ಅನ್ನವು ‘ಬ್ರಹ್ಮಸ್ವರೂಪ’ವಾಗಿದೆ !
ಅನ್ನ, ವಸ್ತ್ರ ಮತ್ತು ನಿವಾಸ ಇವು ಮಾನವನ ಮೂಲಭೂತ ಆವಶ್ಯಕತೆಗಳಾಗಿವೆ. ಮಾನವನು ಕೇವಲ ಜೀವಂತವಿರುವುದರ ಬಗ್ಗೆ ವಿಚಾರ ಮಾಡಿದರೆ ಅದರಲ್ಲಿನ ಅನ್ನವು ಅತ್ಯಂತ ಪ್ರಮುಖ ಆವಶ್ಯಕತೆಯಾಗಿದೆ. ಅನ್ನದಿಂದಲೇ ಮಾನವನ ಶರೀರದ ಪೋಷಣೆಯಾಗುತ್ತದೆ.
ಅನ್ನವು ‘ಬ್ರಹ್ಮಸ್ವರೂಪ’ವಾಗಿದೆ
‘ಅನ್ನವು ಬ್ರಹ್ಮಸ್ವರೂಪವೇ ಆಗಿದೆ’ ಎಂದು ಸಂತ ಜ್ಞಾನೇಶ್ವರರು ಹೇಳುತ್ತಾರೆ. ‘ಹೇಗೆ ಸಂಪೂರ್ಣ ವಿಶ್ವವು ಬ್ರಹ್ಮನಿಂದ ಉತ್ಪನ್ನವಾಗಿ, ಬ್ರಹ್ಮನಿಂದಲೇ ಜೀವಿಸುತ್ತದೆಯೋ ಮತ್ತು ಬ್ರಹ್ಮನಲ್ಲಿಯೇ ವಿಲೀನವಾಗುತ್ತದೆಯೋ, ಹಾಗೆಯೇ ಎಲ್ಲ ಪ್ರಾಣಿಮಾತ್ರರು ಅನ್ನದಿಂದಲೇ ಉತ್ಪನ್ನವಾಗುತ್ತಾರೆ, ಅನ್ನದಿಂದಲೇ ಜೀವಿಸುತ್ತಾರೆ ಮತ್ತು ಅನ್ನದಲ್ಲಿಯೇ ವಿಲೀನರಾಗುತ್ತಾರೆ.’ – ಶ್ರೀಜ್ಞಾನೇಶ್ವರಿ ೩.೧೩೩
(ಆಧಾರ: ಸನಾತನದ ಗ್ರಂಥ ‘ಅನ್ನ ಬ್ರಹ್ಮ|: ಖಂಡ ೧’)
ಅನ್ನವನ್ನು ಗ್ರಹಿಸುವ ‘ಯಜ್ಞಕರ್ಮ’ದಲ್ಲಿನ ಮೂರು ಹಂತಗಳು
ಅ. ಸ್ಮರಣ: ಭಗವತ್ ಚಿಂತನೆ
ಆ. ಭರಣ: ಗ್ರಹಣ ಮಾಡುವಿಕೆ (ಸೇವಿಸುವುದು)
ಇ. ಹವನ: ಈ ಕ್ರಿಯೆಯಿಂದ ಕಾರ್ಯವನ್ನು ಮಾಡಲು ಇಂಧನ ನಿರ್ಮಿತಿಯಾಗುತ್ತದೆ.
ಮೇಲಿನ ಎಲ್ಲ ಕ್ರಿಯೆಗಳು ಯಜ್ಞದಲ್ಲಿ ಆಗುತ್ತವೆ, ಆದುದರಿಂದ ಅನ್ನಸೇವನೆಯ ಕ್ರಿಯೆಗೆ ‘ಯಜ್ಞಕರ್ಮ’ ಎಂದು ಹೇಳಲಾಗಿದೆ.
– ಶ್ರೀ.ರಾಮ ಹೊನಪರ ಮಾಧ್ಯಮದಿಂದ, ಜುಲೈ ೨೦೦೯
ನಮ್ಮ ಬಳಿ ಸ್ವಲ್ಪ ಅನ್ನವಿದ್ದರೂ, ಅದರಲ್ಲಿನ ಸ್ವಲ್ಪ ಭಾಗವನ್ನು ಬಾಗಿಲಿಗೆ ಬಂದ ಅತಿಥಿಗೆ ಕೊಡಬೇಕು, ಎಂಬ ಔದಾರ್ಯ ಕಲಿಸುವ ಹಿಂದೂ ಸಂಸ್ಕ್ಕೃತಿ!
‘ಹಿಂದಿನ ಕಾಲದಲ್ಲಿ ಬೇಯಿಸಿದ ಅನ್ನವನ್ನು ಮಾರುತ್ತಿರಲಿಲ್ಲ, ಆಗ ಭೋಜನಾಲಯಗಳಿರಲಿಲ್ಲ, ಧರ್ಮಶಾಲೆಗಳಿದ್ದವು. ಕಾಲ್ನಡಿಗೆಯಲ್ಲಿ ಯಾತ್ರೆಯನ್ನು ಮಾಡುವವರು, ಮಧ್ಯಾಹ್ನದ ಸಮಯದಲ್ಲಿ ಎಲ್ಲಿರುತ್ತಿದ್ದರೋ ಅಲ್ಲಿ ‘ಅತಿಥಿ’ಯೆಂದು ‘ಓಂ ಭವತಿ ಭಿಕ್ಷಾಂ ದೇಹಿ|’ (ಹೇ ಮಾತೇ ಭಿಕ್ಷೆಯನ್ನು ನೀಡು) ಎಂದು ಪ್ರಾರ್ಥನೆಯನ್ನು ಮಾಡುತ್ತಿದ್ದರು. ನಮ್ಮ ಬಳಿ ಕಡಿಮೆ ಅನ್ನವಿದ್ದರೂ ಅದರ ಸ್ವಲ್ಪ ಭಾಗವನ್ನು ಬಾಗಿಲಿಗೆ ಬಂದ ಅತಿಥಿಗೆ ಕೊಡಬೇಕೆಂಬ ಔದಾರ್ಯವು ಭಾರತೀಯರಲ್ಲಿಯೇ ಕಂಡುಬರುತ್ತದೆ.
ಶ್ರೀ ಅನ್ನಪೂರ್ಣಾ
೧. ಶ್ರೀ ಅನ್ನಪೂರ್ಣಾ ಎಂದರೆ ಅನ್ನಧಾನ್ಯಗಳನ್ನು ಪೂರೈಸುವ ದೇವತೆ. ಇವಳು ಪಾರ್ವತಿಯ ಅವತಾರವಾಗಿದ್ದಾಳೆ. ಕಾಶಿಯಲ್ಲಿ ಶ್ರೀ ಅನ್ನಪೂರ್ಣೆಯ ದೇವಸ್ಥಾನವಿದೆ, ‘ಆ ಕ್ಷೇತ್ರದ ಎಲ್ಲ ಜನರು ಊಟ ಮಾಡದ ಹೊರತು ಅವಳು ಅನ್ನವನ್ನು ಸೇವಿಸುವುದಿಲ್ಲ’, ಎಂದು ನಂಬಲಾಗಿದೆ. ಚಂದ್ರಸೇನೀಯ ಕಾಯಸ್ಥ ಸಮಾಜದ ಗೃಹಿಣಿಯರು ತಮ್ಮ ಪತಿಯು ಪ್ರವಾಸದಿಂದ ಹಿಂದಿರುಗುವ ಸಮಯದಲ್ಲಿ ಇವಳ ಪೂಜೆಯನ್ನು ಮಾಡುತ್ತಾರೆ. ಇವಳ ತಲೆಯ ಮೇಲೆ ಅರಿಶಿನ ಅಕ್ಷತೆಗಳನ್ನು ಅರ್ಪಿಸುತ್ತಾರೆ ಮತ್ತು ‘ಮನೆಗೆ ಬರುವ ಮಹಾನ್ ಅತಿಥಿಯ (ಪತಿಯ) ರಕ್ಷಣೆಯನ್ನು ಮಾಡು’ ಎಂದು ಪ್ರಾರ್ಥಿಸುತ್ತಾರೆ.
೨. ಮಗಳನ್ನು ಅತ್ತೆಮನೆಗೆ ಕಳುಹಿಸುವಾಗ ಅವಳ ತಾಯಿ ಅವಳಿಗೊಂದು ಅನ್ನಪೂರ್ಣೆಯ ಮೂರ್ತಿಯನ್ನು ಕೊಡುತ್ತಾಳೆ.
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!