ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಒಂದು ಮೊಟ್ಟೆಯ ಕಥೆ

ದಿನಕ್ಕೊಂದು ಕಥೆಯಲ್ಲಿ “ಒಂದು ಮೊಟ್ಟೆಯ ಕಥೆ” ಝೆನ್  ಮೂಲದಿಂದ ತಂದದ್ದು ಇಲ್ಲಿದೆ ಓದಿ ಕಲಿ ತಿಳಿ.

ನನ್ನ ತಂದೆ ನನಗೆ ಕಲಿಸಿಕೊಟ್ಟ ಮೂರು ವಾಕ್ಯಗಳೇ ನನ್ನ ಬದುಕಿಗೆ ನೆರವಿಗೆ ನಿಂತಿತು.

ಒಂದು ದಿನ ಅಪ್ಪ, ಎರಡು ಅಗಲವಾದ ಪಾತ್ರೆಗಳಲ್ಲಿ ನೂಡಲ್ಸ್ ಮಾಡಿ ತಂದರು. ಅವೆರಡನ್ನೂ ಊಟದ ಮೇಜಿನ ಮೇಲಿಟ್ಟರು.
ಒಂದು ಪಾತ್ರೆಯಲ್ಲಿದ್ದ ನೂಡಲ್ಸಿನ ಮೇಲೆ ಒಂದು ಮೊಟ್ಟೆ ಇತ್ತು; ಮತ್ತೊಂದರ ಮೇಲೆ ಮೊಟ್ಟೆ ಇರಲಿಲ್ಲ.  ಅಪ್ಪ ನನ್ನ ಬಳಿ ಹೇಳಿದರು,
“ಮಗ….ಈ ಎರಡರಲ್ಲಿ ನಿನಗೆ ಯಾವುದು ಬೇಕೋ ಅದನ್ನು ತೆಗೆದುಕೋ!” ಎಂದರು.
ಆ ಕಾಲದಲ್ಲಿ ಮೊಟ್ಟೆ ಸಿಗುವುದು ಅಪರೂಪ. ಹೊಸವರ್ಷದಂದೋ, ಹಬ್ಬದ ದಿನಗಳಲ್ಲೋ ನಮಗೆ ತಿನ್ನಲು ಮೊಟ್ಟೆ ಸಿಗುತ್ತಿತ್ತು. ಆದ್ದರಿಂದ ನಾನು ಮೊಟ್ಟೆ ಇದ್ದ ನೂಡಲ್ಸ್ ಪಾತ್ರೆಯನ್ನು ತೆಗೆದುಕೊಂಡೆ. ನಾವು ಊಟ ಮಾಡಲು ತೊಡಗಿದೆವು. ನನ್ನ ಬುದ್ಧಿವಂತಿಕೆಯ ತೀರ್ಮಾನಕ್ಕೆ ನನ್ನನ್ನು ನಾನೇ ಮೆಚ್ಚಿಕೊಂಡು ಹೆಮ್ಮೆಪಟ್ಟುಕೊಂಡೇ. ಮೊಟ್ಟೆಯನ್ನು ತಿಂದೆ.
ನನ್ನ ತಂದೆ ಅವರ ಪಾತ್ರೆಯನ್ನು ತೆಗೆದು ತಿನ್ನಲು ಶುರುಮಾಡಿದಾಗ ನನಗೆ ಆಶ್ಚರ್ಯ ಕಾದಿತ್ತು. ಅವರ ಪಾತ್ರೆಯ ನೂಡಲ್ಸಿನ ಕೆಳಗೆ ಎರಡು ಮೊಟ್ಟೆಗಳಿದ್ದವು. ಅದನ್ನು ನೋಡಿ ನನಗೆ ಬಹಳ ದುಃಖವಾಯಿತು. ಆತುರದಿಂದ ನಾನು ತೆಗೆದುಕೊಂಡ ನಿರ್ಧಾರಕ್ಕೆ ಬಹಳ ನೊಂದುಕೊಂಡೆ. ನನ್ನನ್ನೇ ನಾನು ಬೈದುಕೊಂಡೆ. ಅಪ್ಪ ಮೆಲ್ಲಗೆ ನಗುತ್ತಾ ನನಗೆ ಹೇಳಿದರು…
”ಮಗನೇ…ನೆನಪಿನಲ್ಲಿಟ್ಟುಕೋ…ನಿನ್ನ ಕಣ್ಣುಗಳು ನೋಡುವುದು ಸತ್ಯವಲ್ಲದಿರಬಹುದು. ಮತ್ತೊಬ್ಬರಿಗೆ ಸಿಗಬೇಕಾದ್ದನ್ನು ನೀನು ಪಡೆಯ ಬೇಕೆಂದುಕೊಂಡರೆ ನಿನಗೇ ನಷ್ಟ.”
ಮಾರನೆಯ ದಿನ ನನ್ನ ಅಪ್ಪ ಎರಡು ಪಾತ್ರೆಗಳ ತುಂಬ ನೂಡಲ್ಸ್ ಮಾಡಿ ತಂದು ಮೇಜಿನ ಮೇಲಿಟ್ಟರು. ಮೊದಲ ದಿನದಂತೆ ಒಂದು ಪಾತ್ರೆಯಲ್ಲಿ ಇದ್ದ ನೂಡಲ್ಸಿನ ಮೇಲೆ ಒಂದು ಮೊಟ್ಟೆ ಇತ್ತು; ಮತ್ತೊಂದರಲ್ಲಿ ಇರಲಿಲ್ಲ. ಅಪ್ಪ ಮತ್ತೆ ನನ್ನ ಬಳಿ ಹೇಳಿದರು….”ಮಗನೇ ಈ ಎರಡರಲ್ಲಿ ನಿನಗೆ ಯಾವುದು ಬೇಕೋ ಅದನ್ನು ತೆಗೆದುಕೋ!” ಈ ಸಲ ನಾನು ಸ್ವಲ್ಪ ಬುದ್ಧಿವಂತನಂತೆ ಯೋಚಿಸಿದೆ. ಮೊಟ್ಟೆ ಇಲ್ಲದ ಪಾತ್ರೆಯನ್ನು ತೆಗೆದುಕೊಂಡೆ. ಅಂದೂ ನನಗೆ ಆಶ್ಚರ್ಯ ಕಾದಿತ್ತು. ನೂಡಲ್ಸ್ ತಿನ್ನುವ ಚಾಪ್ ಸ್ಟಿಕ್ ನಿಂದ ಪಾತ್ರೆಯ ತಳದವರೆಗೂ ಕೆದಕಿ ನೋಡಿದೆ. ಒಂದು ಮೊಟ್ಟೆ ಸಹ ಇರಲಿಲ್ಲ.
ಅಂದೂ ಅಪ್ಪ ನಗುತ್ತ ಹೇಳಿದರು; “ಮಗನೇ….ಯಾವಾಗಲೂ ಅನುಭವದ ಆಧಾರದ ಮೇಲೆ ಯಾವುದನ್ನು ನಂಬಬಾರದು. ಯಾಕೆಂದರೆ ಕೆಲವು ಸಮಯ ಬದುಕು ನಿನ್ನನ್ನು ಮೋಸಗೊಳಿಸಬಹುದು. ಬೇಸ್ತು ಬೀಳಿಸಬಹುದು. ಇದನ್ನು ಒಂದು ಪಾಠವಾಗಿ ತೆಗೆದುಕೋ. ಇವನ್ನು ಯಾವ ಪಠ್ಯ ಪುಸ್ತಗಳಿಂದಲೂ ಕಲಿಯಲಾಗದು.”
ಮೂರನೇಯ ದಿನ ಅಪ್ಪ ಮತ್ತೆ ಎರಡು ಪಾತ್ರೆಗಳಲ್ಲಿ ನೂಡಲ್ಸ್ ಮಾಡಿ ತಂದು ಮೇಜಿನ ಮೇಲಿಟ್ಟ. ಯಥಾಪ್ರಕಾರ ಒಂದು ಪಾತ್ರೆಯ ನೂಡಲ್ಸಿನ ಮೇಲೆ ಮೊಟ್ಟೆ ಇತ್ತು, ಮತ್ತೊಂದರಲ್ಲಿ ಇರಲಿಲ್ಲ. ಅಪ್ಪ ಎಂದಿನಂತೆ ನನಗೆ ಯಾವುದು ಬೇಕೋ ಅದನ್ನು ತೆಗೆದುಕೊಳ್ಳಲು ಹೇಳಿದ. ಈ ಬಾರಿ ಅವಸರ ಪಡಲಿಲ್ಲ. ಸಹನೆಯಿಂದ ಬಹಳ ಯೋಚಿಸಿ ಶಾಂತವಾಗಿ ಅಪ್ಪನಿಗೆ ಹೇಳಿದೆ, “ಅಪ್ಪ, ನೀವು ಈ ಮನೆಗೆ ಹಿರಿಯರು, ನೀವೇ ಈ ಸಂಸಾರಕ್ಕಾಗಿ ದುಡಿಯುವವರು. ನೀವೇ ನಿಮಗೆ ಬೇಕಾದ ನೂಡಲ್ಸ್ ಪಾತ್ರೆಯನ್ನು ಮೊದಲು ತೆಗೆದುಕೊಳ್ಳಿ. ಮತ್ತೊಂದನ್ನು ನಾನು ತೆಗೆದುಕೊಳ್ಳುತ್ತೇನೆ. ಅಪ್ಪ ನನ್ನ ಬೇಡಿಕೆಯನ್ನು ನಿರಾಕರಿಸಲಿಲ್ಲ. ಮೊಟ್ಟೆ ಇದ್ದ ನೂಡಲ್ಸ್ ಪಾತ್ರೆಯನ್ನು ತೆಗೆದುಕೊಂಡರು. ನಾನು ನನಗಾದ ನೂಡಲ್ಸ್ ಅನ್ನು ತಿನ್ನಲು ತೊಡಗಿದೆ. ಈ ಪಾತ್ರೆಯಲ್ಲಿ ಮೊಟ್ಟೆ ಇರುವುದಿಲ್ಲ ಅಂದುಕೊಂಡೆ. ನನಗೆ ಬಹಳ ಆಶ್ಚರ್ಯ ಪಾತ್ರೆಯ ತಳದಲ್ಲಿ ಎರಡು ಮೊಟ್ಟೆಗಳಿದ್ದವು. ಅಪ್ಪ ಪ್ರೀತಿಯಿಂದ ನನ್ನನ್ನು ನೋಡಿದ. ನಂತರ ಮುಗುಳ್ನಗುತ್ತ ಹೇಳಿದ; ಮಗನೇ, ನೆನಪಿಟ್ಟುಕೋ.
“ಉಳಿದವರಿಗೆ ನೀನು ಒಳ್ಳೆಯದು ಮಾಡಬೇಕೆಂದುಕೊಂಡಾಗ,
ನಿನಗೆ ಒಳ್ಳೆಯದೇ ಆಗುತ್ತದೆ.”

  ಬಾಡಿಗೆ ಮನೆಯ ಪ್ರಾಮಾಣಿಕ ವೃದ್ಧನ ಕಥೆ

ಅಪ್ಪ ಹೇಳಿದ ಈ ಮೂರು ವಾಕ್ಯಗಳನ್ನು ನಾನು ಸದಾ ನೆನಪಿಟ್ಟುಕೊಂಡಿದ್ದೇನೆ…

🌞🌻🌞🌻🌞

Leave a Reply

Your email address will not be published. Required fields are marked *

Translate »