಗೋಕರ್ಣ ಎನ್ನುವ ಮಹಾಜ್ಞಾನಿ ಶ್ರೀಮದ್‌ ಭಾಗವತ ಎನ್ನುವ ಪ್ರವಚನವನ್ನು ಮಾಡುತ್ತಾನೆ.

ಇದು ಎರಡನೆಯ ಸಪ್ತಾಹ.

ಅದಾಗಿ 30 ವರ್ಷಗಳ ನಂತರ ಸನತ್ಕುಮಾರರು ನಾರದರ ಮೂಲಕ ಜಗತ್ತಿಗೆ ಭಾಗವನ್ನು ಉಪದೇಶ ಮಾಡಿದ್ದಾರೆ.

ಈ ಕ್ರಮದಲ್ಲಿ ನೂರಾವರ್ತಿ ಶ್ರೀಮದ್‌ ಭಾಗವತ ಸಪ್ತಾಹ ಕಲಿಯುಗದಲ್ಲಿ ನಡೆಯಿತು ಎಂದು ತಿಳಿಸುತ್ತಾರೆ.

  ಯಜ್ಞೋಪವೀತ - ಜನಿವಾರದ ನಿಯಮಗಳು

ಶ್ರೀ ಮಧ್ವಾಚಾರ್ಯರು ಹೇಳುತ್ತಾರೆ ಶ್ರೀಮದ್‌ ಭಾಗವತ ಸಕಲ ಬ್ರಹ್ಮಸೂತ್ರ, ಮಹಾಭಾರತ, ಹರಿವಂಶ, ಹದಿನೆಂಟು ಪುರಾಣಗಳ ಸಾರವಾಗಿದೆ.

ರಾಮಾಯಣ, ಪುರುಷಸೂಕ್ತ, ಅನಂತವೇದಗಳ ಸಾರ. ಅನಂತ ಶಾಸ್ತ್ರಗಳ ದರ್ಶನವೇ ಶ್ರೀಮದ್‌ ಭಾಗವತ. ಇಂತಹ ಶ್ರೀಮದ್‌ ಭಾಗವತವನ್ನು ನಿರಂತರವಾಗಿ ಶ್ರವಣ ಮಾಡಬೇಕೆಂಬುದು ಶಾಸ್ತ್ರದ ಅಭಿಮತ.

ಆದರೆ ಕಲಿಯುಗದ ಜನರಿಗೆ ಅವಕಾಶ, ಆಯುಷ್ಯ ಕಡಿಮೆ ಇರುವುದರಿಂದ ಭಕ್ತಿಯಿಂದ ಹರೇ ರಾಮ, ಕೃಷ್ಣ ಎಂದರೆ ಸಾಕು ಪರಮಾತ್ಮ ಅದ್ಭುತವಾದ ಫಲಗಳನ್ನು ಕೊಡುತ್ತಾನೆ ಎಂದು ಶ್ರೀಶ್ರೀ ಪಾದರಾಜರೇ ನಮಗೆ ತಿಳಿಸಿಕೊಟ್ಟಿದ್ದಾರೆ.

ಇಂತಹ ಭಾಗವತ ಪುರಾಣವನ್ನು ಭಾದ್ರಪದ ಮಾಸದಲ್ಲಿ ಹೇಳುವ ಕ್ರಮವೊಂದಿದೆ.

ಭಾದ್ರಪದ ಮಾಸದ ವೈಶಿಷ್ಟ್ಯ

ಪ್ರೋಷ್ಪಪದ ಎಂದರೆ ಭಾದ್ರಪದ ಮಾಸ ಎಂದರ್ಥ.
ಆ ಪ್ರೋಷ್ಪಪದದ ಸಂದರ್ಭದಲ್ಲಿ ಮಾಡುವ ಸಪ್ತಾಹವೇ ಪ್ರೋಷ್ಟಪದಿ ಭಾಗವತ ಸಪ್ತಾಹ.
ಇನ್ನು ಪ್ರೋಷ್ಟ ಎಂದರೆ ಪೂರ್ಣವಾದ ಪದಿ ಎಂದರೆ ಪದಗಳು, ಪೂರ್ಣವಾದ ಅರ್ಥವನ್ನು ತಿಳಿಸುವ ಶಬ್ದಗಳು ಎಂದರೆ ಭಗವಂತನೇ ಪರಿಪೂರ್ಣ ಎಂದು ತಿಳಿಸುವ ಶಬ್ದವೇ ಭಾಗವತ.
ಪರಮಾತ್ಮನ ಸರ್ವತೋಮತ್ವವನ್ನು ತಿಳಿಸುವ ಕಾರಣ ಭಾಗವತವೂ ಸರ್ವೋತ್ತಮವಾಗಿದೆ.

ಅಂತಹ ಭಾಗವನ್ನು ತಿಳಿಸುವ ಮಾಸವೇ ಪ್ರೋಷ್ಟಪದ ಮಾಸ.
ಭಾದ್ರಪದ ಶುದ್ದ ನವಮಿಯಿಂದ ಹುಣ್ಣಿಮೆಯವರೆಗೆ ಶುಕಾಚಾರ್ಯರು ಪರೀಕ್ಷಿತ ಮಹಾರಾಜನಿಗೆ ಭಾಗವತವನ್ನು ಉಪದೇಶ ಮಾಡಿದರು ಎಂಬುದು ತಿಳಿದು ಬರುತ್ತದೆ.

  ದೀಪಾವಳಿ ಅಭ್ಯಂಜನ ಸ್ನಾನ ಯಾಕೆ , ಹೇಗೆ ಮಾಡಬೇಕು ?

ಆದ್ದರಿಂದ ಈ ಮಾಸದಲ್ಲಿ ಭಾಗವತ ಪುರಾಣವನ್ನು ಕೇಳಬೇಕು. ಪರೀಕ್ಷಿತ ಮಹಾರಾಜರಿಗೆ ವೈಕುಂಠ ಲೋಕ ಪ್ರಾಪ್ತಿಯಾದಂತೆ ಸಕಲ ಪಾಪಗಳಿಂದ ನಿವೃತ್ತಿ ಹೊಂದಲು ಶ್ರೀಮದ್‌ ಭಾಗವತ ಪುರಾಣ ಶ್ರವಣ ಅತ್ಯವಶ್ಯವಾಗಿದೆ.

ಶ್ರೀಕೃಷ್ಣನೇ ಅನಂತಪದ್ಮನಾಭ
ಭಾದ್ರಪದ ಶುದ್ಧ ಚತುರ್ದಶಿಯಂದು ಮಾಡುವ ವ್ರತವೇ ಅನಂತಪದ್ಮನಾಭ ವ್ರತ.

ಈ ವ್ರತದ ಉಲ್ಲೇಖವೂ ಭಾಗವತದಲ್ಲಿ ಬರುತ್ತದೆ. ಶ್ರೀಕೃಷ್ಣ ಪರಮಾತ್ಮನನ್ನು ಕರೆದುಕೊಂಡು ಹೋಗಬೇಕು ಎಂದು ಅಕ್ರೂರ ಬರುತ್ತಾನೆ. ಶ್ರೀಕೃಷ್ಣ, ಬಲರಾಮರಿಬ್ಬರನ್ನು ರಥದಲ್ಲಿ ಕೂಡಿಸುವ ಅಕ್ರೂರ ತಾನು ನಡೆದುಕೊಂಡು ಬರುತ್ತಾನೆ.
ತಾನೆಂದಿಗೂ ಪರಮಾತ್ಮನ ಸಮನಲ್ಲ ಎಂಬುದು ಅವನ ಭಾವವಾಗಿರುತ್ತದೆ.

ಮಧ್ಯದಲ್ಲಿ ಯಮುನಾ ನದಿ ಬರುತ್ತದೆ. ಸ್ನಾನ ಮಾಡಿ ಜಪ ಮಾಡಿ ಬರುತ್ತೇನೆ ಎಂದು ಯಮುನಾ ನದಿಯತ್ತ ತೆರಳುತ್ತಾನೆ ಅಕ್ರೂರ.

ಸಾಕ್ಷಾತ್‌ ಭಗವಂತನೇ ಬದಿಯಲ್ಲಿರುವಾಗ ಜಪವೇಕೆ ಎಂಬ ಸಂಶಯ ಬರಬಹುದು. ನಮ್ಮ ಶಾಸ್ತ್ರದಲ್ಲೊಂದು ಮಾತಿದೆ. ಅನಂತೌ ವಿಷ್ಣು ಸನ್ನಿಧೌ ಅಂದರೆ ಭಗವಂತನ ಸನ್ನಿಧಾನದಲ್ಲಿ ಮಾಡತಕ್ಕ ಪೂಜೆ, ಜಪ, ಕೈಂಕರ್ಯಗಳು ವಿಶೇಷವಾದ ಫಲವನ್ನು ನೀಡುತ್ತವೆ.

ಯಮುನಾ ನದಿಯಲ್ಲಿ ಮುಳುಗಿದ ಕೂಡಲೇ ಅಕ್ರೂರನಿಗೊಂದು ವಿಶೇಷವಾದ ದರ್ಶನವಾಗುತ್ತದೆ. ಅದೆಂದರೆ ಶೇಷದೇವರ ಮೇಲೆ ಭಗವಾನ್‌ ವಿಷ್ಣು ಪವಡಿಸಿರುವ ದರ್ಶನ ಅವನಿಗಾಗುತ್ತದೆ.

ಅಂದರೆ ಅವನಿಗೆ ಅನಂತಪದ್ಮನಾಭ ಸ್ವಾಮಿಯ ದರ್ಶನವಾಗುತ್ತದೆ. ಅಲ್ಲಿ ನೋಡಿದ ಕೂಡಲೇ ಅಕ್ರೂರನಿಗೆ ಆಶ್ಚರ್ಯವಾಗುತ್ತದೆ.
ಕೃಷ್ಣ ಪರಮಾತ್ಮ ರಥದಲ್ಲಿ ಕೂತಿದ್ದಾನೆ. ಇಲ್ಲಿ ಯಾವಾಗ ಬಂದ ಅಂತ.
ನೀರಿನಿಂದ ಮೇಲೇಳುತ್ತಾನೆ ನೋಡಿದರೆ ಕೃಷ್ಣ ಅಲ್ಲಿಯೇ ರಥದಲ್ಲಿ ಕುಳಿತಿದ್ದಾನೆ.
ಇದೇನಿದು ಆಶ್ಚರ್ಯ ಅಂತ ಅಕ್ರೂರ ಮತ್ತೆ ನೀರಿನಲ್ಲಿ ಮುಳುಗುತ್ತಾನೆ.
ಮತ್ತೆ ಅವನಿಗೆ ಶೇಷಶಾಯಿಯಾದ ಕೃಷ್ಣ ಪರಮಾತ್ಮ ಕಾಣಿಸುತ್ತಾನೆ.
ಹೀಗೆ ಎರಡೂ ಮೂರು ಬಾರಿ ಮುಳುಗೇಳಿದಾಗಲೂ ಅವನಿಗೆ ಶ್ರೀಕೃಷ್ಣನೇ ಅನಂತಪದ್ಮನಾಭನಾಗಿ, ಅನಂತಪದ್ಮನಾಭನೇ ಶ್ರೀಕೃಷ್ಣನಾಗಿ ಕಾಣುತ್ತಾನೆ.
ಆಗ ಪರಮಾತ್ಮ ಅವನಿಗೊಂದು ವರವನ್ನು ಕೊಡುತ್ತಾನೆ.
ಇದನ್ನು ವಾದಿರಾಜ ಸ್ವಾಮಿಗಳು ಹೇಳುತ್ತಾರೆ.
ದಿನಾ ಅಕ್ರೂರ ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರೆ ಅವನಿಗೆ ಶೇಷದೇವರ ದರ್ಶನವಾಗುತ್ತಿತ್ತಂತೆ.
ಅನಂತಪದ್ಮನಾಭನ ವ್ರತವನ್ನು ಯಾರು ಮಾಡುತ್ತಾರೋ ಅವರಿಗೆ ಎಲ್ಲಾ ಸುಖ ಸೌಭಾಗ್ಯಗಳು ದೊರೆಯುತ್ತವೆ ಎಂಬುದನ್ನು ಭಾಗವತದಲ್ಲಿ ಹೇಳಿದ್ದಾರೆ.

  ಲಗ್ನಪತ್ರಿಕೆ ಹೇಗಿರಬೇಕು ?

ಈ ಮಾತನ್ನು ಸ್ವತಃ ಶ್ರೀಕೃಷ್ಣನೇ ಅಕ್ರೂರನಿಗೆ ವರವಿತ್ತು ಹೇಳಿದುದರ ಉಲ್ಲೇಖವನ್ನು ಭಾಗವತದಲ್ಲಿ ನೋಡಬಹುದು.

▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬

Leave a Reply

Your email address will not be published. Required fields are marked *

Translate »