ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ಕ್ಷೇತ್ರದ ಬಗ್ಗೆ ಪುರಾಣದ ಕಥೆ

ತುಳುವಿನ ಉಬಾರ್ ( ಉಪ್ಪಿನಂಗಡಿ) ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ಕ್ಷೇತ್ರದ ಬಗ್ಗೆ ಪುರಾಣದ ಕಥೆ

ಭಕ್ತಿಮುಕ್ತಿಗಳೆರಡನ್ನು ಕರುಣಿಸುವ ಸಹಸ್ರಲಿಂಗೇಶ್ವರ ಸನ್ನಿಧಿ, ಸದ್ಗತಿದಾಯಕ ಕ್ರಿಯೆಗಳ ಮೂಲಕ ಮೋಕ್ಷಧಾಮವೆನಿಸಿದೆ.

ಪೌರಾಣಿಕ ಹಿನ್ನಲೆ: ದ್ವಾಪರ ಯುಗದಲ್ಲಿ ಕುರುಕ್ಷೇತ್ರ ಯುದ್ಧಾನಂತರ ಪಾಂಡವರಲ್ಲಿ ಅಸಂಖ್ಯಾತ ಜೀವ ಬಲಿಯಾದ ಬಗ್ಗೆ ಪಾಪ ಪ್ರಜ್ಞೆ ಕಾಡುತ್ತದೆ. ಈ ಬಗ್ಗೆ ಶ್ರೀಕೃಷ್ಣನಲ್ಲಿ ತಮ್ಮ ಆಳಲನ್ನು ತೋಡಿಕೊಳ್ಳುತ್ತಾರೆ. ಆಗ ಶ್ರೀಕೃಷ್ಣನು ರಾಜಸೂರ್ಯಧ್ವರ ಯಾಗವನ್ನು ಮಾಡುವಂತೆ ತಿಳಿ ಹೇಳುತ್ತಾನೆ. ರಾಜಸೂರ್ಯಧ್ವರ ಯಾಗವನ್ನು ಮಾಡಲು ಪಾಂಡವರು ಸಂಕಲ್ಪಿಸುತ್ತಾರೆ. ಯಾಗ ನಿಮಿತ್ತ ಜರಗುವ ಅನ್ನಸಂತರ್ಪಣೆ ಬಳಿಕ ಯಾಗ ಮಂಟಪದ ಪರಿಶುದ್ಧತೆಯ ನೈರ್ಮಲ್ಯಕ್ಕಾಗಿ ಮಹೇಂದ್ರಗಿರಿಯಲ್ಲಿರುವ ದೇವ ಮೃಗವಾದ ಪುರುಷತ್ವಾಗವನ್ನು ಬರ ಮಾಡಲು ಶ್ರೀ ಕೃಷ್ಣ ಸೂಚಿಸುತ್ತಾನೆ. ತ್ರೇತಾಯುಗದಲ್ಲಿದ್ದ ಹನುಮಂತ ವಾಯು ಕ್ಷೇತ್ರದಲ್ಲಿ ವೃದ್ಧಾಪ್ಯದಿಂದ ಬಳಲಿ ಪವಡಿಸಿರುತ್ತಾನೆ. ಶ್ರೀಕೃಷ್ಣನಿಂದ ನಿಯೋಜಿಸಲ್ಪಟ್ಟ ಭೀಮಸೇನ ಮಹೇಂದ್ರ ಗಿರಿಯೊಳಗೆ ಪ್ರವೇಶಿಸಿ ವಾಯು ಮಾರ್ಗದಲ್ಲಿ ಸಂಚರಿಸುತ್ತಾನೆ. ಉದ್ದವಾಗಿ ಚಾಚಿದ ಆತನ ಬಾಲವನ್ನು ದಾಟಿ, ಮುಂದೆ ಸಾಗಲಾರದೇ ಭೀಮಸೇನ ಬಾಲವನ್ನು ಸರಿಪಡಿಸುವಂತೆ ಹನುಮನಲ್ಲಿ ಕೇಳಿಕೊಳ್ಳುತ್ತಾನೆ. ಆಗ ಹನುಮನು “ನಾನು ಬಳಲಿ ಬೆಂಡಾಗಿರುತ್ತೇನೆ, ನೀನೇ ನನ್ನ ಬಾಲವನ್ನು ಎತ್ತಿ ಸರಿಪಡಿಸು” ಎಂದು ತಿಳಿಸಲು ಭೀಮ ತನ್ನ ಬಲವನ್ನು ಪ್ರಯೋಗಿಸಿ, ಬಾಲವನ್ನು ಎತ್ತಲು ಉಪಕ್ರಮಿಸುತ್ತಾನೆ. ಆದರೆ ಒಂದಿಂಚು ಕದಲದಿರುವುದನ್ನು ಕಂಡು ಸೋತು ಹನುಮಂತನಲ್ಲಿ ನಿವೇದಿಸುತ್ತಾನೆ. ಆಗ ಅವರೊಳಗಡೆ ಸಂವಾದವೇರ್ಪಟ್ಟು ಇಬ್ಬರೂ ವಾಯು ಪುತ್ರರೆಂದು ತಿಳಿಯುತ್ತದೆ. ಭೀಮನು ಬಂದ ಉದ್ದೇಶವನ್ನು ತಿಳಿದು ತನ್ನ ಬಾಲದ ರೋಮಗಳನ್ನು ರಕ್ಷೆಯಾಗಿ ಕೊಟ್ಟು ಹನುಮಂತ ಭೀಮಸೇನನನ್ನು ಹರಸಿ, ಕಳುಹಿಸಿಕೊಡುತ್ತಾನೆ. ಹೀಗೆ ಮಹೇಂದ್ರ ಗಿರಿಯನ್ನು ಸೇರಿದ ಭೀಮ, ಪುರುಷ ಮೃಗವನ್ನು ಭೇಟಿಯಾಗಿ, ಬಂದ ಉದ್ದೇಶವನ್ನು ತಿಳಿಸಲು ದೇವಮೃಗ ಷರತ್ತನ್ನೊಡ್ಡುತ್ತಾನೆ. ಮನೋವೇಗದಿಂದ ಸಂಚರಿಸುವ ಪುರುಷ ಮೃಗದ ಷರತ್ತನ್ನು ಹನುಮ ರೋಮದ ರಕ್ಷೆಯ ಆಧಾರದಲ್ಲಿ ಸ್ವೀಕರಿಸಿ ಭೀಮಸೇನ ತನ್ನ ನಿಶ್ಚಿತ ಗುರಿಯತ್ತ ಸಾಗುತ್ತಾನೆ. ಹಿಂಬಾಲಿಸಿದ ದೇವ ಮೃಗ ಬೆನ್ನಟ್ಟುತ್ತದೆ. ಆಪತ್ತಿಗೆ ಸಿಲುಕಿದಾಗ ಭೀಮ ಹನುಮರೋಮಗಳನ್ನು ಚೆಲ್ಲುತ್ತಾನೆ. ಆಗ ಒಂದೊಂದು ರೋಮದಲ್ಲೂ ಒಂದೊಂದು ಶಿವಲಿಂಗ ಉದ್ಭವವಾಗುತ್ತದೆ. ಶಿವಾರ್ಚನೆಯನ್ನು ಮಾಡದೇ ಪುರುಷ ಮೃಗ ಮುಂದೆ ಸಾಗದು. ಹೀಗೆ ಉಪ್ಪಿನಂಗಡಿಯ ಸಮೀಪಕ್ಕೆ ಬಂದಾಗ ದೇವಮೃಗದ ಕಬಂದ ಬಾಹುವಿಗೆ ಸಿಲುಕುವ ಪ್ರಮೇಯ ಬಂತು. ಆಗ ಭೀಮಸೇನ ತನ್ನ ಕೈಗಳಲ್ಲಿ ಉಳಿದ ಸಹಸ್ರ ರೋಮಗಳನ್ನು ಚೆಲ್ಲುತ್ತಾನೆ. ಸಹಸ್ರ ರೋಮಗಳಿಂದ ಸಹಸ್ರ ಲಿಂಗಗಳು ಉದ್ಭವವಾಗುತ್ತವೆ. ದೇವಮೃಗ ಸಹಸ್ರ ಲಿಂಗಗಳಿಗೆ

  ಜಲಪೂರಣ ತ್ರಯೋದಶಿ - ನೀರು ತುಂಬುವ ಹಬ್ಬದ ಆಚರಣೆ

ಶಿವಾರ್ಚನೆ ಮಾಡುವ ಸಮಯದಲ್ಲಿ ಭೀಮಸೇನನು ಯಾಗ ಮಂಟಪವನ್ನು ತಲುಪುತ್ತಾನೆ. ಹೀಗೆ ನಿರ್ಮಾಣಗೊಂಡ ಸಹಸ್ರಲಿಂಗಗಳು ಭೂತಳದಲ್ಲಿ ಇವೆಯೆಂದು ಪ್ರತೀತಿ. ಅದರಲ್ಲಿ ಒಂದು ಲಿಂಗ ನದಿಯ ಮರಳಿನ ಮಧ್ಯದಲ್ಲಿದ್ದು, ಫೆಬ್ರವರಿ ತಿಂಗಳಲ್ಲಿ ದರ್ಶನಕ್ಕೆ ದೊರಕುತ್ತದೆ. ಪವಿತ್ರ ತೀರ್ಥ ಕ್ಷೇತ್ರವಾದ ಈ ಸನ್ನಿಧಿಯಲ್ಲಿ ಭಕ್ತಿ ಮುಕ್ತಿಗಳೆರಡು ಪ್ರಾಪ್ತವಾಗುತ್ತವೆ. ಅಪರ ಕರ್ಮಾಧಿಗಳಿಗೆ ಪ್ರಸಕ್ತ ತಾಣ ಇದಾಗಿದೆ.

Leave a Reply

Your email address will not be published. Required fields are marked *

Translate »