ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ ಪ್ರಯೋಜನ

ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ

೧. ವಿಷ್ಣು ಸ್ವತಃ ತನ್ನ ಹೆಸರಿನ ಅತೀಂದ್ರಿಯ ಧ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿರುತ್ತಾನೆ. ಹಾಗಾಗಿ ವಿಷ್ಣುಸಹಸ್ರನಾಮವನ್ನು ಹೆಚ್ಚು ಹೆಚ್ಚು ಕಾಲ ಪಠಣಮಾಡಿದರೆ ಒಳ್ಳೆಯದು.

೨. ವಿಷ್ಣು ಸಹಸ್ರನಾಮದಲ್ಲಿ ಎಲ್ಲ ವೈದಿಕ ಮಂತ್ರಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಈ ಮಂತ್ರವನ್ನು ಪಠಿಸುವ ಮೂಲಕ ಹೇಳುವವರಿಗೆ ಅಷ್ಟೇ ಅಲ್ಲ ಕೇಳುವವರು ಕೂಡ ಪ್ರಯೋಜನ ಪಡೆಯುತ್ತೀರಿ

೩. ವಿಷ್ಣುಸಹಸ್ರನಾಮ ಪಾರಾಯಣಕ್ಕೂ ಭೇದವೇನೂ ಇರುವುದಿಲ್ಲ. ಹಾಗೆ ಪಠಣಕ್ಕಾಗಿ ಯಾವುದೇ ಕಠಿಣ ಮತ್ತು ವೇಗದ ನಿಯಮಗಳಿಲ್ಲ. ಯಾವುದೇ ಸಂದರ್ಭಗಳಲ್ಲಿ, ಯಾವುದೇ ಸಮಯದಲ್ಲಿ ನೀವು ಎಲ್ಲಿಯಾದರೂ ಪಠಿಸಬಹುದು.

  ಮಂತ್ರಕ್ಕೆ ಶಕ್ತಿಕೊಡೋ ಬೀಜ ಮಂತ್ರಗಳು

೪. ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ನಿಮ್ಮ ಹಿಂದಿನ ಜನ್ಮದ ಕರ್ಮದ ಪ್ರತಿಕ್ರಿಯೆಗಳಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.

೫. ವಿಷ್ಣು ಸಹಸ್ರನಾಮ ಪಠಿಸುವ ಭಕ್ತರಿಗೆ ಎಂದೂ ಭಯವಿಲ್ಲ. ಇದರಿಂದ ವಿಶೇಷ ಕಾಂತಿ, ವರ್ಚಸ್ಸು, ಆತ್ಮವಿಶ್ವಾಸ, ಮನೋಬಲ, ದೇಹಬಲ ಇಂದ್ರಿಯಬಲ ಹೆಚ್ಚಾಗಿ ಉತ್ತಮ ಆರೋಗ್ಯವನ್ನು ಪಡೆಯಬಹುದು.

೬. ವಿಷ್ಣುಸಹಸ್ರನಾಮವನ್ನು ಪ್ರತಿನಿತ್ಯ ಪಾರಾಯಣ ಮಾಡಿದರೆ ಜೀವನದಲ್ಲಿ ಬರುವ ಸಂಕಷ್ಟಗಳು ಪರಿಹಾರವಾಗುತ್ತವೆ.

೭. ಶುದ್ಧಮನದಿಂದ ವಿಷ್ಣುಸಹಸ್ರನಾಮವನ್ನು ಪಠಿಸಿದರೆ ಆಧ್ಯಾತ್ಮಿಕ, ಆದಿದೈವಿಕ ಹಾಗೂ ಆದಿಭೌತಿಕ ಪೀಡೆಗಳಿಗೆ ಪರಿಹಾರ ದೊರೆಯುತ್ತದೆ.

೮. ವಿಷ್ಣುಸಹಸ್ರನಾಮ ಅಂದರೆ ಮಹಾವಿಷ್ಣುವಿನ ಸಹಸ್ರನಾಮ ಪಠನ ಇದರಲ್ಲಿ ಅಲೌಕಿಕ ಶಕ್ತಿ ಇರುವುದನ್ನು ಅನೇಕ ಸಾಧಕರು ಕಂಡಿದ್ದಾರೆ, ಅನುಭವಿಸಿದ್ದಾರೆ. ವಿಷ್ಣುಸಹಸ್ರನಾಮ ಪಾರಾಯಣದಿಂದ ಕ್ಯಾನ್ಸರ್ ನಂತಹ ಭಯಂಕರ ಖಾಯಿಲೆಯಿಂದ ಹಿಡಿದು ಇನ್ನು ಇತರೆ ಕಾಯಿಲೆಗಳು ಕೂಡ ವಾಸಿಯಾಗುತ್ತವೆ.

  ನಿಷ್ಪ್ರಯೋಜಕ ಜೀವನ

೯. ಮನೆಯಲ್ಲಿ ಸಾಮೂಹಿಕ ಪಾರಾಯಣ ಪಠಿಸಿದರೆ ಮನೆಯ ವಾತವರಣವೇ ಬದಲಾಗುತ್ತದೆ. ಮನೆಯವ ಮೈಯಲ್ಲಿ ಮನಸ್ಸಲ್ಲಿ ಆಧ್ಯಾತ್ಮದ ಶಕ್ತಿಸಂಚಾರವಾದಂತಹ ಅನುಭವವಾಗುತ್ತದೆ. ಸಾಮೂಹಿಕ ಪಾರಾಯಣದಲ್ಲಿ ಅಂಥ ಒಂದು ವಿಶೇಷ ಶಕ್ತಿ ಇದೆ.

೧೦. ವಿಷ್ಣುಸಹಸ್ರನಾಮಕ್ಕೆ ಗಂಡಸು-ಹೆಂಗಸು-ಶೂದ್ರ-ಬ್ರಾಹ್ಮಣ ಎನ್ನುವ ಭೇದವಿಲ್ಲ. ಅದು ಎಲ್ಲಾ ವರ್ಣಾಶ್ರಮದವರಿಗೆ ಭಗವಂತ ನೀಡಿದ ಪಂಚಮ ವೇದ ಇದಾಗಿದೆ. ಹಾಗಾಗಿ ಈ ಸ್ತೋತ್ರವನ್ನು ಎಲ್ಲ ವರ್ಗದವರು ಮತ್ತು ಎಲ್ಲಾ ವಯಸ್ಸಿನವರು ಪಠಿಸಬಹುದಾಗಿದೆ.

  1. ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ನಾವಾಗಿಯೇ ಪಾರಾಯಣ ಮಾಡಿ ಬರಬಹುದು . ಸಮಯ ವಿಲ್ಲದವರು ತಮ್ಮ ತಮ್ಮ ಮನೆಯಲ್ಲಿಯೇ ನಿತ್ಯ ಪಠಣ ಮಾಡಿದರೆ ನಮಗೂ ಹಾಗು ನಮ್ಮ ಸುತ್ತ ಮುತ್ತಲಿನ ಪರಿಸರಕ್ಕೂ ವಿಶೇಷ ಶಕ್ತಿ ಪ್ರಾಪ್ತಿಯಾಗುವುದು.
  ಮಾಘದಲ್ಲಿ ಶ್ರೀಕೃಷ್ಣನ ಪೂಜೆ ಏಕೆ ? ಮತ್ತು ಹೇಗೆ ?

Leave a Reply

Your email address will not be published. Required fields are marked *

Translate »