ಸಾವನ್ನೇ ಸಾಯಿಸುವ ಶಕ್ತಿಯುಳ್ಳ, ನೇರವಾಗಿ ಮನಸ್ಸಿಗೆ ಕೊಡುವ ಮದ್ದು… “ಶ್ರೀಮದ್ಭಾಗವತ”
ಸರಳವಾದ ಭಾಷೆಯಲ್ಲಿ.
‘ಮಾನವ ಜನ್ಮ’ ಜನ್ಮಾಂತರಗಳ ಪುಣ್ಯದಿಂದ ಲಭ್ಯವಾಗುವುದು.
ಈ ದುರ್ಲಭ ಮಾನವ ಶರೀರದ ಸದುಪಯೋಗ ಮಾಡಿಕೊಳ್ಳದಿದ್ದರೆ ಆಗುವ ನಷ್ಟ – ಮುಂದೆಂದೂ ತುಂಬಲಾಗದು !
ಪ್ರತಿಯೊಬ್ಬರ ಜೀವನದ ಅಂತಿಮ ಗುರಿ ಜೀವನ್ಮುಕ್ತಿ.
ಜೀವನ್ಮುಕ್ತಿ ಹೊಂದಲು ಭಗವಂತನಲ್ಲಿ ಅನನ್ಯ ‘ಭಕ್ತಿ’ಯಿಂದ ‘ಜ್ಞಾನ’ ಸಂಪಾದಿಸಿ ‘ವೈರಾಗ್ಯ’ದ ಮಾರ್ಗದಿಂದ ನಡೆಯುದೊಂದೇ ದಾರಿ.
ಇದು ಹಲವು ಜನ್ಮಗಳಿಂದ ನಿರಂತರ ನಡೆಯಬೇಕಾದ ಪ್ರಕ್ರಿಯೆ.
ಹೇಗೆ ಜೀವಿಯು ಗಾಳಿ, ನೀರು, ಮತ್ತು ಆಹಾರವಿಲ್ಲದೆ ಬದುಕಲಾರವೋ, ಹಾಗೆ ಭಕ್ತಿ, ಜ್ಞಾನ ಮತ್ತು ವೈರಾಗ್ಯವಿಲ್ಲದೆ ಯಾರಿಗೂ ಮೋಕ್ಷವಿಲ್ಲ. ಈ ವಿಷಯದಲ್ಲಿ ಬೇರೆ ಯಾವ ಅಡ್ಡದಾರಿಗಳಿಲ್ಲಾ.
ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಭಗವಂತನೊಬ್ಬನೇ ನಿಜವಾದ ಆಪ್ತ.
ಉದಾಹರೆಣೆಗೆ ಒಬ್ಬ ವಿದ್ಯಾರ್ಥಿಯ ಗುರಿ ವೈದ್ಯನಾಗಬೇಕು ಅಂತ ಇದ್ದಲ್ಲಿ, ವೈದ್ಯಕೀಯ ವಿಷಯದಲ್ಲಿ ಅತಿಯಾದ ಆಸಕ್ತಿ ಬೇಕು (ಇದುವೇ ಭಕ್ತಿ). ಈ ಅತಿಯಾದ ಆಸಕ್ತಿಯಿಂದ ವೈದ್ಯಕೀಯ ವಿಷಯದಲ್ಲಿ ಜ್ಞಾನ ಸಂಪಾದಿಸುತ್ತಾನೆ. ಸಂಪಾದಿಸಿದ ಜ್ಞಾನವನ್ನು ಆತ ಪರೀಕ್ಷಾ ಕೊಠಡಿಯಲ್ಲಿ, ಅಲ್ಲಿಯ ನಿಯಮಗಳನ್ನೆಲ್ಲಾ ಪಾಲಿಸುತ್ತಾ, ಪ್ರಾಮಾಣಿಕವಾಗಿ (ವೈರಾಗ್ಯ ಮಾರ್ಗ- ಸತ್ಕರ್ಮಗಳೊಂದಿಗೆ) ತನ್ನ ಜ್ಞಾನದ ಪ್ರದರ್ಶನವನ್ನು ಮಾಡಿ ತೇರ್ಗಡೆಯಾದಾಗ ಮಾತ್ರ ಅವನು ವೈದ್ಯನಾಗಲು ಸಾಧ್ಯ.
(ಇಲ್ಲಿ ವೈದ್ಯ ಪದವಿಯನ್ನು ಮೋಕ್ಷ ಪದವಿಯೊಂದಿಗೆ ಹೋಲಿಸಲಾಗಿದೆ)
ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)