ಬಲಿಷ್ಠ ದಕ್ಷಿಣಾ ಮೂರ್ತಿ ಸ್ತೋತ್ರ ಧ್ಯಾನ ಕ್ರಮ

ಸರ್ವವಿದ್ಯೆಗಳಿಗೆ ನಿಧಿಯಾಗಿರುವ ಬಲಿಷ್ಠ ದಕ್ಷಿಣಾ ಮೂರ್ತಿ ಸ್ತೋತ್ರವನ್ನು ಮಕ್ಕಳಿಗೆ ಹೇಳಿಕೊಡಿ.

ಮಕ್ಕಳಲ್ಲಿ ಎಂತಹ ಅದ್ಭುತ ಬದಲಾವಣೆ ಆಗುತ್ತದೆ ಎಂದು ನೀವೇ ನೋಡಿ.

ದಕ್ಷಿಣಾಮೂರ್ತಿ ವಿದ್ಯೆಗೆ ಅಧಿಷ್ಠಾತ್ಮ ದೇವತೆ ಎಂದು ಉಪನಿಷತ್ತು ಮತ್ತು ಸ್ತೋತ್ರಗಳಿಂದ ತಿಳಿದು ಬರುತ್ತದೆ. ದಕ್ಷಿಣಾಮೂರ್ತಿಯು ಪರಮೇಶ್ವರನ ಲೀಲಾ ವಿಭೂತಿಗಳಲ್ಲಿ ಒಂದು.

ದಕ್ಷಿಣಾ ಎಂದರೆ ಬುದ್ಧಿ. ಆ ಬುದ್ಧಿಯ ಜ್ಞಾನದ ಕಡೆಗೆ ಅಭಿಮುಖ ನಾಗಿರುವುದರಿಂದ
ಈ ಹೆಸರು. ಮಕ್ಕಳಲ್ಲಿ ಜ್ಞಾನ ವಾಕ್ಚಾತುರ್ಯ, ಸಿದ್ಧಿ ಲಭಿಸುತ್ತದೆ.. ಅತ್ಯಂತ ಸರಳ ಸ್ತೋತ್ರ ಪ್ರತಿದಿನ ಹನ್ನೊಂದು ಸಲ ಹೇಳಿಸಿ ನೋಡಿ …

ದಕ್ಷಿಣಾಮೂರ್ತಿಯು ಪರಮೇಶ್ವರನ ಲೀಲಾ ವಿಭೂತಿಗಳಲ್ಲಿ ಒಂದು. ವೀಣಾ, ಸಾಂಬ, ಯೋಗ, ಸಂಹಾರ, ಶಕ್ತಿ, ಜ್ಞಾನ, ಅನುಷ್ಠಾನ, ವ್ಯಾಖ್ಯಾನ, ವಿದ್ಯಾ, ವಟಮೂಲ ಎಂಬ ಹತ್ತು ವಿಧ ಶಿವಮೂರ್ತಿಗಳಲ್ಲಿ ಕೊನೆಯದೇ ಇದು. ದಕ್ಷಿಣಾ ಎಂದರೆ ಬುದ್ಧಿ. ಆ ಬುದ್ಧಿಯ (ಜ್ಞಾನದ) ಕಡೆಗೆ ಅಭಿಮುಖನಾಗಿರುವುದರಿಂದ ಈ ಹೆಸರು. ಮೂರ್ತಿ ದಕ್ಷಿಣಾಭಿಮುಖವಾಗಿ ಇರುವುದರಿಂದ ಈ ಹೆಸರು ಎಂದು ಕೆಲವರ ಅಭಿಪ್ರಾಯ.

  ಕಗ್ಗ - ಜ್ಞಾನೋದಯ - Enlightened

ಸರ್ವವಿದ್ಯೆಗಳಿಗೆ ನಿಧಿ

ಗುರುವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಂ |
ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ||

ಅರ್ಥ:-ಸರ್ವಲೋಕಗಳಿಗೆ ಗುರುವೂ ಭವರೋಗಿಗಳಿಗೆ ವೈದ್ಯನೂ ಸರ್ವವಿದ್ಯೆಗಳಿಗೆ ನಿಧಿಯೂ ಆದ ದಕ್ಷಿಣಾಮೂರ್ತಿಗೆ ನಮಸ್ಕಾರ.

ಹೀಗೆಂದು ಈ ದೇವತೆಯನ್ನು ಪ್ರಾರ್ಥಿಸುವುದು ರೂಢಿಯಲ್ಲಿದೆ. ದಕ್ಷಿಣಾಮೂರ್ತಿ ವಿದ್ಯೆಗೆ ಅಧಿಷ್ಠಾತ್ಮ ದೇವತೆ ಎಂದು ಉಪನಿಷತ್ತು ಮತ್ತು ಸ್ತೋತ್ರಗಳಿಂದ ತಿಳಿದು ಬರುತ್ತದೆ. ವ್ಯಾವಹಾರಿಕ ರೂಪದ ಉಪದೇಶ ಮಿಥ್ಯೆಯಾದ ಕಾರಣ ಜ್ಞಾನ (ಬ್ರಹ್ಮ) ಮೂರ್ತಿಯಾದ ಈ ದೇವತೆ ಮುಖದಿಂದ ಯಾವ ಉಪದೇಶವನ್ನೂ ಮಾಡುವುದಿಲ್ಲ. ಆದಕಾರಣ ಈ ಮೂರ್ತಿಯ ಗುರುರೂಪವಾದ ಉಪದೇಶ ಮೌನವಷ್ಟೇ. ಶಿಷ್ಯರು ಈ ಮುದ್ರೆಯಿಂದಲೇ ಸಂಶಯಮುಕ್ತರಾಗಿ ಜ್ಞಾನಿಗಳಾಗುತ್ತಾರೆ. ಇತರ ದೇವತೆಗಳಿಗೆ ಪುರಾಣಪ್ರಸಿದ್ಧಿ ಇರುವಂತೆ ಈ ದೇವತೆಯ ವಿಚಾರ ಪುರಾಣಗಳಲ್ಲಿ ಅಧಿಕವಾಗಿ ಕಂಡುಬರುವುದಿಲ್ಲ. ಮಂತ್ರಶಾಸ್ತ್ರಕ್ಕೆ ಸಂಬಂಧಪಟ್ಟ ಉಪಾಸನಾದಿ ವಿಭಾಗದಲ್ಲಿ ಈ ದೇವತೆಯ ವಿಚಾರವಿದೆ. ಜ್ಞಾನವನ್ನು ಬಯಸುವವರು ಈ ದೇವತೆಯನ್ನು ಉಪಾಸನೆ ಮಾಡುತ್ತಾರೆ.

  ಹಿಂದೂ ಪದದ ಅರ್ಥ

ಧ್ಯಾನ ಕ್ರಮ

ಕರ್ಪೂರದಂತೆ ಶುಭ್ರನೂ ತರ್ಕಮುದ್ರೆಯನ್ನು ಧರಿಸಿ ಬ್ರಹ್ಮತತ್ತ್ವವನ್ನು ತಿಳಿಸುವವನೂ ಯೋಗಾಸನದಲ್ಲಿ ಮಂಡಿತನೂ ಆದ ದಕ್ಷಿಣಾಮೂರ್ತಿಯನ್ನು ಧ್ಯಾನಿಸಬೇಕೆಂದು ಶ್ರೀಮಾನಸೋಲ್ಲಾಸ ಗ್ರಂಥ ಹೇಳುತ್ತದೆ.

ಬ್ರಹ್ಮತತ್ತ್ವವನ್ನು ಬಯಸುವ ವೃದ್ಧರಾದ ಋಷಿಗಳ ಗುಂಪಿನಿಂದ ಆವೃತನಾದ ಜ್ಞಾನಮುದ್ರೆಯನ್ನು ಧರಿಸಿ ಆನಂದಮೂರ್ತಿಯೂ ಮೌನರೂಪ ವ್ಯಾಖ್ಯಾನದಿಂದ ಬ್ರಹ್ಮತತ್ತ್ವವನ್ನು ಪ್ರಕಟಿಸುತ್ತಿರುವ ತರುಣನೂ ಆದ ದಕ್ಷಿಣಾಮೂರ್ತಿಯನ್ನು ಸ್ಮರಿಸಬೇಕೆಂದು ಶ್ರೀತತ್ತ್ವಸುಧೆ ತಿಳಿಸುತ್ತದೆ.

ಉಪನಿಷದ್ ವಾಕ್ಯ

ವೀಣೆ ಮುತ್ತಿನ ಜಪಮಾಲೆ ಪುಸ್ತಕ ಜ್ಞಾನಮುದ್ರೆ ಅಥವಾ ಅಗ್ನಿನಾಗಗಳನ್ನು ಚತುರ್ಭುಜಗಳಲ್ಲಿ ಧರಿಸಿ ಬೆಳ್ಳಿಯಂತೆ ಶುಭ್ರವರ್ಣದಿಂದ ಕೂಡಿದ ಭಸ್ಮಲೇಪಿತ ಶರೀರವುಳ್ಳವನೂ ತ್ರಿಲೋಚನನೂ ತಲೆಯಲ್ಲಿ ಚಂದ್ರಕಲೆಯುಳ್ಳವನೂ ಕಿರೀಟಧಾರಿಯೂ ಯೋಗಾಸನಾರೂಢನೂ ಆಗಿರುವಂತೆ ಈ ದೇವತೆಯ ಸ್ವರೂಪ ದಕ್ಷಿಣಾಮೂರ್ತಿ ಉಪನಿಷತ್ತಿನಲ್ಲಿ ವರ್ಣಿತವಾಗಿದೆ.
ಜ್ಞಾನಾಧಿದೈವವಾದುದರಿಂದ ಮೇಧಾ ದಕ್ಷಿಣಮೂರ್ತಿ ಎಂಬ ಹೆಸರು ಮಂತ್ರೋದ್ಧಾರದಲ್ಲಿ ಕಂಡುಬರುತ್ತದೆ. ಪ್ರಳಯ ಕಾಲದಲ್ಲಿ ಎಲ್ಲವನ್ನೂ ತನ್ನಲ್ಲಿ ಸಂಹರಿಸಿಕೊಂಡು ಸ್ವಾತ್ಮಾನಂದ ಸುಖದಲ್ಲಿ ವಿಹರಿಸುವ ಈಶ್ವರನ ಸ್ವರೂಪವೇ ದಕ್ಷಿಣಾಮೂರ್ತಿ. ಈ ದಕ್ಷಿಣ ಮುಖನಾದ ಶಿವ ಪ್ರತ್ಯಕ್ಷನಾದರೆ ತತ್ತ್ವಜ್ಞಾನ ಸಿದ್ಧಿಸುತ್ತದೆ

  ಗಣೇಶ ಚತುರ್ಥಿ ಶಾಸ್ತ್ರೋಕ್ತ ಪೂಜಾ ವಿಧಾನ..!

Leave a Reply

Your email address will not be published. Required fields are marked *

Translate »