ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಷಡ್ಯಂತ್ರದ ನಿಜ ಅರ್ಥ

ಷಡ್ಯಂತ್ರ..!

ಷಡ್ಯಂತ್ರ ಎಂಬ ಪದವನ್ನು ನಾವು ಹಲವಾರು ಸಂಧರ್ಭದಲ್ಲಿ ಬಳಸಿರುತ್ತೇವೆ ಅಥವಾ ಕೇಳಿರುತ್ತೇವೆ

ಆದರೇ ಈ ಷಡ್ಯಂತ್ರ ಪದದ ನಿಜವಾದ ಅರ್ಥ ವ್ಯಾಪ್ತಿ ಹಾಗೂ ಪದ ಬಳಕೆಯ ವೈಚಾರಿಕ ಹಿನ್ನೆಲೆಗಳ ಅರಿವು ಬಹಳ ಜನರಿಗೆ ಇರುವುದಿಲ್ಲ

ಆದುದರಿಂದ #ಷಡ್ಯಂತ್ರದ ಬಗ್ಗೆ ಲಭ್ಯವಿರುವ ಒಂದಿಷ್ಟು ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ

ಪುರಾಣಗಳು ಹಾಗೂ ಇತಿಹಾಸದ ಪುಟಗಳಲ್ಲಿ ಹಲವು ರಾಜ ಮಹರಾಜರುಗಳು ಹಾಗೂ ಇಂದಿನ ರಾಜಕಾರಣಿಗಳು ಹಾಗೂ ಜನ ಸಾಮಾನ್ಯರೂ ಸಹಾ ತಮ್ಮ ವಿರೋಧಿ ಗಳನ್ನು ಮಣಿಸಲು ಅವರ ವಿರುದ್ದ ಷಡ್ಯಂತ್ರವನ್ನು ಪ್ರಯೋಗಿಸುತ್ತಾರೆ

ಆದರೇ ಈ ಷಡ್ಯಂತ್ರವು ನಿಜವಾಗಿಯೂ ವಿರೋಧಿ ಯ ಮೇಲೆ ಪ್ರಯೋಗವಾದಲ್ಲಿ ಅವನು ಅದರಿಂದ ಪಾರಾಗುವುದು ಕಷ್ಟಸಾಧ್ಯ ಏಕೆಂದರೇ ಈ ಷಡ್ಯಂತ್ರ ವೆಂಬುದು ಬಹಳ ಪರಿಣಾಮಕಾರಿಯಾದ ಒಂದು ಅಸ್ತ್ರ ಅಥವಾ ಪ್ರಯೋಗವಾಗಿದೆ

ಹೆಸರೇ ಸೂಚಿಸುವಂತೆ ಷಡ್ಯಂತ್ರವೆಂದರೇ ಆರು ರೀತಿಯಲ್ಲಿ ಅಥವಾ ಆರು ದಿಕ್ಕುಗಳಲ್ಲಿ ಶತೃವನ್ನು ಬಂದಿಸುವ ನಿಷ್ಕ್ರಿಯಗೊಳಿಸುವ ಅಥವಾ ಸೋಲಿಸುವ ಒಂದು ಪ್ರಯೋಗವಾಗಿದೆ

  ಶ್ರೀರಾಮ ನಾಮದಿಂದ ಸಂಪೂರ್ಣ ಶರಣಾಗತಿ

ಇವುಗಳಲ್ಲಿ ಯಾವುದಾದರೂ ಎರಡು ಮೂರು ದಿಕ್ಕುಗಳ ಅಥವಾ ರೀತಿಯ ಪ್ರಭಾವವು ಎದುರಾಳಿಯಮೇಲೆ‌ ಬಿದ್ದರೂ ಸಹಾ ಅವನ ವಿನಾಶ ಅಥವಾ ಸೋಲು‌ ನಿಶ್ಚಿತ

ಪೌರಾಣಿಕ ಹಿನ್ನೆಲೆ

ಅರವತ್ತನಾಲ್ಕು ಕೋಟಿ ಯೋಗಿನಿ ದೇವತೆಗಳ ಒಡತಿ ಲಲಿತೆಯ ಮೇಲೆ ರಾಕ್ಷಸನೊಬ್ಬ ಮೊಲಬಾರಿಗೆ ಷಡ್ಯಂತ್ರವನ್ನು ಬಳಸಿ ಲಲಿತೆಯ ಯೋಗಿನಿಯರನ್ನು ನಿಷ್ಕ್ರಿಯಗೊಳಿಸಿದ್ದ ಹಾಗೂ ಇದನ್ನರಿತ ಲಲಿತೆಯು ವಿಘ್ನೇಶ್ವರನ ಸಹಕಾರದಿಂದ ರಾಕ್ಷಸ ಹೂಡಿದ್ದ ಷಡ್ಯಂತ್ರದಿಂದ ಪಾರಾಗಿ ರಾಕ್ಷಸನನ್ನು ಸಂಹಾರ ಮಾಡಿದ ರೋಚಕ ಕಥೆಯೊಂದು ಲಲಿತ ಪುರಾಣದಲ್ಲಿ ಹೇಳಲ್ಪಟ್ಟಿದೆ

ಷಡ್ಯಂತ್ರ ಪ್ರಯೋಗದ ಭೀಕರ ಪರಿಣಾಮ

ಮೊದಲೇ ಹೇಳಿದಂತೆ ಈ ಯಂತ್ರವು ಅಥವಾ ತಂತ್ರಜ್ಞಾನ ವು ಎದುರಾಳಿಯನ್ನು ಆರು ರೀತಿಯಲ್ಲಿ ಭಾದಿಸುತ್ತದೆ ಅವು ಯಾವುವೆಂದರೇ

  1. ಮರಣ
    ಎದುರಾಳಿಯ ಮರಣವೇ ಸಂಭವಿಸಬಹುದು ಎದುರಾಳಿಯೇ ಮರಣ ಹೊಂದಿದಾಗ ಗೆಲುವು ಷಡ್ಯಂತ್ರ ಪ್ರಯೋಗಿಸಿದವನಿಗೇ ಲಭಿಸುವುದು
  ಕನ್ನಡ ಪದಗಳಲ್ಲಿ ಜೀವನ

2 ಮೋಹನ
ಎದುರಾಳಿಯು ಹಲವು ರೀತಿಯ ಮಾನಸಿಕ ತೊಳಲಾಟಗಳಿಗೆ ಸಿಕ್ಕಿ ತನ್ನ ಹೋರಾಟವನ್ನು ಕೈ ಬಿಡುವುವಂತೆ ಮಾಡುವುದು

3 ಉಚ್ಚಾಟನ
ಎದುರಾಳಿಯು ತನ್ನ ಸ್ತಾನದಿಂದ ಅನಿವಾರ್ಯ ಕಾರಣಗಳಿಂದ ಗಡಿಪಾರಾಗ ಬಹುದು ಅಥವಾ ಜಾಗ ಕಾಲಿ ಮಾಡವಂತೆ ಮಾಡುವುದು

4 ವಿದ್ವೇಷಣ
ಎದುರಾಳಿಯ ಸಂಬಂದಗಳಲ್ಲಿ ಒಡಕು ಮೂಡುವಂತೆ ಮಾಡುವುದು ಎದುರಾಳಿಯ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಬಂದು ಬಳಗ ಸ್ನೇಹಿತರು ಸೈನಿಕರು ಸಹಪಾಟಿಗಳು ಕುಟುಂಬದ ಸದಸ್ಯರೊಂದಿಗೆ ಮನಃಸ್ಥಾಪ ಮೂಡುವಂತೆ ಮಾಡಿ ಎದುರಾಳಿಯನ್ನು ಒಂಟಿಯಾಗಿಸುವುದು
5 ಆಕರ್ಷಣ
ಎದುರಾಳಿ ತನ್ನ ಹೋರಾಟವನ್ನು ಬಿಟ್ಟು ಬೇರೊಂದು ವಿಷಯದ ಕಡೆಗೆ ಮನಸು ಬದಲಿಸುವಂತೆ ಅಥವಾ ಬೇರೊಂದು ವಿಷಯದ ಮೋಹಕ್ಕೆ ಸಿಕ್ಕಿಸುವುದು ಇಲ್ಲಿ ಮಾದಕ ವಸ್ತು ಹೆಣ್ಣು ಮುಂತಾದವುಗಳ ಕಡೆ ಎದುರಾಳಿಯ ಮನಸ್ಸು ತಿರುಗಿಸುವುದು

  ಬಾಬಾಪುರದ ರಾಮಲೀಲಾ ರಹಸ್ಯ - ತೆನಾಲಿ ರಾಮ ಕಥೆ

6 ಸ್ಥಂಭನ
ಎದುರಾಳಿಯ ಸಂಪನ್ಮೂಲಗಳನ್ನು ನಿಲ್ಲಿಸುವುದು ಹೋರಾಟಕ್ಕೆ ಅಗತ್ಯವಿರುವ ಸಂಪತ್ತು ಹಣ ಶಸ್ತ್ರಾಸ್ತ್ರಗಳು ಮುಂತಾದವುಗಳು ದೊರೆಯದಂತೆ ಮಾಡುವುದು

ಇಷ್ಟು ರೀತಿಯಲ್ಲಿ ಎದುರಾಳಿಯ ಶಕ್ತಿಯನ್ನು ಕುಗ್ಗಿಸುವ ಅಸ್ತ್ರವೇ ಈ ಷಡ್ಯಂತ್ರ

ಜನಸಾಮಾನ್ಯರು ಈ ಪದವನ್ನು ಒಂದು ಸಾದಾರಣ ಕುತಂತ್ರವೆಂದಷ್ಟೇ ಭಾವಿಸಿದ್ದಾರೆ ಆದರೇ ಷಡ್ಯಂತ್ರದ ನಿಜ ಅರ್ಥವು ಬಹಳ ವಿಶಾಲವಾಗಿದೆ

ನಿಮ್ಮ ಮೇಲೆ ಯಾರಾದರೂ ಷಡ್ಯಂತ್ರ ಪ್ರಯೋಗಿಸಿದ್ದಾರೆಯೇ ಅದರಲ್ಲಿ ಯಾವ ರೀತಿಯ ಪರಿಣಾಮವನ್ನು ಎದುರಿಸುತ್ತಿದ್ದೀರಿ ಇದನ್ನು ತಕ್ಷಣವೇ ಗುರುತಿಸಿಕೊಂಡು ಪಾರಾಗದಿದ್ದಲ್ಲಿ ಷಡ್ಯಂತ್ರದ ಆರೂ ದಿಕ್ಕುಗಳು ಕ್ರಿಯಾಶೀಲವಾಗುವ ಸಾಧ್ಯತೆಗಳಿರುತ್ತವೆ.

Leave a Reply

Your email address will not be published. Required fields are marked *

Translate »