ಭವಿಷ್ಯ ಪುರಾಣ ಏನು ಹೇಳುತ್ತದೆ ?

18 ಪುರಾಣಗಳು : ಭವಿಷ್ಯ ಪುರಾಣ ಏನು ಹೇಳುತ್ತದೆ?

ಭವಿಷ್ಯ ಪುರಾಣ
ಮುಂದಾಗುವುದನ್ನು ಹೇಳ ಹೊರಟದ್ದು, ಉಪಲಬ್ಧ ಪ್ರತಿ ಆಪಸ್ತಂಬೀಯ ಧರ್ಮಶಾಸ್ತ್ರ ಹೇಳಿದ ಹಳೆಯ ಭವಿಷ್ಯ ಪುರಾಣವಲ್ಲ. ಇದರಲ್ಲಿಯ ಸೃಷ್ಟಿವಿವರಣೆ ಮನುಸ್ಮೃತಿಯಿಂದ ಬಳಸಿಕೊಂಡಿದೆ. ಬಹುಭಾಗ ಬ್ರಾಹ್ಮಣರ ವೈದಿಕಕರ್ಮಗಳನ್ನೂ ಹಬ್ಬ ಹರಿದಿನಗಳನ್ನೂ ವಿವರಿಸುತ್ತದೆ. ಕೆಲವೇ ಕತೆಗಳಿವೆ. ನಾಗಪಂಚಮಿಯ ವರ್ಣನೆ ಹಾವುಗಳ ಕತೆಗಳಿಗೆ ಅವಕಾಶವಿತ್ತಿದೆ. ಈ ಪುರಾಣದಲ್ಲಿ ಜರತುಷ್ಟ್ರಮತದ ಸೂರ್ಯ, ಅಗ್ನಿಗಳ ಉಪಾಸನೆಗೆ ಸಂಬಂಧಿಸಿದ ಶಾಕದ್ವೀಪಸ್ಥ ಸೂರ್ಯಾರಾಧನೆಯ ವಿಷಯ ಬಂದಿದೆ.
ಶಾಕದ್ವೀಪದ ನಿವಾಸಿಗಳು ಸಿಥಿಯನ್ನರಾಗಿರಬಹುದೆಂದು ಊಹಿಸಲಾಗಿದೆ. ಭವಿಷ್ಯಪುರಾಣ ತನ್ನ ಬಾಯಿ, ತೋಳು, ತೊಡೆ, ಪಾದಗಳಿಂದ ಬ್ರಹ್ಮ ಇಡೀ ಸೃಷ್ಟಿಯನ್ನು ಕಾಪಾಡುವ ಸಲುವಾಗಿ ಬ್ರಾಹ್ಮಣಾದಿ ನಾಲ್ಕು ಜಾತಿಗಳನ್ನು ನಿರ್ಮಿಸಿದನೆಂದೂ ಅವುಗಳ ಉದ್ಯೋಗಗಳನ್ನು ಆಯಾ ಜಾತಿಗಳ ಸ್ವಭಾವ ಸಹಜ ಗುಣಗಳಿಗೂ ಕೃತ್ಯಗಳಿಗೂ ಅನುಗುಣವಾಗಿ ವಿಂಗಡಿಸಿ ನಿರ್ದೇಶಿಸಿದನೆಂದೂ ಹೇಳುತ್ತದೆ. ಇದರ ಮುಖ್ಯ ದೇವತೆ ಶಿವ.
ಪರಂಪರೆಯ ಪ್ರಕಾರ ಶ್ಲೋಕಸಂಖ್ಯೆ 14500 ಎಂದಿದ್ದರೂ ವಾಸ್ತವಿಕವಾಗಿರುವುದು 7,000 ಭವಿಷ್ಯೋತ್ತರ ಪುರಾಣ ಇದರ ಅಂಗವೆಂದು ತಿಳಿದು ಅದರ 7,000 ಶ್ಲೋಕಗಳನ್ನೂ ಸೇರಿಸಿದರೆ ಒಟ್ಟು 14,000 ಶ್ಲೋಕಗಳಾಗುತ್ತವೆ. ಪ್ರಸ್ತುತ ಪುರಾಣ ಸಾಂಬಪುರಾಣದಿಂದ ಕೆಲ ಅಧ್ಯಾಯಗಳನ್ನು ತೆಗೆದುಕೊಂಡಿರುವುದರಿಂದ ಇದರ ಕಾಲ ಪ್ರ.ಶ. 600-950ರ ನಡುವೆ ಎನ್ನಬಹುದು. ಆಪಸ್ತಂಬ ಧರ್ಮಸೂತ್ರ. ಈ ಪುರಾಣವನ್ನು ಹೆಸರಿಸಿರುವುದರಿಂದ ಇದರ ಮೂಲ ರೂಪದ ಕಾಲ ಪ್ರ.ಶ.ಪು. 3ನೆಯ ಶತಮಾನ ಎನ್ನಬಹುದು.
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »