ನವಗ್ರಹಗಳ ಆರಾಧನೆ ಅಂದರೆ ಕೇವಲ ಪೂಜಾ ಹೋಮ ಮಾಡುವದಲ್ಲ. ನಿಜವಾದ ಆರಾಧನಾ ಕ್ರಮ ಹೀಗಿದೆ :
ಗ್ರಹಗಳು ಮತ್ತು ಪರಿಹಾರಗಳು
1, ತಂದೆಯನ್ನು ಆಧರಿಸಿ ಗೌರವಿಸಿದರೆ ರವಿಯು ತೃಪ್ತಿ ಪಡುವನು….
2, ತಾಯಿಯನ್ನು ಪೋಷಿಸಿ ಪ್ರೀತಿಯಿಂದ ನೋಡಿಕೊಂಡರೆ ಚಂದ್ರನು ಅನುಗ್ರಹಿಸುವನು….
3, ಆಪತ್ಕಾಲದಲ್ಲಿ ಇರುವ ಭ್ರಾತೃಗಳನ್ನು ಪೋಷಿಸಿ ಸಹಾಯ ಮಾಡಿದರೆ ಕುಜನಿಗೆ ಪ್ರೀತಿಯಾಗುವುದು…
4, ವಿದ್ಯಾವಂತರನ್ನು ಬುದ್ಧಿವಂತರನ್ನು ಗೌರವಿಸಿ ಸನ್ಮಾನಿಸಿದರೆ ಬುಧನು ಪ್ರೀತಿಯಾಗುವನು…..
5, ಮಕ್ಕಳಿಗೆ ಸಿಹಿ ಹಂಚಿ ಮಕ್ಕಳನ್ನು ಪ್ರೀತಿಸಿ ಪೋಷಿಸಿದರೆ ಗುರುವು ಪ್ರೀತಿಯಾಗುವನು …..
6, ಪರಸ್ತ್ರೀಯರನ್ನು ತಾಯಿಯಂತೆ ಕಂಡು ಶೋಷಣೆಗೆ ಒಳಗಾಗಿರುವ ಸ್ತ್ರೀಯರಿಗೆ ಸಹಾಯ ಮಾಡಿದರೆ ಶುಕ್ರನು ಪ್ರೀತಿಯಾಗುವನು….
7, ತೀರ್ಥಯಾತ್ರೆಗೆ ಗಂಗಾ ಸ್ನಾನಕ್ಕೆ ಹೋಗುವವರಿಗೆ, ವೃದ್ಧರಿಗೆ ಅನ್ನ ನೀರು ಬಟ್ಟೆ ಕೊಟ್ಟು ಕಾಪಾಡಿದರೆ ಶನಿ ಭಗವಂತನು ಪ್ರೀತಿಯಾಗುವರು….
8, ಹುತ್ತಗಳನ್ನು ಕಾಪಾಡಿದರೆ ರಾಹು ಭಗವಂತನು ಪ್ರೀತಿ ಕೊಳ್ಳುವರು….
9, ಸಾಧು ಸಂತರು ಯತಿವರ್ಯರನ್ನು ಜಂಗಮರನ್ನು ನಮಸ್ಕರಿಸಿ.. ಸಹಾಯ ಮಾಡಿ ಪೋಷಿಸಿದರೆ, ಆಧರಿಸಿದರೆ ಕೇತು ಭಗವಾನರು ತೃಪ್ತಿ ಪಡುವರು…..
ಹೀಗೆ ಗ್ರಹಗಳಿಗೆ ಅಧಿಪತ್ಯ ಕಾರಕತ್ವವನ್ನು ಭಗವಂತನು ಕೊಟ್ಟಿರುವನು.ಯಾವುದೇ ಕಾಲಕ್ಕೂ ಇದು ತಪ್ಪುವುದಿಲ್ಲ….
ಕಾಲಚಕ್ರವು ಹೀಗೆ ಉರುಳುತ್ತದೆ….ನಾವು ಕಾಲಕ್ಕೆ ಅಧೀನರು….ಕಾಲವೇ ಎಲ್ಲರಿಗೂ ಪಾಠ ಕಲಿಸುತ್ತದೆ…. .
ಕಾಲವೇ ಎಲ್ಲರಿಗೂ ಉತ್ತರಿಸುತ್ತದೆ…. ಒಂದು ದಿನ ನಾವೆಲ್ಲರೂ ಕಾಲಗರ್ಭದಲ್ಲಿ ಸೇರಿ ಹೋಗುತ್ತೇವೆ…. ಕಾಲ ನಮಗಿಂತ ವೇಗ ಉಳ್ಳದ್ದು….